অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬ್ಲೂಮ್ ಬಾಕ್ಸ್ : ಶಕ್ತಿಯ ಮಾಯಾ ಪೆಟ್ಟಿಗೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅನಿಯಂತ್ರಿತವಾಗಿ ಏರುತ್ತಿರುವುದರಿಂದ ಇಡೀ ವಿಶ್ವವು ತತ್ತರಿಸಿ ಹೋಗುತ್ತಿದೆ. ಹೀಗಾಗಿ  ಬದಲಿ ಇಂಧನದ ಅನ್ವೇಷಣೆ ಗಂಭೀರವಾಗಿ ನಡೆಯುತ್ತಿದ್ದು, ಅದರಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ  ಆಶಾಜನಕ ತಂತ್ರಜ್ಞಾನವೆಂದರೆ, ಫುಯಲ್ ಸೆಲ್  ತಂತ್ರಜ್ಞಾನ.  ಸುಮಾರು 400 ಮಿಲಿಯನ್ ಅಮೆರಿಕನ್ ಡಾಲರ್‍ಗಳ ವೆಚ್ಚದಲ್ಲಿ, ಎಂಟು ದೀರ್ಘ ವರ್ಷಗಳ ಪರಿಶ್ರಮದಿಂದ ‘ಪೆಟ್ಟಿಗೆಯಲ್ಲಿ ವಿದ್ಯುತ್‍ಸ್ಥಾವರ’   ತಂತ್ರಜ್ಞಾನವನ್ನು 2010ರಲ್ಲಿ  ಕಂಡುಹಿಡಿದಿದ್ದಾರೆ ಭಾರತದ ಕೆ. ಆರ್. ಶ್ರೀಧರ್.  ಸಿಲಿಕಾನ್ ವ್ಯಾಲಿಯಲ್ಲಿ ಅವರು ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದವರಲ್ಲಿ  ಕ್ಯಾಲಿಫೆÇೀರ್ನಿಯಾದ  ರಾಜ್ಯಪಾಲ ಆರ್ನಾಲ್ಡ್ ಸ್ವಾಸ್‍ನೆಗರ್ ಸಹ ಒಬ್ಬರು.
ಪ್ರಪಂಚ ಎದುರಿಸುತ್ತಿರುವ ತೀವ್ರ ಇಂಧನದ ಬಿಕ್ಕಟ್ಟನ್ನು ಸಿನಿಮೀಯವಾಗಿ ಸುಧಾರಿಸ ಬಲ್ಲ  ಬ್ಲೂಮ್ ಬಾಕ್ಸ್ ತಂತ್ರಜ್ಞಾನವನ್ನು ಈಗಾಗಲೇ ವಿಶ್ವ ವಿಖ್ಯಾತ  ಕಂಪೆನಿಗಳಾದ ಫೆಡ್-ಎಕ್ಸ್, ಗೂಗ್ಲ್,  ಈ-ಬೆ, ಮತ್ತು ವಾಲ್-ಮಾರ್ಟ್, ಅವರು ಅಳವಡಿಸಿಕೊಂಡಿದ್ದಾರೆ.

ಬ್ಲೂಮ್ ಬಾಕ್ಸ್  ಎಂದರೇನು?

ಬ್ಲೂಮ್ ಎನರ್ಜಿ ಎಂಬುದು ಶ್ರೀಧರವರ ಕಂಪನಿಯ ಹೆಸರು. ಇವರು ಸೃಷ್ಟಿಸಿರುವ ಫ್ಯುಯಲ್ ಸೆಲ್‍ಅನ್ನು ಬ್ಲೂಮ್ ಬಾಕ್ಸ್ ಎಂದು ಕರೆದಿದ್ದಾರೆ.  ಸೌರ ಶಕ್ತಿಯ ಫೋಟೋ ವೋಲ್ಟಾಯಿಕ್ ಸಿಸ್ಟಮ್‍ಗಳಿಗಿಂತ  ಎಂಟು ಪಟ್ಟು ಹೆಚ್ಚು ವಿದ್ಯುತ್ ಉತ್ಪದಿಸಬಲ್ಲ ಫ್ಯುಯೆಲ್ ಸೆಲ್‍ಗಳು ಮೀಥೇನಿನಂತಹ  ಜೈವಿಕ ಅನಿಲಗಳನ್ನು ನೇರವಾಗಿ ವಿದ್ಯುತ್‍ಆಗಿ ಪರಿವರ್ತಿಸಬಲ್ಲದು. ಪವರ್ ಗ್ರಿಡ್ ಗಳಿಂದ ಕಂಭ, ಕಂಬಿಗಳ ಮೂಲಕ ವಿದ್ಯುತ್ ಸಾಗಿಸಿ ಮಾರ್ಗಮಧ್ಯ ವಿದ್ಯುತ್ ನಷ್ಟವಾಗಿ ಈ ಯಾವ ಗೊಡವೆಯೂ ಇಲ್ಲದೆ  ನಮ್ಮ ಮನೆಯ ಅಂಗಳದಲ್ಲೇ  ಒಂದು ಸಣ್ಣ ವಿದ್ಯುತ್-ಸ್ಥಾವರವನ್ನು ಸ್ಥಾಪಿಸಿಕೊಂಡಂತೆ ಆಗುತ್ತದೆ ಬ್ಲೂಮ್ ಬಾಕ್ಸ್ ಅಳವಡಿಸಿಕೊಂಡರೆ.ಬ್ಲೂಮ್ ಬಾಕ್ಸ್ ಹೇಗೆ ಕೆಲಸ ಮಾಡುತ್ತದೆ? ಆಲಬ್ರ್ಟ್ ಐನ್‍ಸ್ಟೈನ್ ನ ಸಂಶೋಧನೆಯನ್ನು ಬಹಳ ಸರಳವಾಗಿ   E= MC2 ಎಂದು  ಹೇಳುವಂತೆ  ಇಲ್ಲಿ ನಡೆಯುವ ರಾಸಾಯನಿಕ  ಪ್ರಕ್ರಿಯೆ:

ಸಾಲಿಡ್ ಆಕ್ಸೈಡ್ ಫ್ಯುಯಲ್ ಸೆಲ್‍ಗೆ  ಜೈವಿಕ ಮೂಲಗಳ ದ್ರವ ಅಥವಾ ಅನಿಲ ರೂಪದ ಹೈಡ್ರೋಕಾರ್ಬನ್‍ಗಳು  ಕಚ್ಚಾ ಸಾಮಗ್ರಿಗಳಾಗಿ ಬೇಕು. ಮೀಥೇನ್‍ಅನ್ನು ಒಂದು ಕಡೆಯಿಂದ ಹಾಯಿಸಿ, ಮತ್ತೊಂದು ಕಡೆಯಿಂದ ಆಮ್ಲಜನಕವನ್ನು ಹಾಯಿಸಿ, ಸುಮಾರು 1000ಡಿಗ್ರಿ ಸೆ. ತಾಪಮಾನದಲ್ಲಿ ಬೆರೆತಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ ಒಂದು ಸೆಲ್‍ನಲ್ಲಿ ಎರಡು ಪಿಂಗಾಣಿ ಪದರಗಳ ನಡುವೆ ಜೋಡಿಸಿರುವ 10್ಠ0  100 ಮಿ.ಮೀ. ಮಿಶ್ರಲೋಹದ ಪ್ಲೇಟ್ ಇರುತ್ತದೆ. ಇಂತಹ ಒಂದು ಸೆಲ್‍ನಿಂದ 25 ವ್ಯಾಟ್ ವಿದ್ಯುತ್ ಉತ್ಪತ್ತಿಯಾಗುತ್ತದೆ.

ಬ್ಲೂಮ್ ಬಾಕ್ಸ್ ಹೇಗೆ ಮಾಡಿರುತ್ತಾರೆ?

ಈ ತಂತ್ರಜ್ಞಾನ ಇನ್ನೂ ಜನಪ್ರಿಯತೆ ಕಾಣುವ ಹಂತದಲ್ಲಿರುವುದರಿಂದ  ಪ್ರತಿಸ್ಪರ್ಧಿಗಳಿಗೆ ಇದರ ಗುಟ್ಟು ಬಿಟ್ಟುಕೊಡಬಾರದೆಂದು ಇನ್ನೂ ಸಂಪೂರ್ಣ ಮಾಹಿತಿ ಎಲ್ಲರಿಗೂ ತಿಳಿಸಿಲ್ಲ. ಆದರೂ, ಲಭ್ಯವಿರುವ ಮಾಹಿತಿಯ ಪ್ರಕಾರ, ಅತೀ ತೆಳುವಾದ ಬಿಳಿ ಪಿಂಗಾಣಿ ತಟ್ಟೆಗಳನ್ನು ಸಮುದ್ರ ದಡದ ಮರಳಿನಿಂದ ಮಾಡಲಾಗಿದ್ದು,  ಆ್ಯನೋಡ್ (ಧನ) ದ್ವಾರವಾಗಿ ಹಸಿರು ನಿಕಲ್ ಆಕ್ಸೈಡ್‍ನ ಶಾಯಿಯನ್ನು ಒಂದು ಮಗ್ಗುಲಲ್ಲಿ ಹಾಗೂ ಕ್ಯಾಥೋಡ್ (ಋಣ) ದ್ವಾರವಾಗಿ ಲ್ಯಾಂಥನಮ್ ಸ್ಟ್ರಾನ್ಷಿಯಮ್ ಮ್ಯಾಂಗನೈಟ್ ಶಾಯಿಯನ್ನು ಇನ್ನೊಂದು ಮಗ್ಗುಲಲ್ಲೂ ಲೇಪಿಸಿರುತ್ತಾರೆ.  ವೈರ್ಡ್ ಪತ್ರಿಕೆಯ ಪ್ರಕಾರ ಈ ಇಂಧನ ಕೋಶದಲ್ಲಿರುವ ರಹಸ್ಯ ಸಾಮಗ್ರಿ  ಸ್ಥಿರಗೊಳಿಸಿದ ಝಿರ್ಕೋನಿಯ  ಇರಬಹುದು. ಕ್ಷಮತೆ:

ಪ್ರತಿ ಕಿಲೋವಾಟ್ ವಿದ್ಯುತ್ ಉತ್ಪಾದನೆಗೆ 8-10 ಸೆಂಟ್‍ಗಳ ಖರ್ಚು ಬೀಳುತ್ತದೆ. (ಸುಮಾರು 4- 5 ರೂಗಳು) ಮತ್ತು ನೈಸರ್ಗಿಕ ಗ್ಯಾಸನ್ನು ಇಂಧನ ಮೂಲವಾಗಿ ಬಳಸುತ್ತದೆ.  ಹೊಸ ತಂತ್ರಜ್ಞಾನದ ಪೆಟ್ಟಿಗೆಗಳನ್ನು ನಿರ್ವಹಿಸಲು ಹೆದರುವ ಗ್ರಾಹಕರಿಗೆ ತೊಂದರೆ ತಪ್ಪಿಸಲು  ಸದ್ಯಕ್ಕೆ ಬ್ಲೂಮ್ ಎನರ್ಜಿಯು ಇಂಧನ ಪೆಟ್ಟಿಗೆಗಳನ್ನು ಮಾರುವ ಬದಲು ವಿದ್ಯುತ್ತನ್ನೇ ಸರಬರಾಜು ಮಾಡುತ್ತಿದೆ. ಈ-ಬೆ  ಕಂಪೆನಿಯ ವಿದ್ಯುತ್ ಅಗತ್ಯಗಳ ಶೇ.15 ರಷ್ಟನ್ನು ಬ್ಲೂಮ್ ಬಾಕ್ಸ್ ಪೂರೈಸುತ್ತಿದೆ.   ಜುಲೈ 2008ರಲ್ಲಿ ಗೂಗ್ಲ್‍ಗೆ ನೂರು ಕಿ.ವಾ. ಸಾಮಥ್ರ್ಯದ ತನ್ನ ಮೊದಲ ಎನರ್ಜಿ ಸರ್ವರನ್ನು ಕೊಟ್ಟಿತು. ನಂತರ ಈ-ಬೆ ಗೆ ಐನೂರು ಕಿ.ವಾ.,  ವಾಲ್-ಮಾರ್ಟ್‍ಗೆ 800 ಕಿ.ವಾ., ಕೋಕೋಕೋಲ ಹಾಗೂ ಬ್ಯಾಂಕ್ ಆಫ್ ಅಮೆರಿಕಗೆ ತಲಾ ಐನೂರು ಕಿ.ವಾ. ಸಾಮಥ್ರ್ಯದ ಸರ್ವರ್‍ಗಳನ್ನು ಮಾರಿದೆ. ಶ್ರೀಧರ್ ಹೇಳುವ ಪ್ರಕಾರ ಬ್ಲೂಮ್ ಬಾಕ್ಸ್‍ಗಳು ರಾಸಾಯನಿಕ ಶಕ್ತಿಯನ್ನು ನೇರವಾಗಿ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ. (ಸಾಂಪ್ರದಾಯಿಕ ಸ್ಥಾವರಗಳಲ್ಲಿ  ಡೀಸೆಲ್‍ಅನ್ನು  ಶಾಖವಾಗಿ ಪರಿವರ್ತಿಸಿ, ನಂತರ ಅದನ್ನು ಮೆಕ್ಯಾನಿಕಲ್ ಶಕ್ತಿಯಾಗಿ ಪರಿವರ್ತಿಸಿ ಅದರಿಂದ ವಿದ್ಯುತ್ತನ್ನು ಪಡೆಯಲಾಗುತ್ತದೆ. )

ಬ್ಲೂಮ್ ಬಾಕ್ಸ್ ಬೆಲೆ ಎಷ್ಟು?

ಸದ್ಯಕ್ಕೆ ಇದು  ದೊಡ್ಡ ದೊಡ್ಡ ಕಂಪನಿಗಳಿಗೆ ಪೂರೈಸುತ್ತಿದ್ದು  ಬಹಳ ದುಬಾರಿ ಎನಿಸಿದೆ.  ಈಗ ಪ್ರತಿಯೊಂದು ಯುನಿಟ್‍ಅನ್ನೂ ಕೈಯಾರೆ ಮಾಡಲಾಗುತ್ತಿದ್ದು ನೂರು ಕಿ.ವಾ. ಸಾಮಥ್ರ್ಯದ ವಿದ್ಯುತ್ ಸರ್ವರ್‍ಗೆ  700 ರಿಂದ 800 ಸಾವಿರ ಅಮೆರಿಕನ್ ಡಾಲರ್ ಬೆಲೆಯಾಗುತ್ತದೆ. ಮುಂದಿನ ಹಂತದಲ್ಲಿ ಕಾರ್ಖಾನೆಗಳಲ್ಲಿ ಮಾಸ್ ಉತ್ಪಾದನೆ ಮಾಡು ವಾಗ ಇದರ ಉತ್ಪಾದನಾ ವೆಚ್ಚ ಕಡಿಮೆಯಾಗಬಹುದು.  ಶ್ರೀಧರ್‍ಗೆ ಭಾರತದಂತಹ ದೇಶಗಳಲ್ಲಿ 1 ಕಿ.ವಾ. ಸಾಮಥ್ರ್ಯದ  ಸೆಲ್‍ಗಳನ್ನು  ಮನೆ ಮನೆಗೂ ತಲುಪಿಸಲು ಸಾಧ್ಯವಾಗುವ ವೆಚ್ಚದಲ್ಲಿಉತ್ಪಾದಿಸುವ ಉದ್ದೇಶವೂ ಇದೆ.

ಕೆ. ಆರ್. ಶ್ರೀಧರ್

ಮದರಾಸು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಇಲಿನಯ್ಸ್ ವಿ.ವಿ.ಯಲ್ಲಿ ನ್ಯೂಕ್ಲಿಯರ್ ಎಂಜಿನಿಯರಿಂಗ್ ನಲ್ಲಿ ಪಿಎಚ್.ಡಿ. ಪಡೆದು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯಲ್ಲಿ ಮಂಗಳ ಗ್ರಹದ ಮೇಲೆ ಜೀವಿಸಲು ಸಾಧ್ಯವಾಗುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ತಂಡದ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸಿದ್ದಾರೆ. ಈಗ ಬ್ಲೂಮ್ ಎನರ್ಜಿ ಎಂಬ ಹಸಿರುತಂತ್ರಜ್ಞಾನದ ಖಾಸಗೀ ಕಂಪೆನಿಯ ಪ್ರಮುಖ ಸಂಸ್ಥಾಪಕ ಹಾಗೂ ಸಿ.ಇ.ಓ. ಅಗಿದ್ದಾರೆ. ಇದಕ್ಕೆ ಮೊದಲು ಅವರು ಆರಿಜೋನ ವಿಶ್ವ ವಿದ್ಯಾಲಯದ  ಖ್ಯಾತ ಎಸ್.ಟಿ.ಎಲ್. (ಸ್ಪೇಸ್ ಟೆಕ್ನೋಲಜಿ ಲ್ಯಾಬರೇಟೊರಿಯ)  ನಿರ್ದೇಶಕರಾಗಿಯೂ,  ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪೆÇ್ರಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.  ಫಾಚ್ರ್ಯೂನ್ ಪತ್ರಿಕೆಯು ಇವರನ್ನು ‘ನಾಳೆಯನ್ನು ಇಂದು ಉಂಟುಮಾಡುತ್ತಿರುವ ವಿಶ್ವದ ಅತ್ಯುತ್ತಮ ಐದು ಮೇಧಾವಿಗಳಲ್ಲಿ ಒಬ್ಬ’ನೆಂದು ಗುರುತಿಸಿದೆ.

ಕೊನೆಯ ಮಾರ್ಪಾಟು : 6/19/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate