ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಆರಂಭಿಸಲಾಯಿತು
ಕೌಟುಂಬಿಕ ಮಾದರಿಯ ಜೈವಿಕ ಅನಿಲ ಸ್ಥಾವರಗಳ ಮೂಲಕ ಗ್ರಾಮೀಣ ಮನೆಗಳಿಗೆ ಅಡುಗೆಯ ಇಂಧನ ಮತ್ತು ಜೈವಿಕ ಗೊಬ್ಬರವನ್ನು ಪೂರೈಸುವುದು. ಗ್ರಾಮೀಣ ಮಹಿಳೆಯರ ಪರಿಶ್ರಮವನ್ನು ಕಡಿಮೆ ಮಾಡುವುದು, ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಸಾಮಾಜಿಕವಾಗಿ ಬದಲಾವಣೆಗಳನ್ನು ತರುವುದು. ಜೈವಿಕ ಅನಿಲ ಸ್ಥಾವರಗಳನ್ನು ಶೌಚಾಲಯಗಳಿಗೆ ಸಂಪರ್ಕಿಸುವ ಮೂಲಕ ಗ್ರಾಮದ ನೈರ್ಮಲ್ಯವನ್ನು ಹೆಚ್ಚಿಸುವುದು.
ಸ್ಥಳೀಯವಾಗಿ ವೃದ್ಧಿಪಡಿಸಿದಂಥ ಜೈವಿಕ ಅನಿಲ ಸ್ಥಾವರಗಳನ್ನು ಪ್ರವರ್ತಿಸುವುದು ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ರಾಜ್ಯದಲ್ಲಿ ನಿಗದಿತ ನೋಡಲ್ ಏಜೆನ್ಸಿಗಳು ಇವೆ. ಅವಲ್ಲದೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಮುಂಬಯಿ, ರಾಷ್ಟ್ರೀಯ ಹೈನು ಉದ್ದಿಮೆ ಅಭಿವೃದ್ಧಿ ಮಂಡಲಿ, ಆನಂದ್ (ಗುಜರಾತ್), ಹಾಗೂ ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದ ಸರಕಾರೇತರ ಸಂಸ್ಥೆಗಳು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ತೊಡಗಿವೆ. ಈ ಯೋಜನೆಯು ಬಳಕೆದಾರರಿಗೆ ಆರ್ಥಿಕ ಪ್ರೇರಕಗಳನ್ನೂ, ಕೇಂದ್ರ ಸರಕಾರದ ಸಹಾಯಧನವನ್ನು, ಉದ್ದಿಮೆದಾರರಿಗೆ ತಿರುಪುಕೀಲಿ ಯೋಜನೆಯ ಶುಲ್ಕವನ್ನೂ, ರಾಜ್ಯ ನೋಡಲ್ ಏಜೆನ್ಸಿ(ಸಂಸ್ಥೆ)ಗೆ ಸೇವಾ ಶುಲ್ಕವನ್ನೂ, ತರಬೇತಿ ಮತ್ತು ಪ್ರಚಾರಕ್ಕೆ ಬೆಂಬಲವನ್ನೂ ಕೊಡುತ್ತದೆ. ಹಲವು ವಿಧದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಲ್ಲಿ ಆಸ್ಪದವಿದೆ. ಒಂಭತ್ತು ಪ್ರಮುಖ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ ಅನಿಲ ಅಭಿವೃದ್ಧಿ ಹಾಗೂ ತರಬೇತಿ ಕೇಂದ್ರಗಳು, ರಾಜ್ಯ ನೋಡಲ್ ಇಲಾಖೆ ಹಾಗೂ ಏಜೆನ್ಸಿಗಳಿಗೆ ತಾಂತ್ರಿಕ ಹಾಗೂ ತರಬೇತಿಯ ಬೆಂಬಲ ನೀಡುತ್ತಿವೆ. ವ್ಯಾಪಾರದ ಮತ್ತು ಸಹಕಾರೀ ಬ್ಯಾಂಕುಗಳು ಕೃಷಿಪ್ರಧಾನ ಸ್ಥಳಗಳಲ್ಲಿ ಜೈವಿಕ ಅನಿಲ ಸ್ಥಾವರಗಳನ್ನು ರಚಿಸಲು ಸಾಲವನ್ನೂ ನೀಡುತ್ತವೆ. ನಬಾರ್ಡ್ ಸಹ ಬ್ಯಾಂಕುಗಳಿಗೆ ಸ್ವಯಂಚಾಲಿತ ಪುನರಾವರ್ತಿತ ಅರ್ಥಿಕ ಸಹಕಾರವನ್ನು ನೀಡುತ್ತಿದೆ.
ರಾಷ್ಟ್ರೀಯ ಜೈವಿಕ ಅನಿಲ ಹಾಗೂ ಗೊಬ್ಬರ ನಿರ್ವಹಣಾ ಕಾರ್ಯಕ್ರಮ(ಏನ್.ಬಿ.ಎಂ.ಎಂ.ಪಿ)ದಡಿಯಲ್ಲಿ ನೀಡುತ್ತಿರುವ ಆರ್ಥಿಕ ಪ್ರೇರಕಗಳು (ಏನ್.ಬಿ.ಎಂ.ಎಂ.ಪಿ)
ವಿಭಾಗ |
1 ಘನ ಮೀ. ಇರುವ (ಫಿಕ್ಸ್ಡ್ ಡೋಮ್/ ಸ್ಥಿರ ಗುಮ್ಮಟ ಮಾದರಿ) ಒಂದು ಸ್ಥಾವರಕ್ಕೆ ಕೇಂದ್ರದಿಂದ ಸಹಾಯ ಧನ |
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ (ಅಸ್ಸಾಂ ರಾಜ್ಯದ ಬಯಲು ಪ್ರದೇಶಗಳನ್ನು ಹೊರತು ಪಡಿಸಿ). |
ರೂ. 14,700/- (2-4 ಘ,ಮೀ. ಸ್ಥಾವರಗಳಿಗೂ ಅನ್ವಯವಾಗುತ್ತದೆ.) |
ಅಸ್ಸಾಂ ರಾಜ್ಯದ ಬಯಲು ಪ್ರದೇಶಗಳು |
ರೂ.9,000/- (2-4 ಘ,ಮೀ. ಸ್ಥಾವರಗಳಿಗೆ ರೂ.10,000) |
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ(ತೆರಾಯಿ ಪ್ರದೇಶವನ್ನು ಹೊರತುಪಡಿಸಿ), ತಮಿಳುನಾಡಿನ ನೀಲಗಿರಿ, ದಾರ್ಜೀಲಿಂಗಿನ ಸದರ್ ಕುರ್ಸೂಂಗ್ ಮತ್ತು ಕೈಲಿಂಕ್ಪೊಂಗ್ ಉಪವಿಭಾಗಗಳು, ಸುಂದರಬನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು |
ರೂ..4,000/- (2-4 ಘ,ಮೀ. ಸ್ಥಾವರಗಳಿಗೆ ರೂ.10,000) |
ಇತರ ಪ್ರದೇಶಗಳು |
ರೂ.4,000/- (2-4 ಘ,ಮೀ. ಸ್ಥಾವರಗಳಿಗೆ ರೂ. 8000/- ) |
ಶೌಚಾಲಯಗಳ ಸಂಪರ್ಕವಿರುವ ಜೈವಿಕ ಅನಿಲ ಸ್ಥಾವರಗಳು: ಸ್ಥಾವರಗಳು ಹಾಗೂ ಶೌಚಾಲಯಗಳಿಗೆ ಸಂಪರ್ಕವೇರ್ಪಡಿಸಿದರೆ ಕೇಂದ್ರದಿಂದ ರೂ. 1000/- ದ ಹೆಚ್ಚುವರಿ ರಿಯಾಯಿತಿಯಿದೆ. ಐದು ವರ್ಷದ ಉಚಿತ ನಿರ್ವಹಣೆಯ ಭರವಸೆಯೊಂದಿಗೆ ತಿರುಪುಕೀಲಿ ಕೆಲಸದ ಶುಲ್ಕದ ರೂಪದಲ್ಲಿ ಎಲ್ಲಾ ರಾಜ್ಯದಲ್ಲೂ ಪ್ರತಿ ಸ್ಥಾವರಕ್ಕೆ ರೂ. 1,500. ಕೆಲಸ ನಿರ್ವಹಿಸದ / ಹಳೆಯ ಸ್ಥಾವರಗಳ ದುರಸ್ತಿಗೆ ಆರ್ಥಿಕ ಸಹಕಾರ: ಹಳೆಯ, ಕುಟುಂಬ ಗಾತ್ರದ, ಸ್ಥಾವರಗಳ ದುರಸ್ತಿಗೆ, ವಿವಿಧ ವರ್ಗಗಳ ಬಳಕೆದಾರರಿಗೆ ಹಾಗೂ ಪ್ರದೇಶಗಳಿಗೆ ಅನ್ವಯವಾಗುವಂತೆ ಕೇಂದ್ರದ ಸಹಾಯಧನದ ಶೇ. 50 ರಷ್ಟು. ಆದರೆ ಅವು ಐದು ವರ್ಷ ಹಳೆಯದಾಗಿರಬೇಕು ಮತ್ತು ರಚನೆಯ ದುರಸ್ತಿಯ ಅಗತ್ಯವಿರುವವುಗಳಾಗಿರಬೇಕು.
ಕೊನೆಯ ಮಾರ್ಪಾಟು : 2/15/2020
ಭೂಮಿಯು ಸೂರ್ಯನಿಂದ ಶಾಖವನ್ನು ಪಡೆಯುತ್ತದೆ. ಇದರಿಂದ ಭೂ ಮೇ...
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು
ಕ್ಯಾಲ್ಸಿಯಂ,ಮೆಗ್ನೀಶಿಯಂ,ಗಂಧಕ ರಸ ಗೊಬ್ಬರಗಳು
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...