অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರಿಸರ ವರದಿ ಸಂಹಿತೆ

ತಾರ್ಕಿಕ ಹಾಗೂ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಲ್ಲಿ ತಳಮಟ್ಟದ ದಾಖಲೆಯಾಗಿ ಸಹಕರಿಸುವ ಭಾರತದ ಪಾರಿಸರಿಕ ಸನ್ನಿವೇಶದ ಪುನರವಲೋಕನ ನಡೆಸುವುದು ಭಾರತದ ಪರಿಸರ ವರದಿ ಸಂಹಿತೆಯ ಮುಖ್ಯ ಉದ್ದೇಶವಾಗಿದೆ. ಎಸ್ಒಇ ವರದಿಯು ನೀತಿ ಸೂಚನಾವಳಿಗಳನ್ನು ನೀಡಲು, ಹಾಗೂ ಮುಂಬರುವ ದಶಕಗಳಿಗಾಗಿ ಪರಿಸರದ ಸ್ಥಿತಿಗತಿ ಹಾಗೂ ಪಾರಿಸರಿಕ ಒಲವುಗಳ ವಿಶ್ಲೇಷಣೆಯ ಆಧಾರದ ಮೇಲೆ ಸಂಪನ್ಮೂಲ ಕ್ರೋಢೀಕರಣಕ್ಕೆ ಕಾರ್ಯತಂತ್ರಗಳನ್ನು ಒದಗಿಸಲು, ಮತ್ತು ರಾಷ್ಟ್ರೀಯ ಪಾರಿಸರಿಕ ಕ್ರಿಯಾ ಯೋಜನೆ ರಚನೆಗೆ ನಿಯಮಾವಳಿಗಳನ್ನು ಒದಗಿಸಲು ಉದ್ದೇಶಿತವಾಗಿದೆ. ಭಾರತೀಯ ಪರಿಸರ ವರದಿ ಸಂಹಿತೆಯು ಪರಿಸರದ ಸ್ಥಿತಿಗತಿ ಹಾಗೂ ಒಲವುಗಳನ್ನು ಒಳಗೊಳ್ಳುತ್ತದೆ (ನೆಲ, ಜಲ, ಗಾಳಿ, ಜೀವ ವೈವಿಧ್ಯ) ಮತ್ತು ಐದು ಮುಖ್ಯ ಸಂಗತಿಗಳಾದ ಹವಾಗುಣ ಬದಲಾವಣೆ, ಆಹಾರ ಭದ್ರತೆ, ಜಲ ಭದ್ರತೆ, ಶಕ್ತಿ ಭದ್ರತೆ ಹಾಗೂ ನಗರೀಕರಣದ ನಿರ್ವಹಣೆಗಳನ್ನು ಒಳಗೊಳ್ಳುತ್ತದೆ. ಈ ವರದಿಯು ಭಾರತದ ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳು, ಪಾರಿಸರಿಕ ಬದಲಾವಣೆಗಳ ಹಿಂದಿನ ಒತ್ತಡ ಮತ್ತು ಈ ಬದಲಾವಣೆಗಳೊಂದಿಗೆ ಬೆಸೆದುಕೊಂಡಿರುವ ಪರಿಣಾಮಗಳ ಪ್ರಚಲಿತ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಆದ್ಯತೆಯ ಮೇರೆಗೆ ವಿವಿಧ ಒಳನೊಟಗಳನ್ನು ಒದಗಿಸುತ್ತದೆ. ವರದಿಯು ಪರಿಸರದ ಹೆಚ್ಚಿನ ವಿನಾಶವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಚಲಿತ ಹಾಗೂ ಉದ್ದೇಶಿತ ನೀತಿ ಉಪಕ್ರಮಗಳು ಅಥವಾ ಕಾರ್ಯಕ್ರಮಗಳ ಮೇಲೆಯೂ ಬೆಳಕು ಚೆಲ್ಲುತ್ತದೆ ಮತ್ತು ಕೆಲವು ನಿಯಮಗಳ ಆಯ್ಕೆಯನ್ನು ಕೂಡ ಸಲಹೆ ಮಾಡುತ್ತದೆ.

ಪರಿಸರ ವರದಿ ಸಂಹಿತೆ 2009 ರ ಪ್ರಮುಖ ಅಂಶಗಳು

ಭಾರತದ ಶೇ.45 ಕ್ಕಿಂತಲೂ ಹೆಚ್ಚು ಭೂಮಿಯು ಕೊರೆತ, ಮಣ್ಣಿನ ಆಮ್ಲೀಯತೆ, ಕ್ಷಾರೀಯತೆ, ಹಾಗೂ ಲವಣೀಯ ಗುಣಗಳು, ನೀರು ನಿಲ್ಲುವಿಕೆ ಮತ್ತು ವಾಯುಕೊರೆತಗಳಿಂದಾಗಿ ನಷ್ಟಗೊಂಡಿದೆ. ಭೂನಷ್ಟದ ಮುಖ್ಯ ಕಾರಣಗಳೆಂದರೆ, ಅರಣ್ಯನಾಶ, ಹೊಂದಾಣಿಕೆಯಾಗದ ಕೃಷಿಪದ್ಧತಿ ಅನುಕರಣೆ, ಗಣಿಗಾರಿಕೆ ಮತ್ತು ಮಿತಿಮೀರಿದ ಅಂತರ್ಜಲ ಹೀರಿಕೆ. ಹಾಗಿದ್ದೂ, ನಷ್ಟಗೊಂಡ 147 ಮಿಲಿಯನ್ ಹೆಕ್ಟೇರ್ ಭೂಪ್ರದೇಶದಲ್ಲಿ ಮೂರನೇ ಎರಡು ಭಾಗದಷ್ಟನ್ನು ಸುಲಭವಾಗಿ ಪುನರ್ಸೃಷ್ಟಿಸಬಹುದಾಗಿದೆ. ಭಾರತದ ಅರಣ್ಯ ವ್ಯಾಪ್ತಿಯು ಕೂಡ ಕ್ರಮಶಃ ಹೆಚ್ಚುತ್ತಿದೆ (ಪ್ರಸ್ತುತ 21% ಕ್ಕಿಂತ ಮೇಲ್ಪಟ್ಟಿದೆ). ಭಾರತದ ಎಲ್ಲ ನಗರಗಳಲ್ಲಿಯೂ ವಾಯು ಮಾಲಿನ್ಯವು ಏರುತ್ತಿದೆ. ಉಸಿರಾಟದ ಮೂಲಕ ಒಳಪ್ರವೇಶಿಸುವ ಕಣಗಳ (ಶ್ವಾಸಕೊಶವನ್ನು ಪ್ರವೇಶಿಸಬಲ್ಲ ಚಿಕ್ಕ ದೂಳಿನ ಕಣಗಳು) ಪ್ರಮಾಣವು ಭಾರತದಾದ್ಯಂತ ಎಲ್ಲ 50 ನಗರಗಳಲ್ಲಿಯೂ ಹೆಚ್ಚಳ ಕಾಣುತ್ತಿದೆ. ವಾಹನಗಳು ಮತ್ತು ಕೈಗಾರಿಕೆಗಳು ನಗರಗಳ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ. ಭಾರತವು ತಾನು ಉಪಯೋಗಿಸಬಲ್ಲ ಪ್ರಮಾಣದಲ್ಲಿ ಶೇಕಡಾ 75 ರಷ್ಟು ನೀರನ್ನು ಬಳಸುತ್ತಿದೆ ಮತ್ತು ಕಾಳಜಿಯಿಂದ ಬಳಸಿದರೆ ಈ ಪ್ರಮಾಣವು ಭವಿಷ್ಯದಲ್ಲಿ ಸಾಕಾಗುವಷ್ಟಾಗುತ್ತದೆ. ಮನೆ ಉಪಯೋಗಕ್ಕಾಗಿ ನೀರಿನ ಮಿತಿಮೀರಿದ ಬಳಕೆ, ಕಳಪೆ ನೀರು ಪೂರೈಕೆ, ಕೈಗಾರಿಕೆಗಳ ಮಿತಿ ಮೀರಿದ ಅಂತರ್ಜಲ ಹೀರಿಕೆ, ಕಾರ್ಖಾನೆಗಳಿಂದ ಹೊರಚೆಲ್ಲುವ ವಿಷಕಾರಿ ಹಾಗೂ ರಾಸಾಯನಿಕಯುಕ್ತ ತ್ಯಾಜ್ಯ ಜಲ, ಅಸಮರ್ಪಕ ನೀರಾವರಿ, ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಮಿತಿಮೀರಿದ ಬಳಕೆಗಳು ರಾಷ್ಟ್ರದಲ್ಲಿ ನೀರಿನ ಸಮಸ್ಯೆಯನ್ನು ಸೃಷ್ಟಿಸುತ್ತಿರುವ ಮುಖ್ಯ ಕಾರಣಗಳಾಗಿವೆ. ಭಾರತವು ತನ್ನಲ್ಲಿರುವ ವಿವಿಧ ಜಾತಿಯ ಜೀವಸಂಕುಲಗಳ ಕಾರಣದಿಂದಾಗಿ ವಿಶ್ವದ 17 'ಮಹಾವೈವಿಧ್ಯ' ರಾಷ್ಟ್ರಗಳಲ್ಲಿ ಒಂದಾಗಿದೆಯಾದರೂ, ಅದರ ಶೇ.10ರಷ್ಟು ಕಾಡು ಹೂವುಗಳು ಮತ್ತು ಸಸ್ಯವೈವಿಧ್ಯಗಳು ಅಳಿವಿನಂಚಿನ ಸಂಕುಲಗಳ ಪಟ್ಟಿಯಲ್ಲಿ ದಾಖಲಾಗಿವೆ. ವಸತಿಗಾಗಿ ಅರಣ್ಯನಾಶ, ಅತಿಕ್ರಮಣ, ಮಿತಿಮೀರಿದ ಶೋಷಣೆ, ಮಾಲಿನ್ಯ ಹಾಗೂ ಹವಾಗುಣ ಬದಲಾವಣೆಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಭಾರತದ ನಗರಗಳ ಮೂರನೇ ಒಂದು ಭಾಗಕ್ಕೂ ಹೆಚ್ಚು ಜನಸಂಖ್ಯೆಯು ಇಂದು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದೆ. ಭಾರತವು ಹವಾಗುಣ ಬದಲಾವಣೆಯತ್ತ ಒಯ್ಯುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ, ಜಗತ್ತಿನ ಒಟ್ಟು ಪಾಲಿನಲ್ಲಿ ಕೇವಲ ಶೇ. 5ರಷ್ಟನ್ನು ಮಾತ್ರ ನೀಡುತ್ತಿದೆ. ಹಾಗಿದ್ದೂ ಭಾರತದ 700ಮಿಲಿಯಕ್ಕೂ ಹೆಚ್ಚು ಭಾರತೀಯರು ಇಂದು ಭೂ ತಾಪಮಾನ ಏರಿಕೆಯ ಅಪಾಯವನ್ನು ನೇರವಾಗಿ ಎದುರಿಸುತ್ತಿದ್ದಾರೆ. ಇದು ಕೃಷಿಗಾರಿಕೆ, ಕ್ಷಾಮ, ಪ್ರವಾಹ, ಮೇಲಿಂದಮೇಲೆ ಬೀಸುವ ಬಿರುಗಾಳಿ, ಮತ್ತು ಎಲ್ಲಕ್ಕಿಂತ ಅಪಾಯಕಾರಿಯಾದ ಸಮುದ್ರ ಮಟ್ಟ ಏರಿಕೆಗಳ ಮೂಲಕ ದುಷ್ಪರಿಣಾಮಗಳನ್ನು ಬೀರುತ್ತಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate