ಶಿಫಾರಸು ಮಾಡಲಾದ- ಉತ್ತಮ- ಬಳಕೆ ನೀರಿನ ಗುಣಮಟ್ಟ ಮಾನದಂಡ ಸಾಂಪ್ರದಾಯಿಕವಾಗಿ ಸಂಸ್ಕರಿಸದ, ಆದರೆ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು A ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಆರ್ಗ್ಯನಿಸಮ್ (ಒಂದು ಬಗೆಯ ಸೂಕ್ಷ್ಮಾಣು ಜೀವಿ) ಎಮ್‌ಪಿಎನ್ ಪ್ರಮಾಣವು 50 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6.5ರಿಂದ 8.5 ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 6 ಮಿ.ಗ್ರಾಂ/ ಲೀ. ಅಥವಾ ಹೆಚ್ಚು. 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 2 ಮಿ.ಗ್ರಾಂ/ ಲೀ ಅಥವಾ ಕಡಿಮೆ. ಹೊರಾಂಗಣ ಸ್ನಾನದ ನೀರು (ಸಂಘಟಿತ) B ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 500 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 5 ಮಿ.ಗ್ರಾಂ/ ಲೀ.ಅಥವಾ ಹೆಚ್ಚು . 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 3 ಮಿ.ಗ್ರಾಂ/ ಲೀ.ಅಥವಾ ಕಡಿಮೆ. ಸಾಂಪ್ರದಾಯಿಕ ಸಂಸ್ಕರಣ ಹಾಗೂ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು C ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 5000 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6 ರಿಂದ 9 ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 3 ಮಿ.ಗ್ರಾಂ/ ಲೀ ಅಥವಾ ಕಡಿಮೆ ವನ್ಯಜೀವಿಗಳು ಹಾಗೂ ಮೀನುಗಾರಿಕೆಗೆ ಉದ್ದೇಶಿತ D pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು. ಮುಕ್ತ ಅಮೋನಿಯಾ (N) 1.2 ಮಿ.ಗ್ರಾಂ/ ಲೀ ಅಥವಾ ಕಡಿಮೆ. ನೀರಾವರಿ, ಕೈಗಾರಿಕೆಗಳಲ್ಲಿ ತಂಪುಗೊಳಿಸುವ ಮಾಧ್ಯಮವಾಗಿ, ನಿಯಂತ್ರಿತ ತ್ಯಾಜ್ಯ ನಿರ್ವಹಣೆಯಲ್ಲಿ E pH ಮೌಲ್ಯವು 6.0 ರಿಂದ 8.5 ರ ನಡುವೆ ಇರುತ್ತದೆ ವಿದ್ಯುತ್ ವಾಹಕತ್ವ- 25°C ಮೈಕ್ರೊ ಮೋಹ್ಸ್ / ಸೆಂ. ಮೀ. ಗರಿಷ್ಠ: 2250. ಸೋಡಿಯಮ್ ಹೀರುವಿಕೆಯ ಅನುಪಾತ ಗರಿಷ್ಠ 26 ಬೋರಾನ್, ಗರಿಷ್ಠ 2 ಮಿ.ಗ್ರಾಂ/ ಲೀ. E ಗಿಂತ ಕೆಳಗೆ A, B, C, D ಹಾಗೂ E ಮಾನದಂಡಗಳಿಗೆ ಹೊಂದುವುದಿಲ್ಲ ಮೂಲ : ಸಿಪಿಸಿಬಿ