ಪರಿಸರ ಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು:
ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ. ಎಕೆಂದರೆ ಪರಿಸರ ಇಂದು ವ್ಯಾಪಕವಾಗಿ ಹಾಳಾಗುತ್ತಿದೆ. ಇದೇ ವೇಗದಲ್ಲಿ ವಿಷವಸ್ತುಗಳು, ರಾಸಾಯನಿಕ ಪದಾರ್ಥಗಳು,ತ್ಯಾಜ್ಯಗಳು ಪರಿಸರವನ್ನು ಸೇರುತ್ತಿದ್ದರೆ ಸಮಸ್ತ ಜೀವಸಂಕುಲದ ನಾಶ ಖಂಡಿತ. ಆದ್ದರಿಂದ ಇಂದು ನಾವು ಕೆಳಕಂಡ ಕ್ರಮಗಳನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲೇಬೇಕಾಗಿದೆ.
- ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು. ಬದಲಾಗಿ ನೈಸರ್ಗಿಕ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಬೇಕು.
- ಬೃಹತ್ ಕೈಗಾರಿಕೆಗಳ ಸ್ಥಾಪನೆ ನಿಲ್ಲಬೇಕು.
- ಆಹಾರ ತ್ಯಾಜ್ಯಗಳು, ಮತ್ತಿತರೆ ಕೊಳೆಯುವ ವಸ್ತುಗಳನ್ನು ನದಿ, ಕೆರೆ, ಸರೋವರಗಳಿಗೆ ಬಿಡಬಾರದು. ಬದಲಾಗಿ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸಬಹುದು.
- ಕಟ್ಟಿಗೆ, ಧ್ರವೀಕೃತ ಅನಿಲ ಇಂಧನಗಳನ್ನು ಅಡುಗೆಗೆ ಉರುವಲಾಗಿ ಉಪಯೋಗಿಸುವ ಬದಲು, ಸೌರಶಕ್ತಿ ಬಳಸಬಹುದು.
- ಇಂಧನಗಳನ್ನು ಮಿತವಾಗಿ ಅಗತ್ಯ ಇರುವಷ್ಟೇ ಬಳಸಬೇಕು. ವಾಹನಗಳು,ದೀಪಗಳು,ಸ್ಟೌ ಮೊದಲಾದವುಗಳನ್ನು ಅಗತ್ಯವಿಲ್ಲದಿರುವಾಗ ನಂದಿಸಬೇಕು.
- ಉಳಿದಿರುವ ಅರಣ್ಯವನ್ನು ಸಂರಕ್ಷಿಸಬೇಕು. ಜೊತೆಗೆ ವನಮಹೋತ್ಸವಗಳಂತಹ ಆಚರಣೆಗಳಿಂದ ಹೊಸದಾಗಿ ಗಿಡ ನೆಟ್ಟು ವೃಕ್ಷ ಸಂಪತ್ತನ್ನು ಹೆಚ್ಚಿಸಬೇಕು. ಇದರಿಂದ ಬೇಸಗೆ ದಿನಗಳಲ್ಲಿ ತಂಪಾದ ವಾತಾವರಣವುಂಟಾಗಿ ಏರ್ ಕೂಲರ್ / ಫ್ರಿಡ್ಜ್ / ಪಂಖಗಳ ಬಳಕೆ ಕಡಿಮೆಯಾಗುತ್ತದೆ.
- ಧೂಮಪಾನ ನಿಲ್ಲಿಸಬೇಕು.
- ವಾಹನಗಳ ನಿರ್ವಹಣೆ ಸರಿಯಾಗಿರಬೇಕು. ವಾಹನದ ಯಂತ್ರಗಳ ಕಾರ್ಯಕ್ಷಮತೆ ಹೆಚ್ಚಿಸಾಲು ಮತ್ತು ಇಂಧನದ ಉಳಿತಾಯಕ್ಕಾಗಿ ಅವು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.
- ಹೆಚ್ಚಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸಬೇಕು. ಕಡಿಮೆ ದೂರದ ಸ್ಥಳಗಳಿಗೆ ನೆಡೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಉತ್ತಮ ಮತ್ತು ಪರಿಸರಕ್ಕೂ ಒಳ್ಳೆಯದು.
ಕೈಗಾರಿಕೆಗಳಿಂದ ಹೊರಬರುವ ಕಲುಷಿತ ರಾಸಾಯನಿಕ ಮತ್ತು ವಿಷಯುಕ್ತ ನೀರು ಮತ್ತು ಅನಿಲಗಳನ್ನು ಶುದ್ದೀಕರಿಸಿಯೇ ಹೊರಬಿಡಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕೈಗಾರಿಕೆಗಳಿಗೆ ಕಠಿಣ ಕಾನೂನನ್ನು ಜಾರಿಗೆ ತಂದು ನಿರ್ವಹಿಸಬೇಕು.
ಶಾಲೆ ಕಾಲೇಜುಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತಾಗಿ ಹೆಚ್ಚಿನ ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು.
ಹೀಗೆ ನಾವು ಈಗಲಾದರೂ ಎಚ್ಚೆತ್ತುಕೊಲ್ಲದಿದ್ದರೆ ಈ ಭೂಮಿ ಮುಂದೊಂದು ದಿನ ವಾಸಯೋಗ್ಯ ಆಗದಿರಬಹುದು. ನಮ್ಮ ಮುಂದಿನ ಪೀಳಿಗೆಗೆ ಇಂದನ್ನು ಸಂರಕ್ಷಿಸಿದಬೇಕಾದ ಅನಿವಾರ್ಯತೆ ನಮಗಿದೆ. ಇದಕ್ಕೆ ಎಲ್ಲರೂ ಕಟಿಬದ್ದರಾದರೆ ಮಾತ್ರ ಈ ಮನುಕುಲದ, ಸಮಸ್ತ ಜೀವಸಂಕುಲದ, ಭೂಮಂಡಲದ ಉಳಿವು ಸಾದ್ಯ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/19/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.