অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯೋಟೋ ಶಿಷ್ಟಾಚಾರ

ಕ್ಯೊಟೋ ಶಿಷ್ಟಾಚಾರವು ಜಗತ್ತಿನಾದ್ಯಂತ ಹಸಿರುಮನೆ ಪರಿಣಾಮಗಳನ್ನು ತಗ್ಗಿಸುವ ಸಲುವಾಗಿ ರೂಪುಗೊಂಡಿರುವ ಒಂದು ಕಾನೂನುಬದ್ಧ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಇದು 16 ಫೆಬ್ರವರಿ 2005 ರಂದು ಜಾರಿಗೊಂಡಿತು. ಕ್ಯೋಟೋ ಶಿಷ್ಟಾಚಾರದ ಮುಖ್ಯ ಲಕ್ಷಣವೆಂದರೆ, ಕೈಗಾರಿಕೀಕೃತ ರಾಷ್ಟ್ರಗಳಿಗೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿತಗೊಳಿಸಿ ನಿರ್ಮಿತಿ ಹೇರುವುದು. ಹಸಿರುಮನೆ ಅನಿಲಗಳು ಕಾರ್ಬನ್ ಡೈಯಾಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಸಲ್ಫರ್ ಹೆಕ್ಸಾಫ್ಲೋರೈಡ್, ಹೈಡ್ರೋಫ್ಲೋರೋಕಾರ್ಬನ್ಗಳು ಮತ್ತು ಪರ್ಫ್ಲೋರೋಕಾರ್ಬನ್ಗಳಿಂದ ಕೂಡಿರುತ್ತವೆ. 2008 ರ ವೇಳೆಗೆ ಒಟ್ಟು 183 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಅವುಗಳಲ್ಲಿ ಭಾರತವೂ ಸೇರಿದೆ. ಕಳೆದ 150 ವರ್ಷಗಳಿಗೂ ದೀರ್ಘ ಕಾಲದ ಕೈಗಾರಿಕಾ ಚಟುವಟಿಕೆಗಳಿಂದಾಗಿ ವಾತಾವರಣಕ್ಕೆ ಹಸಿರುಮನೆ ಅನಿಲಗಳನ್ನು ಸೇರಿಸುತ್ತಿರುವಲ್ಲಿ ಮುಂದುವರೆದ ರಾಷ್ಟ್ರಗಳ ಪಾಲೇ ದೊಡ್ಡದೆಂದು ಗುರುತಿಸಲಾಗಿದೆ. ಆದ್ದರಿಂದ ಶಿಷ್ಟಾಚಾರವು `ಸಾಮಾನ್ಯ ಆದರೆ ಭಿನ್ನ ಜವಾಬ್ದಾರಿ'ಗಳ ಅಡಿಯಲ್ಲಿ ಮುಂದುವರಿದ ರಾಷ್ಟ್ರಗಳ ಮೇಲೆ ಹೆಚ್ಚಿನ ಒತ್ತಡ ಹೇರಿದೆ. ಅದರಂತೆ, ಮುಂದುವರಿದ ರಾಷ್ಟ್ರಗಳು 2012 ರ ವೇಳೆಗೆ ಹಸಿರುಮನೆ ಅನಿಲಗಳ ಉಗುಳುವಿಕೆಯನ್ನು ಸರಾಸರಿ ಶೇ.5.2 ರಷ್ಟು ಕಡಿತಗೊಳಿಸಬೇಕಾಗಿದೆ. ಕ್ಯೋಟೋ ಕಾರ್ಯವಿಧಾನಗಳು ಒಪ್ಪಂದದ ಅಡಿಯಲ್ಲಿ, ರಾಷ್ಟ್ರೀಯ ಮಾನದಂಡಗಳ ಮೂಲಕ ಎಲ್ಲ ರಾಷ್ಟ್ರಗಳು ತಮ್ಮ ಗುರಿಯನ್ನು ಮುಟ್ಟಬೇಕು. ಕ್ಯೋಟೋ ಶಿಷ್ಟಾಚಾರವು ಅವುಗಳ ಗುರಿಯನ್ನು ಮುಟ್ಟಲು ಹೆಚ್ಚುವರಿಯಾಗಿ ಮೂರು ಮಾರುಕಟ್ಟೆ ಆಧಾರಿತ ಮಾಧ್ಯಮಗಳನ್ನು ಕೊಡಮಾಡಿದೆ. ಅವುಗಳು;

  1. ಎಮಿಶನ್ ಟ್ರೇಡಿಂಗ್- 'ಕಾರ್ಬನ್ ಮಾರುಕಟ್ಟೆ' ಎಂದು ಪರಿಚಿತ
  2. ಶುದ್ಧ ಪ್ರಗತಿ ಕಾರ್ಯತಂತ್ರ (ಕ್ಲೀನ್ ಡೆವಲಪ್ಮೆಂಟ್ ಮೆಕ್ಯಾನಿಸಮ್- CDM)
  3. ಸಂಯುಕ್ತ ಅನುಷ್ಠಾನ

ಕಾರ್ಬನ್ ಟ್ರೇಡಿಂಗ್

ಶಿಷ್ಟಾಚಾರಕ್ಕೆ ಬದ್ಧವಾಗಿರುವ ರಾಷ್ಟ್ರಗಳು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಮಿತಿಗೊಳಿಸುವ ಅಥವಾ ಕಡಿತಗೊಳಿಸುವ ಗುರಿಗೆ ಅಂಕಿತ ಹಾಕಿವೆ. ಈ ಗುರಿಯು ಅವಕಾಶ ನೀಡಲ್ಪಟ್ಟಷ್ಟು ಪ್ರಮಾಣದ ಹೊರಸೂಸುವಿಕೆ ಅಥವಾ 'ನಿಗದಿತ ಮೊತ್ತ' ದ (AAUs) ರೂಪದಲ್ಲಿ ವ್ಯಕ್ತಗೊಳ್ಳುತ್ತದೆ. ಕ್ಯೋಟೋ ಶಿಷ್ಟಾಚಾರಕ್ಕೆ ಅಂಕಿತ ಹಾಕಿರುವ ರಾಷ್ಟ್ರಗಳಿಗೆ ಕೊಡಮಾಡಿದ ಹೊರಸೂಸುವಿಕೆ ಮಿತಿಯನ್ನು ಅವು ಬಳಸಿಕೊಂಡಿರದೆ ಇದ್ದಲ್ಲಿ (ಅವುಗಳಿಗೆ ಹೊರಸೂಸುವಿಕೆಯ ಸಮ್ಮತಿ ದೊರೆತಿದ್ದು ಕೂಡ ಅದನ್ನು ಬಳಸಿಕೊಂಡಿರದ ಸಂದರ್ಭದಲ್ಲಿ), ಈ ರಾಷ್ಟ್ರಗಳು ಅದಾಗಲೇ ಮಿತಿಯನ್ನು ದಾಟಿದ ರಾಷ್ಟ್ರಗಳಿಗೆ ತಮ್ಮ ಹೆಚ್ಚುವರಿ ಅವಕಾಶವನ್ನು ಮಾರಾಟ ಮಾಡಬಹುದಾಗಿದೆ. ಈ ಮೂಲಕ ಹೊರಸೂಸುವಿಕೆಯ ಕಡಿತ ಅಥವಾ ನಿರ್ಮೂಲನೆಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಕಾರ್ಬನ್ ಡೈಯಾಕ್ಸೈಡ್ ಒಂದು ಪ್ರಮುಖ ಹಸಿರುಮನೆ ಅನಿಲವಾಗಿರುವುದರಿಂದ, ಈ ಪ್ರಕ್ರಿಯೆಯನ್ನು 'ಕಾರ್ಬನ್ ಟ್ರೇಡಿಂಗ್' ಎಂದು ಕರೆಯಲಾಗಿದೆ. ಇಲ್ಲೀಗ ಕಾರ್ಬನ್ ಅನ್ನು ಇತರ ಯಾವುದೇ ವಾಣಿಜ್ಯ ವಸ್ತುವಿನಂತೆ ವ್ಯಾಪಾರ ಮಾಡಬಹುದಾಗಿದೆ. ಇದನ್ನು ಸಾಮಾನ್ಯವಾಗಿ ಕಾರ್ಬನ್ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ. ಕಾರ್ಬನ್ ಮಾರುಕಟ್ಟೆಯಲ್ಲಿನ ಇತರ ವ್ಯಾಪಾರೀ ಘಟಕಗಳು ಈ ಯೋಜನೆಯಡಿಯಲ್ಲಿ ವರ್ಗಾವಣೆಗೊಳ್ಳಬಹುದಾದ, ಒಂದು ಟನ್ CO2 (ಕಾರ್ಬನ್ ಡೈಯಾಕ್ಸೈಡ್) ಗೆ ಸಮನಾಗಿರುವ ಇನ್ನಿತರ ಘಟಕಗಳು ಈ ಕೆಳಗಿನವುಗಳ ಸ್ವರೂಪದಲ್ಲಿರಬಹುದು: ಭೂ ಬಳಕೆ, ಭೂಬಳಕೆ ಬದಲಾವಣೆ ಮತ್ತು ವನಾಭಿವೃದ್ಧಿ ರೀತಿಯ ಚಟುವಟಿಕೆಗಳಿಂದ ಕೂಡಿದ ಅರಣ್ಯಗಾರಿಕೆ  ಆಧಾರಿತ ರಿಮೂವಲ್ ಯುನಿಟ್ ಜಂಟಿ ಅನುಷ್ಠಾನ ಯೋಜನೆಯಡಿ ರೂಪುತಳೆದ ಎಮಿಶನ್ ರಿಡಕ್ಶನ್ ಯುನಿಟ್ ಶುದ್ಧ ಪ್ರಗತಿ ಕಾರ್ಯತಂತ್ರ ಯೋಜನಾ ಚಟುವಟಿಕೆಗಳಡಿ ರೂಪುಗೊಂಡ ಪ್ರಮಾಣೀಕೃತ ಎಮಿಶನ್ ರಿಡಕ್ಷನ್

ಶುದ್ಧ ಪ್ರಗತಿ ಕಾರ್ಯತಂತ್ರ

ಶಿಷ್ಟಾಚಾರದ 12ನೇ ಪರಿಚ್ಛೇದದಲ್ಲಿ ನಿರ್ವಚನೆಗೊಂಡಿರುವ ಶುದ್ಧ ಪ್ರಗತಿ ಕಾರ್ಯತಂತ್ರವು, ಕ್ಯೋಟೋ ಶಿಷ್ಟಾಚಾರದ ಅಡಿಯಲ್ಲಿ ಅನಿಲ ಉಗುಳುವಿಕೆ ಕಡಿತ ಅಥವಾ ಸೀಮಿತಿಗೆ ಬದ್ಧವಾಗಿರುವ ರಾಷ್ಟ್ರಕ್ಕೆ ಪ್ರಗತಿಶೀಲ ರಾಷ್ಟ್ರಗಳಲ್ಲಿ ಅನಿಲ ಉಗುಳುವಿಕೆ ಕಡಿತ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಅವಕಾಶ ನೀಡಿದೆ. ಈ ರೀತಿಯ ಯೋಜನೆಗಳು ಮಾರಾಟ ಮಾಡಬಲ್ಲ ಪ್ರಮಾಣೀಕೃತ ಹೊರಸೂಸುವಿಕೆ ಕಡಿತದ  ಗೌರವವನ್ನು ಪಡೆದುಕೊಳ್ಳುತ್ತವೆ. ಇಲ್ಲಿ, ಪ್ರತಿಯೊಂದೂ ಒಂದು ಟನ್ CO2 (ಕಾರ್ಬನ್ ಡೈಯಾಕ್ಸೈಡ್) ಗೆ ಸಮನಾಗಿರುತ್ತದೆ, ಮತ್ತಿದು ಕ್ಯೋಟೋ ಗುರಿಯನ್ನು ಮುಟ್ಟುವಲ್ಲಿ ಪರಿಗಣಿಸಲ್ಪಡುತ್ತದೆ. ಸಿಡಿಎಂ ಯೋಜನಾ ಚಟುವಟಿಕೆಯು ಕೆಲವು ಯೋಜನೆಗಳಲ್ಲಿ, ಉದಾ: ಸೌರ ಫಲಕಗಳನ್ನು ಅಥವಾ ಹೆಚ್ಚು ಶಕ್ತಿ ದಕ್ಷತೆಯ ಬಾಯ್ಲರ್ಗಳನ್ನು ಬಳಸಿದ ಗ್ರಾಮೀಣ ವಿದ್ಯುದೀಕರಣ ಯೋಜನೆಯಂಥವುಗಳಲ್ಲಿ ಪಾಲ್ಗೊಳ್ಳಬಹುದು. ಈ ಯಾಂತ್ರಿಕತೆಯು ಕೈಗಾರಿಕೀಕೃತ ರಾಷ್ಟ್ರಗಳಿಗೆ ಅನಿಲ ಹೊರಸೂಸುವಿಕೆಯಲ್ಲಿ ಹೇಗೆ ಕಡಿತ ಮಾಡಿಕೊಳ್ಳುತ್ತವೆ ಅಥವಾ ಸೀಮಿತ ಗುರಿಯನ್ನು ಹೇಗೆ ಮುಟ್ಟುತ್ತವೆ ಎನ್ನುವ ವಿಷಯದಲ್ಲಿ ಕೆಲಮಟ್ಟದ ರಿಯಾಯಿತಿ ನೀಡುವುದರೊಂದಿಗೆ, ಸ್ವಾವಲಂಬಿ ಪ್ರಗತಿ ಹಾಗೂ ಹೊರಸೂಸುವಿಕೆಯಲ್ಲಿನ ಕಡಿತಗಳನ್ನು ಉದ್ದೀಪಿಸುತ್ತದೆ. ಸಿಡಿಎಮ್ ಯೋಜನೆಯು ಬೇರೆ ರೀತಿಯಲ್ಲಿ ದೊರೆಯುವುದಕ್ಕೆ ಹೆಚ್ಚುವರಿಯಾಗಿ ಅನಿಲ ಹೊರಸೂಸುವಿಕೆಯಲ್ಲಿ ರಿಯಾಯ್ತಿಯನ್ನು ನೀಡಬೇಕು. ಯೋಜನೆಗಳು ಕಟ್ಟುನಿಟ್ಟಾಗಿ ಸಾರ್ವಜನಿಕ ನೋಂದಾವಣೆ ಮತ್ತು ಜಾರಿ ಪ್ರಕ್ರಿಯೆಯ ಮೂಲಕ ಅರ್ಹತೆ ಪಡೆದಿರಬೇಕು. ಪ್ರತಿಷ್ಠಿತ ರಾಷ್ಟ್ರೀಯ ಪ್ರಮಾಣೀಕೃತರು ಇದನ್ನು ಸಮ್ಮತಗೊಳಿಸುವರು. ಸಿಡಿಎಮ್ ಯೋಜನೆ ಚಟುವಟಿಕೆಗಳಿಗೆ ಕಲೆಹಾಕುವ ಸಾರ್ವಜನಿಕ ನಿಧಿಯು ಆಡಳಿತ ಪ್ರಗತಿಯ ಸಹಕಾರಿತ್ವದ ದಿಕ್ಕು ತಪ್ಪಿಸುವಂತಿರಬಾರದು.

ಸಂಯುಕ್ತ ಅನುಷ್ಠಾನ

ಕ್ಯೊಟೋ ಶಿಷ್ಟಾಚಾರದ 6 ನೇ ಪರಿಚ್ಛೇದದಲ್ಲಿ ನಿರ್ವಚಿತವಾಗಿರುವ, 'ಜಂಟಿ ಅನುಷ್ಠಾನ'ವೆಂದು ಖ್ಯಾತವಾಗಿರುವ ಯಾಂತ್ರಿಕತೆಯು ಕ್ಯೋಟೋ ಶಿಷ್ಟಾಚಾರದಡಿಯಲ್ಲಿ ಅನಿಲ ಹೊರಸೂಸುವಿಕೆ ಕಡಿತ ಮತ್ತು ಸೀಮಿತಿಗೆ ಬದ್ಧವಾಗಿರುವ ರಾಷ್ಟ್ರಕ್ಕೆ ಬೇರಾವುದೇ ರಾಷ್ಟ್ರದಲ್ಲಿ ಅನಿಲ ಹೊರಸೂಸುವಿಕೆ ಕಡಿತದಿಂದ ಅಥವಾ ಹೊರಸೂಸುವಿಕೆ ತೊಲಗಿಸುವ ಯೋಜನೆಯಿಂದ ಹೆಚ್ಚುವರಿ ಹೊರಸೂಸುವಿಕೆ ಕಡಿತ ಪ್ರಮಾಣಗಳನ್ನು  ಗಳಿಸುವ ಅವಕಾಶ ನೀಡುತ್ತದೆ. ಇಲ್ಲಿ ಪ್ರತಿ ಘಟಕವು ಒಂದು ಟನ್ CO2 (ಕಾರ್ಬನ್ ಡೈಯಾಕ್ಸೈಡ್) ಗೆ ಸಮನಾಗಿರುತ್ತದೆ ಮತ್ತಿದು ಕ್ಯೋಟೋ ಗುರಿಯನ್ನು ತಲಪುವಲ್ಲಿ ಪರಿಗಣಿತವಾಗುತ್ತದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate