ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರ ಕ್ರಮ

ಆಹಾರ ಕ್ರಮ

 • ಗರ್ಭಾವಸ್ಥೆಯ ಸಮಯದಲ್ಲಿ ದೈಹಿಕವಾಗಿಯೂ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಭ್ರೂಣದ ಆವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಆಹಾರ ಬೇಕಾಗುತ್ತದೆ.
 • ಗರ್ಭಾವಸ್ಥೆಯಲ್ಲಿ ಒಬ್ಬಮಹಿಳೆಯು ಪೌಷ್ಟಿಕಾಂಶದ ಆವಶ್ಯಕತೆಗಳನ್ನು ಪೂರೈಸಲು ತನ್ನ ದೇಹದ ಕೊಬ್ಬಿಣಾಂಶದ ಶೇಖರಣೆಯನ್ನು ಹೆಚ್ಚಿಸಿಕೊಂಡು ತಾನೆ ಸಿದ್ಧವಾಗಿರುತ್ತಾಳೆ
 • ಒಬ್ಬ ಹಾಲುಣಿಸುವ ಮಹಿಳೆಗೆ ಸೂಕ್ತ ಪ್ರಮಾಣದ ಮೊಲೆಹಾಲಿನ ಶೇಖರಣೆಗಾಗಿ ಮತ್ತು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಆಹಾರ ಬೇಕಾಗುತ್ತದೆ.

ಕಬ್ಬಿಣಾಂಶ ಭರಿತ ಆಹಾರಗಳನ್ನು ಸೇವಿಸಿರಿ

 • ಹೀಮೊಗ್ಲೊಬಿನ್ನ ಸಂಯೋಜನೆಗಾಗಿ, ಮಾನಸಿಕ ಚಟುವಟಿಕೆಗಳಿಗಾಗಿ ಮತ್ತು ದೇಹದ ರಕ್ಷಣೆಗಾಗಿ ಕಬ್ಬಿಣಾಂಶದ ಆವಶ್ಯಕತೆವಿರುತ್ತದೆ.
 • ಕಬ್ಬಿಣಾಂಶದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ.
 • ಕಬ್ಬಿಣಾಂಶದ ಕೊರತೆಯು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
 • ಗರ್ಭಾವಸ್ಥೆಯ ಕಬ್ಬಿಣಾಂಶದ ಕೊರತೆಯು ತಾಯಂದಿರ ಮರಣ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಶಿಶುವಿನ ಜನನ ತೂಕವನ್ನು ಕಡಿತಗೊಳಿಸುತ್ತದೆ.
 • ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಸೊಂಕುಗಳಿಗೆ ತುತ್ತಾಗಿಸುತ್ತದೆ ಮತ್ತು ಕಲಿಕೆಯ ಕ್ಷಮತೆಯನ್ನು ಕುಂಠಿತಗೊಳಿಸುತ್ತದೆ.
 • ಸಸ್ಯಜನ್ಯ ಆಹಾರಗಳಾದಂತಹ ಕಾಳುಗಳು, ಒಣಗಿದ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳು ಕಬ್ಬಿಣಾಣಶವನ್ನು ಹೊಂದಿರುತ್ತದೆ.
 • ಕಬ್ಬಿಣಾಂಶವನ್ನು ಮಾಂಸದಿಂದ, ಮೀನಿನಿಂದ ಮತ್ತು ಕೋಳಿಯ ಪದಾರ್ಥಗಳಿಂದ ಕೂಡ ಪಡೆಯಬಹುದು.
 • ಕಬ್ಬಿಣಾಂಶದ ಲಭ್ಯತೆ ಗಿಡ ಮೂಲದ ಆಹಾರಗಳಿಂದ ಕಡಿಮೆ ಆದರೆ ಪ್ರಾಣಿ ಮೂಲದ ಆಹಾರಗಳಿಂದ ಇದರ ಲಭ್ಯತೆ ಉತ್ತಮ.
 • ಸಿ ಅನ್ನಾಂಗ ಭರಿತ ಹಣ್ಣುಗಳಾದ ಬೆಟ್ಟದ ನೆಲ್ಲಿಕಾಯಿ, ಸೀಬೆ ಮತ್ತು ಕಿತ್ತಳೆ ಗಿಡ ಮೂಲದ ಆಹಾರಗಳಿಂದ ಕಬ್ಬಿಣಾಂಶದ ಹೀರುವಿಕೆಯನ್ನು ಉತ್ತಮಗೊಳಿಸುತ್ತದೆ.
 • ಚಹಾದಂತಹ ಪಾನೀಯಗಳು ಆಹಾರಕ್ರಮದ ಕಬ್ಬಿಣಾಂಶವನ್ನು ತಡೆಯುತ್ತದೆ ಮತ್ತು ದೇಹಕ್ಕೆ ಅದು ಲಭ್ಯವಾಗುವುದಿಲ್ಲ. ಆದುದರಿಂದ ಊಟದ ಮುಂಚೆ, ಊಟದ ಸಮಯದಲ್ಲಿ ಮತ್ತು ತಕ್ಷಣ ಊಟದ ನಂತರ ಅವುಗಳ ಸೇವನೆ ಮಾಡಬಾರದು.
 • ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ತೆಗೆದುಕೊಳ್ಳುವಿರಿ
 • ಏಕದಳಧಾನ್ಯಗಳು, ಮೊಳಕೆ ಕಾಳುಗಳು ಮತ್ತು ಹುದುಗಿಸಿದ ಆಹಾರಗಳನ್ನು ಹೆಚ್ಚಾಗಿ ತಿನ್ನಿರಿ.
 • ಹಾಲು / ಮಾಂಸ / ಮೊಟ್ಟೆಗಳನ್ನು ತೆಗೆದುಕೊಳ್ಳಿರಿ.
 • ಹೆಚ್ಚಾಗಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ.
 • ಮೂಢನಂಬಿಕೆಗಳನ್ನು ಮತ್ತು ಆಹಾರ ನಿಷೇಧಗಳನ್ನು ತೊರೆಯಿರಿ.
 • ಮದ್ಯ ಮತ್ತು ತಂಬಾಕು ಸೇವಿಸದಿರಿ. ಔಷಧಿಗಳನ್ನು ಸಲಹೆ ನೀಡಿದಾಗ ಮಾತ್ರ ತೆಗೆದುಕೊಳ್ಳಿರಿ.
 • 14-16 ವಾರಗಳ ಗರ್ಭಾವಸ್ಥೆ ನಂತರ ಕಬ್ಬಣಾಂಶಯುಕ್ತ ಮತ್ತು ಕ್ಯಾಲ್ಸಿಯಂ ಪೂರಕ ಆಹಾರಗಳನ್ನು ನಿತ್ಯ ತೆಗೆದುಕೊಳ್ಳಿರಿ, ಮತ್ತು ಇದನ್ನು ಹಾಲುಣಿಸುವ ಸಮಯದಲ್ಲಿ ಮುಂದುವರೆಸಿರಿ.

ಪರ್ಣೀಯಭರಿತ ಆಹಾರಗಳನ್ನು ಸೇವಿಸಿರಿ

 • ಹೀಮುಗ್ಲೋಬಿನ್ ನ ಸಂಶ್ಲೇಷಣೆಗಾಗಿ ಫಾಲಿಕ್ ಆಸಿಡ್ ಬಹು ಮುಖ್ಯ.
 • ಫಾಲಿಕ್ ಆಸಿಡ್ ನ ಕೊರತೆಯಿಂದಾಗಿ ಮ್ಯಾಕ್ರೊಸೈಟಿಕ್ ರಕ್ತಹೀನತೆ ಉಂಟಾಗುತ್ತದೆ.
 • ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಫಾಲಿಕ್ ಆಸಿಡ್ ಬೇಕಾಗುತ್ತದೆ.
 • ಫಾಲಿಕ್ ಆಸಿಡ್ನ ಪೂರಕಗಳು ಶಿಶುವಿನ ಜನನ ತೂಕವನ್ನು ಹೆಚ್ಚಿಸುತ್ತದೆ ಮತ್ತು ಕಾನ್ಜಿನೈಟಲ್ (ಹುಟ್ಟಿನ) ಅನೊಮಾಲಿಸ್ (ಜನನ ಸಮಯದ ಕೊರತೆಗಳು) ನ್ನು ಕಡಿಮೆಗೊಳಿಸುತ್ತದೆ.
 • ಹಸಿರು ಎಲೆಗಳ ತರಕಾರಿಗಳು, ಕಾಳುಗಳು, ಒಣಹಣ್ಣುಗಳು ಮತ್ತು ಪಿತ್ತಜನಕಾಂಗ ಫಾಲಿಕ್ ಆಸಿಡ್ ನ ಉತ್ತಮ ಮೂಲಗಳು.

ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಪಾಲಿಸಬೇಕು. ಸ್ತನ್ಯಪಾನವನ್ನು ಎರಡು ವರ್ಷದ ವರೆಗೆ ಮುಂದುವರೆಸಬಹುದು

 • ಶಿಶುಗಳ ಸಾಮಾನ್ಯ ಬೆಳವಣಿಗೆ ಮತ್ತು ಆರೋಗ್ಯಕರ ಅಭಿವೃದ್ಧಿಗಾಗಿ ಮೊಲೆ ಹಾಲು ಅತಿ ನೈಸರ್ಗಿಕ ಮತ್ತು ಪರಿಪೂರ್ಣ ಆಹಾರ.
 • ಪ್ರಥಮ ಸ್ತನ್ಯ ಪೌಷ್ಟಿಕಾಂಶಭರಿತವಾಗಿದ್ದು ರೋಗನಿರೋಧಕಗಳನ್ನು ಹೊಂದಿದೆ. ಹಾಗಾಗಿ ಕಡ್ಡಾಯವಾಗಿ ಶಿಶುವಿಗೆ ಈ ಹಾಲೂಡಿಸಬೇಕು.
 • ಸ್ತನ್ಯಪಾನ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
 • ಸ್ತನ್ಯಪಾನ ತಾಯಿ-ಶಿಶುವಿನ ಸಂಪರ್ಕ ಸ್ಥಾಪಿಸುತ್ತದೆ ಮತ್ತು ತಾಯಿ-ಶಿಶುವಿನ ಸಂಬಂಧ ಗಟ್ಟಿಗೊಳಿಸುತ್ತದೆ
 • ಇದರಿಂದ ಜನನದ ಮಧ್ಯಂತರ ಪ್ರಮಾಣ ಹೆಚ್ಚಿಸಿ ಫಲವಂತಿಕೆ ನಿಯಂತ್ರಿಸುತ್ತದೆ (ಮುಟ್ಟಿನ ತಡವ
 • ಅದ ಹಿಂತಿರುಗುವಿಕೆ).
 • ಗರ್ಭಕೋಶದ ಪ್ರತ್ಯಾಕರ್ಷಣೆಯಲ್ಲಿ ಸ್ತನ್ಯಪಾನ ಸಹಾಯಕಾರಿಯಾಗುತ್ತದೆ.
 • ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿರುವ ತಾಯಂದಿರಲ್ಲಿ ಮೊಲೆ ಕ್ಯಾನ್ಸರ್ ನ ಪ್ರಮಾಣ ಕಡಿಮೆ.
 • ಪ್ರಸವದ ಒಂದು ಘಂಟೆಯೊಳಗೆ ಸ್ತನ್ಯಪಾನವನ್ನು ಮಾಡಿಸಿರಿ ಮತ್ತು ಪ್ರಥಮ ಸ್ತನ್ಯವನ್ನು ತೊರೆಯಬೇಡಿ.
 • ಕನಿಷ್ಠ ನಾಲ್ಕರಿಂದ ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಮಾಡಿಸಿರಿ.
 • ಪೂರಕ ಆಹಾರಗಳ (ಶಿಶು ಆಹಾರಗಳು) ಕೊಡಲು ಆರಂಭಿಸಿದ ನಂತರವೂ ಎರಡು ವರ್ಷಗಳವರೆಗೆ ಸ್ತನ್ಯಪಾನವನ್ನು ಮುಂದುವರೆಸಿರಿ.
 • ಹಾಲಿನ ಉತ್ತಮ ಪೂರೈಕೆಗಾಗಿ ಶಿಶುವಿಗೆ ಸ್ತನ್ಯಪಾನವನ್ನು ಆಗ್ಗಾಗೆ ಅಥವಾ ಕೇಳಿದಾಗ ಮಾಡಿರಿ.
 • ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಪೌಷ್ಟಿಕ ಮತ್ತು ಸಮರ್ಪಕ ಆಹಾರಕ್ರಮವನ್ನು ಅನುಸರಿಸಿ.
 • ಹಾಲುಣಿಸುವ ಸಮಯದಲ್ಲಿ ತಂಬಾಕು (ಧೂಮಪಾನ ಮತ್ತು ಅಗೆಯುವುದು), ಮದ್ಯ ಮತ್ತು ಮಾದಕವಸ್ತುಗಳ ಸೇವನೆಯನ್ನು ತೊರೆಯಿರಿ.

ಆರು ತಂಗಳ ನಡುವೆ ಶಿಶುವಿಗೆ ಪೂರಕ ಆಹಾರಗಳನ್ನು ಪರಿಚಯಿಸಿರಿ

 • 6 ತಿಂಗಳ ವಯಸ್ಸಿನ ನಂತರ ಶಿಶುವಿಗೆ ಮೊಲೆ ಹಾಲು ಮಾತ್ರ ಸಾಕಾಗುವುದಿಲ್ಲ.
 • 6 ತಿಂಗಳ ನಡುವೆ ಶಿಶುಗಳಿಗೆ ಸ್ತನ್ಯಪಾನದ ಜೊತೆಗೆ ಪೂರಕ ಆಹಾರಗಳ ಪರಿಚಯ ಅಗತ್ಯ.
 • ಚಿಕ್ಕ ಮಕ್ಕಳಿಗೆ ಸಮರ್ಪಕ ಮತ್ತು ಸೂಕ್ತ ಪೂರಕ ಆಹಾರಗಳನ್ನು ನೀಡಿದಲ್ಲಿ ಅಪೌಷ್ಟಿಕತೆಯನ್ನು ತಡೆಯಬಹುದು.
 • ಮಗುವಿಗೆ ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಬೇಧಿಗೆ ಕಾರಣವಾಗುತ್ತದೆ.
 1. ಶಿಶುವಿಗೆ ಪೂರಕ ಆಹಾರಗಳನ್ನು 6 ತಿಂಗಳ ವಯಸ್ಸಿನಿಂದ ಪ್ರಾರಂಭಿಸಿರಿ. ಸ್ತನ್ಯಪಾನವನ್ನು ಎರಡು ವರ್ಷಗಳ ವರೆಗೆ ಮುಂದುವರೆಸಿರಿ.
 2. ಪೂರಕ ಆಹಾರಗಳನ್ನು ನೀಡಲು ತಡೆ ಮಾಡದಿರಿ.
 3. ಮನೆಯಲ್ಲಿ ತಯಾರಿಸಿದ, ಕಡಿಮೆ ಬೆಲೆಯ ಶಿಶು ಆಹಾರಗಳನ್ನು ತಿನ್ನಿಸಿರಿ.
 4. ಪೂರಕ ಆಹಾರಗಳನ್ನು ದಿನದಲ್ಲಿ 5-6 ಬಾರಿ ತಿನ್ನಿಸಿರಿ.
 5. ಹಣ್ಣುಗಳನ್ನು ಮತ್ತು ಸರಿಯಾಗಿ ಬೇಯಿಸಿದ ತರಕಾರಿಗಳನ್ನು ನೀಡಿರಿ.
 6. ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಿರಿ

ಸ್ತನ್ಯಪಾನ ಸಮರ್ಪಕವಾಗಿಲ್ಲದಿದ್ದಲ್ಲಿ (ಸಾಕಾಕದಿದ್ದಲ್ಲಿ) ಏನು ಮಾಡಬೇಕು ?

 • ಸ್ತನ್ಯಪಾನ ವಿಫಲವಾದಲ್ಲಿ, ಹಾಲೂಡಿಕೆಯನ್ನು ಪ್ರಚೋದಿಸಲು ಎಲ್ಲಾ ಎಲ್ಲಾ ಪ್ರಯತ್ನವನ್ನು ಮಾಡಬೇಕು. ಎಲ್ಲಾ ಕ್ರಮಗಳು ವಿಫಲವಾಗಿದ್ದಲ್ಲಿ, ಪ್ರಾಣಿ ಹಾಲನ್ನು ಅಥವ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರಗಳನ್ನು ಉಪಯೋಗಿಸಿರಿ.
 • ಹಾಲನ್ನು ಮಗುವಿಗೆ ಕುಡಿಸುವ ಮುನ್ನ ಕುದಿಸಬೇಕು.
 • ಮೇಲು ಹಾಲನ್ನು ಪ್ರಾರಂಭಿಸುವಾಗ ಹಾಲಿಗೆ ಸಮವಾಗಿ ನೀರನ್ನು ಬೆರೆಸಬಹುದು.
 • ಪೂರ್ಣ ಪ್ರಮಾಣದ ಹಾಲನ್ನು ಮಗುವಿಗೆ ನಾಲ್ಕನೆಯ ವಾರದಿಂದ ಶುರುಮಾಡಬಹುದು
 • ಶಿಶುವಿಗೆ ಕೊಡಲಾಗುವ ಪ್ರಾಣಿ ಹಾಲು ಕಬ್ಬಿಣಾಂಶದ ಮತ್ತು ಸಿ ಅನ್ನಾಂಗದ ಪೂರಕಗಳನ್ನು ನೀಡಬೇಕು.
 • ಸುಮಾರು ಸಿ 120-180 ಮಿಲಿ ಲೀಟರ್ ಹಾಲನ್ನು ಒಂದು ಚಮಚ ಸಕ್ಕರೆ ಬೆರೆಸಿ ಪ್ರತಿದಿನ 6-8 ಬಾರಿ ನೀಡಬೇಕು.
 • ಶಿಶುವಿಗಾಗಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರವನ್ನು ತಯಾರಿಸುವಾಗ ಅದರ ಲೇಬಲ್ (ಹೆಸರು ಪಟ್ಟಿ) ಮೇಲೆ ಬರೆದಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
 • ಎಲ್ಲಾ ರೀತಿಯ ನಿಗಾವಹಿಸಿ ಶಿಶು ಆಹಾರವನ್ನು ಸ್ವಚ್ಛ ಬಟ್ಟಲಿನಲ್ಲಿ, ಚಮಚದಿಂದ, ಬಾಟ್ಲಿಯಲ್ಲಿ ಮತ್ತು ನಿಪ್ಪಲಿನಲ್ಲಿ ನೀಡ ಬೇಕು.
 • ಹೊರ ಆಹಾರ ತಿನ್ನುತ್ತಿರುವ ಶೀಶುಗಳಲ್ಲಿ ಬೊಜ್ಜುಮೈ ತಡೆಯಲು ಅತಿ ಹೆಚ್ಚಾಗಿ ತಿನ್ನಿಸ ಬಾರದು.
 • ಕಡಿಮೆ ಬೆಲೆಯ ಮನೆಯಲ್ಲಿ ತಯಾರಿಸಿದ ಶಿಶು ಆಹಾರಗಳನ್ನು ತಿನ್ನಿಸಬೇಕು. ಸಾಧ್ಯವಾದರೆ ಮಾರುಕಟ್ಟಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಬಹುದು.

ಮಕ್ಕಳು ಮತ್ತು ಹದಿಹರೆಯದವರು ಎರಡು ಸ್ಥಿತಿಯಲ್ಲೂ - ಆರೋಗ್ಯದಲ್ಲಿ ಮತ್ತು ಖಾಯಿಲೆಗಳಲ್ಲಿ, ಸೂಕ್ತ ಮತ್ತು ಸಮರ್ಪಕ ಆಹಾರಕ್ರಮವನ್ನು ಪಾಲಿಸ ಬೇಕು

 • ಉತ್ತಮ ಬೆಳವಣಿಗೆ ಮತ್ತು ಅಭಿವ್ರದ್ಧಿಗಾಗಿ ಪೌಷ್ಟಿಕವಾಗಿ ಸಮರ್ಪಕ ಆಹಾರಕ್ರಮ ಅತ್ಯಾವಶಕ.
 • ಬಾಲ್ಯದಲ್ಲಿ ಸಮರ್ಪಕ ಆಹಾರಕ್ರಮವೂ ನಂತರದ ಜೀವನದಲ್ಲಿ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ.
 • ಸಾಮಾನ್ಯ ಸೋಂಕುಗಳು ಮತ್ತು ಅಪೌಷ್ಟಿಕತೆ ಮಕ್ಕಳಲ್ಲಿ ರೋಗಗಳ ಪ್ರಮಾಣ ಮತ್ತು ಮರಣ ಪ್ರಮಾಣ ವೃದ್ಧಿಸುತ್ತದೆ.
 • ಉತ್ತಮ ಪೌಷ್ಟಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಖಾಯಿಲೆಗಳ ಸಮಯದಲ್ಲಿ ಮತ್ತು ನಂತರ ಮಕ್ಕಳು ಹೆಚ್ಚಾಗಿ ತಿನ್ನಬೇಕು.

ಕ್ಯಾಲ್ಸಿಯಂ ಭರಿತ ಆಹಾರವನ್ನು ತಿನ್ನಿರಿ

 • ಕ್ಯಾಲ್ಸಿಯಂ ಆಸ್ಟಿಯೋಪೋರೋಸಿಸ್ (ಮೂಳೆಗಳ ಸವಿಯುವಿಕೆ) ಯನ್ನು ತಡೆಯುತ್ತದೆ.
 • ಆಸ್ಟಿಯೋಪೋರೋಸಿಸ್ (ಮೂಳೆಗಳ ಸವಿಯುವಿಕೆ) ಯು ಮಹಿಳೆಯರಲ್ಲಿ ಸಾಮಾನ್ಯ.
 • ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಹಿರಿಯರಿಗೆ ಹೆಚ್ಚಿನ ಕ್ಯಾಲ್ಸಿಯಂ ಬೇಕಾಗುತ್ತದೆ.
 • ಹಾಲು, ಮೊಸರು ಮತ್ತು ಒಣಹಣ್ಣುಗಳು ಕ್ಯಾಲ್ಸಿಯಂನ ಸಮೃದ್ಧ ಅಮೂಲ್ಯ ಮೂಲಗಳು.
 • ರಾಗಿ ಮತ್ತು ಹಸಿರು ಎಲೆಯುಳ್ಳ ತರಕಾರಿಗಳು ಕೂಡ ಕ್ಯಾಲ್ಸಿಯಂ ನೀಡುತ್ತವೆ.
 • ಮೂಳೆಗಳಿಂದ ಕ್ಯಾಲ್ಸಿಯಂನ ನಷ್ಟವನ್ನು ವ್ಯಾಯಾಮದಿಂದ ಕಡಿಮೆ ಮಾಡಬಹುದು
 • ಶಿಶುವಿಗೆ ಸಣ್ಣ ಪ್ರಮಾಣದಲ್ಲಿ ಚೆನ್ನಾಗಿ ಬೇಯಿಸಿ ಕಾಳು ಧಾನ್ಯಗಳಾಧಾರಿತ ಆಹಾರಗಳನ್ನು ಸ್ತನ್ಯಪಾನದ ಜೊತೆ ನೀಡಿರಿ.
 • ಮಕ್ಕಳಿಗೆ ತಿನ್ನಿಸುವಾಗ ಅಧಿಕ ನಿಗಾವಹಿಸಿ ಮತ್ತು ಚೆನ್ನಾಗಿ ಬೇಯಿಸಿದ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ತಿನ್ನಿಸಿರಿ.
 • ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿರಿ.
 • ಹೆಚ್ಚಾಗಿ ತಿನ್ನುವುದನ್ನು ತಡೆಯಿರಿ ಹಾಗೆಯೇ ಡಯಟಿಂಗ್ ನ್ನು ತಡೆಯಿರಿ

ಖಾಯಿಲೆ ಸಮಯದಲ್ಲಿ

 • ಮಗುವನ್ನು ಉಪವಾಸ ಕೆಡವಬೇಡಿ.
 • ಶಕ್ತಿಭರಿತ ದವಸ ಧಾನ್ಯ ಆಹಾರಗಳು ಹಾಲಿನ ಜೊತೆ ಮತ್ತು ಬೆರೆಸಿದ ತರಕಾರಿಗಳೊಂದಿಗೆ ನೀಡಿರಿ.
 • ಪದೇಪದೇ ಸಣ್ಣ ಪ್ರಮಾಣದಲ್ಲಿ ಆಹಾರ ನೀಡಿರಿ.
 • ಸ್ತನ್ಯಪಾನವನ್ನು ಮುಂದುವರೆಸಿರಿ.
 • ಖಾಯಿಲೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಳುವಾದ / ದ್ರವ ಪದಾರ್ಥಗಳನ್ನು ನೀಡಿರಿ.
 • ಬೇದಿಯಾದಾಗ ನೀರಿನಂಶ ಕೊರತೆಯನ್ನು ತೊರೆಯಲು ಓಆರ್ಎಸ್ ದ್ರವ್ಯವನ್ನು ನೀಡಿರಿ.

ಹಸಿರು ಎಲೆಗಳ ತರಕಾರಿಗಳು, ಇತರೆ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬಳಸಿರಿ

 • ಸಾಮಾನ್ಯ ಆಹಾರಕ್ರಮ ಸಂಪೂರ್ಣವಾಗಿರಿಸಲು ಮತ್ತು ರುಚಿಕರವಾಗಿರಿಸಲು ತಾಜಾ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಹೊಂದಿರಬೇಕು.
 • ತರಕಾರಿಗಳು / ಹಣ್ಣುಗಳು ಮೈಕ್ರೋನ್ಯೂಟ್ರಿಯಂಟ್ಸ್ಗಳ ಸಮೃದ್ಧ ಅತ್ಯತ್ತಮ ಮೂಲಗಳು.
 • ಹಣ್ಣುಗಳ ಮತ್ತು ತರಕಾರಿಗಳು ಪೌಷ್ಟಿಕವಲ್ಲದ ಅಂಶವಾದ ನಾರು ಮತ್ತು ಮುಖ್ಯ ಪ್ರಮುಖ್ಯತೆಯುಳ್ಳ ಫೋಟೊಕೆಮಿಕಲ್ ಕೂಡ ನೀಡುತ್ತದೆ.
 • ಹಸಿರು ಸೊಪ್ಪುಗಳು, ತರಕಾರಿಗಳು (ಹರಿಶಿಣ / ಕೇಸರಿ) ಮತ್ತು ಹಣ್ಣುಗಳು ಮೈಕ್ರೋನ್ಯೂಟ್ರಿಯಂಟ್ಸ್ ಗಳ ಅಪೌಷ್ಟಿಕತೆಯನ್ನು ಮತ್ತು ಕೆಲ ದೀರ್ಘಕಾಲಿಕ ಖಾಯಿಲೆಗಳನ್ನು ತಡೆಯುತ್ತದೆ.

ಎ ಅನ್ನಾಂಗ ಭರಿತ ಆಹಾರಗಳನ್ನು ಸೇವಿಸಿರಿ

 • ಸಾಮಾನ್ಯ ದೃಷ್ಟಿಗಾಗಿ ಎ ಅನ್ನಾಂಗದ ಆವಶ್ಯಕತೆವಿದೆ.
 • ಎ ಅನ್ನಾಂಗದ ಕೊರತೆಯಿಂದ ಇರುಳುಗಣ್ಣು ಮತ್ತು ಕಣ್ಣಿನಲ್ಲಿ ಬದಲಾವಣೆಗಳಾಗುತ್ತವೆ.
 • ಎ ಅನ್ನಾಂಗದ ತೀವ್ರ ಕೊರತೆಯಿಂದ ಮಕ್ಕಳು ಅಂಧರಾಗುತ್ತಾರೆ.
 • ಬಾಲ್ಯದ ಸೊಂಕುಗಳಾದ ಬೇದಿ, ದಡಾರ ಮತ್ತು ಶ್ವಾಸಕೋಶದ ಸೋಂಕುಗಳು ಮತ್ತು ಪರವಾವಲಂಬಿ ಜೀವಿಗಳ ಸೋಂಕುಗಳು ಎ ಅನ್ನಾಂಗದ ಹೀರುವಿಕೆಯಲ್ಲಿ ತೊಂದರೆಯೊಡ್ಡುತ್ತವೆ.
 • ಹಾಲು, ಮೊಟ್ಟೆ, ಪಿತ್ತಜನಕಾಂಗ ಮತ್ತು ಮಾಂಸ ಮೊದಲೆ ತಯಾರಿಸಲಾದ ಎ ಅನ್ನಾಂಗದ ಸಮೃದ್ಧ ಅತ್ಯುತ್ತಮ ಮೂಲಗಳು.
 • ಬೀಟ ಕೆರೋಟೀನ್ ಆಕಾರದಲ್ಲಿ ಎ ಅನ್ನಾಂಗವನ್ನು ಗಿಡ ಮೂಲ ಆಹಾರದಿಂದ ಕೂಡ ಪಡೆಯಬಹುದಾಗಿದೆ.
 • ಕೆರೋಟೀನ್ ಭರಿತ ಆಹಾರಗಳು ಯಾವುವೆಂದರೆಗಾಢ ಹಸಿರು ಎಲೆಗಳ ತರಕಾರಿಗಳಾದ ನುಗ್ಗೆ ಸೊಪ್ಪು, ಅಮರಾಂತ್, ಮೆಂತ್ಯೆ, ಪಾಲಕ್ಕು ಮತ್ತು ಹಣ್ಣುಗಳು ಮತ್ತು ತರಕಾರಿಗಳಾದ ಕ್ಯಾರಟ್, ಅರಿಶಿನ ಕುಂಬಳಕಾಯಿ, ಮಾವು ಮತ್ತು ಪಪಾಯ.
 • ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ಸೇರಿಸಿಕೊಳ್ಳಿರಿ.
 • ದಿನ ನಿತ್ಯ ಎಷ್ಟು ಸಾಧ್ಯವೋ ಅಷ್ಟು ಇತೆರೆ ತರಕಾರಿಗಳನ್ನು ತಿನ್ನಿರಿ.
 • ಹಸಿ ಮತ್ತು ತಾಜಾ ತರಕಾರಿಗಳನ್ನು ಸಾಲಡ್ಸ್ ರೂಪದಲ್ಲಿ ತಿನ್ನಿರಿ.
 • ಕುಟುಂಬಕ್ಕೆ ಬೇಕಾಗುವ ತರಕಾರಿಗಳನ್ನು ಹಿತ್ತಲತೋಟದಲ್ಲಿ ಬೇಳೆಸಿರಿ.
 • ಹಸಿರು ಎಲೆಗಳ ತರಕಾರಿಗಳು ಸ್ವಚ್ಛವಾಗಿ ಮತ್ತು ಸರಿಯಾಗಿ ಬೇಯಿಸಿದಲ್ಲಿ, ಶಿಶುಗಳಿಗೂ ತಿನ್ನಿಸಬಹುದು ಮತ್ತು ಅದು ಸುರಕ್ಷಿತ ಕೂಡ.

ಅಡುಗೆ ಎಣ್ಣೆಗಳು ಮತ್ತು ಪ್ರಾಣಿ ಮೂಲದ ಆಹಾರಗಳು ಮಿತವಾಗಿ ಬಳಸಬೇಕು ಮತ್ತು ವನಸ್ಪತಿ / ತುಪ್ಪ / ಬೆಣ್ಣೆ ಅಪರೂಪಕ್ಕೆ ಉಪಯೋಗಿಸಬೇಕು/

 • ಮೇದಸ್ಸುಗಳು / ಎಣ್ಣೆಗಳು ಅತಿ ಹೆಚ್ಚಿನಶಕ್ತಿ ಮೌಲ್ಯವನ್ನು ಹೊಂದವೆ.
 • ಕೊಬ್ಬಿನಾಂಶವೂ ದೇಹಕ್ಕೆ ಅಗತ್ಯವಾಗಿರುವ ಫ್ಯಾಟಿ ಆಸಿಡ್ಸ್ ಗಳನ್ನು ನೀಡುತ್ತದೆ ಮತ್ತು ಕೊಬ್ಬನ್ನು ಕರಗಿಸುವ ಅನ್ನಾಂಗಗಳ ಹೀರುವಿಕೆಯನ್ನು ಪ್ರಚೋದಿಸುತ್ತದೆ.
 • ಕೊಬ್ಬುಗಳು ದೇಹದಲ್ಲಿನ ಜೈವಿಕವಾಗಿ ಕ್ರಿಯಾಶಿಲವಾಗಿರುವ ಸಂಘಟಿತಗಳ ಪೂರ್ವವರ್ತಿಗಳು.
 • ಹೆಚ್ಚಿನ ಕ್ಯಾಲರೀಗಳನ್ನು ನೀಡುವ ಆಹಾರಕ್ರಮಗಳು, ಮೇದಸ್ಸುಗಳು ಮತ್ತು ಕೊಲೆಸ್ಟ್ರಾಲ್, ರಕ್ತದಲ್ಲಿನ ಕೊಬ್ಬಿನ ಅಂಶ ಮತ್ತು ಟ್ರೈಗ್ಲಿಸರಾಯ್ಡ್ಸ್‌ ಅಂಶವು ಹೆಚ್ಚಾಗುವಂತೆ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಹೆಚ್ಚಿರುವ ಪದಾರ್ಥಗಳ ಸೇವನೆ ಬೊಜ್ಜುಮೈ, ಹ್ರದಯರೋಗ, ಹ್ರದಯಾಘಾತ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯ ಹೆಚ್ಚಿಸುತ್ತದೆ.
 • ಹೆಚ್ಚಿನ ಪ್ರಮಾಣದ ಕೊಬ್ಬಿನಂಸಧ ಸೇವನೆಯಿಂದಾಗುವ ಮೂರು ಪರಿಣಾಮಗಳು ಜೀವನದ ಮುಂಚಿತ ಹಂತಗಳಲ್ಲಿಯೇ ಕಾಣಬಹುದು.
 • ಅಗತ್ಯವಿರುವಷ್ಟು ಕೊಬ್ಬು ಮಾತ್ರ ಸೇವಿಸಿ
 • ಅಡುಗೆ ಬೇಕಾಗುವ ಎಣ್ಣೆಗೆ ಒಂದಕ್ಕಿಂತ ಹೆಚ್ಚಿನ ಮೂಲವನ್ನು ಬಳಸಿರಿ.
 • ತುಪ್ಪ, ಬೆಣ್ಣೆ ಮತ್ತು ವನಸ್ಪತಿಯ ಬಳಕೆ ಮಿತಗೊಳಿಸಿರಿ.
 • ಲಿನೊಲೇನಿಕ್ ಆಸಿಡ್ಸ್ ಭರಿತ ಆಹಾರಗಳನ್ನು ಸೇವೆಸಿರಿ (ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಮೆಂತ್ಯೆ ಮತ್ತು ಸಾಸಿವೆ ಕಾಳುಗಳು).
 • ಆಗಾಗ್ಗೆ ಮೀನನ್ನು ತಿನ್ನಿರಿ ಮತ್ತು ಮಾಂಸ ಮತ್ತು ಕೋಳಿಯ ಬಳಕೆ ಮಿತಿಯಲ್ಲಿರಲಿ / ಅಂಗಗಳ ಮಾಂಸವನ್ನು ತೊರೆಯಿರಿ (ಪಿತ್ತಜನಾಂಗ, ಮೂತ್ರಪಿಂಡ, ಮೆದುಳು, ಎತ್ಯಾದಿ.).

ಹೆಚ್ಚಿನ ತೂಕ ಮತ್ತು ಬೊಜ್ಜು ಮೈ ತಡೆಯಲು ಹೆಚ್ಚಾಗಿ ತಿನ್ನುವುದು ಬೇಡ. ದೇಹದ ತೂಕವನ್ನು ನಿಭಾಯಿಸಲು ಸೂಕ್ತ ದೈಹಿಕ ಚಟುವಟಿಕೆ ಆವಶ್ಯಕ

 • ಬೊಜ್ಜುಮೈ ಎಂದರೆ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇದಸ್ಸು ಶೇಖರಣೆ.
 • ಬೊಜ್ಜುಮೈಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತದೆ. ಮತ್ತು ಅಕಾಲಿಕ ಮೃತ್ಯುವಿಗೂ ಕಾರಣವಾಗುತ್ತದೆ.
 • ಅದು ಅತಿಯಾದ ರಕ್ತದ ಒತ್ತಡ, ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲೈಸೆರೈಡ್ಸ್, ಹೃದಯ ರೋಗ, ಮಧುಮೇಹ, ಪಿತ್ತಜನಾಂಗದ ಕಲ್ಲು ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯ ವೃದ್ಧಿಸುತ್ತದೆ.
 • ಬೊಜ್ಜುಮೈ ಕೇವಲ ಹೆಚ್ಚಾಗಿ ತಿನ್ನುವುದರ ಸರಳ ಪರಿಣಾಮವಲ್ಲ.ಅದು ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳು ಕೂಡ ಅದಕ್ಕೆ ಕಾರಣವಾಗುತ್ತವೆ.
 • ನಿಧಾನವಾಗಿ ಮತ್ತು ಸತತವಾಗಿ ದೇಹದ ತೂಕವನ್ನು ಕಡಿಮೆಗೊಳಿಸಲು ಸಲಹೆ ನೀಡಲಾಗಿದೆ.
 • ತೀವ್ರಉಪವಾಸ ಮಾಡುವುದರಿಂದ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ.
 • ನಿಮ್ಮ ದೈಹಿಕ ಚಟುವಟಿಕೆಗನುಗುಣವಾಗಿ ಆಹಾರಗಳ ವೈವಿಧ್ಯತೆಯನ್ನು ಅನುಭವಿಸಿರಿ.
 • ಸಣ್ಣ ಪ್ರಮಾಣದ ಆಹಾರವನ್ನು ಆಗಾಗ್ಗೆ ಸೇವಿಸುತ್ತಿರಿ.
 • ಸಕ್ಕರೆ, ಕೊಬ್ಬುರಹಿತ ಆಹಾರಗಳು ಮತ್ತು ಮದ್ಯದ ಸೇವನೆಯಲ್ಲಿ ಕಡಿತಗೊಳಿಸಿರಿ.
 • ಕಡಿಮೆ ಕೊಬ್ಬಿರುವ ಹಾಲನ್ನು ಉಪಯೋಗಿಸಿರಿ.

ಉತ್ತಮ ಆರೋಗ್ಯಕ್ಕಗಿ ಸಲಹೆಗಳು

 • ನಿಯಮಿತ ವ್ಯಾಯಾಮ ಮಾಡಿ
 • ಧೂಮಪಾನ, ತಂಬಾಕು ಅಗೆಯುವುದು ಮತ್ತು ಮದ್ಯಪಾನವನ್ನು ತೊರೆಯಿರಿ.
 • 30 ವರ್ಷ ವಯಸ್ಸಿನ ನಂತರ ರಕ್ತದಲ್ಲಿನ ಗ್ಲೂಕೋಸ್, ಮೇದಸ್ಸು ಮತ್ತು ರಕ್ತದ ಒತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿರಿ.
 • ಸ್ವ-ಔಷದೋಪಚಾರವನ್ನು ತೊರೆಯಿರಿ.
 • ಒತ್ತಡ ನಿರ್ವಹಣೆಯ ತಂತ್ರಗಳನ್ನು ರೂಢಿಸಿಕೊಳ್ಳಿರಿ (ಯೋಗ ಮತ್ತು ಧ್ಯಾನ).
 • ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಚುಚ್ಚುಮದ್ದನ್ನು ಹಾಕಿಸಿರಿ.

ಉಪ್ಪಿನ ಬಳಕೆ ಮಿತಿಯಾಗಿರಲಿ

 • ಸೋಡಿಯಂ ಅಧಿಕೃತ ಸೆಲ್ಯೂಲಾರ್ ದ್ರವದ ಮುಖ್ಯ ರಾಸಾಯನಿಕ ಪದಾರ್ಥ.
 • ಸೋಡಿಯಂ ದೇಹದಲ್ಲಿನ ನರಗಳ ಕಾರ್ಯದಲ್ಲಿ ಮತ್ತು ದ್ರವಗಳ ಸಮತೋಲನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
 • ಸೋಡಿಯಂನ ಸಮತೋಲನವನ್ನು ನಿರ್ವಹಿಸುವುದು ಮೂತ್ರಪಿಂಡದ ಕಾರ್ಯಚಟುವಟಿಕೆಯ ಆಧಾರದ ಮೇಲೆ.
 • ಉಪ್ಪಿನ ಹೆಚ್ಚಿನ ಪ್ರಮಾಣದಲ್ಲಿನ ಬಳಕೆ ಅತಿಯಾದ ರಕ್ತದ ಒತ್ತಡ ಮತ್ತು ಹೊಟ್ಟೆ ಕ್ಯಾನ್ಸರ್ಗೆ ಸಂಬಂಧಿಸಿದೆ
 • ಎಲ್ಲಾ ಆಹಾರಗಳು ಸೋಡಿಯಂ ಹೊಂದಿರುತ್ತವೆ. ಹಾಗಾಗಿ ಸೋಡಿಯಂನ ಆವಶ್ಯಕತೆಯನ್ನು ಮಿತವಾದ ಉಪ್ಪಿನ ಬಳಕೆಯಿಂದ ಪೂರೈಸಿಕೊಳ್ಳಬಹುದು.
 • ಸೋಡಿಯಂನ ಬಳಕೆಯು ಪೋಟ್ಯಾಶಿಯಂ ಬಳಕೆಯೊಂದಿಗೆ ಸಾಮ್ಯತೆವಿರಬೇಕು.
 • ಎಳೆ ವಯಸ್ಕರಾಗಿದ್ದಾಗಲೇಹೆಚ್ಚು ಉಪ್ಪು ಬಳಕೆಯನ್ನು ಸೀಮಿತಗೊಳಿಸಿರಿ.
 • ಕಡಿಮೆ ಉಪ್ಪಿನ ಪ್ರಮಾಣದಲ್ಲಿ ಆಹಾರಗಳಿಗೆ / ಆಹಾರಕ್ರಮಗಳಿಗೆ ರುಚಿಕರಗೊಳಿಸಿರಿ.
 • ಸಂರಕ್ಷಿಸಿದ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳಾದ ಹಪ್ಪಳ, ಉಪ್ಪಿನಕಾಯಿ, ಸಾಸ್, ಕೆಚಪ್, ಉಪ್ಪಿನ ಬಿಸ್ಕುತ್, ಚಿಪ್ಸ್, ಚೀಸ್ ಮತ್ತು ಮೀನಿನ ಬಳಕೆಯನ್ನು ಮಿತವಾಗಿಸಿರಿ.
 • ಸಮರ್ಪಕ ಪೋಟ್ಯಾಶಿಯಂ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.
 • ಅಯೋಡೈಸ್ಡ್ ಉಪ್ಪನ್ನು ಯಾವಾಗಲೂ ಬಳಸಿರಿ.

ಅಯೋಡೀನ್ ವುಳ್ಳ ಸಾಕಷ್ಟು ಆಹಾರಗಳನ್ನು ತಿನ್ನಿರಿ / ಅಯೋಡೈಸ್ಡ್ ಉಪ್ಪನ್ನು ಬಳಸಿರಿ

 • ಥೈರಾಡ್ ಹಾರ್ಮೋನ್ ಗಳ ರಚನೆಗಾಗಿ ಅಯೋಡಿನ್ ಬೇಕಾಗುತ್ತದೆ.
 • ಥೈರಾಡ್ ಹಾರ್ಮೋನ್ ಗಳು ಬೆಳವಣಿಗೆಗೆ ಮತ್ತು ಅಭಿವ್ರದ್ಧಿಗಾಗಿ ಬಾಕಾಗುತ್ತವೆ.
 • ಅಯೋಡೀನಿನ ಕೊರತೆಯಿಂದ ಗಾಯ್ಟರ್ (ಗಂಟಲುವಾಳು) ಬರುತ್ತದೆ (ಥೈರಾಡ್ ಗ್ರಂಥಿಯ ಊತ).
 • ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆ, ಅಯೋಡಿನ್ ಕೊರತೆಯಿಂದಾಗುವ ಖಾಯಿಲೆಗಳಿಗೆ ಮುಖ್ಯ ಕಾರಣ.
 • ಗರ್ಭಾವಸ್ಥೆಯಲ್ಲಿ ಅಯೋಡಿನ್ ಕೊರತೆಯಿಂದ ನಿರ್ಜೀವ ಮಗುವಿನ ಜನನ, ಗರ್ಭಪಾತ ಮತ್ತು ಕ್ರಟೀನ್ ರೋಗಕ್ಕೆ ಕಾರಣವಾಗುತ್ತದೆ.
 • ಅಯೋಡೈಸ್ಡ್ ಉಪ್ಪಿನ ಬಳಕೆಯಿಂದ ಸಮರ್ಪಕ ಅಯೋಡೀನಿನ ಸೇವನೆಯನ್ನು ಖಾತ್ರಿಪಡಿಸುತ್ತದೆ.

ತಿನ್ನುವ ಆಹಾರಗಳು ಸ್ವಚ್ಛ ಮತ್ತು ಸುರಕ್ಷಿತವಾಗಿರಬೇಕು

 • ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರವೂ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಅತ್ಯಾವಶಕ.
 • ಆಹಾರಗಳಲ್ಲಿ ನೈಸರ್ಗಿಕವಾಗಿ ಆಗುವ ಟಾಕ್ಸಿನ್ಸಗಳು (ಜೀವಾಣು ವಿಷ), ಕಲಬೆರಕೆಗಳು ಆರೋಗ್ಯಕ್ಕೆ ಸಮಸ್ಯೆಯಾಗಿದೆ.
 • ಅಸುರಕ್ಷಿತ ಆಹಾರಗಳ ಸೇವನೆಯುಖಾಯಿಲೆಗಳಿಗೆ ಕಾರಣವಾಗುತ್ತದೆ.
 • ಆಹಾರ ಪದಾರ್ಥಗಳನ್ನು ನಂಬಿಕಸ್ತ ಮೂಲದಿಂದ ಸೂಕ್ತ ಪರೀಕ್ಷೆ ನಂತರ ಖರೀದಿಸಿರಿ.
 • ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಉಪಯೋಗಿಸುವ ಮುನ್ನ ಸರಿಯಾರಗಿ ತೊಳೆಯಿರಿ.
 • ಹಸಿ ಮತ್ತು ಬೇಯಿಸಿದ ಆಹಾರವನ್ನು ಸರಿಯಾಗಿ ಸಂರಕ್ಷಿಸಿಮತ್ತು ಸೂಕ್ಷ್ಮಜೀವಿಗಳಮತ್ತು ನೊಣಗಳ ಹಾವಳಿಯನ್ನು ತಡೆಯಿರಿ.
 • ಕೊಳೆಯುವ ಆಹಾರ ಪದಾರ್ಥಗಳನ್ನು ತಿನ್ನುವವರೆಗೂ ಫ್ರಿಜ್ನಲ್ಲಿಡಿರಿ.
 • ಉತ್ತಮ ವೈಯಕ್ತಿಕ ಸ್ವಚ್ಛತೆಯನ್ನು ನಿರ್ವಹಿಸಿರಿ ಮತ್ತು ಅಡುಗೆಯ ಮತ್ತು ಆಹಾರ ಶೇಖರಣೆಯ ಜಾಗವನ್ನು ಸ್ಚಚ್ಛ ಮತ್ತು ಸುರಕ್ಷಿತವಾಗಿಡಿರಿ.

ಆರೋಗ್ಯಕರ ಮತ್ತು ಸಕಾರಾತ್ಮಕ ಆಹಾರದ ಪರಿಕಲ್ನೆ ಮತ್ತು ಅಡುಗೆಯ ರೂಢಿಗಳನ್ನು ಅಳವಡಿಸಿಕೊಳ್ಳಬೇಕು

 • ಆಹಾರಕ್ರಮದ ರೂಢಿಗಳಲ್ಲಿ ಸಾಂಸ್ಕೃತಿಕ ‌ಅಂಶಗಳು ಬಹಳ ಮುಖ್ಯ ಪಾತ್ರವಹಿಸುತ್ತದೆ.
 • ಐಚ್ಛಿಕ ಆಹಾರ ನಂಬಿಕೆಗಳು ಮತ್ತು ಚಟಗಳು ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟು ಮಾಡುತ್ತವೆ.
 • ಆಹಾರಗಳ ಬೇಯಿಸುವಿಕೆಯಿಂದ ಅವುಗಳ ರುಚಿ ಹೆಚ್ಚಾಗುತ್ತದೆ ಮತ್ತು ಸುಲಭಾವಾಗಿ ಜೀರ್ಣವಾಗುತ್ತದೆ.
 • ಬೇಯಿಸುವುದರಿಂದ ಹಾನಿಕಾರಕ ಜೀವಾಣುಗಳು ನಾಶವಾಗುತ್ತದೆ
 • ತಪ್ಪಾಗಿ ಬೇಯಿಸುವ ಅಭ್ಯಾಸಗಳಿಂದ ಪೌಷ್ಟಿಕಾಂಶಗಳ ನಷ್ಟವಾಗುತ್ತದೆ.
 • ಹೆಚ್ಚಿನ ಕಾವಿನಲ್ಲಿ ಅಡುಗೆ ಮಾಡಿದಾಗ ಪೌಷ್ಟಿಕಾಂಶಗಳು ಹಾಳಾಗುತ್ತವೆ ಮತ್ತು ಹಾನಿಕರ ಸತ್ವಗಳ ರಚನೆಯಾಗುತ್ತದೆ.
 • ಉತ್ತಮ ಆಹಾರದ ಅಭ್ಯಾಸಗಳನ್ನು ಹೊಂದಿ ಮತ್ತು ಆಹಾರಕ್ಕೆ ಸಂಬಂಧಿಸಿದ ತಪ್ಪುಕಲ್ಪನೆಗಳನ್ನು ತೊರೆಯಿರಿ.
 • ಅಡುಗೆಯ ಮುನ್ನ ಆಹಾರ ಪದಾರ್ಥಗಳನ್ನು ಪದೇ ಪದೇ ತೊಳೆಯಬೇಡಿ.
 • ತರಕಾರಿಗಳನ್ನು ಕತ್ತರಿಸಿದ ನಂತರ ತೊಳೆಯಬೇಡಿ.
 • ಕತ್ತರಿಸಿದ ತರಕಾರಿಗಳನ್ನು ಹೆಚ್ಚಿನ ಸಮಯ ನೀರಿನಲ್ಲಿ ನೆನೆಸಬೇಡಿ.
 • ಅಡುಗೆಯ ನಂತರ ಹೆಚ್ಚಾಗಿ ಉಳಿದ ನೀರನ್ನು ಚೆಲ್ಲಬೇಡಿ.
 • ಮುಚ್ಚಳವಿರುವ ಪಾತ್ರೆಯಲ್ಲಿ ಅಡುಗೆ ಮಾಡಿರಿ.
 • ಹುರಿಯಲು / ಕರಿಯಲು ಪ್ರಜರ್ ಕುಕ್ಕರ್ / ಸ್ಟೀಮ್ ಅಡುಗೆ ಉಪಕರಣವನ್ನು ಬಳಸಿರಿ.
 • ಮೊಳಕೆ / ಕಿಣ್ವ ಆಹಾರಗಳ ಸೇವನೆಯನ್ನು ಪ್ರಚೋದಿಸಿರಿ.
 • ದವಸಧಾನ್ಯಗಳ ಮತ್ತು ತರಕಾರಿಗಳನ್ನು ಬೇಯಿಸಲುಅಡುಗೆಯಲ್ಲಿ ಸೋಡವನ್ನು ಬಳಸಬೇಡಿ.
 • ಉಳಿದಿರುವ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡದಿರಿ.

ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು ಮತ್ತು ಪಾನೀಯಗಳ ಸೇವನೆ ಮಿತವಾಗಿರಬೇಕು

 • ನೀರು ಮಾನವ ದೇಹದ ಪ್ರಮುಖ ಅಂಶ
 • ಪಾನೀಯಗಳು ದಾಹವನ್ನು ನೀಗಿಸಲು ಉಪಯುಕ್ತ ಮತ್ತು ಇವುಗಳಿಂದ ದೇಹಕ್ಕೆ ಬಾಕಾಗು ದ್ರವ್ಯಗಳ ಪೂರೈಕೆಯಾಗುತ್ತದೆ.
 • ಕೆಲವೊಂದು ಪಾನೀಯಗಳು ಪೌಷ್ಟಿಕಾಂಶಗಳನ್ನು ನೀಡುತ್ತವೆ ಮತ್ತು ಕೆಲವು ಉತ್ತೇಜನ ನೀಡುತ್ತವೆ.
 • ಹಾಲು ಪೌಷ್ಟಿಕಾಂಶಗಳ ಸಮೃದ್ಧ ಅತ್ಯತ್ತಮ ಮೂಲವಾಗಿದ್ದು, ಎಲ್ಲಾ ವಯಸ್ಸಿನ ವರ್ಗದವರಿಗೆ ಒಂದು ಅತ್ಯುತ್ತಮ ಪಾನೀಯ.
 • ದಿನನಿತ್ಯದ ದೇಹದ ದ್ರವ್ಯಗಳ ಪೂರೈಕೆಗಾಗಿ ಸಮರ್ಪಕ ಪ್ರಮಾಣದಲ್ಲಿ ಸುರಕ್ಷಿತವಾದ ನೀರನ್ನು ಕುಡಿಯಿರಿ.
 • ನೀರಿನ ಸುರಕ್ಷತೆ ಕುರಿತು ಅನುಮಾನವಿದ್ದಲ್ಲಿ ಕುದಿಸಿದ ನೀರನ್ನು ಕುಡಿಯಿರಿ.
 • ಪ್ರತಿ ದಿನ ಕನಿಷ್ಠ 250 ಮಿಲಿವೀಟರ್ ಕುದಿಸಿದ ಅಥವ ಪಾಶ್ಚರೀಕರಿಸಿದ ಹಾಲನ್ನು ಕುಡಿಯಿರಿ.
 • ಕಾರ್ಬೊನೇಟ್ ಮಡಿರುವ ಪಾನೀಯಗಳ ಬದಲು ನೈಸರ್ಗಿಕ ಮತ್ತು ತಾಜಾ ಹಣ್ಣಿನ ರಸವನ್ನು ಕುಡಿಯಿರಿ.
 • ಚಹಾ ಕಿಂತ ಕಾಫಿ ಕುಡಿಯುವುದು ಉತ್ತಮ.
 • ಮದ್ಯವನ್ನು ತೊರೆಯಿರಿ. ಇದನ್ನು ಸೇವಿಸುವವರು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿರಿ.

ಸಂಸ್ಕರಿಸದ ಮತ್ತು ತಿನ್ನಲು ಸಿದ್ಧವಾಗಿರುವ ಆಹಾರಗಳನ್ನು ವಿವೇಕದಿಂದ ಆರಿಸಿಕೊಳ್ಳಬೇಕು. ಸಕ್ಕರೆಯ ಬಳಕೆ ಮಿತವಾಗಿರಬೇಕು

 • ನಗರೀಕರಣದಿಂದಾಗಿ ಸಂಸ್ಕರಿತ ಆಹಾರಗಳ ಸೇವನೆ ಮತ್ತು ಬೇಡಿಕೆ ಹೆಚ್ಚಾಗಿದೆ.ಸಾಂಪ್ರದಾಯಿಕವಾಗಿ ಅಡುಗೆ ಮಾಡಲಾಗಿರುವ ಆಹಾರಗಳ ಸ್ಥಾನವನ್ನು ಸಂಸ್ಕರಿಸಿದ ಆಹಾರಗಳು ಆಕ್ರಮಿಸುತ್ತಿದೆ.ಸಂಸ್ಕರಿಸಿದ ಆಹಾರಗಳು ಸಾಕಷ್ಟು ಬಗೆಯ ಆಹಾರಗಳ ಸಂಕಲನ ಹೊಂದಿರುತ್ತವೆ.
 • ಪುಷ್ಟಿಗಳಿಸಿದ್ದಲ್ಲಿ, ಸಂಸ್ಕರಿಸಿದ ಆಹಾರಗಳು ಪೌಷ್ಟಿಕಾಂಶಯುಕ್ತವಾಗುತ್ತವೆ.ಸಕ್ಕರೆ ಒಂದು ಸಂಸ್ಕರಿಸಿದ ಆಹಾರವಾಗಿದ್ದು ನಿರುಪಯುಕ್ತ ಕ್ಯಾಲೊರಿಗಳನ್ನು ನೀಡುತ್ತದೆ..
 • ಸಾಂಪ್ರದಾಯಿಕ ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ.
 • ಊಟದ ಸಮಯದಲ್ಲಿ ಸಂಸ್ಕರಿಸಿದ ತಿಂಡಿಯನ್ನು ಕಡಿಮೆಗೊಳಿಸಿ.
 • ಸಕ್ಕರೆಯ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆ ಮಿತಿಗೊಳಿಸಿರಿ. ಇವುಗಳು ಕೇವಲ ನಿರುಪಯುಕ್ತ ಕ್ಯಾಲರಿಗಳನ್ನು ನೀಡುತ್ತವೆ.
 • ಪುಷ್ಟಿಕಾಂಶಯುಕ್ತ ಸಂಸ್ಕರಿತ ಆಹಾರಗಳನ್ನು ಮಾತ್ರ ಆರಿಸಿರಿ.
 • ಸಂಸ್ಕರಿತ ಆಹಾರ ಸೇವನೆಯನ್ನು ಮಿತಗೊಳಿಸಿ.ಇದರಿಂದ ಚಯಾಪಚಯ ಕ್ರಿಯೆಯ ಮೇಲೆ ಹೆಚ್ಚಿನ ಶ್ರಮ ಉಂಟಾಗುತ್ತದೆ.
 • ಸಂಸ್ಕರಿತ ಆಹಾರದ ಪ್ಯಾಕ್‌ನ ಮೇಲೆ ಮುದ್ರಿಸಿರುವ ವಿವರಗಳನ್ನು ಓದಿ. ಎಷ್ಟುದಿನಗಳೊಳಗೆ ಬಳಸುವುದು ಉತ್ತಮ ಎಂಬ ಅಂಶವನ್ನು ಗಮನಿಸಿ.

ಆರೋಗ್ಯವಾಗಿರಲು ಮತ್ತು ಚುರುಕಾಗಿರಲು ಹಿರಿಯರು ಪೌಷ್ಡಕತೆ ಭರಿತ ಆಹಾರಕ್ರಮವನ್ನು ಪಾಲಿಸಬೇಕು /

 • ಹಿರಿಯರಿಗೆ ಕಡಿಮೆ ಪ್ರಮಾಣದ ಕ್ಯಾಲರಿಗಳು ಬೇಕಾಗುತ್ತದೆ.
 • ಕಡಿಮೆ ಆಹಾರ ಸೇವನೆಯ ಕ್ಷಮತೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಕಡಿಮೆ ರೋಗನಿರೋಧಕ ಹೊಂದಿರುವುದರಿಂದ ರೋಗಗಳಿಗೆ ತುತ್ತಾಗುವುದು ಹೆಚ್ಚು.
 • ವಯಸ್ಸಿನಿಂದಾಗುವ ಅನಾನುಕೂಲತೆಗಳನ್ನು ಉತ್ತಮ ಆಹಾರ ಅಭ್ಯಾಸಗಳಿಂದ ಮತ್ತು ನಿಯಮಿತ ವ್ಯಾಯಾಮದಿಂದ ಕಡಿಮೆಗೊಳಿಸಬಹುದು.
 • ಹಿರಿಯರಿಗೆ, ವಯಸ್ಸಿಗೆ ಸಂಬಂಧಿಸಿದ ಖಾಯಿಲೆಗಳನ್ನು ತಡೆಯಲು, ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಸತು (ಜಿಂಕ್), ಎ ಅನ್ನಾಂಗ ಮತ್ತು ಆಂಟಿ ಆಕ್ಸಿಡೆಂಟ್ಗಳು ಬೇಕಾಗುತ್ತವೆ.
 • ದೈಹಿಕ ಚಟುವಟಿಕೆಯೊಂದಿಗೆ ಆಹಾರದ ಸೇವನೆಯನ್ನು ಸಮತೂಕಗೊಳಿಸಿ.
 • ದಿನದ ಆಹಾರವನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಹಲವು ಬಾರಿಸೇವಿಸಿ.
 • ನಿಯಮಿತವಾಗಿ ವ್ಯಾಯಾಮ ಮಾಡಿರಿ.

ತಾಜಾಕ್ಕಿಂತ ಒಣ ಹಣ್ಣುಗಳಲ್ಲಿರುವ ವಿಶೇಷತೆ ಏನು

ಒಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಅನ್ನುವುದು ನಮಗೆಲ್ಲಾ ಗೊತ್ತು. ಪ್ರತಿದಿನ ಸ್ವಲ್ಪ ಡ್ರೈ ಪ್ರೂಟ್ಸ್ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಆದ್ದರಿಂದ ಬೆಳೆಯುವ ಮಕ್ಕಳಿಗೆ ಡ್ರೈ ಪ್ರೂಟ್ಸ್ ಕೊಡುವುದರಿಂದ ಅಗತ್ಯದ ಪೋಷಕಾಂಶಗಳು ದೊರೆಯುತ್ತವೆ.

ಗರ್ಭಿಣಿಯರಿಗೆ ಪೋಷಕಾಂಶದ ಅವಶ್ಯಕತೆ ಹೆಚ್ಚಿರುವುದರಿಂದ ಪ್ರತಿದಿನ ಡ್ರೈ ಫ್ರೂಟ್ಸ್ ತಿಂದರೆ ತಾಯಿ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಡ್ರೈ ಫ್ರೂಟ್ಸ್ ನಲ್ಲಿ ತಾಜಾ ಹಣ್ಣಿನಲ್ಲಿರುವುದಕ್ಕಿಂತ ಕೆಲವು ವಿಶೇಷ ಗುಣಗಳಿರುತ್ತವೆ. ಉದಾಹರಣೆಗೆ ದ್ರಾಕ್ಷಿ, ದ್ರಾಕ್ಚಿ ಹಣ್ಣನ್ನು ತಿಂದರೆ ತೆಳ್ಳಗಾಗಬಹುದು. ಅದೇ ಒಣದ್ರಾಕ್ಚಿಯನ್ನು ನೆನೆ ಹಾಕಿ ತಿನ್ನುವುದರಿಂದ ತುಂಬಾ ತೆಳ್ಳಗಿದ್ದವರು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಇಲ್ಲಿ ನಾವು ಒಣ ಹಣ್ಣುಗಳಲ್ಲಿರುವ ಪೋಷಕಾಂಶದ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಆಪ್ರಿಕಾಟ್

ಆಪ್ರಿಕಾಟ್ ನಲ್ಲಿ ನಾರಿನಂಶ, ವಿಟಮಿನ್ ಎ, ಸಿ, ರಂಜಕ, ಕಬ್ಬಿಣದಂಶ ಮತ್ತು antioxidants ಇವೆ. ಈ ಹಣ್ಣು ದೇಹದಲ್ಲಿ ಹೆಚ್ಚು ರಕ್ತ ಕಣಗಳನ್ನು ಉತ್ಪತ್ತಿ ಮಾಡುತ್ತವೆ. ರಕ್ತ ಹೀನತೆ ಇರುವವರು ಇದನ್ನು ಪ್ರತಿದಿನ ತಿನ್ನುವುದು ಒಳ್ಳೆಯದು.

ಅಂಜೂರ

ಅಂಜೂರ ಹಣ್ಣಿನಲ್ಲಿ ವಿಟಮಿನ್ ಕೆ, ಬಿ6, ಸಿ, ಇ, ಖನಿಜಾಂಶಗಳು, ರಂಜಕ ಇದ್ದು ಕ್ಯಾನ್ಸರ್, ಮಧುಮೇಹ ಬರದಂತೆ ತಡೆಯುತ್ತದೆ ಹಾಗೂ ನಮ್ಮ ದೇಹವನ್ನು ಸೋಂಕಾಣುಗಳಿಂದ ರಕ್ಷಣೆ ಮಾಡುತ್ತದೆ.

ಟೊಮೆಟೊ

ಒಣ ಟೊಮಮೆದಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಂಶವಿರುವುದಿಲ್ಲ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕ್ಯಾನ್ಸರ್, ಮಧುಮೇಹ, ಹೃದಯ ಮತ್ತು ಶ್ವಾಸಕೋಶದ ಸಂಬಂಧಿ ರೋಗಗಳು ಬರದಂತೆ ತಡೆಯುತ್ತದೆ.

ವೋಲ್ಫ್ ಬೆರ್ರಿ

ಇದರಲ್ಲಿ ಸತು, ಕಬ್ಬಿಣದಂಶ, ಕ್ಯಾಲ್ಸಿಯಂ ಇದ್ದು ಕಿಡ್ನಿ, ಲಿವರ್ ಗೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ರಾನ್ ಬೆರ್ರಿ

ಕ್ರಾನ್ ಬರ್ರಿ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ. ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಒಣ ಹಣ್ಣು ಹಲ್ಲುಗಳ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ.

ಒಣದ್ರಾಕ್ಷಿ

ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಸ, ಮ್ಯಾಗ್ನಿಸೆ, ಸತು, ಫ್ಲೋರೈಡ್, ತಾಮ್ರದಂಶ, ಸತು ಈ ಎಲ್ಲಾಅಂಶಗಳಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯ, ನರ ಸಂಬಂಧಿ ರೋಗಗಳ ವಿರುದ್ಧ ಹೋರಾಡುತ್ತದೆ. ಅಲ್ಜೈಮರ್ಸ್ ವಿರುದ್ಧ ಹೋರಾಡುತ್ತದೆ.

ಖರ್ಜೂರ

ಇದರಲ್ಲಿ ನಾರಿನಂಶ ಮತ್ತು ಕಬ್ಬಿಣದಂಶ ಇವೆ. ಇದು ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ. ಹೃದ್ರೋಗ ಇರುವವರು ಇದರಿಂದ ಪ್ರತಿನಿತ್ಯ ಜ್ಯೂಸ್ ಮಾಡಿ ಕುಡಿಯುವುದರ ಮುಖಾಂತರ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸಬಹುದು.

ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ

ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ ಮತ್ತು ದೇಶದಲ್ಲಿನ ಇತೆರ ಸಂಶೋಧನ ಕೇಂದ್ರಗಳಲ್ಲಿ ಶಿಶುಗಳ ಮತ್ತು ಬೆಳೆಯುವ ಮಕ್ಕಳ ಪೌಷ್ಟಕತೆಯ ಆವಶ್ಯಕತೆಗಳನ್ನು ಕುರಿತು ಹಲವಾರು ಅಧ್ಯಯನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ತನಿಖೆಗಳ ಆಧಾರದ ಮೇಲೆ ಈ ಕೆಲಕಂಡ ಪ್ರೋಟೀನ್ ಮತ್ತು ಕ್ಯಾಲರಿಯ ಸೇವನೆಯನ್ನು ಸೂಚಿಸಲಾಗಿದೆ.

ನವಜಾತ ಶಿಶು

ನವಜಾತ ಶಿಶುಜೀವನದ ಮೊದಲನೆಯ ನಾಲ್ಕರಿಂದ ಆರು ತಿಂಗಳವರೆಗೆ ಶಿಶುವಿಗೆ ಬೇಕಾಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಸ್ತನ್ಯಪಾನ ನೀಡುತ್ತದೆ. ಈ ಸಮಯದಲ್ಲಿ ತಾಯಿಯ ಹಾಲಿನ ಆಧಾರದ ಮೇಲೆ ಮಗುವು ಉತ್ತಮ ರೀತಿಯಲ್ಲಿ ಬೆಳೆಯುತ್ತದೆ. ಆರು ತಿಂಗಳ ನಂತರವೂ ಶಿಶುವಿಗೆ ಮೊಲೆ ಹಾಲು ಲಭ್ಯವಾಗುತ್ತದೆ. ಆದರೆ ಇದು ಬೆಳೆಯುತ್ತಿರುವ ಶಿಶುವಿನ ಹೆಚ್ಚುತ್ತಿರುವ ಪೌಷ್ಟಿಕತೆಯ ಆವಶ್ಯಕತೆಗಳಿಗೆ ಸಾಕಾಗುವುದಿಲ್ಲ. ಹಾಗಾಗಿ ಪೌಷ್ಟಕಾಂಶಗಳ ಕೊರತೆಗಳನ್ನು ನೀಗಿಸಲು ಜೀವನದ ಈ ಅವಧಿಯಿಂದ ಪೂರಕ ಆಹಾರಗಳು ಶಿಶುವಿಗೆ ನೀಡಬೇಕಾಗುತ್ತದೆ. ಹೀಗಿದ್ದಲ್ಲಿ, ತಾಯಿ ಹಾಲಿಗೆ ಪೂರಕವಾಗಿ ಯಾವ ರೀತಿಗಳ ಆಹಾರಗಳನ್ನು ನೀಡಬೇಕು? ಮುಂದೆ ಬರುವ ಪುಟಗಳಲ್ಲಿ, ಈ ಆವಶ್ಯಕತೆಯನ್ನು ಪೂರೈಸಲು ಕೆಲವೊಂದು ಪಾಕಸೂತ್ರಗಳನ್ನು ಸೂಚಿಸಲಾಗಿದೆ. ಇವುಗಳನ್ನು ಸೂಚಿಸುವಾಗ ಕೆಳಕಂಡ ಅಂಶಗಳನ್ನು ಪರಿಗಣಿಸಲಾಗಿದೆ.

ಪಾಕಸೂತ್ರಗಳು ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಆಧರಿಸಿರಬೇಕು.

ಅಡುಗೆಯ ವಿಧಾನ ಸುಲಭವಾಗಿರಭೆಕು.

ವೆಚ್ಚವೂ ಕಡಿಮೆವಿರಬೇಕು.

ರುಚಿಯಲ್ಲಿ, ಸಾಂದ್ರತೆಯಲ್ಲಿ ಮತ್ತು ಪ್ರಮಾಣದಲ್ಲಿ ತಾಯಿ ಹಾಗೂ ಮಗುವಿಗೆ ಈ ಪಾಕಸೂತ್ರಗಳು ಒಪ್ಪುವಂತಾಗಿರಬೇಕು.

ಲಭ್ಯವಿರುವ ಎದೆಹಾಲಎದೆಹಾಲುದ ಜೊತೆ ಸೂಚಿಸಲಾಗಿರುವ ಪಾಕಸೂತ್ರಗಳು ಮಗುವಿಗೆ ಬೇಕಾಗಿರುವ ಕ್ಯಾಲರಿಗಳ, ಪ್ರೋಟೀನ್ ಗಳ ಮತ್ತು ಇತರೆ ಪೌಷ್ಟಿಕಾಂಶಗಳ ಆವಶ್ಯಕತೆಯನ್ನು ಪೂರೈಸಬಹುದಾಗಿದೆ.

ಶಾಲೆಗೆ ಹೊಗುವ ಮುಂಚಿನ ವಯಸ್ಸಿನ ಮಗು

ಸಾಮಾನ್ಯವಾಗಿ ಮಗು 1 ರಿಂದ 1 ½ ವರ್ಷವಾಗುವರೆಗೆ ಎದೆಹಾಲು ಎದೆಹಾಲು ಸಿಗದೆಯಿರಬಹುದು. ಅಂತಹ ಮಕ್ಕಳು ಇತರೆ ಆಹಾರಗಳ ಮೇಲೆ ಸಂಪೂರ್ಣವಾಗಿ ಅವಲಬಿಸಿರುವುದು . ಈ ವಯಸ್ಸಿನವರೆಗೆ ಮಗುವಿಗೆ ಕಡಿಯುವ ಹಲ್ಲುಗಳು ಬಂದು ವಯಸ್ಕರರು ತಿನ್ನುವ ಆಹಾರ ತಿನ್ನುವ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಗಳಿಸಿಕೊಂಡಿರುತ್ತವೆ. ಆದರೆ ವಯಸ್ಕರರ ಆಹಾರಗಳು ಸಾಮಾನ್ಯವಾಗಿ ಅಕ್ಕಿ, ಗೋಧಿ ಮತ್ತು ಇತರೆ ಧಾನ್ಯಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಪ್ರೋಟೀನ್ ಗಳು ಕಡಿಮೆ ಪ್ರಮಾಣದಲ್ಲಿದ್ದು, ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಗುವಿಗೆ ನೀಡಲಾಗುವುದು. ಅಸಂಗತವಾಗಿ ಇದೇ ಸಮಯದಲ್ಲಿ ಮಗುವಿಗೆ ಪ್ರೋಟೀನ್ ಮತ್ತು ಕ್ಯಾಲರಿಗಳನ್ನು ನೀಡುವ ಹೆಚ್ಚಿನ ಪೌಷ್ಟಿಕ ಆಹಾರಗಳು ಬಾಕಾಗುತ್ತವೆ. ಇವುಗಳನ್ನು ಒದಗಿಸದಿದ್ದಲ್ಲಿ, ತಕ್ಷಣವಾಗಿ ಮತ್ತು ಮುಂದಿನ ಜೀವನದಲ್ಲಿ ದುಷ್ಪರಿಣಾಮಗಳನ್ನು ಕಾಣಬಹುದು. ಇದನ್ನು ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆಯಲ್ಲಿ ನಡೆಸಿದ ಒಂದು ಪ್ರಯೋಗದಿಂದ ಸಾಬೀತಾಗಿದೆ. ಒಂದೇ ತಾಯಿಗೆ ಜನಿಸಿದ ಇಲಿಗಳ ಎರಡು ಗುಂಪುಗಳಿಗೆ ಬೇರೆ ಬೇರೆ ಆಹಾರಕ್ರಮಗಳನ್ನು ನೀಡಲಾಗಿತ್ತು. ಒಂದು ಗುಂಪಿಗೆ ಪೌಷ್ಟಿಕ ಆಹಾರವನ್ನು ನೀಡಲಾಯಿತು ಮತ್ತು ಇನ್ನೊಂದಿಗೆ ಪೌಷ್ಟಿಕಾಂಶವಿಲ್ಲದ ಅಹಾರ ನೀಡಲಾಯಿತು.. ನಾಲ್ಕು ವಾರಗಳ ನಂತರ, ಎರಡನೇ ಗುಂಪಿಗೂ ಪೌಷ್ಟಿಕ ಆಹಾರವನ್ನು ನೀಡಲಾಯಿತು. 1 ½ ಯಿಂದ 2 ವರ್ಷದ ವರೆಗೂ ತಕ್ಷಣ ನೀಡದ ಇಲಿಗಳು ಆ ಇಲಿಗಳ ಸಮಕ್ಕೆ ಬರಲಾಗಲಿಲ್ಲ. . ಮಾನವರಲ್ಲಿ, ಜೀವನ 3-4 ನೇ ವರ್ಷದ ವಯಸ್ಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಬೇಕಾಗುತ್ತದೆ.
ಹಾಗಾಗಿ, ಸಾಮಾನ್ಯ ಬೆಳವಣಿಗೆಗೆ ಒಂದು ಮಗುವಿಗೆ ಸಮರ್ಪಕ ಪೌಷ್ಟಿಕ ಆಹಾರ ನೀಡಬೇಕಾಗುತ್ತದೆ. ಇತ್ತೀಚಿನ ಪ್ರಯೋಗದಿಂದ ಮುಂಚಿನ ಜೀವನದಲ್ಲಿನ ಅಪೌಷ್ಟಿಕತೆಯೂ ದೈಹಿಕ ಬೆಳವಣಿಗೆಗೆ ಮಾತ್ರವಲ್ಲದೆ ಮಾನಸೀಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಶಾಲೆಗೆ ಹೋಗುವ ಮುಂಚಿತವಾದ ವಯಸ್ಸಿನಿಂದಲೇ, ಅಂದರೆ ಒಂದು ವರ್ಷದಿಂದಲೇ ಮಗುವಿಗೆ ಸೂಕ್ತ ಪೌಷ್ಟಿಕ ಆಹಾರ ನೀಡಬೇಕಾಗುತ್ತದೆ.

ಮುಂದಿನ ಪುಟಗಳಲ್ಲಿ ಶಾಲೆಗೆ ಹೋಗುವ ಮುಂಚಿತವಾದ ವಯಸ್ಸಿನ (1 ರಿಂದ 5 ವರ್ಷಗಳ ವಯಸ್ಸಿನ) ಮಕ್ಕಳಿಗೆ ಸೂಕ್ತವಾದ ಪಾಕಸೂತ್ರಗಳನ್ನು ಸೂಚಿಸಲಾಗಿದೆ. ಈ ಪಾಕಸೂತ್ರಗಳನ್ನು ಸೂಚಿಸುವ ವಿಧಾನ ಶಿಶುವಿನ ಆಹಾರ ತಯಾರಿಸುವ ವಿಧಾನಕ್ಕೆ ಸರಿಸಮಾನವಾಗಿದೆ.

ಪಾಕಸೂತ್ರಗಳನ್ನು ರಚನೆಯಲ್ಲಿ ನಿರ್ವಹಿಸಿದ ತತ್ವಗಳು

ಮೊದಲೆ ಸೂಚಿಸಿದಂತೆ, 6 ತಿಂಗಳಿಂದ 1 ವರ್ಷ ವರೆಗಿನ ಒಂದು ಶಿಶುವಿಗೆ ಪ್ರತಿನಿತ್ಯ 13 ಗ್ರಾಂ ಪ್ರೋಟೀನ್ ಮತ್ತು 800 ಕ್ಯಾಲರೀಗಳು ಬೇಕಾಗುತ್ತವೆ. ಲಭ್ಯವಿರುವ ಎದೆಹಾಲು ಸುಮಾರು 5 ಗ್ರಾಂ ಪ್ರೋಟೀನ್ ಮತ್ತು 300 ಕ್ಯಾಲರೀಗಳನ್ನು ನೀಡುತ್ತದೆ. ಸೂಚಿಸಲಾಗಿರುವ ಪಾಕಸೂತ್ರಗಳು ಉಳಿದ ಆವಶ್ಯಕತೆಗಳನ್ನು ಪೂರೈಸುತ್ತದೆ.

ಹಾಗೆಯೇ, ಶಾಲೆಗೆ ಹೋಗುವ ಮುಂಚಿತವಾದ ವಯಸ್ಸಿನ ಮಗುವಿಗೆ ಪ್ರತಿದಿನ 20 ಗ್ರಾಂ ಪ್ರೋಟೀನ್ ಮತ್ತು 800-1500 ಕ್ಯಾಲರೀಗಳು ಬೇಕಾಗುತ್ತವೆ. ಸೂಚಿಸಲಾಗಿರುವ ಪಾಕಸೂತ್ರಗಳು ಉಳಿದ ಪ್ರೋಟೀನಿನ ಮತ್ತು 1/3 ಕ್ಯಾಲರಿಗಳ ಆವಶ್ಯಕತೆಗಳನ್ನು ಪೂರೈಸುತ್ತದೆ.

ಹೆಚ್ಚಿನ ಪ್ರೋಟೀನ್ ಗೊತ್ತಿರುವಂತಹ ಪ್ರೋಟೀನ್ ಭರಿತ ಆಹಾರಗಳಾದ ಹಾಲು, ಮಾಂಸ, ಮೀನು ಮತ್ತು ಮೊಟ್ಟೆ ಅಥವ ಧಾನ್ಯ ಗಳಿಂದ ಮತ್ತು ಇತರೆ ಕಡಿಮೆ ವೆಚ್ಚದ ಆಹಾರಗಳಿಂದ ಪಡೆಯಬಹುದಾಗಿದೆ. ಈ ಕರಪತ್ರದ ಉದ್ದೇಶ ಕಡಿಮೆ ಬೆಲೆಯ ಪೂರಕ ಆಹಾರಗಳನ್ನು ಸೂಚಿಸುವುದಾಗಿದೆ , ಹೆಚ್ಚಿನ ಬೆಲೆಯ ಮಾಂಸ, ಮೀನು, ಮೊಟ್ಟೆ ಮತ್ತು ಹಾಲು ಇಲ್ಲಿ ಸೇರಿಸಿರುವುದಿಲ್ಲ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಪೌಷ್ಟಿಕಾಂಶಗಳನ್ನು ಸಾಮಾನ್ಯ ಧಾನ್ಯಗಳಿಂದ,ಒಣ ಹಣ್ಣು ಗಳಿಂದ ಮತ್ತು ಎ ಣ್ಣೆಕಾಳುಗಳಿಂದ ಪೂರೈಸಬಹುದಾಗಿದೆ. ಇವುಗಳು ನಮ್ಮ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಲ ಭ್ಯವಾಗುವ ಪದಾರ್ಥಗಳು.

ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಬಳಸಲಾಗುವ ಸಾಮಾನ್ಯ ಕಾಳುಗಳು ಮತ್ತು ಧಾನ್ಯಗಳೆಂದರೆ ಅಕ್ಕಿ, ಗೋಧಿ, ಜೋಳ, ಸಜ್ಜೆ , ಮುಸುಕಿನ ಜೋಳ, ಇತ್ಯಾದಿ. ಏಕಧಾನ್ಯಗಳು ಸಾಮಾನ್ಯವಾಗಿ ಪ್ರತಿ 100 ಗ್ರಾಂ ಗೆ 350 ಕ್ಯಾಲರಿಗಳನ್ನು ನೀಡುತ್ತವೆ. ಇವುಗಳು ಪ್ರೋಟೀನಿನ ಉತ್ತಮ ಮೂಲವಲ್ಲದಾಗಿದ್ದು, ಅಕ್ಕಿಯಲ್ಲಿ 77, ಗೋಧಿಯ ಸುಮಾರು 12% ವಾಗಿದೆ. ಕಾಳುಗಳ (ಜೋಳ, ರಾಗಿ ಮತ್ತು ಬಾಜರಾ) ಪ್ರೋಟೀನ್ ಸತ್ವ ಇದರ ಮಧ್ಯದಲ್ಲಿ ಬರುತ್ತದೆ. ದ್ವದಳಧಾನ್ಯಗಳು ಪ್ರೋಟೀನಿನ ಅತಿ ಸಮೃದ್ಧ ನೈಸರ್ಗಿಕ ಮೂಲ. ಇವುಗಳು ಏಕದಳಧಾನ್ಯದಿಂದ ಸುಮಾರು 22% - 25% ಹೆಚ್ಚಾಗಿ ಪ್ರೋಟೀನ್ ಹೊಂದಿದ್ದು, ಪ್ರತಿ 100 ಗ್ರಾಂಗೆ 350 ಕ್ಯಾಲರೀಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಉಪಯೋಗಿಸುವ ದ್ವಿದಳಧಾನ್ಯಗಳೆಂದರೆ ಕಡಲೆಬೇಳೆ, ಹೆಸರುಬೇಳೆ, ತೊಗರಿಬೇಳೆ, ಲೆಂಟಿಲ್, ಇತ್ಯಾದಿ.

ಎಣ್ಣೆ ಬೀಜಗಳಂದ ಎರಡು ಪಟ್ಟು ಲಾಭ. ಇವುಗಳಲ್ಲಿ ಹೆಚ್ಚಿನ ಎಣ್ಣೆ ಅಂಶವಿದ್ದು, ಪ್ರೋಟೀನಿನ ಸಮೃದ್ಧ ಸಮೃದ್ಧ ಮೂಲ ಮತ್ತು ಅತಿಯಾದ ಕ್ಯಾಲರೀಗಳನ್ನು ಹೊಂದಿರುತ್ತದೆ. ಕಡಲೆಎಣ್ಣೆ, ಎಳ್ಳಿನ ಎಣ್ಣೆ ಮತ್ತು ಹತ್ತಿ ಬೀಜದ ಎಣ್ಣೆಯಿಂದ ತಯಾರಿಸುವ ಆಹಾರಗಳು ಪ್ರೋಟೀನಿನ ಸಮೃದ್ಧ ಮೂಲವಾಗಿದ್ದು ಸುಮಾರು 50% ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಎಣ್ಣೆಯ ಆಹಾರವನ್ನು ತಿನ್ನಲು ಹೇಳಲಾಗುತ್ತಿದೆ.

ಬೆಳೆಯುತ್ತಿರುವ ಒಂದು ಮಗುವಿಗೆ ಪ್ರೋಟೀನುಗಳು ಮತ್ತು ಕ್ಯಾಲರೀಗಳಲ್ಲದೆ, ಕ್ಯಾಲ್ಸಿಯಂ ಮತ್ತು ಎ ಅನ್ನಾಂಗದಂತಹ ಇತರೆ ಪೌಷ್ಟಿಕಾಂಶಗಳು ಬೇಕಾಗುತ್ತವೆ. ಹಸಿರು ಎಲೆಗಳ ತರಕಾರಿಗಳ ಸೇವನೆ ಮತ್ತು ಕೆನೆ ಹಾಲು ಪುಡಿಯ ಬಳಕೆ ಈ ಆವಶ್ಯಕತೆಗಳನ್ನು ಪೂರೈಸುತ್ತದೆ. ಹಾಗಾಗಿ ಈ ಆಹಾರಗಳನ್ನು ಕೆಲವೊಂದು ತಯಾರಿಕೆಯಲ್ಲಿ ಬಳಸಲಾಗಿದೆ. ದೇಶದಲ್ಲಿ ಕೆನೆ ಹಾಲಿನ ಲಭ್ಯತೆ ಸೀಮಿತವಾಗಿದ್ದು, ಅದನ್ನು ಬಳಸದ ಪಾಕಸೂತ್ರಗಳನ್ನು ಕೂಡ ಸೂಚಿಸಲಾಗಿದೆ.

ಕ್ರಮ ಸಂಖ್ಯೆ

ವಯಸ್ಸಿನ ಗುಂಪು

ನಿರೀಕ್ಷತ ದೇಹದ ತೂಕ
(ಅಂದಾಜು) ಕೆ.ಜಿ

ಕ್ಯಾಲರೀಗಳು
ಕೆ.ಸಿ.ಎ.ಎಲ್ ಗಳು

ಪ್ರೋಟೀನ್ ಗ್ರಾಂಗಳು

1.

ಹುಟ್ಟಿನಿಂದ 6 ತಿಂಗಳ ವರೆಗೆ

3-7

600

11

2.

6 ತಿಂಗಳಿಂದ 1 ವರ್ಷದ ವರೆಗೆ

7-9

800

13

3.

1-3 ವರ್ಷಗಳು

9-13

1200

18

4.

4-6 ವರ್ಷಗಳು

15-17

1500

22

5.

7-9 ವರ್ಷಗಳು

18-21

1800

33

6.

10-12 ವರ್ಷಗಳು

23-28

2100

41

ಮೂಲ:ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ, ಹೈದರಾಬಾದ್

2.96428571429
Ranjith kumar Jul 06, 2017 03:21 PM

ತುಂಬಾ ಉಪಯುಕ್ತ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top