অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೆ.ಆರ್.ಇ.ಡಿ.ಎಲ್

ಕೆ.ಆರ್.ಇ.ಡಿ.ಎಲ್

ಮುನ್ನುಡಿ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಯು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜ ನೆಗಳನ್ನು ಉತ್ತೇಜಿಸುವುದು ಹಾಗೂ ಇಂಧನ ಸಂರಕ್ಷಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಂಸ್ಥೆಯ ಮುಖ್ಯ ದ್ಯೇಯೊದೇಶವಾಗಿರುತ್ತದೆ. ಸಂಸ್ಥೆಯು ವಿವಿಧ ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಮತ್ತು ಅಧಿಕೃತವಾಗಿ ಮನ್ನಣೆ ಪಡೆದಿರುವ ಇಂಧನ ಲೆಕ್ಕ ಪರಿಶೋಧಕರುಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುತ್ತದೆ.

ಉದ್ದೇಶ

ರಾಜ್ಯದಲ್ಲಿ ಹಸಿರು ಹಾಗೂ ಸ್ವಚ್ಚ ನವೀಕರಿಸಬಹುದಾದ ಇಂಧನ ಮೂಲಗಳಿಂದ ಪರಿಸರ ಸೌಲಭ್ಯ ಪಡೆಯಲು ಹಾಗೂ ಇಂಧನ ಭದ್ರತೆಗೆ ಸಜ್ಜುಗೊಳಿಸುವುದು. ಎಲ್ಲಾ ಮೂಲಗಳಿಂದ ಸಮರ್ಥನೀಯ ಬೆಳವಣಿಗೆಗಾಗಿ ಇಂಧನ ದಕ್ಷತೆ ಕ್ರಮಗಳನ್ನು ಆರಂಭಿಸುವುದು. ರಾಜ್ಯದಲ್ಲಿರುವ ಹಸಿರು ಮತ್ತು ಶುದ್ದ ನವೀಕರಿಸಬಹುದಾದ ಇಂಧನವನ್ನು ಪರಿಸರದ ರಕ್ಷಣೆ ಮತ್ತು ಇಂಧನ ಭದ್ರತೆಯೊಂದಿಗೆ ಬಳಸಿಕೊಳ್ಳುವುದು ಮತ್ತು ಎಲ್ಲಾ ಮೂಲಗಳಿಂದ ಸಮರ್ಥನೀಯ ಬೆಳವಣಿಗೆಗಾಗಿ ಇಂಧನ ದಕ್ಷತೆ ಕ್ರಮಗಳನ್ನು ಆರಂಬಿಸುವುದು.

ಗುರಿ

  • ಸಮರ್ಥನೀಯ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ವೇಗವಾಗಿ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನ ಮೂಲಗಳ ಕೊಡುಗೆಯನ್ನು ವೃದ್ದಿಸುವುದು, ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣ ಇಂಧನ ಅವಶ್ಯಕತೆಗಳಿಗೆ ಪೂರಕ ವ್ಯವಸ್ಥೆಯನ್ನು ಮಾಡುವುದು.
  • ಖಾಸಗಿ/ಸಾರ್ವಜನಿಕ ಸಂಸ್ಥೆಗಳ ಭಾಗವಹಿಸುವಿಕೆ ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಬಂಡವಾಳ ಹೂಡಲು ಪೂರಕ ವಾತಾವರಣವನ್ನು ಸೃಷ್ಟಿಸುವುದು.
  • ವಾಣಿಜ್ಯ ಕಾರ್ಯಸಾಧ್ಯತೆ ಹಾಗೂ ತ್ವರಿತವಾಗಿ ನವೀಕರಿಸಬಹುದಾದ ಇಂಧನ ಯೋಜನೆಗಳ ಕಾರ್ಯವೈಕರಿಯನ್ನು ಸಾಧಿಸುವುದು.
  • 2014 ನೇ ಇಸವಿಯೊಳಗೆ 2400 ಮೆಗಾ ವ್ಯಾಟ್ ನಿಂದ 6600 ಮೆಗಾ ವ್ಯಾಟ್ ಅನುಷ್ಟಾನ ಸಾಮರ್ಥ್ಯವನ್ನು ಹೆಚ್ಚಸಲು ನವೀಕರಿಸಬಹುದಾದ ಇಂಧನ ಮೂಲದ ಕೊಡುಗೆಯನ್ನು ನೀಡುವುದು.
  • 2014ರ ಹೊತ್ತಿಗೆ ಎಲ್ಲಾ ಮೂಲಗಳಿಂದ ಇಂಧನ ದಕ್ಷತೆ ಹಾಗೂ ಇಂಧನ ಸಂರಕ್ಷಣೆ ಕ್ರಮಗಳನ್ನು ಅಳವಡಿಸಿ7901 ಮಿ.ಯು. (900 ಮೆಗಾ ವ್ಯಾಟ್)ನಷ್ಟು ವಿದ್ಯುತನ್ನು ಉಳಿಸುವುದು.<

ನಿರ್ದೇಶಕ ಮಂಡಳಿಯ ಪಟ್ಟಿ

ಶ್ರೀ. ಪಿ ರವಿ ಕುಮಾರ್, ಐ.ಎ.ಎಸ್. (ಅಧ್ಯಕ್ಷರು)

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, 
ಇಂಧನ ಇಲಾಖೆ, ಕರ್ನಾಟಕ ಸರ್ಕಾರ.

ಶ್ರೀ. ಜಿ ವಿ ಬಲರಾಮ್

ವ್ಯವಸ್ಥಾಪಕ ನಿರ್ದೇಶಕರು, 
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ.

ಶ್ರೀ. ಜಿ ಕುಮಾರ್ ನಾಯಕ್, ಐ.ಎ.ಎಸ್

ವ್ಯವಸ್ಥಾಪಕ ನಿರ್ದೇಶಕರು , 
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ.

ಶ್ರೀ. ಎಮ್. ಮಹೇಶ್ವರ ರಾವ್, ಐ.ಎ.ಎಸ್

ವ್ಯವಸ್ಥಾಪಕ ನಿರ್ದೇಶಕರು, 
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ.

ಶ್ರೀ. ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್

ವ್ಯವಸ್ಥಾಪಕ ನಿರ್ದೇಶಕರು, 
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆವಿಕಂ).

ಶ್ರೀ. ರಾಮಚಂದ್ರ, ಎ.ಎಫ್.ಎಸ್

ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, 
ಪರಿಸರ ವಿಜ್ಞಾನ ಅರಣ್ಯ ಇಲಾಖೆ.

ಶ್ರೀ. ಬಿ ಜಿ ಗುರುಪಾದ ಸ್ವಾಮಿ

ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, 
ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ.

ಡಾ ಅದಿತಿ ರಾಜಾ, ಐ.ಎ & ಎ.ಎಸ್

ನಿರ್ದೇಶಕರು (ಹಣಕಾಸು), 
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ.

ಶ್ರೀ. ಕೆ ಉಮಾ ಶಂಕರ್,

ಕಾರ್ಯನಿರ್ವಾಹಕ ಎಂಜಿನಿಯರ್, 
ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಕಿರುಕೊಠಡಿ, ಇಂಧನ ಇಲಾಖೆ.

ಪ್ರಗತಿ

ಆಗಸ್ಟ್ 2014 ವರೆಗೆ

ಕ್ರಮ ಸಂಖ್ಯೆ

ನವೀಕರಿಸಬಹುದಾದ ಇಂಧನ ಮೂಲ

ಸಾಮರ್ಥ್ಯ ಮೆಗಾ ವ್ಯಾಟ್ಗಳಲ್ಲಿ

ಹಂಚಿಕೆಗೊಂಡ ಸಾಮರ್ಥ್ಯ ಮೆಗಾ ವ್ಯಾಟ್ ಗಳಲ್ಲಿ

ಅನುಷ್ಟಾನಗೊಂಡ ಸಾಮರ್ಥ್ಯ ಮೆಗಾ ವ್ಯಾಟ್ ಗಳಲ್ಲಿ

ರದ್ದುಪಡಿಸಿರುವ ಸಾಮರ್ಥ್ಯ ಮೆಗಾ ವ್ಯಾಟ್ ಗಳಲ್ಲಿ

1

ಪವನ ವಿದ್ಯುತ್
.

1) 50 ಮೀಟರ್ ಹಬ್ ಹೈಟ್: 8391 ಮೆಗಾ ವ್ಯಾಟ್.
2) 80 ಮೀಟರ್ ಹಬ್ ಹೈಟ್ 13983 ಮೆಗಾ ವ್ಯಾಟ್.

12847.915

2578.835

2498.5

2

ಕಿರು ಜಲ

3000

2918.655

766.71

388.745

3

ಜೈವಿಕ ಇಂಧನ

1000

369.980

113.03

0

4

ಸಹ ವಿದ್ಯುತ್

1500

1649.350

1144.55

0

5

ಘನ ತ್ಯಾಜ್ಯ

135

15.500

0

0

6

ಸೌರ ಗ್ರಿಡ್ (ಜಾಲ)

10000

232.000

51

10

ಒಟ್ಟು

.

18033.400

4654.125

2897.245

ಯೋಜನೆಗಳು

ಪವನ ವಿದ್ಯುತ್

ಪವನ ವಿದ್ಯುತ್ ಯೋಜನೆಗಳನ್ನು ಕನಿಷ್ಠ ಗಾಳಿ ವೇಗ 6 ಮೀಟರ್/ಸೆಕೆಂಡ್ ಗೆ ಬೀಸುವ ಸ್ಥಳಗಳಲ್ಲಿ ಸ್ಥಾಪನೆ ಮಾಡಬಹುದಾಗಿರುತ್ತದೆ. ಒಂದರ ಪಕ್ಕ ಮತ್ತೊಂದು ಹೀಗೆ ಹಲವಾರು ಗಾಳಿ ಯಂತ್ರಗಳನ್ನು ಸ್ಥಾಪಿಸುವುದರಿಂದ ಗಾಳಿ ಉತ್ಪಾದನಾ ಕೇಂದ್ರವಾಗುತ್ತದೆ ಹಾಗೂ ಈ ಗಾಳಿ ಕೇಂದ್ರಗಳ ಚಲನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.

ಈ ರೀತಿಯಾದ ವಿದ್ಯುತ್ ಉತ್ಪಾದನೆಯು ಗಾಳಿಯ ವೇಗದಿಂದ ಯಂತ್ರದ ರೆಕ್ಕೆಗಳು ತಿರುಗುವುದರಿಂದ ಯಾಂತ್ರಿಕ ಶಕ್ತಿಯು ಉತ್ಪಾದನೆಯಾಗುತ್ತದೆ. ಇದರಿಂದ ಜೋಡಣೆಯಾಗಿರುವ ಹಬ್ ಮತ್ತು ಕಡಿಮೆ ವೇಗದ ಶಾಫ್ಟ್ ರೆಕ್ಕೆಗಳು ತಿರುಗಲು ಪ್ರಾರಂಭವಾಗುತ್ತದೆ. ಈ ರೀತಿ ತಿರುಗುವ ಕಡಿಮೆ ವೇಗದ ಶಾಫ್ಟ್ ಗೇರ್ ಬಾಕ್ಸ್ ಗೆ ಹೈ ಸ್ಪೀಡ್ ಶಾಫ್ಟ್ ವಿರುದ್ದವಾಗಿ ಗೇರ್ ಬಾಕ್ಸ್ ಗೆ ಜೋಡಣೆಯಾಗಿರುತ್ತದೆ. ಈ ಜೋಡಣೆಯಿಂದ ವಿದ್ಯುತ್ ಜನರೇಟರ್ ನಿಂದ ಯಾಂತ್ರಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಬದಲಾವಣೆಗೊಳ್ಳುತ್ತದೆ. ಟರ್ಭೈನ್ ರೆಕ್ಕೆಗಳು ಒಂದು ನಿಮಿಷಕ್ಕೆ 11 ರಿಂದ 20 ಬಾರಿ ತಿರುಗಿದರೆ 1.5 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ 500 ಮನೆಗಳಿಗೆ ವಿದ್ಯುತ್ ಒದಗಿಸಬಹುದಾಗಿದೆ. 

ಖಾಸಗಿ ಅಭಿವೃದ್ದಿದಾರರು ಪವನ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಉತ್ಪಾದನೆಯಾದ ವಿದ್ಯುತ್ತನ್ನು ಕೆಪಿಟಿಸಿಎಲ್ ವಿದ್ಯುತ್ ಜಾಲಕ್ಕೆ ಜೋಡಣೆಮಾಡಲಾಗುತ್ತದೆ. ತದನಂತರ ವಿತರಣೆಯನ್ನು ವಿದ್ಯುತ್ ಖರೀದಿ ಒಪ್ಪಂದದ ಮುಖಾಂತರ ಎಸ್ಕಾಂಗಳು ವಿತರಿಸುತ್ತವೆ ಹಾಗೂ 3ನೇ ವ್ಯಕ್ತಿಗಳಿಗೆ ವೀಲಿಂಗ್ ಮತ್ತು ಬ್ಯಾಕಿಂಗ್ ಮುಖಾಂತರ ಮಾರಾಟ ಮಾಡಬಹುದಾಗಿರುತ್ತದೆ. ರಾಜ್ಯದಲ್ಲಿ ಇಲ್ಲಿಯವರೆಗೆ 2457.285 ಮೆ.ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನಗೊಂಡಿದ್ದು, ಸುಮಾರು 7,000 ಮೆ.ವ್ಯಾಟ್ ಸಾಮರ್ಥ್ಯದಷ್ಟು ಯೋಜನೆಗಳು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತದೆ.

ಕಿರು ಜಲ ವಿದ್ಯುತ್

ಕಿರು ಜಲ ವಿದ್ಯುತ್ ಯೋಜನೆಯು ಸಣ್ಣ ಸಮುದಾಯ ಅಥವಾ ಕೈಗಾರಿಕಾ ಘಟಕಗಳಿಗೆ ಸಣ್ಣ ಪ್ರಮಾಣದಲ್ಲಿ ಸೇವೆ ಮಾಡುವ ಜಲ ವಿದ್ಯುತ್ ಅಭಿವೃದ್ದಿ ಯೋಜನೆಯ ಒಂದು ಭಾಗವಾಗಿರುತ್ತದೆ. ಕಿರು ಜಲ ವಿದ್ಯುತ್ ಯೋಜನೆಯ ವ್ಯಾಖ್ಯಾನವು ಬದಲಾಗುತ್ತದೆ, ಆದರೆ, 25 ಮೆಗಾ ವ್ಯಾಟ್ ನಷ್ಟು ಸಾಮರ್ಥ್ಯವುಳ್ಳ ಯೋಜನೆಯನ್ನು ಕಿರು ಜಲ ವಿದ್ಯುತ್ ಯೋಜನೆಯೆಂದು ಪರಿಗಣಿಸಲಾಗಿದೆ. 

ವಿದ್ಯುತ್ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ವೃತ್ತಿಪರವಾಗಿ ನಿರ್ವಹಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದ ಒಟ್ಟು ವಿದ್ಯುತ್ ಸ್ಥಾಪಿತ ಸಾಮರ್ಥ್ಯವು 4,118.04 ಮೆ.ವ್ಯಾಟ್ ಗಳಾಗಿದ್ದು ಅದರಲ್ಲಿ ಜಲ ವಿದ್ಯುತ್ ಸ್ಥಾವರಗಳು  ಮೆ.ವ್ಯಾಗಳಷ್ಟಿದೆ. ಸ್ಥಾಪಿಸಬಹುದಾದ ಒಟ್ಟು ಸಂಭವನೀಯ ಜಲ ವಿದ್ಯುತ್ ಸಾಮರ್ಥ್ಯವು 7000 ಮೆ.ವ್ಯಾಟ್ ಗಳಷ್ಟಿದ್ದು ಅದರಲ್ಲಿ ಈವರೆಗೆ 40% ಸಾಮರ್ಥ್ಯವನ್ನು ಮಾತ್ರ ಸಾಧಿಸಲಾಗಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತವು ರಾಜ್ಯದಲ್ಲಿ ಅಸಂಪ್ರಧಾಯಿಕ ಇಂಧನ ಮೂಲಗಳ ಪ್ರಚಾರಕ್ಕೆ ಸಂಪೂರ್ಣ ಮೀಸಲಾಗಿಟ್ಟ ಒಂದು ಸಂಸ್ಥೆ. ಕರ್ನಾಟಕದಲ್ಲಿ ಕಿರುಜಲ ವಿದ್ಯುತ್ ಯೋಜನೆಗಳನ್ನು ಉತ್ತೇಜನಗೊಳಿಸಿ ಇಂಧನವನ್ನು ಉತ್ಪಾದಿಸುವುದು ಈ ಸಂಸ್ಥೆಯ ಗುರಿಯಾಗಿರುತ್ತದೆ. ಕರ್ನಾಟಕ ಸರ್ಕಾರದ ಒಂದು ವ್ಯವಸ್ಥಿತ ಮತ್ತು ಯೋಜನೆಗಳ ಸಮತೋಲಿತ ಬೆಳವಣಿಗೆಯಿಂದ ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಗಳಿಕೊಳ್ಳಲು ಸರ್ಕಾರದ ನೀತಿ ರೂಪಿಸುವಲ್ಲಿ ಕರ್ನಾಟಕ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿರುತ್ತದೆ.

ಕಿರು ಜಲ ವಿದ್ಯುತ್ ಸ್ಥಾವರ ಹೇಗೆ ಕಾರ್ಯ ನಿರ್ವಹಿಸುತ್ತವೆ

ಜಲ ವಿದ್ಯುತ್ ಸ್ಥಾವರದಲ್ಲಿ ಎತ್ತರ ಪ್ರದೇಶದಲ್ಲಿರುವ ನೀರಿನ ಪ್ರಮಾಣ ಮತ್ತು ಅಂತಃ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಮಾರ್ಪಡಿಸಲಾಗುತ್ತದೆ. ವಿದ್ಯುತ್ ಸ್ಥಾವರದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ನೀರಿನ ಎತ್ತರ ಮತ್ತು ಟರ್ ಬೈನ್ ನ ಮೂಲಕ ಹರಿಯುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ.

ಸಹ ಉತ್ಪಾದನೆ

ಸಹ ಉತ್ಪಾದನೆ ಸಹ ಉತ್ಪಾದನೆ ಎಂದರೆ (ಶಾಖ ಮತ್ತು ಶಕ್ತಿ ಸಂಯೋಜಿತ) ಶಾಖ ಯಂತ್ರ ಅಥವಾ ವಿದ್ಯುತ್ ಉತ್ಪತ್ತಿಯ ಸಮಯದಲ್ಲಿ ಶಾಖವನ್ನು ಉತ್ಪತ್ತಿ ಮಾಡುತ್ತವೆ. ಇದು ಕೂಲಿಂಗ್ ಟವರ್, ಹೊಗೆ ನಳಿಕೆ ಅಥವಾ ಬೇರೆ ರೀತಿಯಿಂದ ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಸಂಯೋಜಿತ ಶಾಖ ಮತ್ತು ಶಕ್ತಿಯನ್ನು ಸಾಂದ್ರೀಕರಿಸಿದಾಗ ಸ್ವಲ್ಪ ಅಥವಾ ಪೂರ್ಣ ಶಾಖದ ಸಹ ಉತ್ಪನ್ನವು ಶಮನಕ್ಕಾಗಿ ಉಪಯೋಗವಾಗುತ್ತದೆ.
.

ಯೋಜನೆಗಳಅಂಕಿಅಂಶ
ಸೆಪ್ಟೆಂಬರ್ 2014 ವರೆಗೆ

ಪ್ರತ್ಯೇಕಿಸು

ಸಾಮರ್ಥ್ಯ

ಹಂಚಿಕೆ

1634.350

ಕಾರ್ಯಾರಂಭ

1144.550

ರದ್ದುಗೊಳಿಸಲಾಗಿದೆ

0

ಜೈವಿಕ ಇಂಧನ

ಜೈವಿಕ ಇಂಧನ ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಹಸಿರು ಶಕ್ತಿ ಸಸ್ಯಗಳ ದ್ಯುತಿಸಂಶ್ಲೇಷಣೆಯ ಮೂಲಕ ಪಡೆಯುವುದು ಜೀವರಾಶಿಯಾಗಿರುತ್ತದೆ. ಸಾವಯವ ವಸ್ತುಗಳಿಂದ ಪಡೆಯುವ ಶಕ್ತಿಯನ್ನು ಜೈವಿಕ ಇಂಧನ ಎನ್ನಬಹುದು. ಈ ಶಕ್ತಿಯನ್ನು ಮಾನವನು ಪುನಃ ಸಂಪಾದನೆ ಮಾಡಬಹುದು. ಜೈವಿಕ ಇಂಧನವನ್ನು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಬಹುದು.

  • ಗದ್ದೆಯ ಬದಿಯ ಉಳಿಕೆಗಳು (ಭತ್ತದ ಕಡ್ಡಿಗಳು, ಅಥವಾ ಬೇರೆ ಬೆಳಗಳ ಕಡ್ಡಿಗಳು).
  • ತೋಡಗಾರಿಕೆ ಬೆಳಗಳ ಉಳಿಕೆಗಳು (ತೆಂಗಿನ ಮರದ, ಎಲೆಗಳು ತೆಂಗಿನ ಸಿಪ್ಪೆ ಇತ್ಯಾದಿ)
  • ಕೃಷಿ ಕೈಗಾರಿಕೆಯ ಉಳಿಕೆಗಳು (ತೆಂಗಿನ ಚಿಪ್ಪು, ಕಡಲೆಕಾಯಿ ಸಿಪ್ಪೆ ಇತ್ಯಾದಿ)


ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಉಪಯೋಗಿಸುವ ಇಂಧನ ಶಕ್ತಿಗಳಲ್ಲಿ ಮೂರನೆ ಒಂದು ಭಾಗವು ಜೈವಿಕ ಇಂಧನ ಶಕ್ತಿಯಾಗಿರುತ್ತದೆ. ಭಾರತದಲ್ಲಿ ಜೈವಿಕ ಇಂಧನ ಶಕ್ತಿಯ ಸಾಮರ್ಥ್ಯವು ಸುಮಾರು 19,000 ಮೆ.ವ್ಯಾಟ್ ಗಳಷ್ಟಿದೆ.

ಜೈವಿಕ ಇಂಧನವನ್ನು ಸಾಂಪ್ರದಾಯಿಕ ದಹನ ತಂತ್ರಜ್ಞಾನದಿಂದ ದಹಿಸಿ, ಬಾಯ್ಲರ್ ಗಳಿಂದ ಒತ್ತಡದ ಉಗಿಯನ್ನು ಉತ್ಪತ್ತಿ ಮಾಡಿ ಇದರಿಂದ ಶಕ್ತಿಯನ್ನು ಉತ್ಪತ್ತಿ ಮಾಡಬಹುದು. ಜೈವಿಕ ಇಂಧನವು ಅದು ನೀಡುವ ಲಾಭದಿಂದಾಗಿ, ಯಾವಾಗಲೂ ಒಂದು ಶಕ್ತಿಯ ಪ್ರಮುಖ ಮೂಲವಾಗಿರುತ್ತದೆ ಇದು ನವೀಕರಿಸಬಹುದಾಗಿರತುತ್ತದೆ, ಹೇರಳವಾಗಿ ಲಭ್ಯವಿರುತ್ತದೆ ಮತ್ತು ಇಂಗಾಲ ಮುಕ್ತವಾಗಿರುತ್ತದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗವನ್ನು ಒದಗಿಸಬಲ್ಲದಾಗಿರುತ್ತದೆ. ಭಾರತದಲ್ಲಿ ಈಗಿರುವ ಜೈವಿಕ ಇಂಧನ ಸುಮಾರು 500 ಮಿಲಿಯ ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿದೆ. ಸುಮಾರು 18,000 ಮೆ.ವ್ಯಾ ನಷ್ಟು ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ಅಂದರೆ ಸುಮಾರು 120 ರಿಂದ 150 ಮಿಲಿಯ ಮೆ. ಟನ್ ನಷ್ಟು ಜೈವಿಕ ಇಂಧನವು ಪ್ರತಿ ವರ್ಷ ಭಾರತದಲ್ಲಿ ಲಭ್ಯವಿದೆ ಎಂದು ಇಂಧನ ಇಲಾಖೆ ನಡೆಸಿದ ಅಧ್ಯಯನದಲ್ಲಿ ಅಂದಾಜಿಸಲಾಗಿದೆ. ದೇಶದಲ್ಲಿರುವ ಜೈವಿಕ ಇಂಧನವನ್ನು ಸೂಕ್ತ ರೀತಿಯಲ್ಲಿ, ಗರಿಷ್ಟ ಮಟ್ಟದಲ್ಲಿ ಉಪಯೋಗಿಸಿಕೊಂಡು ವಿದ್ಯುತ್ತನ್ನು ಉತ್ಪಾದಿಸಲು ಅನುಕೂಲವಾಗುವಂತೆ, ಜೈವಿಕ ಇಂಧನ ಮತ್ತು ಸಹ ವಿದ್ಯುತ್ ಉತ್ಪಾದನೆಯ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗಿದೆ. ಭತ್ತದ ಹೊಟ್ಟು, ಕಡ್ಡಿ, ಹತ್ತಿಯ ಗಿಡದ ಕಡ್ಡಿ, ತೆಂಗಿನ ಚಿಪ್ಪು, ಸೋಯ ಸಿಪ್ಪೆ, ಎಣ್ಣೆ ತೆಗೆದು ಉಳಿದ ಹಿಂಡಿ, ಕಾಫಿಯ ಉಳಿಕೆಗಳು, ಜೈವಿಕ ಶಕ್ತಿಯ ಉತ್ಪತ್ತಿಯಲ್ಲಿ ಬಳಸುವ ಪ್ರಮುಖ ಉರುವಲಾಗಿರುತ್ತದೆ.

ಜಾಲ ಸಂಪರ್ಕ ರಹಿತ ಸೌರಶಕ್ತಿ

ಜಾಲ ಸಂಪರ್ಕ ರಹಿತ ಸೌರಶಕ್ತಿ ಜಾಲ ಸಂಪರ್ಕ ರಹಿತ ಸೌರಶಕ್ತಿ ಎಂದರೆ ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸಂಪರ್ಕವಿಲ್ಲದಿರುವಿಕೆ ಎಂದರ್ಥ. ವಿದ್ಯುತ್ ಕ್ಷೇತ್ರದಲ್ಲಿ ಜಾಲಸಂಪರ್ಕ ರಹಿತ ಸೌರಶಕ್ತಿಯು ಮಾತ್ರ ಸಣ್ಣ ಸಮುದಾಯಕ್ಕೆ ವಿದ್ಯುಚ್ಛಕ್ತಿ ನೀಡಬಲ್ಲ ವ್ಯವಸ್ಥೆ . ಜಾಲ ರಹಿತ ವಿದ್ಯುದ್ದೀಕರಣ ಎಂದರೆ, ವಿದ್ಯುತ್ ಜಾಲದ ಸಂಪರ್ಕವಿಲ್ಲದ ದೇಶಗಳಿಗೆ ಹಾಗೂ ಜನವಸತಿ ವಿರಳವಿರುವ ಸ್ಥಳಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ, ಅಂದರೆ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆಯಾದರೂ ಸರಿ ಜಾಲದ ಸಂಪರ್ಕ ರಹಿತ ಎಂದರೆ ಸಾರ್ವಜನಿಕ ವ್ಯವಸ್ಥೆಯ ಸಂಪರ್ಕವಿಲ್ಲದೆಯೇ ಸ್ವಾವಲಂಭಿಯಾಗಿ ಬದುಕು ಎಂದರ್ಥ. ಜಾಲಸಂಪರ್ಕ ರಹಿತ ಗೃಹಗಳು ಎಂದರೆ ಸ್ವಾಯತ್ತ ಗೃಹಗಳು: ಇವರಿಗೆ ಯಾವುದೇ ರೀತಿಯ ಸರಕಾರದ ನೀರು ಸರಬರಾಜು, ಒಳಚರಂಡಿ, ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ ಸರಬರಾಜು ಇತ್ಯಾದಿ ವ್ಯವಸ್ಥೆಗಳು ಇರುವುದಿಲ್ಲ.

ತ್ಯಾಜ್ಯದಿಂದ ಶಕ್ತಿ

ತ್ಯಾಜ್ಯದಿಂದ ಶಕ್ತಿ ತ್ಯಾಜ್ಯ ದಹಿಸುವುದರಿಂದ ವಿದ್ಯುತ್ ಅಥವಾ ಶಾಖದ ರೂಪದಲ್ಲಿ ಶಕ್ತಿಯನ್ನು ಪಡೆಯುವ ಪ್ರಕ್ರಿಯೆಗೆ ತ್ಯಾಜ್ಯದಿಂದ ಶಕ್ತಿ ಎನ್ನಬಹುದು. ತ್ಯಾಜ್ಯದಿಂದ ಶಕ್ತಿ ಎಂದರೆ ಸಂಕ್ಷಿಪವಾಗಿ ಶಕ್ತಿಯ ಪುನಸ್ಸಂಪಾಧನೆ. ಹೆಚ್ಚಿನ ತ್ಯಾಜ್ಯದಿಂದ ಶಕ್ತಿಯ ಪ್ರಕ್ರಿಯೆಯಲ್ಲಿ ತ್ಯಾಜ್ಯವನ್ನು ದಹಿಸುವುದರಿಂದ ನೇರವಾಗಿ ವಿದ್ಯುತ್ತನ್ನು ಪಡೆಯಬಹುದು, ಅಥವಾ ದಹನಕ್ರಿಯೆಗೆ ಅನುಕೂಲವಾಗುವ ಉರುವಲುಗಳಾದ ಮೀಥೇನ್, ಮೆಥನಾಲ್, ಎಥನಾಲ್ ಅಥವಾ ಕೃತಕ ಇಂಧನವನ್ನು ಪಡೆಯಬಹುದು.

ಯೋಜನೆಗಳ ಅಂಕಿಅಂಶ 
ಸೆಪ್ಟೆಂಬರ್ 2014 ವರೆಗೆ

ಪ್ರತ್ಯೇಕಿಸು ಸಾಮರ್ಥ್ಯ

  • ಹಂಚಿಕೆ                15.50
  • ಕಾರ್ಯಾರಂಭ            ೦
  • ರದ್ದುಗೊಳಿಸಲಾಗಿದೆ      ೦

ಸೋಲಾರ್ ಗ್ರಿಡ್

ಪರಿಚಯ

ಸೋಲಾರ್ ಪ್ಯಾನಲ್ ಗಳು ಸೂರ್ಯನ ಕಿರಣಗಳಿಂದ ಫೋಟೋವೋಲ್ಟಾಯಿಕ್ ಪರಿಣಾಮವನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದಿಸುತ್ತವೆ. ಪ್ರತಿ ಸೋಲಾರ್ ಪ್ಯಾನಲ್ ಬಹು ಸೌರ ಕೋಶಗಳಿಂದ ನಿರ್ಮಿಸಲಾಗಿರುತ್ತದೆ (ಸಾಮಾನ್ಯವಾಗಿ 60) ಪ್ರತಿಯೊಂದು ಸೋಲಾರ್ ಪ್ಯಾನಲ್ ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತದೆ.

ಫೋಟಾನ್ ಗಳು ಸೋಲಾರ್ ಪ್ಯಾನಲ್ ಮೇಲೆ ಬಿದ್ದು ಬೆಳಕಿನ ಪರಿಣಾಮಗಳಿಂದ ಸಿಲಿಕಾನ್ ವಿದ್ಯುತ್ ಪ್ರವಾಹ ಉಂಟಾಗುತ್ತದೆ.

ಸೂರ್ಯನ ಬೆಳಕು ಸೌರ ಪಲಕಗಳ ಮೇಲೆ ಬೀಳುತ್ತಿರುವವರೆಗೂ ವಿದ್ಯುತ್ ಉತ್ಪಾದನೆಯಾಗುತ್ತದೆ.

ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲು ಮೋಡ್ಯೂಲ್ ನಲ್ಲಿ (ಪ್ಯಾನಲ್) ಸೋಲಾರ್ ಕೋಶಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ ಹಾಗೂ ಅರೆ ನಿರ್ಮಿಸಲು ಮೋಡ್ಯೂಲ್ ಗಳನ್ನು ಜೋಡಿಸಲಾಗುತ್ತದೆ. ನಿಮ್ಮ ಮನೆಗಳಲ್ಲಿ ಉಪಯೋಗಿಸುವ ವಿದ್ಯುತ್ ಕೆಲವೊಮ್ಮೆ ಪ್ಯಾನಲ್ ನಿಂದ ಉತ್ಪಾದಿತ ವಿದ್ಯುತ್ತನ್ನು ನೇರವಾಗಿ ಬಳಸಬಹುದು ಆದರೆ ಬಹುತೇಕ ಸಮಯದಲ್ಲಿ ನೇರ ವಿದ್ಯುತ್ತನ್ನು (ಡಿಸಿ) ಪರ್ಯಾಯ ವಿದ್ಯುತ್ ಗೆ (ಎಸಿ) ಪರಿವರ್ತಿಸಲು ಇನ್ವರ್ಟರ್ ಗಳನ್ನು ಬಳಸಲಾಗುತ್ತದೆ. ಸುರಕ್ಷತೆಗಾಗಿ ಸೋಲಾರ್ ಪ್ಯಾನಲ್ನ ಮುಂಬಾಗವನ್ನು ಕ್ಲಿಯರ್ ಗ್ಲಾಸ್ ನಿಂದ ಮುಚ್ಚಲಾಗಿರುತ್ತದೆ ಹಾಗೂ ಹಿಂಬಾಗವನ್ನು ಪ್ಲಾಸ್ಟಿಕ್ ಫಿಲ್ಮಿನಿಂದ ಮುಚ್ಚಲಾಗಿರುತ್ತದೆ. ಪ್ರತಿ ಕೋಶವನ್ನು ಅದರ ಸ್ಥಳದಲ್ಲಿ ಹಿಡಿಯಲು ಹಾಗೂ ಪ್ಯಾನಲ್ಗಳ ಸುಲಭ ಆರೋಹಿಸಲು ಅಲ್ಯೂಮಿನಿಯಂ ಫ್ರೇಮ್ ನ್ನು ಸೇರಿಸಲಾಗಿರುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ

ಜಾಲ ಸಂಪರ್ಕಿತ ಸೌರ ವಿದ್ಯುತ್ ಘಟಕ ಹೇಗೆ ಕಾರ್ಯನಿರ್ವಹಿಸುತ್ತದೆ:

ಸೋಲಾರ್ ಪವರ್ ಹಿಂದಿನ ತಂತ್ರಜ್ಞಾನವು ಕಠಿಣವೆಂದು ತೋರಿದರೂ, ಬಿಡಿಗೊಳಿಸಿದಾಗ ಜಾಲ ಸಂಪರ್ಕ ಅರ್ಥೈಸಿಕೊಳ್ಳಲು ಸುಲಭವಾಗಿರುತ್ತದೆ ಇದಕ್ಕೆ ನಿಮ್ಮ ಮನೆಗಳಲ್ಲಿ ಅಳವಡಿಸಲಾಗಿರುವ ಕೆಲವು ಉಪಕರಣಗಳು ಬೇಕಾಗುತ್ತದೆ.

  • ಸೋಲಾರ್ ಪ್ಯಾನಲ್ ಮೇಲೆ ಸೂರ್ಯ ಕಿರಣಗಳು ಬಿದ್ದಾಗ ಡಿಸಿ ವಿದ್ಯುತ್ ಉತ್ಪಾದನೆಯಾಗುತ್ತದೆ.
  • ಡಿಸಿ ವಿದ್ಯುತ್ ನ್ನು ಇನ್ವರ್ಟರ್ ಗೆ ಹರಿಸಿದಾಗ ಅದು 240ವಿ 50Hz ಪರ್ಯಾಯ ವಿದ್ಯುತ್ ಗೆ ಪರಿವರ್ತನೆಯಾಗುತ್ತದೆ.
  • ನಮ್ಮ ಮನೆಯ ವಿದ್ಯುತ್ ಉಪಕರಣಗಳಿಗೆ 240ವಿ ಎಸಿ ವಿದ್ಯುತ್ತನ್ನು ಬಳಸಲಾಗುತ್ತದೆ.
  • ಹೆಚ್ಚುವರಿ ವಿದ್ಯುತ್ತನ್ನು ಮೂಲ ಜಾಲಕ್ಕೆ ಹಿಂದಿರುಗಿಸಲಾಗುವುದು.

ಸೂರ್ಯನ ಬೆಳಕಿದ್ದಂತೆಲ್ಲ ವಿದ್ಯುತ್ ಉತ್ಪಾದನೆಯಾಗುತ್ತದೆ. ಸೋಲಾರ್ ಪ್ಯಾನಲ್ ನಿಂದ ಉತ್ಪಾದಿಸಲ್ಪಟ್ಟ 240ವಿ ಡಿಸಿ ವಿದ್ಯುತ್ತನ್ನು ಜಾಲ ಸಂರ್ಪಕಿತ ಇನ್ವರ್ಟರ್ ಎಸಿ ವಿದ್ಯುತ್ ಗೆ ಪರಿವರ್ತಿಸುತ್ತದೆ. ತದನಂತರ ಇದನ್ನು ವಸತಿ/ಗೃಹೋಪಯೋಗಕ್ಕೆ ಬಳಸಲಾಗುವುದು.

ಜಾಲ ಸಂಪರ್ಕಿತ ವಿದ್ಯುತ್ ನಿಂದ ಉತ್ಪಾದಿಸಲ್ಪಟ್ಟ ವಿದ್ಯುತ್ ಬಳಕೆ ಪ್ರಮಾಣಕ್ಕಿಂತ ಹೆಚ್ಚಿದಲ್ಲಿ, ಹೆಚ್ಚುವರಿಯನ್ನು ಮೂಲ ಜಾಲಕ್ಕೆ ಸೇರಿಸಲಾಗುವುದು. ಕೆಲವು ವಿದ್ಯುತ್ ಕಂಪನಿಗಳು ನಿಮ್ಮ ಸೌರ ಸ್ಥಾವರದಿಂದ ಒದಗಿಸಲಾದ ಹೆಚ್ಚುವರಿ ವಿದ್ಯುತ್ತನ್ನು ಮಾಪನ ಮಾಡುತ್ತವೆ ಹಾಗೂ ನಿಮ್ಮ ಬಿಲ್ ನಲ್ಲಿ ಉಳಿತಾಯ ಸೌಲಭ್ಯವನ್ನು ಒದಗಿಸುತ್ತದೆ. ಇತರೆ ಕಂಪನಿಗಳು ದ್ವಿಮುಖ ಮಾಪನವನ್ನು ಅಳವಡಿಸುತ್ತವೆ ಇದು ನಿಮ್ಮ ಯಂತ್ರ ಜಾಲಕ್ಕೆ ಒದಗಿಸಿದ ವಿದ್ಯುತನ್ನು ದಾಖಲುಗೊಳಿಸುತ್ತದೆ. ಸೋಲಾರ್ ಪ್ಯಾನಲ್ ಗಳು ವಿದ್ಯುತ್ ಉತ್ಪಾದಿಸದಿದ್ದಾಗ ಅಂದರೆ ರಾತ್ರಿ ವೇಳೆಯಲ್ಲಿ ಮೂಲ ಜಾಲದಿಂದ ವಾಡಿಕೆಯಂತೆ ವಿದ್ಯುತ್ತನ್ನು ಪೂರೈಸಲಾಗುವುದು. ಬಳಸಲ್ಪಟ್ಟ ವಿದ್ಯುತ್ ಗೆ ಇಂಧನ ವ್ಯಾಪಾರಿಗಳು ಸಾಮಾನ್ಯ ದರವನ್ನು ನಿಗದಿಪಡಿಸಿರುತ್ತಾರೆ.

ಉಪಯೋಗದಲ್ಲಿರುವ ಎರಡು ವಿಧದ ತಂತ್ರಜ್ಞಾನ

ಸೋಲಾರ್ ಪಿವಿ

ಸೂರ್ಯನ ವಿಕಿರಣವನ್ನು ಬಳಸಿ ಸೆಮಿಕಂಡಕ್ಟರ್ಗಳ ಮೂಲಕ ಡಿಸಿ ವಿದ್ಯುತ್ ಉತ್ಪಾದನೆಯನ್ನು ಮಾಡುವುದು. ಸೋಲಾರ್ ಪಿವಿ ವಿಧಾನವಾಗಿರುತ್ತದೆ. ಅನೇಕ ಸೌರ ಸೆಲ್ ಗಳನ್ನು ಸೇರಿಸಿಕೊಂಡು ಸೋಲಾರ್ ಪ್ಯಾನಲ್ ಗಳ ಫೋಟೋವೋಲ್ಟಾಯಿಕ್ ಸಾಧನವನ್ನು ತಯಾರಿಸಿಕೊಳ್ಳಲಾಗುವುದು. ಸದ್ಯಕ್ಕೆ ಮೋನೋಕ್ರಿಸ್ಟಲೈನ್, ಪಾಲಿಕ್ರಿಸ್ಟಲೈನ್, ಅಮಾಫರ್ಸ್ ಸಿಲಿಕಾನ್, ಕ್ಯಾಡ್ಮಿಯಮ್ ಟೆಲ್ಯೂರೈಡ್ ಮತ್ತು ತಾಮ್ರ ಇಂಡಿಯಂ ಗ್ಯಾಲಿಯಂ ಸೆಲಿನೈಡ್/ಸಲ್ಫೈಡ್, ಫೋಟೋವೋಲ್ಟೈಕ್ ಸೆಲ್ ಗಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಅಧಿಕವಾಗಿ ಈ ಸಾಧನವನ್ನು ಬಳಸುವುದರಿಂದ ತಾಂತ್ರಿಕತೆಯಲ್ಲಿ ಅಗಾಧವಾದ ಬೆಳವಣಿಗೆ ಆಗಿರುತ್ತದೆ.

ಸೋಲಾರ್ ಥರ್ಮಲ್ ಪವರ್

ಕೆಂದ್ರೀಕೃತ ಸೂರ್ಯನ ಶಾಖವನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದಿಸುವುದು ಈ ತಂತ್ರಜ್ಞಾನವಾಗಿದೆ. ಸೌರ ಶಾಖ ಸಂಗ್ರಹಣೆಯನ್ನು 3 ವಿಧವಾಗಿ ವಿಂಗಡಿಸಲಾಗಿದೆ – ಕಡಿಮೆ, ಮಧ್ಯಮ ಮತ್ತು ಅತಿ ಹೆಚ್ಚು. ಕಡಿಮೆ ತಾಪಮಾನ ಸಂಗ್ರಾಹಕವು ಸಮತಟ್ಟಾದ ಫಲಕಗಳಾಗಿದ್ದು ಈ ಶಾಖವನ್ನು ಈಜುಕೊಳವನ್ನು ಬಿಸಿಮಾಡಲು ಉಪಯೋಗಿಸಲಾಗುವುದು. ಮಧ್ಯಮ ತಾಪಮಾನ ಸಂಗ್ರಹಕವು ಸಮತಟ್ಟಾದ ಫಲಕಗಳಾಗಿದ್ದು ನೀರು ಮತ್ತು ಗಾಳಿಯನ್ನು ಬಿಸಿ ಮಾಡಲು ವಸತಿ ಮತ್ತು ವಾಣಿಜ್ಯ ವಲಯದಲ್ಲಿ ಉಪಯೋಗಿಸಲಾಗುವುದು. ಅತಿ ಹೆಚ್ಚು ತಾಪಮಾನ ಸಂಗ್ರಾಹಕವು ಪ್ರತಿ ಫಲಕಗಳ ಮೂಲಕ (Lenses, mirror) ಸೂರ್ಯನ ಶಾಖವನ್ನು ಅತಿ ಹೆಚ್ಚಿನ ತಾಪಮಾನಕ್ಕೆ ಸೃಷ್ಠಿಸಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಬಳಸಲಾಗುವುದು. ಈ ತಾಂತ್ರಿಕತೆಯು ಸೋಲಾರ್ ಪಿವಿಗಿಂತ ಹೆಚ್ಚು ಸಮರ್ಥವಾಗಿ ವಿದ್ಯುತ್ ಉತ್ಪಾದಿಸಲು ಸಹಕಾರಿಯಾಗಿದೆ.

ಘಟಕ ವರ್ಗಗಳ ವಿಧಗಳು

  • ಸರ್ಕಾರಿ ಸ್ವಾಮ್ಯದ ಘಟಕಗಳು.
  • ಆರ್.ಇ.ಸಿ. ಅಡಿಯ ಘಟಕಗಳು.
  • ಸೌರ ಆರ್.ಪಿ.ಒ. ಘಟಕಗಳು
  • ಬಂಡಲ್ಡ್ ವರ್ಗದಡಿಯ ಘಟಕಗಳು
  • ಆರ್ ಅಂಡ್ ಡಿ/ಅನ್ವೇಷಣಾ ಘಟಕಗಳು.

ಮೂಲ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate