ಧೂಮಪಾನ, ತಂಬಾಕು ಅಗೆಯುವುದು ಮತ್ತು ಮದ್ಯಪಾನವನ್ನು ತೊರೆಯಿರಿ.
30 ವರ್ಷ ವಯಸ್ಸಿನ ನಂತರ ರಕ್ತದಲ್ಲಿನ ಗ್ಲೂಕೋಸ್, ಮೇದಸ್ಸು ಮತ್ತು ರಕ್ತದ ಒತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿರಿ.
ಸ್ವ-ಔಷದೋಪಚಾರವನ್ನು ತೊರೆಯಿರಿ.
ಒತ್ತಡ ನಿರ್ವಹಣೆಯ ತಂತ್ರಗಳನ್ನು ರೂಢಿಸಿಕೊಳ್ಳಿರಿ (ಯೋಗ ಮತ್ತು ಧ್ಯಾನ).
ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಚುಚ್ಚುಮದ್ದನ್ನು ಹಾಕಿಸಿರಿ.
ಉಪ್ಪಿನ ಬಳಕೆ ಮಿತಿಯಾಗಿರಲಿ
ಸೋಡಿಯಂ ಅಧಿಕೃತ ಸೆಲ್ಯೂಲಾರ್ ದ್ರವದ ಮುಖ್ಯ ರಾಸಾಯನಿಕ ಪದಾರ್ಥ.
ಸೋಡಿಯಂ ದೇಹದಲ್ಲಿನ ನರಗಳ ಕಾರ್ಯದಲ್ಲಿ ಮತ್ತು ದ್ರವಗಳ ಸಮತೋಲನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಸೋಡಿಯಂನ ಸಮತೋಲನವನ್ನು ನಿರ್ವಹಿಸುವುದು ಮೂತ್ರಪಿಂಡದ ಕಾರ್ಯಚಟುವಟಿಕೆಯ ಆಧಾರದ ಮೇಲೆ.
ಉಪ್ಪಿನ ಹೆಚ್ಚಿನ ಪ್ರಮಾಣದಲ್ಲಿನ ಬಳಕೆ ಅತಿಯಾದ ರಕ್ತದ ಒತ್ತಡ ಮತ್ತು ಹೊಟ್ಟೆ ಕ್ಯಾನ್ಸರ್ಗೆ ಸಂಬಂಧಿಸಿದೆ
ಎಲ್ಲಾ ಆಹಾರಗಳು ಸೋಡಿಯಂ ಹೊಂದಿರುತ್ತವೆ. ಹಾಗಾಗಿ ಸೋಡಿಯಂನ ಆವಶ್ಯಕತೆಯನ್ನು ಮಿತವಾದ ಉಪ್ಪಿನ ಬಳಕೆಯಿಂದ ಪೂರೈಸಿಕೊಳ್ಳಬಹುದು.
ಸೋಡಿಯಂನ ಬಳಕೆಯು ಪೋಟ್ಯಾಶಿಯಂ ಬಳಕೆಯೊಂದಿಗೆ ಸಾಮ್ಯತೆವಿರಬೇಕು.
ಎಳೆ ವಯಸ್ಕರಾಗಿದ್ದಾಗಲೇಹೆಚ್ಚು ಉಪ್ಪು ಬಳಕೆಯನ್ನು ಸೀಮಿತಗೊಳಿಸಿರಿ.
ಕಡಿಮೆ ಉಪ್ಪಿನ ಪ್ರಮಾಣದಲ್ಲಿ ಆಹಾರಗಳಿಗೆ / ಆಹಾರಕ್ರಮಗಳಿಗೆ ರುಚಿಕರಗೊಳಿಸಿರಿ.
ಸಂರಕ್ಷಿಸಿದ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳಾದ ಹಪ್ಪಳ, ಉಪ್ಪಿನಕಾಯಿ, ಸಾಸ್, ಕೆಚಪ್, ಉಪ್ಪಿನ ಬಿಸ್ಕುತ್, ಚಿಪ್ಸ್, ಚೀಸ್ ಮತ್ತು ಮೀನಿನ ಬಳಕೆಯನ್ನು ಮಿತವಾಗಿಸಿರಿ.
ಸಮರ್ಪಕ ಪೋಟ್ಯಾಶಿಯಂ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.
ಅಯೋಡೈಸ್ಡ್ ಉಪ್ಪನ್ನು ಯಾವಾಗಲೂ ಬಳಸಿರಿ.
ಅಯೋಡೀನ್ ವುಳ್ಳ ಸಾಕಷ್ಟು ಆಹಾರಗಳನ್ನು ತಿನ್ನಿರಿ / ಅಯೋಡೈಸ್ಡ್ ಉಪ್ಪನ್ನು ಬಳಸಿರಿ
ಥೈರಾಡ್ ಹಾರ್ಮೋನ್ ಗಳ ರಚನೆಗಾಗಿ ಅಯೋಡಿನ್ ಬೇಕಾಗುತ್ತದೆ.
ಥೈರಾಡ್ ಹಾರ್ಮೋನ್ ಗಳು ಬೆಳವಣಿಗೆಗೆ ಮತ್ತು ಅಭಿವ್ರದ್ಧಿಗಾಗಿ ಬಾಕಾಗುತ್ತವೆ.
ಅಯೋಡೀನಿನ ಕೊರತೆಯಿಂದ ಗಾಯ್ಟರ್ (ಗಂಟಲುವಾಳು) ಬರುತ್ತದೆ (ಥೈರಾಡ್ ಗ್ರಂಥಿಯ ಊತ).
ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆ, ಅಯೋಡಿನ್ ಕೊರತೆಯಿಂದಾಗುವ ಖಾಯಿಲೆಗಳಿಗೆ ಮುಖ್ಯ ಕಾರಣ.
ಗರ್ಭಾವಸ್ಥೆಯಲ್ಲಿ ಅಯೋಡಿನ್ ಕೊರತೆಯಿಂದ ನಿರ್ಜೀವ ಮಗುವಿನ ಜನನ, ಗರ್ಭಪಾತ ಮತ್ತು ಕ್ರಟೀನ್ ರೋಗಕ್ಕೆ ಕಾರಣವಾಗುತ್ತದೆ.
ಅಯೋಡೈಸ್ಡ್ ಉಪ್ಪಿನ ಬಳಕೆಯಿಂದ ಸಮರ್ಪಕ ಅಯೋಡೀನಿನ ಸೇವನೆಯನ್ನು ಖಾತ್ರಿಪಡಿಸುತ್ತದೆ.
ತಿನ್ನುವ ಆಹಾರಗಳು ಸ್ವಚ್ಛ ಮತ್ತು ಸುರಕ್ಷಿತವಾಗಿರಬೇಕು
ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರವೂ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಅತ್ಯಾವಶಕ.
ಆಹಾರಗಳಲ್ಲಿ ನೈಸರ್ಗಿಕವಾಗಿ ಆಗುವ ಟಾಕ್ಸಿನ್ಸಗಳು (ಜೀವಾಣು ವಿಷ), ಕಲಬೆರಕೆಗಳು ಆರೋಗ್ಯಕ್ಕೆ ಸಮಸ್ಯೆಯಾಗಿದೆ.
ಅಸುರಕ್ಷಿತ ಆಹಾರಗಳ ಸೇವನೆಯುಖಾಯಿಲೆಗಳಿಗೆ ಕಾರಣವಾಗುತ್ತದೆ.
ಆಹಾರ ಪದಾರ್ಥಗಳನ್ನು ನಂಬಿಕಸ್ತ ಮೂಲದಿಂದ ಸೂಕ್ತ ಪರೀಕ್ಷೆ ನಂತರ ಖರೀದಿಸಿರಿ.
ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಉಪಯೋಗಿಸುವ ಮುನ್ನ ಸರಿಯಾರಗಿ ತೊಳೆಯಿರಿ.
ಹಸಿ ಮತ್ತು ಬೇಯಿಸಿದ ಆಹಾರವನ್ನು ಸರಿಯಾಗಿ ಸಂರಕ್ಷಿಸಿಮತ್ತು ಸೂಕ್ಷ್ಮಜೀವಿಗಳಮತ್ತು ನೊಣಗಳ ಹಾವಳಿಯನ್ನು ತಡೆಯಿರಿ.
ಕೊಳೆಯುವ ಆಹಾರ ಪದಾರ್ಥಗಳನ್ನು ತಿನ್ನುವವರೆಗೂ ಫ್ರಿಜ್ನಲ್ಲಿಡಿರಿ.
ಉತ್ತಮ ವೈಯಕ್ತಿಕ ಸ್ವಚ್ಛತೆಯನ್ನು ನಿರ್ವಹಿಸಿರಿ ಮತ್ತು ಅಡುಗೆಯ ಮತ್ತು ಆಹಾರ ಶೇಖರಣೆಯ ಜಾಗವನ್ನು ಸ್ಚಚ್ಛ ಮತ್ತು ಸುರಕ್ಷಿತವಾಗಿಡಿರಿ.
ಆರೋಗ್ಯಕರ ಮತ್ತು ಸಕಾರಾತ್ಮಕ ಆಹಾರದ ಪರಿಕಲ್ನೆ ಮತ್ತು ಅಡುಗೆಯ ರೂಢಿಗಳನ್ನು ಅಳವಡಿಸಿಕೊಳ್ಳಬೇಕು
ಆಹಾರಕ್ರಮದ ರೂಢಿಗಳಲ್ಲಿ ಸಾಂಸ್ಕೃತಿಕ ಅಂಶಗಳು ಬಹಳ ಮುಖ್ಯ ಪಾತ್ರವಹಿಸುತ್ತದೆ.
ಐಚ್ಛಿಕ ಆಹಾರ ನಂಬಿಕೆಗಳು ಮತ್ತು ಚಟಗಳು ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟು ಮಾಡುತ್ತವೆ.
ಆಹಾರಗಳ ಬೇಯಿಸುವಿಕೆಯಿಂದ ಅವುಗಳ ರುಚಿ ಹೆಚ್ಚಾಗುತ್ತದೆ ಮತ್ತು ಸುಲಭಾವಾಗಿ ಜೀರ್ಣವಾಗುತ್ತದೆ.
ಬೇಯಿಸುವುದರಿಂದ ಹಾನಿಕಾರಕ ಜೀವಾಣುಗಳು ನಾಶವಾಗುತ್ತದೆ
ತಪ್ಪಾಗಿ ಬೇಯಿಸುವ ಅಭ್ಯಾಸಗಳಿಂದ ಪೌಷ್ಟಿಕಾಂಶಗಳ ನಷ್ಟವಾಗುತ್ತದೆ.
ಹೆಚ್ಚಿನ ಕಾವಿನಲ್ಲಿ ಅಡುಗೆ ಮಾಡಿದಾಗ ಪೌಷ್ಟಿಕಾಂಶಗಳು ಹಾಳಾಗುತ್ತವೆ ಮತ್ತು ಹಾನಿಕರ ಸತ್ವಗಳ ರಚನೆಯಾಗುತ್ತದೆ.
ಉತ್ತಮ ಆಹಾರದ ಅಭ್ಯಾಸಗಳನ್ನು ಹೊಂದಿ ಮತ್ತು ಆಹಾರಕ್ಕೆ ಸಂಬಂಧಿಸಿದ ತಪ್ಪುಕಲ್ಪನೆಗಳನ್ನು ತೊರೆಯಿರಿ.
ಅಡುಗೆಯ ಮುನ್ನ ಆಹಾರ ಪದಾರ್ಥಗಳನ್ನು ಪದೇ ಪದೇ ತೊಳೆಯಬೇಡಿ.
ತರಕಾರಿಗಳನ್ನು ಕತ್ತರಿಸಿದ ನಂತರ ತೊಳೆಯಬೇಡಿ.
ಕತ್ತರಿಸಿದ ತರಕಾರಿಗಳನ್ನು ಹೆಚ್ಚಿನ ಸಮಯ ನೀರಿನಲ್ಲಿ ನೆನೆಸಬೇಡಿ.
ಅಡುಗೆಯ ನಂತರ ಹೆಚ್ಚಾಗಿ ಉಳಿದ ನೀರನ್ನು ಚೆಲ್ಲಬೇಡಿ.
ಮುಚ್ಚಳವಿರುವ ಪಾತ್ರೆಯಲ್ಲಿ ಅಡುಗೆ ಮಾಡಿರಿ.
ಹುರಿಯಲು / ಕರಿಯಲು ಪ್ರಜರ್ ಕುಕ್ಕರ್ / ಸ್ಟೀಮ್ ಅಡುಗೆ ಉಪಕರಣವನ್ನು ಬಳಸಿರಿ.
ಮೊಳಕೆ / ಕಿಣ್ವ ಆಹಾರಗಳ ಸೇವನೆಯನ್ನು ಪ್ರಚೋದಿಸಿರಿ.
ದವಸಧಾನ್ಯಗಳ ಮತ್ತು ತರಕಾರಿಗಳನ್ನು ಬೇಯಿಸಲುಅಡುಗೆಯಲ್ಲಿ ಸೋಡವನ್ನು ಬಳಸಬೇಡಿ.
ಉಳಿದಿರುವ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡದಿರಿ.
ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು ಮತ್ತು ಪಾನೀಯಗಳ ಸೇವನೆ ಮಿತವಾಗಿರಬೇಕು
ನೀರು ಮಾನವ ದೇಹದ ಪ್ರಮುಖ ಅಂಶ
ಪಾನೀಯಗಳು ದಾಹವನ್ನು ನೀಗಿಸಲು ಉಪಯುಕ್ತ ಮತ್ತು ಇವುಗಳಿಂದ ದೇಹಕ್ಕೆ ಬಾಕಾಗು ದ್ರವ್ಯಗಳ ಪೂರೈಕೆಯಾಗುತ್ತದೆ.
ಕೆಲವೊಂದು ಪಾನೀಯಗಳು ಪೌಷ್ಟಿಕಾಂಶಗಳನ್ನು ನೀಡುತ್ತವೆ ಮತ್ತು ಕೆಲವು ಉತ್ತೇಜನ ನೀಡುತ್ತವೆ.
ಹಾಲು ಪೌಷ್ಟಿಕಾಂಶಗಳ ಸಮೃದ್ಧ ಅತ್ಯತ್ತಮ ಮೂಲವಾಗಿದ್ದು, ಎಲ್ಲಾ ವಯಸ್ಸಿನ ವರ್ಗದವರಿಗೆ ಒಂದು ಅತ್ಯುತ್ತಮ ಪಾನೀಯ.
ದಿನನಿತ್ಯದ ದೇಹದ ದ್ರವ್ಯಗಳ ಪೂರೈಕೆಗಾಗಿ ಸಮರ್ಪಕ ಪ್ರಮಾಣದಲ್ಲಿ ಸುರಕ್ಷಿತವಾದ ನೀರನ್ನು ಕುಡಿಯಿರಿ.
ನೀರಿನ ಸುರಕ್ಷತೆ ಕುರಿತು ಅನುಮಾನವಿದ್ದಲ್ಲಿ ಕುದಿಸಿದ ನೀರನ್ನು ಕುಡಿಯಿರಿ.
ಪ್ರತಿ ದಿನ ಕನಿಷ್ಠ 250 ಮಿಲಿವೀಟರ್ ಕುದಿಸಿದ ಅಥವ ಪಾಶ್ಚರೀಕರಿಸಿದ ಹಾಲನ್ನು ಕುಡಿಯಿರಿ.
ಕಾರ್ಬೊನೇಟ್ ಮಡಿರುವ ಪಾನೀಯಗಳ ಬದಲು ನೈಸರ್ಗಿಕ ಮತ್ತು ತಾಜಾ ಹಣ್ಣಿನ ರಸವನ್ನು ಕುಡಿಯಿರಿ.
ಚಹಾ ಕಿಂತ ಕಾಫಿ ಕುಡಿಯುವುದು ಉತ್ತಮ.
ಮದ್ಯವನ್ನು ತೊರೆಯಿರಿ. ಇದನ್ನು ಸೇವಿಸುವವರು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿರಿ.
ಸಂಸ್ಕರಿಸದ ಮತ್ತು ತಿನ್ನಲು ಸಿದ್ಧವಾಗಿರುವ ಆಹಾರಗಳನ್ನು ವಿವೇಕದಿಂದ ಆರಿಸಿಕೊಳ್ಳಬೇಕು. ಸಕ್ಕರೆಯ ಬಳಕೆ ಮಿತವಾಗಿರಬೇಕು
ನಗರೀಕರಣದಿಂದಾಗಿ ಸಂಸ್ಕರಿತ ಆಹಾರಗಳ ಸೇವನೆ ಮತ್ತು ಬೇಡಿಕೆ ಹೆಚ್ಚಾಗಿದೆ.ಸಾಂಪ್ರದಾಯಿಕವಾಗಿ ಅಡುಗೆ ಮಾಡಲಾಗಿರುವ ಆಹಾರಗಳ ಸ್ಥಾನವನ್ನು ಸಂಸ್ಕರಿಸಿದ ಆಹಾರಗಳು ಆಕ್ರಮಿಸುತ್ತಿದೆ.ಸಂಸ್ಕರಿಸಿದ ಆಹಾರಗಳು ಸಾಕಷ್ಟು ಬಗೆಯ ಆಹಾರಗಳ ಸಂಕಲನ ಹೊಂದಿರುತ್ತವೆ.
ಪುಷ್ಟಿಗಳಿಸಿದ್ದಲ್ಲಿ, ಸಂಸ್ಕರಿಸಿದ ಆಹಾರಗಳು ಪೌಷ್ಟಿಕಾಂಶಯುಕ್ತವಾಗುತ್ತವೆ.ಸಕ್ಕರೆ ಒಂದು ಸಂಸ್ಕರಿಸಿದ ಆಹಾರವಾಗಿದ್ದು ನಿರುಪಯುಕ್ತ ಕ್ಯಾಲೊರಿಗಳನ್ನು ನೀಡುತ್ತದೆ..
ಸಾಂಪ್ರದಾಯಿಕ ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ.
ಊಟದ ಸಮಯದಲ್ಲಿ ಸಂಸ್ಕರಿಸಿದ ತಿಂಡಿಯನ್ನು ಕಡಿಮೆಗೊಳಿಸಿ.
ಸಕ್ಕರೆಯ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆ ಮಿತಿಗೊಳಿಸಿರಿ. ಇವುಗಳು ಕೇವಲ ನಿರುಪಯುಕ್ತ ಕ್ಯಾಲರಿಗಳನ್ನು ನೀಡುತ್ತವೆ.