ವಿದ್ಯುಚ್ಛಕ್ತಿಯನ್ನು ಮಿತವ್ಯಯಗೊಳಿಸಿ, ವೆಚ್ಚವನ್ನು ಕಡಿತಗೊಳಿಸಿ. ಇಂದಿನ ಸಂದರ್ಭದ ಭಾರತದಲ್ಲಿ ಕಡಿಮೆಯೆಂದರೂ ಶೇ.80ರಷ್ಟು ಶಕ್ತಿಯು ಪೋಲಾಗುತ್ತಿದೆ. ಇದಕ್ಕೆ ಕಾರಣ ನಾವು ಬಳಸುತ್ತಿರುವ ವಿದ್ಯುದ್ದೀಪಗಳ ಪ್ರಕಾರಗಳು, ಮತ್ತಿತರ ಸಲಕರಣೆಗಳು. ಇವು ಹೆಚ್ಚಿನ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ. ಸಿಎಫ್‌ಎಲ್, ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಸಿಎಫ್‌ಎಲ್ ಬಲ್ಬ್, ಇತರ ಸಾಧಾರಣ ವಿದ್ಯುದ್ದೀಪಗಳ ಐದು ಪಟ್ಟು ಹೆಚ್ಚು ಬೆಳಕನ್ನು ಕೊಡುತ್ತದೆ. ಸಾಧಾರಣ ಬಲ್ಬ್‌ಗಳಿಗಿಂತ ಎಂಟು ಪಟ್ಟು ಹೆಚ್ಚು ಕಾಲ ಇವು ಕಾರ್ಯ ನಿರ್ವಹಿಸುತ್ತವೆ. ಫ್ಲೂರೊಸೆಂಟ್ ಟ್ಯೂಬ್ ಲೈಟ್‌ಗಳು, ಕಾಂಪ್ಯಾಕ್ಟ್ ಫ್ಲೂರೊಸೆಂಟ್ ದೀಪಗಳು ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತವಲ್ಲದೆ, ಹೆಚ್ಚು ಶಾಖವನ್ನೂ ಸೂಸುವುದಿಲ್ಲ. 60 ವ್ಯಾ. ಬಲ್ಬ್ ಬದಲಿಗೆ ನೀವು 15 ವ್ಯಾ. ಬಲ್ಬ್‌ಗಳನ್ನು ಬಳಸಿದರೆ, ನೀವು ಪ್ರತಿ ಗಂಟೆಗೆ ಕೊನೆಯ ಪಕ್ಷ 45 ವ್ಯಾ. ವಿದ್ಯುತ್ ಬಳಕೆಯನ್ನು ಉಳಿಸಿದಂತಾಗುತ್ತದೆ. ಈ ರೀತಿ ತಿಂಗಳಿಗೆ 11ಯುನಿಟ್‌ನಷ್ಟಾದರೂ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗುವುದು. ಹೀಗೆ ನೀವು ವೆಚ್ಚದಲ್ಲಿಯೂ ಕಡಿತ ಮಾಡಿಕೊಳ್ಳಬಹುದು. ಸಿಎಫ್‌ಎಲ್ ಬಲ್ಬ್‌ಗಳು ಕನಿಷ್ಠ 5 ರಿಂದ 8 ತಿಂಗಳು ಬಾಳಿಕೆ ಬರುತ್ತವೆ. ಈ ಮಾರ್ಗವನ್ನನುಸರಿಸಿ ಶಕ್ತಿ ಮತ್ತು ವಿದ್ಯುತ್ತನ್ನು ಉಳಿತಾಯ ಮಾಡುವುದರಿಂದ, ವಿದ್ಯುತ್ತನ್ನೇ ಕಾಣದ ಹಳ್ಳಿಗಳಲ್ಲಿ ಬೆಳಕು ಹರಿಸಲು ನೀವು ಕೂಡ ಸಹಾಯ ಮಾಡಿದಂತಾಗುತ್ತದೆ.
ಆಕರ: ಅಸಾಂಪ್ರದಾಯಿಕ ಶಕ್ತಿ ಅಭಿವೃದ್ಧಿ ನಿಗಮ ಆಂಧ್ರಪ್ರದೇಶ ನಿಯಮಿತ
ವಿವರಗಳು |
60 ವ್ಯಾ. ಬಲ್ಬ್ |
15 ವ್ಯಾ.ಸಿಎಫ್‍ಎಲ್ |
ಉಳಿತಾಯ |
ಬಲ್ಬ್‌ನ ಬೆಲೆ |
ರೂ. 10. |
116 |
- |
ವ್ಯಾಟೇಜ್ |
60 |
15 |
45 |
ಉರಿಯುವ ಕ್ಷಮತೆ |
6 ತಿಂಗಳು, |
4ವರ್ಷಗಳು, |
- |
ವಾರ್ಷಿಕ ವಿದ್ಯುಚ್ಛಕ್ತಿ ಬಳಕೆ |
115 |
36 |
79 |
ರೂ.2.75 ನಂತೆ ಪ್ರತಿ ಯುನಿಟ್‌ನ |
ರೂ. 316.25 |
ರೂ. 99.00 |
ರೂ. 217.25 |
ನಾಲ್ಕು ವರ್ಷಗಳಿಗೆ ಒಟ್ಟು ವೆಚ್ಚ |
ರೂ. 1265.00 |
ರೂ. 396.00 |
ರೂ. 869.00 |
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/19/2020