ರಾಷ್ಟ್ರೀಯ ಪರಿಸರ ನೀತಿಯು ಈಗ ಚಾಲ್ತಿಯಲ್ಲಿರುವ ನೀತಿಯ ಮೇಲೆ ಆಧರಿತವಾಗಿದೆ (ಉದಾ: ರಾಷ್ಟ್ರೀಯ ಅರಣ್ಯ ನೀತಿ, 1988; ಪರಿಸರ ಹಾಗೂ ಅಭಿವೃದ್ಧಿಯ ಕುರಿತು ರಾಷ್ಟ್ರೀಯ ನಿಲುವು ಮತ್ತು ನೀತಿಯ ವ್ಯಾಖ್ಯಾನ, 1992; ಮಾಲಿನ್ಯ ನಿಯಂತ್ರಣದ ಮೇಲೆ ನೀತಿಯ ವ್ಯಾಖ್ಯಾನ, 1992; ರಾಷ್ಟ್ರೀಯ ಕೃಷಿ ನೀತಿ, 2000; ರಾಷ್ಟ್ರೀಯ ಜನಸಂಖ್ಯಾ ನೀತಿ, 2000; ರಾಷ್ಟ್ರೀಯ ಜಲ ನೀತಿ, 2002, ಇತ್ಯಾದಿ.) ಇದು ಈ ಕೆಳಗಿನ ಚಟುವಟಿಕೆಗಳಿಗೆ ಮಾರ್ಗದರ್ಶಿಯಾಗಬೇಕೆಂದು ಆಶಯ:-ನಿಯಂತ್ರಕ ಸುಧಾರಣೆಯಲ್ಲಿ; ಪರಿಸರ ಸಂರಕ್ಷಣಾ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ; ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತದಿಂದ ಕಾನೂನುಗಳ ಮರುಪರಿಶೀಲಿಸುವಿಕೆ ಹಾಗೂ ಜಾರಿಯಲ್ಲಿ. ಈ ನೀತಿಯ ಮುಖ್ಯ ಅಂಗವೆಂದರೆ, ಜನರ ಜೀವನದ ಸುಭದ್ರತೆಗೆ ಮತ್ತು ಎಲ್ಲರ ಒಳಿತಿಗೆ ಪರಿಸರದ ಸಂಪನ್ಮೂಲಗಳ ಸಂರಕ್ಷಣೆ ಅಗತ್ಯ ಹೌದಾದರೂ, ಎಲ್ಲಕ್ಕಿಂತ ಮುಖ್ಯವಾದುದೆಂದರೆ ಕೆಲವು ಅಗತ್ಯ ಸಂಪನ್ಮೂಲಗಳ ಮೇಲೆ ಆಧರಿಸಲ್ಪಟ್ಟಿರುವ ಜನರು ಸಂಪನ್ಮೂಲ ಸಂರಕ್ಷಣೆಯ ಮೂಲಕ ಉತ್ತಮ ಜೀವನ ಪಡೆಯಬೇಕೇ ಹೊರತು ಅದರ ವಿನಾಶದಿಂದಲ್ಲ, ಎಂಬುದು. ಈ ನೀತಿಯು ಸಾರ್ವಜನಿಕ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು, ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳು, ಬಂಡವಾಳ ಹೂಡಿಕೆದಾರರು, ಹಾಗೂ ಅಂತರರಾಷ್ಟ್ರೀಯ ಅಭಿವೃದ್ಧಿಯ ಜೊತೆಗಾರರು, ಇವೇ ಮೊದಲಾದ ಹಲವಾರು ಪಾಲುದಾರರು ಒಟ್ಟಾಗಿ ತಮ್ಮ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಜೊತೆಯಾಗಿ ಪರಿಸರ ಸಂರಕ್ಷಣೆಗೆ ಬಳಸಲಿ ಎಂಬ ಉದ್ದೇಶವನ್ನು ಹೊಂದಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
ಕರ್ನಾಟಕ ಜೈವಿಕ ಇಂಧನ ನೀತಿ-೨೦೦೯ ಕುರಿತು ಇಲ್ಲಿ ತಿಳಿಸಲಾಗ...
ಕೃಷಿಕರ ಹೊಸಶೋಧನೆ ಬಗ್ಗೆ ಇಲ್ಲಿ ಕೊಡಲಾಗಿದೆ.
ಶಿಕ್ಷಣ ನೀತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ನವೀನ ಹಾಗೂ ನವೀಕರಿಸಬಲ್ಲ ಇಂಧನ ಸಚಿವಾಲಯವು ರಾಷ್ಟ್ರೀಯ ಜೈವ...