ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಪೌಷ್ಟಿಕತೆ / ಆಹಾರಕ್ರಮದ ಗುರಿಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರಕ್ರಮದ ಗುರಿಗಳು

ಸಕಾರಾತ್ಮಕ ಆರೋಗ್ಯವನ್ನು ಹೊಂದಿರಿ ಮತ್ತು ಬಹುತೇಕ ಜನರಿಗೆ ಅನುಕೂಲವಾಗುವಂತೆ ನಿಮ್ಮ ಆಹಾರ ಕ್ರಮವಿರಲಿ

ಆಹಾರಕ್ರಮದ ಗುರಿಗಳು

 1. ಸಕಾರಾತ್ಮಕ ಆರೋಗ್ಯವನ್ನು ಹೊಂದಿರಿ ಮತ್ತು ಬಹುತೇಕ ಜನರಿಗೆ ಅನುಕೂಲವಾಗುವಂತೆ ನಿಮ್ಮ ಆಹಾರ ಕ್ರಮವಿರಲಿ.
 2. ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಸಮರ್ಪಕ ಪೌಷ್ಟಿಕತೆಯ ಪ್ರಮಾಣ ದೊರಕಲಿ. ಮಗುವಿನ ಜನನ ತೂಕ ಉತ್ತಮಗೊಳಿಸಿರಿ ಮತ್ತು ಶಿಶುವಿನ ಬೆಳವಣಿಗೆಯನ್ನುಪ್ರಚೋದಿಸಿರಿ. ಮಕ್ಕಳು ಮತ್ತು ಪ್ರಾಯದವರು ತಮ್ಮ ಸಂಪೂರ್ಣ ಹುಟ್ಟಿನ ಸಾಮರ್ಥ್ಯ ಪಡೆಯಬೇಕು.
 3. ಎಲ್ಲಾ ಸಮಪ್ಕ ಪೌಷ್ಟಿಕಾಂಶಗಳ ಹೊಂದಿರಿ ಮತ್ತು ಕೊರತೆಗಳಿಂದಾಗುವ ಖಾಯಿಲೆಗಳನ್ನು ತಡೆಯಿರಿ.
 4. ಹಿರಿಯರ ಆರೋಗ್ಯ ನಿರ್ವಹಿಸಿ. ಮತ್ತು ಅವರ ಜೀವನಾವಧಿ ಹೆಚ್ಚಿಸಿ.

ಜೀವನದ ವಿವಿಧ ಹಂತಗಳಲ್ಲಿ ಆಹಾರಕ್ರಮ ಪ್ರಮುಖ್ಯತೆ

ಹಿರಿಯ ನಾಗರೀಕರು : ದೈಹಿಕವಾಗಿ ಕ್ರಿಯಾಶಿಲ ಮತ್ತು ಆರೋಗ್ಯವಂತರಾಗಿರಲು.ಪೌಷ್ಟಿಕ, ಹಾಗೂ ಕಡಿಮೆ ಮೇದಸ್ಸು ಹೊಂದಿರುವ ಆಹಾರವನ್ನು ಸೇವಿಸಬೇಕು

ಗರ್ಭಾವಸ್ಥೆ ಉತ್ಪಾದನಾ ಆರೋಗ್ಯವನ್ನು ಕಾಪಾಡಿಕೊಳ್ಳಲು, ತ್ತು ಆಹಾರಕ್ರಮಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ತಡೆಗಟ್ಟಲು ಮತ್ತು ಗರ್ಭಾವಸ್ಥೆ ಮತ್ತು ಹಾಲುಣಿಸುವಿಕೆಯನ್ನು ಬೆಂಬಲಿಸಲು .ಸೂಕ್ತ ಪೌಷ್ಟಿಕ ಆಹಾರದ ಜೊತೆಗೆ ಮಗುವನ್ನು ಹೊಂದಲು ಹೆಚ್ಚಿನ ಪ್ರಮಾಣದ ಆಹಾರ .

ಹದಿಹರೆಯದವರು ತೀವ್ರ ಬೆಳವಣಿಗೆಗಾಗಿ , ಪ್ರೌಢತೆಗಾಗಿ ಮತ್ತು ಮೂಳೆಯ ಅಭಿವ್ರದ್ಧಿಗಾಗಿ. ದೇಹ ನಿರ್ಮಾಣಕ್ಕಾಗಿ ಮತ್ತು ಸುರಕ್ಷಿತ ಆಹಾರಗಳು.

ಮಗುವಿನ ವಯಸ್ಸಿನಲ್ಲಿ ಬೆಳವಣಿಗೆಗಾಗಿ, ಅಭಿವ್ರದ್ಧಿಗಾಗಿ ಮತ್ತು ಸೊಂಕುಗಳೊಂದಿಗೆ ಹೋರಾಡಲು. ಶಕ್ತಿ, ದೇಹ ನಿರ್ಮಾಣ ಮತ್ತು ಸುರಕ್ಷಿತ ಆಹಾರ.

ಶಿಶು ಬೆಳವಣಿಗೆಗಾಗಿ ಮತ್ತು ಸೂಕ್ತ ಮೈಲಿಗಲ್ಲುಗಳ ನಿರ್ಮಾಣಕ್ಕಾಗಿ . ಮೊಲೆ ಹಾಲು, ಶಕ್ತಿ ಭರಿತ ಆಹಾರಗಳು.

ಆಹಾರಕ್ರಮದ ಮಾರ್ಗಸೂಚಿಗಳು

 • ಹಲವು ಆಹಾರಗಳಲ್ಲಿ ಪೌಷ್ಟಿಕ ಮತ್ತು ಸಾಕಾಗುವಷ್ಟು ಆಹಾರ ಕ್ರಮವನ್ನು ವಿವೇಕದಿಂದ ಆರಿಸಿ ತಿನ್ನುವುದನ್ನು ಪಾಲಿಸಬೇಕು.
 • ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಹೆಚ್ಚಿನ ಆಹಾರ ಮತ್ತು ಅಧಿಕ ಆರೈಕೆ.
 • 4 ರಿಂದ 6 ತಿಂಗಳ ವರೆಗೆ ಮಗುವಿಗೆ ಕೇವಲ ಮೊಲೆ ಹಾಲನ್ನು ನೀಡಬೇಕು. ಸ್ತನ್ಯಪಾನ ಎರಡು ವರ್ಷದ ವರೆಗೆ ಮುಂದುವರೆಸಬಹುದು.
 • ಮಗುವಿಗೆ ಪೂರಕ ಆಹಾರಗಳನ್ನು 4 ರಿಂದ 6 ತಿಂಗಳ ಸಮಯದಲ್ಲಿ ಪರಿಚಯಿಸಬೇಕು.
 • ಆರೋಗ್ಯಕರ ಸ್ಥಿತಿಯಲ್ಲಿ ಮತ್ತು ಖಾಯಿಲೆಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರು ಸಾಕಷ್ಟು ಮತ್ತು ಸೂಕ್ತ ಆಹಾರಕ್ರಮವನ್ನು ಪಾಲಿಸಬೇಕು.
 • ಹಸಿರು ಸೊಪ್ಪು ಮತ್ತು ಇತರೆ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕು.
 • ಅಡುಗೆಯ ಎಣ್ಣೆಗಳು ಮತ್ತು ಪ್ರಾಣಿಜನ್ಯ ಆಹಾರಗಳು ಮಿತವಾಗಿ ಬಳಸಬೇಕು ಮತ್ತು ವನಸ್ಪತಿ / ತುಪ್ಪ / ಬೆಣ್ಣೆ ಆವಶ್ಯಕತೆವಿದ್ದಲ್ಲಿ ಮಾತ್ರ ಬಳಸಬೇಕು.
 • ಹೆಚ್ಚಾಗಿ ತಿನ್ನುವುದನ್ನು ನಿಯಂತ್ರಿಸಬೇಕು ಮತ್ತು ಅಧಿಕ ತೂಕ ಮತ್ತು ಬೊಜ್ಜುಮೈ ತಡೆಯಿರಿ. ಸೂಕ್ತ ದೇಹದ ತೂಕವನ್ನು ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಬಹಳ ಮುಖ್ಯ.
 • ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
 • ತಿನ್ನುವ ಆಹಾರ ಸುರಕ್ಷಿತ ಮತ್ತು ಸ್ವಚ್ಛವಾಗಿರಬೇಕು.
 • ಆರೋಗ್ಯಕರ ಮತ್ತು ಸಕಾರಾತ್ಮಕ ಆಹಾರ ಕಲ್ಪನೆ ಮತ್ತು ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.
 • ನೀರನ್ನು ಸೂಕ್ತ ಪ್ರಮಾಣದಲ್ಲಿ ಕುಡಿಯಬೇಕು ಮತ್ತು ಪಾನೀಯಗಳ ಸೇವನೆ ಮಿತಿಯಲ್ಲಿರಬೇಕು.
 • ಸಂಸ್ಕರಿತ ಮತ್ತು ತಿನ್ನಲು ಸಿದ್ಧವಿರುವ ಆಹಾರಗಳ ಆಯ್ಕೆ ಸೂಕ್ತವಾಗಿರಬೇಕು. ಸಕ್ಕರೆಯನ್ನು ಮಿತವಾಗಿ ಬಳಸಬೇಕು.
 • ಹಿರಿಯರು ಆರೋಗ್ಯಕರ ಮತ್ತು ಕ್ರಿಯಾಶೀಲಲಾಗಿರಲು ಪೌಷ್ಟಿಕ ಆಹಾರ ಮಾತ್ರ ತೆಗೆದುಕೊಳ್ಳಬೇಕು.

ಹಲವು ಆಹಾರಗಳಲ್ಲಿ ಪೌಷ್ಟಿಕ ಮತ್ತು ಸಾಕಾಗುವಷ್ಟು ಆಹಾರ ಕ್ರಮವನ್ನು ವಿವೇಕದಿಂದ ಆರಿಸಿ ಸೇವಿಸುವುದನ್ನು ಪಾಲಿಸಬೇಕು

 • ಜೀವನ ಸಾಗಿಸಲು ಬಹು ಮುಖ್ಯ ಆವಶ್ಯಕತೆ ಪೌಷ್ಟಿಕತೆಯದ್ದು.
 • ಆಹಾರಕ್ರಮದ ವೈವಿಧ್ಯತೆ ಕೇವಲ ಜೀವನದ ಸ್ವಾರಸ್ಯವಲ್ಲದೆ, ಪೋಷಣೆ ಮತ್ತು ಆರೋಗ್ಯದ ಮೂಲಸತ್ವವೂ ಅಹುದು. .
 • ಹಲವು ಆಹಾರ ಗುಂಪುಗಳೊನ್ನೊಳಗೊಂಡ ಆಹಾರಕ್ರಮ ಸೂಕ್ರ ಪ್ರಮಾಣದ ಪೋಷಣೆ ಪಡೆಯಲು ಆವಶ್ಯಕ.
 • ಏಕದಳಧಾನ್ಯಗಳು, ಕಾಳುಗಳು ಮತ್ತು ದ್ವಿದಳಧಾನ್ಯಗಳು ಹಲವಾರು ಪೌಷ್ಟಿಕಾಂಶಗಳ ಅತಿದೊಡ್ಡ ಮೂಲ.
 • ಹಾಲು ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ನೀಡುವುದರಿಂದ ಅದು ಆಹಾರಕ್ರಮದ ಭಾಗವಾಗಿರಬೇಕು. ಇದು ಮುಖ್ಯವಾಗಿ ಶಿಶುಗಳಿಗೆ, ಮಕ್ಕಳಿಗೆ ಮತ್ತು ಮಹಿಳಯರಿಗೆ ಅತ್ಯಾವಶಕ.
 • ಎಣ್ಣೆಗಳು ಮತ್ತು ಒಣ ಹಣ್ಣುಗಳು ಕ್ಯಾಲರಿಭರಿತ ಆಹಾರಗಳು ಮತ್ತು ಶಕ್ತಿಯ ಸಾಂದ್ರತೆ ಹೆಚ್ಚಿಸಲು ಉಪಯೊಗವಾಗುತ್ತದೆ.
 • ಮೊಟ್ಟೆ, ಮಾಂಸದ ಆಹಾರಗಳು ಮತ್ತು ಮೀನು ಆಹಾರಕ್ರಮದ ಗುಣಮಟ್ಟ ಉತ್ತಮಗೊಳಿಸುತ್ತದೆ. ಸಸ್ಯಾಹಾರಿಗಳು ಇದರಿಂದ ಸಿಗುವ ಸತ್ವಗಳನ್ನು ಏಕದಳಧಾನ್ಯ / ದ್ವಿದಳಧಾನ್ಯ / ಹಾಲನ್ನಾಧರಿಸಿದ ಆಹಾರಕ್ರಮಗಳಿಂದ ಪಡೆಯಬಹುದು.
 • ತರಕಾರಿಗಳು ಮತ್ತು ಹಣ್ಣುಗಳು ಸುರಕ್ಷಿತ ಅನ್ನಾಂಗಗಳು / ಖನಿಜಾಂಶಗಳನ್ನು ನೀಡುತ್ತದೆ.
 • ವಯಸ್ಸಿಗೆ, ಲಿಂಗಕ್ಕೆ, ದೈಹಿಕ ಸ್ಥಿತಿಗತಿಗೆ ಮತ್ತು ದೈಹಿಕ ಚಟುವಟಿಕೆಗಳಿಗುಣವಾಗಿ ಆಹಾರಕ್ರಮದ ವೈವಿಧ್ಯತೆ ಮತ್ತು ಪ್ರಮಾಣವನ್ನು ಆರಿಸಿಕೊಳ್ಳಿರಿ.
 • ಧಾನ್ಯಗಳ, ಬೇಳೆ ಕಾಳುಗಳ ಮತ್ತು ತರಕಾರಿಗಳ ಸೂಕ್ತ ಸಂಯೋಗವನ್ನು ಉಪಯೋಗಿಸಿರಿ. ಕ್ಯಾಲರೀ ಅಥವ ಶಕ್ತಿಯ ಕೊರತೆಯನ್ನು ನೀಗಿಸಲು ಬೆಲ್ಲ ಅಥವ ಸಕ್ಕರೆ ಮತ್ತು ಅಡುಗೆ ಎಣ್ಣೆಗಳ ಬಳಕೆ ಮಾಡಿರಿ.
 • ಹೆಚ್ಚನ ಪ್ರಮಾಣದಲ್ಲಿ ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ಉಪಯೋಗಿಸಿರಿ.
 • ಪ್ರಾಣಿ ಮೂಲದ ಆಹಾರಗಳಾದ ಹಾಲು, ಮೊಟ್ಟೆ ಮತ್ತು ಮಾಂಸ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ, ಮುಖ್ಯವಾಗಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ.
 • ವಯಸ್ಕರರು ಕಡಿಮೆ ಕೊಬ್ಬಿರುವ, ಪ್ರೋಟೀನ್ ಭರಿತ ಆಹಾರಗಳಾದ ತೆಳುವಾದ ಮಾಂಸ, ಮೀನು, ದಿದಳಧಾನ್ಯಗಳು ಮತ್ತು ಕೊಬ್ಬು ಕಡಿಮೆವಿರುವ ಹಾಲು.
 • ಆರೋಗ್ಯಕರ ತಿನ್ನುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಿರಿ ಮತ್ತು ಪ್ರತಿ ನಿತ್ಯ ವ್ಯಾಯಾಮ ಮಾಡಿರಿ.

ಮೂಲ:  ಪೋರ್ಟಲ್ ತಂಡ

2.98039215686
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top