ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಖನಿಜ-–ಲವಣ

ದೇಹದಲ್ಲಿ ಅನೇಕ ತೆರನಾದ ಖನಿಜ ವಸ್ತುಗಳಿದ್ದು ಅವು ನಮ್ಮ ದೇಹ ರಚನೆಗೆ, ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಅತ್ಯಗತ್ಯ. ಅವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೇಸಿಯಂ, ಲೈಸಿನ್‌ ಪ್ರಮುಖವಾದವು:

ದೇಹದಲ್ಲಿ ಅನೇಕ ತೆರನಾದ ಖನಿಜ ವಸ್ತುಗಳಿದ್ದು ಅವು ನಮ್ಮ ದೇಹ ರಚನೆಗೆ, ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಅತ್ಯಗತ್ಯ. ಅವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೇಸಿಯಂ, ಲೈಸಿನ್‌ ಪ್ರಮುಖವಾದವು:

ಬೋರಾನ್‌
ಮೂಲ: ಸೇಬು, ಪಿಯರ್‌ ಕ್ಯಾರಟ್‌ನಲ್ಲಿ ಲಭ್ಯ.
ಉಪಯೋಗ: ದೇಹದಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮ್ಯಾಗ್ನೀಸಿಯಂಗಳ ಉಪಯೋಗವನ್ನು ನಿಯಂತ್ರಿಸಲು ಅಗತ್ಯವಿದೆ.
ಬೋರಾನ್‌ ಕೊರತೆಯಿಂದಾಗಿ– ಗಡ್ಡೆಗಳು, ಗಂಟುಗಳು, ಉಂಟಾಗಲು ಸ್ವಲ್ಪಮಟ್ಟಿಗೆ ಕಾರಣವಾಗುತ್ತದೆ.

ಕ್ಯಾಲ್ಸಿಯಂ
ಮೂಲ: ಹಾಲು, ಹಾಲಿನ ಉತ್ಪನ್ನಗಳು, ಹಸಿರು ತರಕಾರಿಗಳು, ದಂಟು, ನುಗ್ಗೆ, ಮೆಂತ್ಯೆ ಸೊಪ್ಪು, ಮೂಲಂಗಿಎಲೆ, ಹೂಕೋಸು, ರಾಗಿ, ಮೀನು.
ಉಪಯೋಗ: ಮೂಳೆಗಳ ಮತ್ತು ಹಲ್ಲುಗಳ ಬೆಳವಣಿಗೆಗೆ ತೀರಾ ಅಗತ್ಯವಾಗಿದೆ. ರಕ್ತ ಹೆಪ್ಪುಗಟ್ಟಲು, ಜೀರ್ಣಕ್ರಿಯೆಯಲ್ಲಿ, ಕಿಣ್ವಗಳನ್ನು ಸ್ರವಿಸುವುದಕ್ಕೆ, ಹಾಗೂ ವಿಟೆಮಿನ್‌ ಎ,ಸಿ,ಡಿ ಮತ್ತು ರಂಜಕಗಳು ಸರಿಯಾಗಿ ದೇಹದಲ್ಲಿ ಉಪಯೋಗವಾಗಲು ಕ್ಯಾಲ್ಸಿಯಂ ಬೇಕು.
ಕ್ಯಾಲ್ಸಿಯಂ ಕೊರತೆಯಿಂದಾಗಿ: ನರದೌರ್ಬಲ್ಯ, ಮೂಳೆ ಸವೆತ, ಸುಲಭ ಮೂಳೆ ಮುರಿತ, ನಿದ್ರಾಹೀನತೆ ಮತ್ತು ಕಾಲಿನಲ್ಲಿ ಸೆಳೆತ ಉಂಟಾಗುತ್ತದೆ.

ಕ್ಲೋರಿನ್‌
(ನೈಸರ್ಗಿಕ ಸೋಂಕು ನಿವಾರಕ)
ಮೂಲ: ಬಾರ್ಲೀ, ಗೋಧಿ, ಬೇಳೆ ಕಾಳುಗಳು, ಹಸಿರುಸೊಪ್ಪು, ಕಲ್ಲಂಗಡಿಹಣ್ಣು, ಅನಾನಾಸ್‌.
ಉಪಯೋಗ: ಕುಡಿಯುವ ನೀರನ್ನು ಶುದ್ಧಗೊಳಿಸಲು ಕ್ಲೋರಿನ್‌ ಬೇಕು. ರಕ್ತದಲ್ಲಿ ಆಮ್ಲ–ಕ್ಷಾರಗಳ ಸಮತೋಲನ ಸರಿಯಾಗಿ ನಿಯಂತ್ರಿಸಲು ಹಾಗೂ ನೀರಿನಂಶ ಮತ್ತು ಲವಣಾಂಶಗಳನ್ನು ಸಮತೋಲನದಲ್ಲಿಡಲು ಕ್ಲೋರೇಟ್‌ ಮಹತ್ವದ ಪಾತ್ರ ವಹಿಸುತ್ತದೆ.
ಕ್ಲೋರಿನ್‌ ಕೊರತೆಯಿಂದಾಗಿ: ಕೂದಲು ಉದುರುವಿಕೆ, ಅಜೀರ್ಣ, ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ.

ಮೆಗ್ನೀಸಿಯಂ
ಮದ್ಯವ್ಯಸನಿಗಳಿಗೆ ಹಿತಕಾರಿ
ಮೂಲ: ಇದು ಎಲ್ಲ ಹಸಿರು ತರಕಾರಿಗಳಲ್ಲಿರುವ ಪತ್ರ ಹರಿತ್‌ನಲ್ಲಿರುತ್ತದೆ.
ಉಪಯೋಗ: ಇದು ತಂಪಾದ ಕ್ಷಾರೀಯ ನಿದ್ರೆ ತರಿಸುವ ಖನಿಜಾಂಶ ಆಗಿದ್ದು, ದೇಹವನ್ನು ತಂಪಾಗಿಸಿರುತ್ತದೆ. ಇದು ಸುಲಭವಾಗಿ ಕೆಂಪು ರಕ್ತದಲ್ಲಿ ಸೇರಿಕೊಂಡು ರಕ್ತದಲ್ಲಿರುವ ವಿಷವಸ್ತುಗಳನ್ನು ಯಾವುದೇ ದುಷ್ಪರಿಣಾಮವಿಲ್ಲದೇ ಹೊರಹಾಕುತ್ತದೆ.

ಗಂಧಕ
ಇದು ದೇಹದ ಎಲ್ಲಾ ಊತಕಗಳಲ್ಲಿದೆ.
ಉಪಯೋಗ: ಮೃದ್ವಸ್ಥಿ, ಉಗುರು ಮತ್ತು ಕೂದಲು ರಚನೆಗೆ ಅವಶ್ಯಕ.

‘ಕ್ರೋಮಿಯಂ’
ಗ್ಲುಕೋಸ್‌ ನಿಯಂತ್ರಣಕ್ಕೆ ಸಹಾಯಕ
ಮೂಲ: ವೀಳ್ಯದೆಲೆ, ಅಡಿಕೆ ಮತ್ತು ಬೀಜಗಳು ಇತ್ಯಾದಿ, ಸಾಸಿವೆ, ಮಾವಿನಕಾಯಿ, ಸೋರೆಕಾಯಿ.
ಉಪಯೋಗ: ಕಾರ್ಬೋಹೈಡ್ರೇಟ್ ಮತ್ತು ಮೇದಸ್ಸು ದೇಹದಲ್ಲಿ ಉಪಯೋಗವಾಗುವ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸುಲಿನ್‌ ಹಾರ್ಮೋನ್‌ ಜೊತೆ ಸೇರಿ ಗ್ಲೂಕೋಸ್‌ ಅಂಶ ಜೀವಕೋಶಗಳಲ್ಲಿ ಸೇರುವುದಕ್ಕೆ ಹಾಗೂ ರಕ್ತದಲ್ಲಿ ಗ್ಲೂಕೋಸ್‌ ಅಂಶ ಏರದಂತೆ ತಡೆಯಲು ಸಹಾಯಕವಾಗಿದೆ. ಕ್ರೋಮಿಯಂ ಕೊರತೆಯಿಂದಾಗಿ– ಗ್ಲೂಕೋಸ್‌ನ ನಿಯಂತ್ರಣ ಸರಿಯಾಗಿ ಆಗದೆ ಸಕ್ಕರೆ ಕಾಯಿಲೆ ಉಂಟಾಗುತ್ತದೆ.

ತಾಮ್ರ
ಕಬ್ಬಿಣಾಂಶವನ್ನು ಹಿಮೋಗ್ಲೋಬಿನ್‌ ಆಗಿಸುತ್ತದೆ.
ಮೂಲ: ಮೃದ್ವಂಗಿಗಳು, ಕಪ್ಪೆಚಿಪ್ಪಿನ ಮಾಂಸ, ವೀಳ್ಯೆದೆಲೆ ಅಡಿಕೆ, ಸಿಹಿ ನೀರಿನಲ್ಲಿ ಹೆಚ್ಚಿನ ತಾಮ್ರವಿರುತ್ತದೆ.
ಉಪಯೋಗ: ಸಂಧಿವಾತದಲ್ಲಿ, ಕೂದಲು, ಚರ್ಮಗಳಿಗೆ ಬಣ್ಣ ನೀಡುವಲ್ಲಿ ಸಹಕರಿಸುತ್ತದೆ. ತಾಮ್ರದ ಚೊಂಬಿನಲ್ಲಿ ನೀರು ಕುಡಿಯುವುದರಿಂದ, ತಾಮ್ರದ ಉಂಗುರ, ಬಳೆ ಧರಿಸುವುದರಿಂದ ದೈಹಿಕ ಶಿಥಿಲತೆಗಳು ಕಡಿಮೆಯಾಗುತ್ತದೆ.
ತಾಮ್ರದ ಕೊರತೆಯಿಂದಾಗಿ: ಮಾನಸಿಕ ಬೆಳವಣಿಗೆ ಕುಂಠಿತ, ಶಿಥಿಲವಾದ ದೇಹ ರಚನೆಯೂ ಕಂಡು ಬರಬಹುದು.

ಫ್ಲೋರಿನ್‌
ಆರೋಗ್ಯಕರ ಹಲ್ಲುಗಳಿಗಾಗಿ
ಮೂಲ: ಕಡಲೆಕಾಳು, ಹಸಿರುಸೊಪ್ಪು, ಅಕ್ಕಿ ಹಾಗೂ ಒಣಗಿದ ಟೀ ಎಲೆಗಳಲ್ಲಿ ಲಭ್ಯವಿದೆ. ಮೀನು, ಒಣಗಿದ ಮಾಂಸಗಳಲ್ಲಿ ಲಭ್ಯವಿರುತ್ತದೆ.
ಉಪಯೋಗ: ಹಲ್ಲಿನ ಹುಳುಕನ್ನು ತಡೆಯುತ್ತದೆ, ಮೂಳೆಗಳಲ್ಲಿ ಹೆಚ್ಚು ಕ್ಯಾಲ್ಸಿಯಂ ಶೇಖರವಾಗದಂತೆ ತಡೆಯುತ್ತದೆ.
ಪ್ಲೋರಿನ್‌ ಕೊರತೆಯಿಂದಾಗಿ: ಹಲ್ಲು  ಹೊಳಪನ್ನು ಕಳೆದುಕೊಂಡು ಹಲ್ಲಿನ ಹೊರಗಿನ ಬಿಳಿಭಾಗ ಸಂಪೂರ್ಣ ತಿಂದು ಹೋದಂತೆ ಆಗುತ್ತದೆ.

ಆಯೋಡಿನ್‌
ಮೂಲ: ಸಮುದ್ರದಿಂದ ದೊರೆಯುವ ಆಹಾರ ವಸ್ತುಗಳು ಮತ್ತು ಪಾಲಕ್‌ ಸೊಪ್ಪು.
ಉಪಯೋಗ: ಥೈರಾಯಿಡ್‌ ಗ್ರಂಥಿಯಲ್ಲಿ ಹೆಚ್ಚಿನ ಸಂಗ್ರಹವಿರುವುದು, ಥೈರಾಕ್ಸಿನ್‌ ಹಾರ್ಮೋನ್‌್ಸನಲ್ಲಿ ಅಡಕವಾಗಿರುತ್ತದೆ.
ಆಯೋಡಿನ್‌ ಕೊರತೆಯಿಂದಾಗಿ: ಮಕ್ಕಳಲ್ಲಿ ಕ್ರೆಟಿನಿಸಮ್‌ ಎಂಬ ರೋಗ ಬರುತ್ತದೆ. ಆ ಮಗು ತುಂಬಾ ಕುಳ್ಳಗೆ, ಮಾಸಿಕವಾಗಿ ಕುಂಠಿತ ಬೆಳವಣಿಗೆ, ಥೈರಾಯಿಡ್‌ ಗ್ರಂಥಿ ಊದಿಕೊಂಡ ಚರ್ಮ ಒರಟಾಗುತ್ತದೆ. ಕೂದಲು ಉದುರುವುದು, ರಕ್ತಹೀನತೆ, ಬೊಜ್ಜು ಸೇರುವುದು.

ಕಬ್ಬಿಣ
ರಕ್ತದ ಪುಷ್ಟೀಕರಣ
ಮೂಲ: ಒಣದ್ರಾಕ್ಷಿ, ಖರ್ಜೂರ, ಹಸಿರು ತರಕಾರಿ, ಕಲ್ಲಂಗಡಿ, ಧಾನ್ಯಗಳು, ಬೇಳೆಕಾಳು ಮತ್ತು ಮೀನು.
ಉಪಯೋಗ: ಹಿಮೋಗ್ಲೋಬಿನ್‌ ಉತ್ಪತ್ತಿಗೆ ಮತ್ತು ನಮ್ಮ ದೇಹದ ಅಂಗಾಂಗಗಳಿಗೆ ಆಮ್ಲಜನಕ ನೀಡಿ ಬೇಡವಾದ ಕಾರ್ಬನ್‌–ಡೈ–ಆಕ್ಸೈಡ್‌ನ್ನು ಹೊರಹಾಕುತ್ತದೆ.
ಕಬ್ಬಿಣದ ಕೊರತೆಯಿಂದಾಗಿ: ರಕ್ತಹೀನತೆಕಂಡು ಬರುತ್ತದೆ. ಪರಿಣಾಮ ರೋಗ ನಿರೋಧಕ ಶಕ್ತಿ ಇಲ್ಲವಾಗುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ಸುಸ್ತು, ನಿಶ್ಯಕ್ತಿ ಉಂಟಾಗುತ್ತದೆ.

ರಂಜಕ
ದೇಹದ ಶಕ್ತಿವರ್ಧಕ
ಮೂಲ: ಇದು ಧಾನ್ಯಗಳು, ಹಾಲು ಮತ್ತು ಮೀನು, ಹಸಿರು, ಸೊಪ್ಪು, ಒಣದ್ರಾಕ್ಷಿ, ಕ್ಯಾರೆಟ್‌ಗಳಲ್ಲಿದೆ.
ಉಪಯೋಗ: ರಂಜಕ ಕ್ಯಾಲ್ಸಿಯಂ ಜೊತೆ ಸೇರಿಕೊಂಡು ನರಗಳ ಪೋಷಣೆ ಮಾಡುತ್ತದೆ. ಕೂದಲುಗಳ ಬೆಳವಣಿಗೆಗೆ ಸಹಕಾರಿ ಹಾಗೂ ನಿಶ್ಶಕ್ತಿಯನ್ನು ದೂರಗೊಳಿಸುತ್ತದೆ.

ನೀರು
ಉಪಯೋಗ: ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಪೋಷಕ ಅಂಶಗಳಲ್ಲಿ ನೀರು ಬಹುಮುಖ್ಯವಾದುದು. ಪಾನೀಯ ಮತ್ತು ಮೆದು/ಹಸಿ ಆಹಾರಗಳ ಮೂಲಕ ನೀರು ದೇಹ ಸೇರುತ್ತದೆ. ದೇಹಕ್ಕೆ 2–2.5 ಲೀ ನೀರು ಬೇಕು.

ಪೋಟಾಸಿಯಂ
ಅಸಿಡಾಸಿಸ್‌ ತಡೆಗಟ್ಟುತ್ತದೆ
ಮೂಲ: ಇದು ಹೆಸರುಕಾಳು, ಉದ್ದು, ತಾವರೆದಂಟು, ಹಸಿರುಸೊಪ್ಪು, ಬೇಲದ ಹಣ್ಣಿನಲ್ಲಿದೆ.
ಉಪಯೋಗ: ಇದು ಕ್ಷಾರೀಯ ಗುಣ ಹೊಂದಿದ್ದು ರಕ್ತ ಹಾಗೂ ಅಂಗಾಂಶಗಳ ಆಮ್ಲ–ಕ್ಷಾರಗಳ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೋಡಿಯಂ, ಪೊಟ್ಯಾಸಿಯಂ ಲವಣಗಳು ದೇಹಕ್ಕೆ ಅತ್ಯಾವಶ್ಯಕ.

ಸಲಹೆ ಮತ್ತು ಸೂಚನೆಗಳು
ನಮ್ಮ ದಿನನಿತ್ಯದ ಆಹಾರದಲ್ಲಿ ವಿಟೆಮಿನ್‌ಗಳು, ಖನಿಜಾಂಶಗಳು, ಪ್ರೋಟೀನ್‌ಗಳ ಮೂಲಾಧಾರವಾದ ಅಮಿನೋ ಆಮ್ಲಗಳು ಮತ್ತಿತರ ಪೋಷಕಾಂಶಗಳು ಅಡಗಿರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಅಲ್ಲಿ ದೊರೆಯುವ ಹಣ್ಣು ತರಕಾರಿ ಧಾನ್ಯಗಳನ್ನೊಳಗೊಂಡ ಆಹಾರ ಪದ್ಧತಿ ಪ್ರಚಲಿತದಲ್ಲಿರುತ್ತದೆ. ಉದಾಹರಣೆಗೆ, ದಕ್ಷಿಣ ಭಾರತೀಯರಿಗೆ ಅಕ್ಕಿ, ರಾಗಿ, ಜೋಳ, ನವಣೆ, ತೊಗರಿ, ಉದ್ದು, ಹುರಳಿ, ಕಡಲೆ, ಶೇಂಗಾ ಪ್ರಮುಖ ಧಾನ್ಯಗಳಾದರೆ, ಉತ್ತರಭಾರತದವರಿಗೆ ಗೋಧಿ, ಬಾರ್ಲಿ, ಎಲ್ಲಾ ದ್ವಿದಳ ಧಾನ್ಯಗಳು, ಸಿಹಿ ತಿನಿಸು ಅವರ ಆಹಾರದಲ್ಲಿ ಪ್ರಮುಖವಾಗಿರುತ್ತದೆ.

ಒಂದು ದಿನದ ಊಟದಲ್ಲಿ ಮೇಲ್ಕಂಡ ಎಲ್ಲಾ ಪೌಷ್ಠಿಕಾಂಶಗಳು ನಮಗೆ ದೊರೆಯಬೇಕಾದರೆ ಮಳೆಗಾಲ ಮತ್ತು ಚಳಿಗಾಲಕ್ಕೆ ಕಷಾಯಗಳು. ಬೇಸಿಗೆ ಕಾಲದಲ್ಲಿ ಸ್ವರಸ, ಹಣ್ಣಿನ ರಸ, ಮಜ್ಜಿಗೆ ಉಪಯೋಗಿಸಬೇಕು. ಆಯಾ ಕಾಲ­ದಲ್ಲಿ ಸಿಕ್ಕುವ ಹಸಿರೆಲೆ ತರಕಾರಿಗಳಲ್ಲಿ ವಿಟೆಮಿನ್‌ಗಳು ಪೂರೈಕೆಯಾಗುತ್ತದೆ.

* ಬೆಳಗಿನುಪಹಾರ– ಹಬೆಯಲ್ಲಿ ಬೇಯಿಸಿದ ಕಡುಬು, ರೊಟ್ಟಿ, ಚಪಾತಿ, ಚಟ್ನಿ, ಮೊಳಕೆ ಗೋಧಿ ಗಂಜಿ ಇತ್ಯಾದಿ.
* ಮಧ್ಯಾಹ್ನದ ಊಟಕ್ಕೆ–ಅನ್ನ, ಮುದ್ದೆ, ರೊಟ್ಟಿ, ಸಾಂಬಾರ, ತರಕಾರಿ, ಪಲ್ಲೆಗಳು, ಸಲಾಡ್‌, ಮೊಳಕೆ ಭರಿಸಿದ/ಭರಿಸದ ಬೇಳೆಗಳ ಕೋಸಂಬರಿ, ತಂಬುಳಿಗಳು ಇತ್ಯಾದಿ.
* ಸಂಜೆ ಹುಳಿ ಭರಿಸಿದ ಅಕ್ಕಿಯಿಂದ ತಯಾರಿಸಿದ ಹಪ್ಪಳ, ಕಷಾಯ ಅಥವಾ ಮೊಳಕೆ ಗೋಧಿ ಗಂಜಿ/ಸೂಪ್‌.
* ರಾತ್ರಿ ಊಟಕ್ಕೆ–ಚಪಾತಿ ಪಲ್ಯ, ಕೆಂಪಕ್ಕಿ ಅನ್ನ, ಗೊಜ್ಜು, ಹಸಿ ತರಕಾರಿ ಸಲಾಡ್‌.
* ತಾಂಬೂಲ ಸೇವನೆ– ವೀಳ್ಯದೆಲೆ+ಅಡಿಕೆ+ಸುಣ್ಣ, ಇದಕ್ಕೆ ಕಾಚು, ಏಲಕ್ಕಿ, ಲವಂಗ, ಒಣಕೊಬ್ಬರಿ, ಕಲ್ಲುಸಕ್ಕರೆ ಸೇರಿಸಿದಾಗ ಸಿಹಿ ತಾಂಬೂಲ/ಬೀಡಾ. ಒಟ್ಟಾರೆ ನಾವು ಸೇವಿಸುವ ಆಹಾರದಲ್ಲಿ ಷಡ್‌ರಸಗಳು ಪ್ರಮುಖ ಪಾತ್ರ ವಹಿಸುತ್ತವೆ.
ಸಿಹಿ: ಮಾಂಸಖಂಡಗಳ ವರ್ಧನೆಗೆ ಉದಾ: ಸಿಹಿ ಕುಂಬಳ, ಗೆಣಸು, ಸಿಹಿ ತಿನಿಸುಗಳು, ಹಣ್ಣುಗಳು.
ಖಾರ: ದೇಹದ ಉಷ್ಣಾಂಶದ ಸಮತೋಲನೆಗೆ, ಸರಿಯಾದ ರಕ್ತ ಪರಿಚಲನೆಗೆ ಉದಾ: ಹಸಿಮೆಣಸು, ಕಾಳು ಮೆಣಸು.
* ಹುಳಿ: ರಕ್ತ ಶೋಧನೆಗೆ ಮತ್ತು ರೋಗನಿರೋಧಕ ಉದಾ: ನಿಂಬೆಜಾತಿ ಹಣ್ಣು, ಹುಣಸೆ, ವಾಟೆ, ಬೆಟ್ಟದ ನೆಲ್ಲಿ.
ಉಪ್ಪು: ನೆನಪಿನ ಶಕ್ತಿ ಮತ್ತು ಥೈರಾಯಿಡ್‌ ಗ್ರಂಥಿಯ ಸಮರ್ಪಕ ಕಾರ್ಯಕ್ಕೆ. ಉದಾ: ಉಪ್ಪು, ಪಾಲಕಸೊಪ್ಪು.
ಒಗರು: ಬಿಳಿ ರಕ್ತಕಣಗಳ ವರ್ಧನೆಗೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ. ಉದಾ: ಅಗಸೆಸೊಪ್ಪು, ನುಗ್ಗೆಸೊಪ್ಪು, ಲೋಳೆಸರ.
ಕಹಿ: ರೋಗ ನಿರೋಧಕವಾಗಿ, ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ತಡೆಗೆ, ದೇಹದ ಭಾಗಗಳಲ್ಲಿ ಗಂಟುಗಳಾಗದಂತೆ ತಡೆಯುತ್ತದೆ. ಉದಾ: ಬೇವು, ಹಾಗಲ, ಮೆಂತ್ಯ.–ಸಿ.ವಿ.ಶೋಭಾ. (ಮಾಹಿತಿ–9448315578)

2.97272727273
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
ಸಂಬಂಧಿಸಿದ ವಿಷಯಗಳು
ಹೆಚ್ಚಿನವು ...
Back to top