ಒಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಅನ್ನುವುದು ನಮಗೆಲ್ಲಾ ಗೊತ್ತು. ಪ್ರತಿದಿನ ಸ್ವಲ್ಪ ಡ್ರೈ ಪ್ರೂಟ್ಸ್ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಆದ್ದರಿಂದ ಬೆಳೆಯುವ ಮಕ್ಕಳಿಗೆ ಡ್ರೈ ಪ್ರೂಟ್ಸ್ ಕೊಡುವುದರಿಂದ ಅಗತ್ಯದ ಪೋಷಕಾಂಶಗಳು ದೊರೆಯುತ್ತವೆ.
ಗರ್ಭಿಣಿಯರಿಗೆ ಪೋಷಕಾಂಶದ ಅವಶ್ಯಕತೆ ಹೆಚ್ಚಿರುವುದರಿಂದ ಪ್ರತಿದಿನ ಡ್ರೈ ಫ್ರೂಟ್ಸ್ ತಿಂದರೆ ತಾಯಿ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಡ್ರೈ ಫ್ರೂಟ್ಸ್ ನಲ್ಲಿ ತಾಜಾ ಹಣ್ಣಿನಲ್ಲಿರುವುದಕ್ಕಿಂತ ಕೆಲವು ವಿಶೇಷ ಗುಣಗಳಿರುತ್ತವೆ. ಉದಾಹರಣೆಗೆ ದ್ರಾಕ್ಷಿ, ದ್ರಾಕ್ಚಿ ಹಣ್ಣನ್ನು ತಿಂದರೆ ತೆಳ್ಳಗಾಗಬಹುದು. ಅದೇ ಒಣದ್ರಾಕ್ಚಿಯನ್ನು ನೆನೆ ಹಾಕಿ ತಿನ್ನುವುದರಿಂದ ತುಂಬಾ ತೆಳ್ಳಗಿದ್ದವರು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಇಲ್ಲಿ ನಾವು ಒಣ ಹಣ್ಣುಗಳಲ್ಲಿರುವ ಪೋಷಕಾಂಶದ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ಆಪ್ರಿಕಾಟ್ ನಲ್ಲಿ ನಾರಿನಂಶ, ವಿಟಮಿನ್ ಎ, ಸಿ, ರಂಜಕ, ಕಬ್ಬಿಣದಂಶ ಮತ್ತು antioxidants ಇವೆ. ಈ ಹಣ್ಣು ದೇಹದಲ್ಲಿ ಹೆಚ್ಚು ರಕ್ತ ಕಣಗಳನ್ನು ಉತ್ಪತ್ತಿ ಮಾಡುತ್ತವೆ. ರಕ್ತ ಹೀನತೆ ಇರುವವರು ಇದನ್ನು ಪ್ರತಿದಿನ ತಿನ್ನುವುದು ಒಳ್ಳೆಯದು.
ಅಂಜೂರ ಹಣ್ಣಿನಲ್ಲಿ ವಿಟಮಿನ್ ಕೆ, ಬಿ6, ಸಿ, ಇ, ಖನಿಜಾಂಶಗಳು, ರಂಜಕ ಇದ್ದು ಕ್ಯಾನ್ಸರ್, ಮಧುಮೇಹ ಬರದಂತೆ ತಡೆಯುತ್ತದೆ ಹಾಗೂ ನಮ್ಮ ದೇಹವನ್ನು ಸೋಂಕಾಣುಗಳಿಂದ ರಕ್ಷಣೆ ಮಾಡುತ್ತದೆ.
ಒಣ ಟೊಮಮೆದಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಂಶವಿರುವುದಿಲ್ಲ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕ್ಯಾನ್ಸರ್, ಮಧುಮೇಹ, ಹೃದಯ ಮತ್ತು ಶ್ವಾಸಕೋಶದ ಸಂಬಂಧಿ ರೋಗಗಳು ಬರದಂತೆ ತಡೆಯುತ್ತದೆ.
ಇದರಲ್ಲಿ ಸತು, ಕಬ್ಬಿಣದಂಶ, ಕ್ಯಾಲ್ಸಿಯಂ ಇದ್ದು ಕಿಡ್ನಿ, ಲಿವರ್ ಗೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ರಾನ್ ಬರ್ರಿ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ. ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಒಣ ಹಣ್ಣು ಹಲ್ಲುಗಳ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ.
ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಸ, ಮ್ಯಾಗ್ನಿಸೆ, ಸತು, ಫ್ಲೋರೈಡ್, ತಾಮ್ರದಂಶ, ಸತು ಈ ಎಲ್ಲಾಅಂಶಗಳಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯ, ನರ ಸಂಬಂಧಿ ರೋಗಗಳ ವಿರುದ್ಧ ಹೋರಾಡುತ್ತದೆ. ಅಲ್ಜೈಮರ್ಸ್ ವಿರುದ್ಧ ಹೋರಾಡುತ್ತದೆ.
ಇದರಲ್ಲಿ ನಾರಿನಂಶ ಮತ್ತು ಕಬ್ಬಿಣದಂಶ ಇವೆ. ಇದು ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ. ಹೃದ್ರೋಗ ಇರುವವರು ಇದರಿಂದ ಪ್ರತಿನಿತ್ಯ ಜ್ಯೂಸ್ ಮಾಡಿ ಕುಡಿಯುವುದರ ಮುಖಾಂತರ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸಬಹುದು.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 7/23/2020