অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಎಲ್. ಪಿ. ಜಿ. ವಿತರಕ

ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ.(ಅಡುಗೆ ಅನಿಲ) ವಿತರಕ ಯೋಜನೆಯು ಅಕ್ಟೋಬರ್ 16, 2009 ರಂದು ಜಾರಿಗೆ ಬಂತು. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳ ಒಳಪ್ರವೇಶ ಸಾಧ್ಯವಾಗಲು ಹಾಗೂ ದುರ್ಗಮ ಪ್ರದೇಶಗಳನ್ನು ಒಳಗೊಳ್ಳಿಸಲು ಮತ್ತು ಕಡಿಮೆ ಸಂಭವನೀಯತೆಯನ್ನು ಹೊಂದಿದ ಪ್ರದೇಶಗಳನ್ನು ಒಳಗೊಳ್ಳಿಸುವಿಕೆಯನ್ನು ( ತಿಂಗಳಿಗೆ 600 ಸಿಲಿಂಡರುಗಳ ಮಾರಾಟ/ಮರುಪೂರಣ ಸಾಧ್ಯವಾಗುವ ಪ್ರದೇಶ) ಸಾಧ್ಯವಾಗಿಸಲು ಸಣ್ಣ ಪ್ರಮಾಣದ ವಿತರಣಾ ಏಜೆನ್ಸಿಗಳನ್ನು ಹುಟ್ಟುಹಾಕುವುದು.

ಹರಹು/ ವಿಸ್ತರಣೆ

ಈ ಯೋಜನೆಯು ಪ್ರಾಥಮಿಕ ಹಂತದಲ್ಲಿ ಎಂಟು ರಾಜ್ಯಗಳಲ್ಲಿ ಜಾರಿಗೆ ಬರುತ್ತಿದ್ದು ಅದು ಎಲ್. ಪಿ.ಜಿ ವಿತರಣೆ ಬಹಳ ಕಡಿಮೆ ಇರುವ ಒಂದು ಸಾವಿರದ ಇನ್ನೂರು ಸ್ಥಳಗಳನ್ನು ಒಳಗೊಳಿಸಲಿದೆ.

ಕ್ರಮ ಸಂಖ್ಯೆ

ರಾಜ್ಯದ ಹೆಸರು

ರಾಜ್ಯದೊಳಗಿನ ಸ್ಥಳಗಳ ಸಂಖ್ಯೆ

1

ಮಧ್ಯಪ್ರದೇಶ

97

2

ಉತ್ತರ ಪ್ರದೇಶ

290

3

ರಾಜಸ್ಥಾನ

192

4

ಪಶ್ಚಿಮ ಬಂಗಾಳ

175

5

ಬಿಹಾರ

251

6

ಝಾರ್ಖಂಡ

80

7

ಛತ್ತೀಸ್ ಘಡ

39

8

ಒರಿಸ್ಸಾ

101

ಯೋಜನೆಯ ಪ್ರಮುಖ ಲಕ್ಷಣಗಳು

  • ಈ ಯೋಜನೆಯ ಅಡಿಯಲ್ಲಿ ಸ್ಥಾಪಿಸಲಾದ ಏಜೆನ್ಸಿಗಳು ಕಡಿಮೆ ಬಂಡವಾಳ ಹಾಗೂ ಮೂಲಭೂತ ಸೌಕರ್ಯಗಳ ಅಗತ್ಯವಿರುವಂತಹ ಸಣ್ಣ ಗಾತ್ರದವುಗಳಾಗಿರುತ್ತವೆ. ಈ ಏಜೆನ್ಸಿಗಳು ಈಗಿನ 2,500 ಸಿಲಿಂಡರುಗಳ ಬದಲು 600 ಸಿಲಿಂಡರುಗಳನ್ನು ಮರುತುಂಬುವ ಸಾಮರ್ಥ್ಯವನ್ನು ಪಡೆದಿರುತ್ತವೆ.
  • ಈ ಸಣ್ಣ ಪ್ರಮಾಣದ ಏಜೆನ್ಸಿಗಳು, ಆರ್ಥಿಕ ಕಾರಣಗಳಿಂದ ಸಾಮಾನ್ಯ ಸರಬರಾಜು ಸಾಧ್ಯವಾಗದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಒಳಪ್ರವೇಶ ಮಾಡುವ ಸಾಮರ್ಥ್ಯ ಪಡೆದಿವೆ. ತಾವು ಸೇವೆ ಒದಗಿಸುತ್ತಿರುವ ಹಳ್ಳಿಗಳ ಸಮೂಹದಲ್ಲಿ ಸುಮಾರು 1,500 ಗ್ರಾಹಕರ ಬೇಡಿಕೆಯನ್ನು ಪೂರೈಸುವುದು ರಾಜೀವ್ ಗಾಂಧಿ ಗ್ರಾಮೀಣ ವಿತರಕ ಯೋಜನೆಯ ವಿತರಕರಿಗೆ ಸಾಧ್ಯವಿದೆ.
  • ಈ ಏಜೆನ್ಸಿಗಳು ಸ್ವಯಂ ಕಾರ್ಯನಿರ್ವಹಿಸಲಿವೆ: ವಿತರಕನು ತನ್ನ ಪರಿವಾರದ ಸದಸ್ಯರ ಹಾಗೂ ಒಬ್ಬ ಅಥವಾ ಇಬ್ಬರು ನೌಕರರ ಸಹಕಾರದಿಂದ ತಾನೇ ಏಜೆನ್ಸಿಯನ್ನು ನಿರ್ವಹಿಸುತ್ತಾನೆ.
  • ಮನೆಮನೆಗಳಿಗೆ ಸಿಲಿಂಡರ್ ವಿತರಿಸುವ ಕೆಲಸವಿರುವುದಿಲ್ಲ.
  • ವಿತರಕರ ವಯೋಮಿತಿಯನ್ನು 21 ರಿಂದ 45 ವರ್ಷದವರೆಗೆ ಎಂದು ನಿಗದಿಗೊಳಿಸಿದ್ದು, ಇದರಿಂದ ಗ್ರಮೀಣ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿಯಾಗುವ ಸಾಧ್ಯತೆಗಳಿವೆ.
  • ಈ ಯೋಜನೆಯ ಅಡಿಯಲ್ಲಿ ಬರುವ ವಿತರಕರು ಒಂದು ನಿರ್ದಿಷ್ಟ ಸ್ಥಳದ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಖಾಯಂ ನಿವಾಸಿಯಾಗಿರುತ್ತಾರೆ.
  • ಈ ಯೋಜನೆಯಡಿಯಲ್ಲಿ, ಎಲ್ಲಾ ಏಜೆನ್ಸಿಗಳೂ ಪತಿ-ಪತ್ನಿಯರ ಜಂಟಿ ಹೆಸರಿನಲ್ಲಿರುವುದು. ಅವಿವಾಹಿತರು ಏಜೆನ್ಸಿ ಪಡೆದುಕೊಂಡ ಪಕ್ಷದಲ್ಲಿ, ವಿವಾಹಾ ನಂತರ ಪತ್ನಿಯು ವ್ಯವಹಾರದಲ್ಲಿ ಪಾಲುದಾರರಾಗುತ್ತಾರೆಂದು ಪ್ರಮಾಣ ಪಡೆದುಕೊಳ್ಳಲಾಗುತ್ತದೆ. ಇದು ಗ್ರಾಮೀಣ ಮಹಿಳೆಯರನ್ನು ಸಶಕ್ತಗೊಳಿಸುವತ್ತ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ.
  • ಈ ಯೋಜನೆಯಡಿಯಲ್ಲಿ ವಿತರಕತ್ವ ಪಡೇಯಬೇಕಾದರೆ, ಅಭ್ಯರ್ಥಿಯ ಹೆಸರಿನಲ್ಲಿ 20 ಮೀ. X 24 ಮೀ. ಭೂಮಿಯಿದ್ದು, ಆತ ಸುಮಾರು 3.21 ಲಕ್ಷ ರೂಪಾಯಿಯ ಬಂಡವಾಳ ಹೂಡಬೇಕಾಗುತ್ತದೆ. ವಿತರಕನು ತಾನು ಹೂಡಿದ ಬಂಡವಾಳವನ್ನು 1,800 ಹೊಸ ಎಲ್.ಪಿ.ಜಿ. ಸಂಪರ್ಕಗಳನ್ನು ಕಲ್ಪಿಸಿದ ನಂತರ ಹಿಂಪಡೆಯಬಹುದು. ವಿತರಕನ ಸೂಚಿತ ನಿವ್ವಳ ಆದಾಯವು ತಿಂಗಳಿಗೆ ಸುಮಾರು 7,500 ರೂಪಾಯಿಗಳಷ್ಟಿರುತ್ತದೆ. ಈ ಯೋಜನೆಯ ಒಂದು ಮುಖ್ಯ ಲಕ್ಷಣವೆಂದರೆ ಇಲ್ಲಿ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಯ ಆರ್ಥಿಕ ಶಕ್ತಿ ಹಾಗೂ ವಿದ್ಯಾಭ್ಯಾಸದ ಮಟ್ಟವನ್ನು ಪರಿಗಣಿಸಲಾಗುತ್ತದೆ. ಅವುಗಳ ಆಧಾರದ ಮೇಲೆ ಶೇ. 80 ಅಂಕಗಳನ್ನು ಪಡೆದ ಅಭ್ಯರ್ಥಿಗಳ ಹೆಸರನ್ನು ಅದೃಷ್ಟ ಚೀಟಿಯನ್ನೆತ್ತುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಪ್ರತಿ ರಾಜ್ಯದಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 25 ರಷ್ಟು ಮೀಸಲಾತಿ ಇರುತ್ತದೆ. ಸೇನಾ ಅಭ್ಯರ್ಥಿಗಳಿಗೆ/ ಪ್ಯಾರಾ ಮಿಲಿಟರಿ ಅಭ್ಯರ್ಥಿಗಳಿಗೆ/ ದೈಹಿಕವಾಗಿ ವಿಕಲಾಂಗ ವ್ಯಕ್ತಿಗಳಿಗೆ/ ಅಟೋಟಗಳಲ್ಲಿ ಅಸಾಧಾರಣ ಪ್ರತಿಭೆಯಿರುವ ಅಭ್ಯರ್ಥಿಗಳಿಗೆ ಇವರೆಲ್ಲರಿಗೂ ಸೇರಿ ಒಟ್ಟು ಶೇ. 25 ರಷ್ಟು ಮೀಸಲಾತಿ ಇರುತ್ತದೆ. ಸಾಮಾನ್ಯ ವರ್ಗದಲ್ಲಿ ಯಾವುದೇ ಅಭ್ಯರ್ಥಿಗಳಿಲ್ಲದಲ್ಲಿ ಮುಂದೆ ಬರುವ ಜಾಹೀರಾತಿನಲ್ಲಿ ತೆರೆದ ವರ್ಗಕ್ಕೆ ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ :ರಾಜೀವ್ ಗಾoಧೀ ಗಾಾಮೀಣ ವಿದ್ಯುತೀಕರಣ ಯೋಜನೆ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate