ಎಲ್ಲಾ ಸಮಯದಲ್ಲಿ ಇಷ್ಟವಾಗುವ ಮತ್ತು ಸುಲಭ ಬೆಲೆಯಲ್ಲಿ ಸಿಗುವ ಹಣ್ಣು
ನೂರಾರು ವರ್ಷಗಳಿಂದ ಬಾಳೆಹಣ್ಣು ಎಲ್ಲಾ ಕಾಲದಲ್ಲಿ ಸಿಗುವ ಹಣ್ಣಾಗಿದೆ. ಇದು ಹಲವಾರು ರೋಗ ನಿವಾರಕ ಶಕ್ತಿಗಳನ್ನು ಹೊಂದಿದೆ. ಈ ಹಣ್ಣು ಕೈಗೆಟಕುವ ಬೆಲೆಯಲ್ಲಿ ಹೆಚ್ಚನ ಪ್ರಮಾಣದಲ್ಲಿ ಸಿಗುತ್ತದೆ. ಎಲ್ಲಾ ವಿಧದ ಬಾಳೆಹಣ್ಣುಗಳು ಅವರದ್ದೇ ಆದ ರೀತಿಯಲ್ಲಿ ಉಪಯೋಗಕಾರಿ. ಬಾಳೆಹಣ್ಣು ಸೂಕ್ತ ಪ್ರಮಾಣದಲ್ಲಿ ಶಕ್ತಿಯನ್ನು ನೀಡುವುದಲ್ಲದೆ ನಾರು ಅಂಶಗಳನ್ನು ಹೊಂದಿರುತ್ತದೆ. ಇದು ಸುಕ್ರೋಸ್, ಫ್ರುಟೋಸ್ ಮತ್ತು ಗ್ಲೂಕೋಸ್ ನಂತಹ ನೈಸರ್ಗಿಕ ಸಿಹಿಯನ್ನು ಹೊಂದಿರುತ್ತದೆ.
ಬಾಳೆ ಹಣ್ಣಿನಿಂದ ಸಾಕಷ್ಟು ಖಾಯಿಲೆಗಳ ನಿವಾರಣೆ ಅಥವ ತಡೆಗಟ್ಟುವಿಕೆ ಸಾಧ್ಯ.
ಖಿನ್ನತೆ : ಬಾಳೆಹಣ್ಣು ಒಂದು ತರಹದ ಪ್ರೋಟೀನನ್ನು ಹೊಂದಿದ್ದು ನಮ್ಮ ದೇಹವನ್ನು ಸಿರೊಟೋನಿನ್ ನಲ್ಲಿ ಪರಿವರ್ತಿಸುತ್ತದೆ. ಇದರಿಂದ ಜನರು ಖುಷಿಯಾಗಿ ಸಡಲಗೊಳ್ಳುತ್ತಾರೆ.
ಮುಟ್ಟಿನ ಮುಂಚಿನ ಸಹಜ ಲಕ್ಷಣಗಳು ಬಾಳೆಹಣ್ಣಿನಲ್ಲಿರುವ ಬಿ 6 ಅನ್ನಾಂಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತಗೊಳಿಸುತ್ತದೆ. ಇದರಿಂದ ಒಬ್ಬರ ಚಿತ್ತಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ರಕ್ತಹೀನತೆ ಕಬ್ಬಿಣಾಂಶ ಹೆಚ್ಚಾಗಿದ್ದು, ಬಾಳೆಹಣ್ಣಿನಿಂದ ರಕ್ತದಲ್ಲಿ ಹಿಮೊಗ್ಲೋಬಿನ್ ಉತ್ಪನ್ನವೂ ಉತ್ತೇಜಿತವಾಗುತ್ತದೆ ಮತ್ತು ರಕ್ತಹೀನತೆ ಸಂದರ್ಭದಲ್ಲಿ ಸಹಾಯವಾಗುತ್ತದೆ.
ರಕ್ತದ ಒತ್ತಡ: ಬಾಳೆಹಣ್ಣಿನಲ್ಲಿ ಅತಿಯಾದ ಪೊಟ್ಯಾಶಿಯಂ ಹೊಂದಿದ್ದು ಕಡಿಮೆ ಉಪ್ಪು ಪಡೆದಿದೆ. ಹಾಗಾಗಿ ರಕ್ತದ ಒತ್ತಡವನ್ನು ನೀಗಿಸಲು ಉತ್ತಮ ಆಹಾರಕ್ರಮ.
ಮೆದುಳಿನ ಶಕ್ತಿ ಪೊಟ್ಯಾಶಿಯಂ ಹೊಂದಿರುವ ಹಣ್ಣುಗಳಿಂದ ಜನರು ಜಾಗರೂಕರಾಗಿ ಕಲಿಯುತ್ತಾರೆಂದು ಸಂಶೋಧನೆ ಸಾಬಿತು ಪಡೆಸಿದೆ.
ಮಲಬದ್ಧತೆ:ಬಾಳೆಹಣ್ಣಿನಲ್ಲಿರುವ ಹೆಚ್ಚಾದ ನಾರಿನಾಂಶ ಕರುಳಿನ ಕ್ರಿಯೆ ಸಮಾನ್ಯಗೊಳಿಸಿ ಮಲಬದ್ಧತೆಯನ್ನು ನಿವಾರಿಸಲು ಸಹಾಯಕಾರಿಯಾಗುತ್ತದೆ.
ಎದೆಯುರಿ: ಬಾಳೆಹಣ್ಣಿನಲ್ಲಿ ದೇಹದಲ್ಲಿ ನೈಸರ್ಗಿಕ ಆಂಟಿಆಸಿಡ್ ಪರಿಣಾಮ ಹೊಂದಿದ್ದು, ಎದೆಯುರಿ ನಿವಾರಿಸುತ್ತದೆ.
ಹುಣ್ಣುಗಳು: ಬಾಳೆಹಣ್ಣು ಮೃದುವಾಗಿರುವುದರಿಂ ಕರುಳಿನ ತೊಂದರೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರ.
ಹೃದಯಾಘಾತಗಳು: ಬಾಳೆಹಣ್ಣುಗಳನ್ನು ನಮ್ಮ ನಿಯಮಿತ ಆಹಾರಕ್ತಮವಾಗಿ ಬಳಸಿದರೆ ಹೃದಯಾಘಾತದಿಂದಾಗು ಸಾವಿನ ಅಪಾಯದಲ್ಲಿ 40% ರಷ್ಟು ಕಡಿತಗೊಳಿಸುತ್ತದೆ.
ಓಟ್ಸ್
ಓಟ್ಸ್ ಮೇದಸ್ಸು ಮತ್ತು ಉಪ್ಪು ಕಡಿಮೆಪ್ರಮಾಣದಲ್ಲಿ ಹೊಂದಿರುತ್ತದೆ. ಇವುಗಳು ನೈಸರ್ಗಿಕ ಕಬ್ಬಿಣಾಂಶದ ಉತ್ತಮ ಮೂಲ. ಇವುಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಹೃದಯಕ್ಕೆ, ಮೂಳೆಗಳಿಗೆ ಮತ್ತು ಉಗುರುಗಳಿಗೆ ಒಳ್ಳೆಯದ್ದು.
ಇದು ಕರಗುವ ನಾರಿನಾಂಶದ ಉತ್ತಮ ಮೂಲ. ಒಂದು ಓಟ್ಸ್ನ ಬಡಸು (ಬೇಯಿಸಿದ ಅರ್ಧ ಬಟ್ಟಲು) ಸುಮಾರು 4 ಗ್ರಾಂರಷ್ಟು ಬೇಟಾಗ್ಲೂಕಾನ್ (ನಾರನ್ನು ಕರಗಿಸುವ ಅಂಶ) ಹೊಂದಿರುತ್ತದೆ. ಈ ನಾರಿನಾಂಶವು ರಕ್ತದಲ್ಲಿನ ಎಲ್.ಡಿ.ಎಲ್ ಕೊಲೆಸ್ಟ್ರಾಲ್ ನಲ್ಲಿ ಕಡಿತಗೊಳಿಸುತ್ತದೆ. ಹಾಗಾಗಿ ಇದಕ್ಕೆ “ಬ್ಯಾಡ್ (ಕೆಟ್ಟ)” ಕೊಲೆಸ್ಟ್ರಾಲ್ ಎಂದು ಪರಿಗಣಿಸುತ್ತಾರೆ.
ಓಟ್ಸ್ ನಮ್ಮ ದೇಹದಲ್ಲಿನ ಅತಿರಿಕ್ತ ಕೊಬ್ಬನ್ನು ಹೀರುತ್ತದೆ ಮತ್ತು ದೇಹದ ವ್ಯವಸ್ಥೆಯಿಂದ ಹೊರಹಾಕುತ್ತದೆ. ಹಾಗಾಗಿ ಇದನ್ನು ಮಲಬದ್ಧತೆಯನ್ನು ನಿವಾರಿಸಲು ಬಳಸುತ್ತಾರೆ.
ಓಟ್ಸ್ ಭರಿತ ಆಹಾರಕ್ರಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯಕಾರಿಯಾಗುತ್ತದೆ.
ಓಟ್ಸ್ ನರಗಳ ಖಾಯಿಲೆಗಳ ನಿವಾರಣೆಯಲ್ಲಿ ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಶುರುವಿನಿಂದಾಗುವ ಅಂಡಾಶಯದ ಮತ್ತು ಗರ್ಭಾಶಯದ ತೊಂದರೆಗಳನ್ನು ವಿನಿಮಯಿಸುತ್ತದೆ.ಓಟ್ಸ್ ನಲ್ಲಿ ಕೆಲ ಅಸಾಮಾನ್ಯ ಫ್ಯಾಟಿ ಆಸಿಡ್ಸ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಹೊಂದಿರುತ್ತದೆ. ಇವುಗಳು ಈ ಅನ್ನಾಂಗದ ಜೊತೆ ಜೀವಕೋಶದ ಹಾನಿಯನ್ನು ನಿಧಾನಿಸಿ ಕ್ಯಾಂಸರ್ ನ ಅಪಾಯ ಕಡಿಮೆಗೊಳಿಸುತ್ತದೆ.