অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಲು ಊತ

ಕಾಲು ಊತ ಮತ್ತು ಅದರ ಕಾರಣಗಳು

ದಿನವಿಡೀ ಕುಳಿತು/ ನಿಂತು ದುಡಿಯುವ ವರ್ಗದಲ್ಲಿ ದಿನಾಂತ್ಯಕ್ಕೆ ಕೆಲವರಿಗೆ ಕಾಲು ಊದಿ ಕೊಂಡಂತೆ ಕಾಣುವುದು ಸಾಮಾನ್ಯ. ಒಂದೇ ಕಡೆ ಬಹಳ ಹೊತ್ತು ಕುಳಿತು ಕೆಲಸ ಮಾಡುವುದರಿಂದ ಅಥವಾ ದೀರ್ಘಕಾಲ ನಿಂತು ಕೆಲಸ ಮಾಡುವುದರಿಂದ ಪಾದಗಳಲ್ಲಿ ರಕ್ತ ಪರಿಚಲನೆ ಏರುಪೇರಾಗುತ್ತದೆ. ಅಪಧಮನಿಗಳ ಮೂಲಕ ಹೃದಯಕ್ಕೆ ಹೋಗುವ ರಕ್ತದ ಗತಿ ಕಡಿಮೆಯಾಗಿ , ಮೊಣಕಾಲಿನಿಂದ ಕೆಳಗೆ ಊತ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಕಾಲು ಚಾಚಿ, ಇಲ್ಲವೇ ಪಾದಗಳನ್ನು ತಲೆಯ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿತ್ತು (ದಿಂಬು ಕೊಟ್ಟು) ಮಲಗುವುದರಿಂದ ಸಾಮಾನ್ಯವಾದ ಕಾಲು ಊತ ಬೆಳಗಿನ ಹೊತ್ತಿಗೆ ಮಾಯವಾಗಿ ಬಿಡುತ್ತದೆ . ಆದರೆ ಹೀಗಾಗದೆ , ಮಲಗಿ ಎದ್ದಾಗಲೂ ಯಾವುದೇ ಬದಲಾವಣೆ ಕಾಣದಿದ್ದರೆ ಮತ್ತು ಮುಂಜಾನೆ ಹೆಚಿದ್ದು ದಿನದ ಕೊನೆಗೆ ಕಡಿಮೆ ಯಾಗುತ್ತಿದೆ ಎನಿಸಿದರೆ ಕೂಡಲೇ ವೈದ್ಯರನ್ನು ಕಾಣಬೇಕು.

ಕಾಲು ಊತಕ್ಕೆ ಕಾರಣಗಳು

ಸಾಮಾನ್ಯ ಕಾರಣಗಳು

ಇದು ಯಾವುದೇ ಔಷದಗಳ ನೆರವಿಲ್ಲದೆ ಜೀವನ ಕ್ರಮದಲ್ಲಿನ ಕೆಲ ಬದಲಾವಣೆಗಳಿಂದ ಸರಿ ಹೋಗುತ್ತದೆ. ಅವುಗಳೆಂದರೆ:

  1. ಬಹಳ ಕಾಲ ಒಂದೇ ಕಡೆ ನಿಂತು/ಕುಳಿತು ಕೆಲಸ ಮಾಡುವವರು (ಗೃಹಿಣಿಯರು , ಸಾಫ್ಟ್ ವೇರ್ ಇನ್ನಿತರ ಉದ್ಯೋಗಿಗಳು)
  2. ಗರ್ಭಿಣಿಯರು: ದಿನೇ ದಿನೇ ಹಿಗ್ಗುವ ಗರ್ಭಕೋಶ ಹೊಟ್ಟೆಯ ಭಾಗದಲ್ಲಿರುವ ದೊಡ್ಡ ಅಪಧಮನಿಯ ಮೇಲೆ ಒತ್ತಡ ಹಾಕುವುದರಿಂದ ಹೃದಯಕ್ಕೆ ಕಾಲುಗಳಿಂದ ರಕ್ತ ಸಾಗುವುದು ನಿದಾನವಾಗಿ , ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಎಲ್ಲ ಗರ್ಭಿಣಿಯರಲ್ಲಿ ಸಾಮಾನ್ಯ . ಗರ್ಭಿಣಿಯರಲ್ಲಿ ಉಂಟಾಗುವ ಪ್ರೋಟೀನ್ ಕೊರತೆಯಿಂದಲೂ ಊಟ ಕಾಣಿಸಿ ಕೊಳ್ಳುತ್ತದೆ . ಬಿ . ಪಿ ಹೆಚ್ಚ್ಹಾದಾಗ ಸಹ ಕಾಲು ಮುಖ ಊದಿಕೊಲ್ಹುವುದರಿಂದ ವೈದ್ಯರನ್ನು ಸಂಪರ್ಕಿಸಿ, ಬಿ. ಪಿ ಇದೆಯೇ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಬೇಕು.
  3. ಅತಿಯಾದ ಬೊಜ್ಜಿನಿಂದಲೂ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.
  4. ದೀರ್ಘಕಾಲ ಸಂಪೂರ್ಣ ಪ್ರೋಟೀನ್ ನಿಶೀಧಿತ ಆಹಾರ ಸೇವಿಸುವುದರಿಂದ ದೇಹದಲ್ಲಿ ಪ್ರೋಟೀನ್ ಅಂಶದ ಕೊರತೆಯಾಗಿ ಕೈಕಾಲು ಮುಖ ಓದಿಕೊಲ್ಲುತ್ತವೆ.

ಅಂಗಾಂಗಗಳ ಕಾರ್ಯ ನಿರ್ವಹಣೆಯಲ್ಲಿ ಏರುಪೇರಾದಾಗ (ಈ ಸ್ಥಿತಿಗೆ ಔಷದೂಪಚಾರ ಬೇಕೇ ಬೇಕು)

  1. ಹೃದಯ ಕಾಯಿಲೆಗಳು : ಹಲವಾರು ಕಾರಣಗಳಿಂದ ಹೃದಯದ ಕಾರ್ಯ ನಿರ್ವಹಣೆ ಕಡಿಮೆಯಾದಾಗ ದೇಹದ ಭಾಗಗಳಲ್ಲಿ ವಿಶೇಷವಾಗಿ ಕಾಲುಗಳಲ್ಲಿ ನೀರು ಶೇಕರವಾಗಿ ಊತ ಕಾಣಿಸಿಕೊಳ್ಳುತ್ತಧೆ.
  2. ಮೂತ್ರಪಿಂಡ ವೈಫಲ್ಯ : ಹಲವು ಕಾಯಿಲೆಗಳಿಂದ ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾದಾಗ ಮೂತ್ರದಲ್ಲಿ ಪ್ರೋಟೀನ್ ಸೋರಿಹೋಗುತ್ತದೆ. ದೇಹದಲ್ಲಿ ಪ್ರೂಟೀನಿನ ಕೊರತೆಯಿಂದ ಕಾಲು - ಮುಖ ಊದಿಕೊತ್ತವೆ.
  3. ಯಕೃತ್ತಿಗೆ ಸಂಬಂದಪಟ್ಟ ಕಾಯಿಲೆಗಳು: ಯಕೃತ್ತು ನಮ್ಮ ರಕ್ತದಲ್ಲಿ ಸಂಚರಿಸುವ ಎಲ್ಲ ಪ್ರೂತೀನ್ಗಳ ಉತ್ಪತ್ತಿಗೆ ಕಾರಣವಾದ್ಧರಿಂದ ಅದಕ್ಕೆ ಬರುವ ಕಾಯಿಲೆಗಳಿಂದ ಪ್ರೋಟೀನ್ ಕೊರತೆಯಾಗಿ ದೇಹದ ಹಲವು ಭಾಗಗಳು ಊದಿಕೊಲ್ಲುಥ್ಹವೆ.
  4. ಧೀರ್ಘಕಾಲದ ರಕ್ಥ ಹೀನಥೆಯೂ ಕಾಲು ಮುಖ ಓದಿಕೊಳ್ಳಲು ಕಾರಣವಾಗುತ್ತದೆ.
  5. ಹಲವು ಕಾರಣಗಳಿಂದ (ನಾಳ ಮುಚ್ಚ್ಚಿ ಹೋಗುವುದು, ಕ್ಯಾನ್ಸೆರ್ ಗಡ್ಧೆಯಿಂದ ನಾಳದ ಮೇಲೆ ಒತ್ತಡ ಬೀಳುವುದು) , ಮ್ಹೀಧಸ್ಸು ನಾಳಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅದಕ್ಕೆ ಸಂಬಂದಪಟ್ಟ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.
  6. ಔಷಧಗಳು: ಕೆಲವು ಔಷಧಗಳ ಸೇವನೆಯಿಂದ ಮೂಥ್ರಪಿಂದ ಹಾಗು ಧಮನಿಗಳ ಕಾರ್ಯಕ್ಷಮತೆ ಕಡಿಮೆಯಾಗಿ ದೇಹದಲ್ಲಿ ನೀರು ಶೀಕರವಾಗಿ ಊತ ಕಾಣಿಸಿಕೊಳ್ಳುತ್ತದೆ .
  7. ನೆಗಡಿ / ಕೆಮ್ಮು / ಮೈ ಕೈ ನೋವಿಗೆ ಬಳಸುವ ಸಾಮಾನ್ಯ ನೋವು ನಿವಾರಕ ಮಾತ್ರೆಗಳು, ಹಾರ್ಮೋನುಗಳು ಇತ್ಯಾದಿ.
  8. ಥೈರೈಡ್ ಹಾರ್ಮೋನುಗಳು ಕಡಿಮೆಯಾದರೂ ದೇಹ ಊಧಿಕೊಳ್ಳುತ್ತದೆ .
  9. ಕೆಲವು ಬಗೆಯ ಅಲರ್ಜಿಗಲೂ ಕೈ ಕಾಲು ಮುಖ ವೂದಿಕೊಳ್ಳಲು ಕಾರಣವಾಗುತ್ತವೆ.
  10. ಮಹಿಳೆಯರು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವಾಗ ಸಹ ಕಾಲು ಮುಖ ವೂದಿಕೊಂದಂತೆ ಅನಿಸಬಹುದು.

ದಿನನಿತ್ಯ ಬಳಸುತ್ತ್ಹಿದ್ಧ ಚಪ್ಪಲಿ/ ಶೂ ಬಿಗಿಯಾದ ಹಾಗೆ ಅನಿಸಿದರೆ , ಬೆರಳಲ್ಲಿನ ಉಂಗುರ ತೀರ ಬಿಗಿ ಅನಿಸಿದರೆ ಕೈ ಕಾಲು ವೂದಿಕೊಂದಿರಬಹುದಾದ ಸಾಧ್ಯತೆ ಇರುತ್ತದೆ. ಹೀಗೆ ಅನುಮಾನವಿದ್ದಾಗ , ಹೆಬ್ಬರಳಿನ ಸಹಾಯದಿಂದ ಹಿಮ್ಮಡಿಗಿಂತ ಸ್ವಲ್ಪ ಮೇಲೆ ಇಪ್ಪತ್ತು ಸೆಕೆಂಡು ವತ್ತಿ ಹಿಡಿದು ಬಿಡಿ. ಬೆರಳು ತೆಗೆದಾಗ ವತ್ತಿದ ಜಾಗದಲ್ಲಿ ಗುಳಿ ಬಿದ್ದಿದ್ದರೆ ಕಾಲು ವೂದಿಕೊಂದಿರುವುದು ನಿಶ್ಚಿತ. ಪ್ರೋಟೀನ್ ಕೊರತೆಯಿಂದ ಬರುವ ಊತ ಸಾಮಾನ್ಯವಾಗಿ ಸಂಪೂರ್ಣ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಇದು ಬೆಳಗಿನ ಜಾವ ಹೆಚ್ಚಾಗಿದ್ದು ಸಂಜೆಗೆ ಕಡಿಮೆಯಾದಂತೆ ಅನಿಸುತ್ತದೆ. ಹೃದಯಕ್ಕೆ ಸಂಬಂದಪಟ್ಟ ಕಾಯಿಲೆಗಳಿಂದ ಕಾಣಿಸಿಕೊಳ್ಳುವ ಊತ ಸಾಮಾನ್ಯವಾಗಿ ಕಾಲುಗಳಿಗೆ ಸೀಮಿತವಾಗಿದ್ದು ಸಂಜೆಗೆ ಹೆಚ್ಚ್ಹಾಗುತ್ತಾ ಹೋಗುತ್ತದೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate