অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಷ್ಟಿಕ ಮೌಲ್ಯ

ಜನಸಂಖ್ಯಾ ಸ್ಪೋಟ ಮತ್ತು ಆಹಾರದ ಬೇಡಿಕೆಗಳು ಯಾವಾಗಲೂ ಸಮಾನಾಂತರವಾಗಿಯೇ ಸಾಗುತ್ತಲಿವೆ. ಸಾಂಪ್ರದಾಯಿಕವಾಗಿ ನಾವು ಅನೇಕ ವಿಧದ ಒರಟುಧಾನ್ಯಗಳನ್ನು ಸೇವಿಸುತ್ತೇವೆ. ನಗರ ಜೀವನಶೈಲಿಯು ನಮ್ಮ ಆಹಾರಕ್ರಮದಿಂದ ಸಮತೋಲನ ಆಹಾರದಲ್ಲಿನ ಒರಟುಧಾನ್ಯಗಳನ್ನು ನಮ್ಮ ದೈನಂದಿನ ಆಹಾರದಿಂದ ಹೊರಗಿಡಲಾಗಿದೆ. ಒರಟು ಧಾನ್ಯಗಳ ಉಪಯುಕ್ತತೆಯ ಕ್ರಮವು ನಮ್ಮದೇಶದಲ್ಲಿನ ಕ್ಯಾಲೊರಿಗಳ ಅಗತ್ಯವನ್ನು ಪೂರೈಸಲು ಮಾರ್ಪಾಟುಮಾಡಲಾಗಿದೆ. ಒರಟುಧಾನ್ಯಗಳ ಉತ್ಪಾದನೆಯು ಹೆಚ್ಚಾಗಿದ್ದರೂ ಅವು ಇತರ ಬೇಳೆಕಾಳುಗಳ ಮಟ್ಟವನ್ನು ಇನ್ನೂ ಮುಟ್ಟಲಾಗಿಲ್ಲ. ಒರಟುಧಾನ್ಯಗಳು ಬಹು ಮೌಲ್ಯಯುತ ಸೂಕ್ಷ್ಮ ಮತ್ತು ಸ್ಥೂಲ ಪೌಷ್ಟಿಕಾಂಶಗಳನ್ನುಹೊಂದಿದ್ದರೂ ಅವು ಇನ್ನೂ ಅನಷಂಗಿಕ ಪ್ರಾಮುಖ್ಯತೆಯನ್ನೆ ಹೊಂದಿವೆ. ಭಾರತದಲ್ಲಿ ಒರಟು ಕಾಳುಗಳ ತಲಾ ಬಳಕೆಯು . ವಾರ್ಷಿಕ 44.6 ಕೆಜಿಯಿಂದ 1951-55 ಅವಧಿಯಲ್ಲಿ ಇದ್ದದ್ದು 1970-74 ರಲ್ಲಿ 38.5 ಕೆಜಿಗೆ ಇಳಿದಿದೆ. ಇತ್ತೀಚಿನ ರಾಷ್ಟ್ರೀಯ ಪೌಷ್ಟಿಕತೆ ಮೇಲ್ವಿಚಾರಣಾ ಮಂಡಳಿಯ ಪ್ರಕಾರ ರಾಗಿ, ಜೋಳ ಮತ್ತು ನವಣೆಯಂಥಹ ತೃಣ ಧಾನ್ಯಗಳ ಸರಾಸರಿ ಬಳಕೆಯು ಕಡಿಮೆಯಾದಂತೆ ತೋರಿದರೂ ಅದು ಶಿಫಾರ್ಸು ಮಾಡಿದ ಆಹಾರಕ್ರಮದ ಪರಿಮಿತಿಯಷ್ಟು ಇಲ್ಲವೆ ತುಸು ಹೆಚ್ಚೆ ಇದೆ..

ರಾಗಿ

ರಾಗಿಯು ಭಾರತೀಯ ಮೂಲದ್ದೆಂದು ಪರಿಗಣಿತವಾಗಿದೆ. ಇದು ಬಹು ವೈವಿಧ್ಯತೆಯುಳ್ಳ ತೃಣ ಧಾನ್ಯವಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ 344 ಮಿಗ್ರಾಂ/100ಗ್ರಾಂ ನಷ್ಟು ಹೆಚ್ಚಾಗಿದೆ. ಸೆಜ್ಜೆಯನ್ನು ಹೊರತುಪಡಿಸಿ ಇನ್ನು ಬೇರೆ ಯಾವುದೆ ತೃಣ ಧಾನ್ಯದಲ್ಲೂ ಈ ಪ್ರಮಾಣದ ಕ್ಯಾಲ್ಸಿಯಂ ಇಲ್ಲ. ಇದನ್ನು ಮಧಮೇಹ ರೋಗಿಗಳಿಗೆ ಉತ್ತಮ ಸತ್ವಭರಿತ ಆಹಾರ ಎನ್ನುವರು. ಸಾಂಪ್ರದಾಯಿಕವಾಗಿ ರಾಗಿಯನ್ನು ಗಂಜಿ ಅಥವಾ ಅಂಬಲಿಯ ರೂಪದಲ್ಲ್ಲಿನೀಡುವುದು ಶಿಶುಗಳಿಗೆ ತಾಯಿಯಹಾಲಿನ ಪರ್ಯಾಯವಾಗಿದೆ. ಈಗ ರಾಗಿಯ ಸೇವಿಗೆಯು ಮಾರುಕಟ್ಟೆಯಲ್ಲಿ ದಿಢೀರ್‌ ಆಹಾರವೆಂದು ಜನಪ್ರಿಯವಾಗಿದೆ

ನವಣೆ

ನವಣೆಯನ್ನು ಅನೇಕ ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುವರು.. 100ಗ್ರಾಂ. ಸೇವನೆಗೆ ಯೋಗ್ಯವಾದ ನವಣೆಯಲ್ಲ 11.6ಗ್ರಾಂಪ್ರೋಟೀನ್‌ 67.5ಗ್ರಾಂ.ಪಿಷ್ಟ , 8 ಮಿ ಗ್ರಾಂ ಕಬ್ಬಿಣದ ಅಂಶ ,ಮತ್ತು ಕಣ್ಣಿನ ಆರೋಗ್ಯಕ್ಕೆ ಅತಿಅಗತ್ಯವಾದ ಕೆರೋಟಿನ್‌ 132ಮಿ.ಗ್ರಾಂ. ಇರುವುದು ಅದರಲ್ಲಿನ ಅಪೌಷ್ಟಿಕ ಅಂಶಗಳಾದ ಪೈಟಿಕ್‌ ಅಮ್ಲ , ಪಾಲಿ ಫಿನಾಲ್‌ ಮತ್ತು ಅಮೆಲೈಜ್ ನಿರೋಧಕಗಳು ಇದ್ದರೂ ಅವುಗಳನ್ನು ನೀರಿನಲ್ಲ್ಲಿನೆನೆಸುವುದರಿಂದ ಮೊಳಕೆ ಕಟ್ಟುವುದರಿಂದ ಮತ್ತು ಇತರ ಪಾಕ ವಿಧಾನಗಳಿಂದ ಅಪೌಷ್ಟಿಕತೆ ಕಡಿಮೆ ಮಾಡಬಹುದು.ನವಣೆಯು ಅತಿ ಮುಖ್ಯವಾದ ಆಹಾರದ ಮೂಲವಾಗಿದೆ.; ಆಹಾರ, ಮೇವಿಗಾಗಿ ಭಾರತದಲ್ಲಿ ಇದನ್ನು ಬೆಳೆಯುವರು.

ಜೋಳ

ಜೋಳವು ನೈಜೀರಿಯಾದಲ್ಲಿ ಮುಖ್ಯವಾದ ಆಹಾರ ಬೆಳೆ.ಇತರ ಧಾನ್ಯಗಳಿಗಿಂತ ಜೋಳದ ಕೈಗಾರಿಕಾ ಉಪಯೋಗ ಬಹಳ ಹೆಚ್ಚು. ಇದನ್ನು ಅಲ್ಕೋಹಾಲಿಕ್‌ ಪಾನೀಯಗಳು,, ಬ್ರೆಡ್‌ ತಯಾರಿಕೆಯಲ್ಲಿ ಗೋಧಿಯ ಜೊತೆ ಸೇರಿಸಿ ಉಪಯೋಗಿಸುವರು. ವಾಣಿಜ್ಯ ಶಿಶು ಆಹಾರ ತಯಾರಿಕೆಗೆ ಇದನ್ನು ದ್ವಿದಳ ಧಾನ್ಯ(Cowpea) ಜೊತೆ ಮತ್ತು ಸೋಯಾ ಬೀನ್‌ ಜೊತೆ ಸೇರಿಸಿ ಬಳಸುವರು.ಇದರಲ್ಲಿ , 66.2 ಗ್ರಾಂ ಪಿಷ್ಟ 2.7ಗ್ರಾಂ ನಾರಿನ ಅಂಶದ ಜೊತೆಯಲ್ಲಿ ಇತರೆ ಸೂಕ್ಷ್ಮ ಪೌಷ್ಟಿಕಾಂಶಗಳು ಇರುವವು.

ಆಹಾರದಲ್ಲಿ ನಾರಿನ ಅಂಶದ ಪ್ರಾಮುಖ್ಯತೆ

ಆಹಾರದಲ್ಲಿರುವ ಸಸ್ಯಕೋಶದ ಭಾಗವೆ ನಾರು. ಆಹಾರದಲ್ಲಿನ ನಾರಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅಂಶಗಳು ಬಹಳ ಇವೆ. ಆಹಾರದಲ್ಲಿನ ನಾರಿಗೆ ನೀರನ್ನು ಹೀರುವ ಗುಣ ಇದೆ. ಇದು ಆಹಾರವು ಜೀರ್ಣ ನಾಳದಲ್ಲಿ ಸುಗಮವಾಗಿ ಮತ್ತು ವೇಗವಾಗಿ ಸಾಗಲು ಸಹಾಯ ಮಾಡುತ್ತದೆ. ಮತ್ತು ದೊಡ್ಡ ಕರುಳಿನ ಕೊನೆಯಲ್ಲಿ ಮಲಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ. ಇದು ಬೈಲ್‌ ಲವಣಗಳನ್ನು ಬಂಧಿಸುವುದು ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದು. ಇದರಿಂದಾಗಿ ಹೃದಯ ಸಂಬಂಧಿ ರೋಗಗಳ ಆಹಾರ ನಿರ್ವಹಣೆಯಲ್ಲಿ ಇದರ ಪಾತ್ರ ದೊಡ್ಡದು. ಅಕ್ಕಿಯಲ್ಲಿ ಇತರೆ ತೃಣ ಧಾನ್ಯಗಳನ್ನು ಹೋಲಿಸಿದರೆ ಅತಿ ಕಡಿಮೆ ನಾರಿನ ಅಂಶವಿರುವುದು. ಜೋಳದಲ್ಲಿನ ಆಹಾರದ ನಾರಿನ ಅಂಶವು 89.2%, ನವಣೆಯಲ್ಲಿ (ಪರ್ಲ ಮಿಲೆಟ್‌ನಲ್ಲಿ) 122.3% ಮತ್ತು ರಾಗಿಯಲ್ಲಿ 113.5%. ಕ್ರಮವಾಗಿ ಇರುವುದು

ಮಾನವರ ಆಹಾರದಲ್ಲಿ ಕ್ಯಾಲ್ಷಿಯಂನ ಪ್ರಾಮುಖ್ಯತೆ

ಏಷಿಯಾ ಮತ್ತು ಆಫ್ರಿಕಾಗಳಲ್ಲಿ ಮಹಿಳೆಯರು ಸೇವಿಸುವ ಆಹಾರದಲ್ಲಿ ಕ್ಯಾಲ್ಷಿಯಂನ ಪ್ರಮಾಣವು ಶಿಫಾರ್ಸುಮಾಡಿದ ಮಟ್ಟಕ್ಕಿಂತ ಬಹು ಕಡಿಮೆ ಇದೆ. ಗರ್ಭಿಣಿಯಾಗಿದ್ದಾಗ ಮತ್ತು ಮಗುವಿಗೆ ಹಾಲುಣಿಸುವಾಗ ಮಹಿಳೆಗೆ ಕ್ಯಾಲ್ಸಿಯಂ ಕೊರತೆಯಾದರೆ ಮಗುವಿಗೆ ಅಸ್ತಿ ಪಂಜರದ ರಚನೆಯಲ್ಲಿ ದೌರ್ಬಲ್ಯ ಕಾಣುವುದು. ಅದಲ್ಲದೆ ಗರ್ಭಿಣಿಯಿದ್ದಾಗ ಕ್ಯಾಲ್ಸಿಯಂ ಕೊರತೆಯಾದರೆ ತಾಯಿಯ ಆ ರೋಗ್ಯಕ್ಕೂ ಹಾನಿಯಾಗುವುದು. ತಾಯಿಯ ದೇಹದಲ್ಲಿನ ಕ್ಯಾಲ್ಸಿಯಂ ಭ್ರೂಣದ ಬೆಳವಣಿಗೆಗೆ ಮತ್ತು ಹಾಲಿನ ಉತ್ಪಾದನೆಗೆ ಬಳಕೆಯಾಗುವುದು. ಕ್ಯಾಲ್ಸಿಯಂ ಕೊರತೆಯಿಂದ ತಾಯಿಯು ಹೃದಯಸಂಬಂಧಿ ತೊಂದರೆ ಮತ್ತು ಏರುರಕ್ತದ ಒತ್ತಡಕ್ಕೆ ಗುರಿಯಾಗಬಹುದು.
ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ಗರ್ಭಧಾರಣೆಯ ಉತ್ತರಾರ್ಧದಲ್ಲಿ ನೀಡಿದರೆ ಗರ್ಭಧಾರಣೆಯಿಂದ ಉತ್ತೇಜಿತವಾಗಿ ಬರುವ ರಕ್ತದ ಏರುಒತ್ತಡ ನಿಯಂತ್ರಣದಲ್ಲಿರುವುದು.ನಾವು ಒರಟು ಧಾನ್ಯಗಳ ಆಹಾರಮೌಲ್ಯವನ್ನು ವಿಶ್ಲೇಷಿಸಿದರೆ, ಒರಟು ಧಾನ್ಯಗಳ ಪೌಷ್ಟಿಕತೆಯಲ್ಲಿ ರಾಗಿ ಮತ್ತು ಜೋಳಗಳು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ನಾರಿನ ಅಂಶ ಹೊಂದಿರುವುದು ಕಂಡುಬರುವುದು.

ಒರಟುಧಾನ್ಯ ಆಧಾರಿತ ಸಂಸ್ಕರಿತ ಆಹಾರ

ಮೆಕ್ಕೆಜೋಳ, ಜೋಳ ಮತ್ತು ಇತರ ತೃಣ ಧಾನ್ಯಗಳು ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಆಹಾರ ಬೆಳೆಗಳ ಕಾಲುಭಾಗದಷ್ಟು ಇವೆ ಮತ್ತು ಅಹಾರ ಧಾನ್ಯ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇದರ ಜೊತೆಗೆ ಸಂಪ್ರದಾಯಿಕ ಅಡುಗೆ ವಿಧಾನಗಳಲ್ಲಿ ಮಾತ್ರವಲ್ಲದೆ ಒರಟುಧಾನ್ಯಗಳನ್ನು ಶಿಶು ಆಹಾರ ತಯಾರಿಕೆಯಲ್ಲಿ ಮತ್ತು ಮಾಲ್ಟ ತಯಾರಿಕೆಯಲ್ಲಿ ಬಳಸುವುರು. ಜೋಳವನ್ನು ಗ್ಲೂಕೋಸ್‌ ಮತ್ತು ಇತರೆ ಪಾನೀಯಗಳ ತಯಾರಿಕೆಗೆ ಬಳಸುವರು. ರಾಗಿ ಮತ್ತು ಗೋಧಿಯ ಮಿಶ್ರಣದಿಂದ ತಯಾರಿಸಿದ ಶ್ಯಾವಿಗೆಯು ದಿಢೀರ್‌ ಆಹಾರವಾಗಿ ಜನಪ್ರಿಯವಾಗಿದೆ.

ಅಪೌಷ್ಟಿಕ ಅಂಶಗಳನ್ನು ಕಡಿಮೆ ಮಾಡುವುದು ಹೇಗೆ ?

ಕೆಲವು ಸಂಪ್ರದಾಯಿಕ ವಿಧಾನಗಳಾದ ಕೇರುವುದು,ವನಿಯುವುದು .ಹುರಿಯುವುದು , ಮೊಳಕೆ ಕಟ್ಟುವುದು , ನೆನಸುವುದು ಮತ್ತು ಮಾಲ್ಟ ಮಾಡುವುದು ಮೊದಲಾದ ಕ್ರಿಯೆಗಳಿಂದ ತೃಣಧಾನ್ಯಗಳನ್ನು ಸೇವನೆಗೆ ಯೋಗ್ಯವಾಗಿಸಬಹುದು. ವಿಶೇಷವಾಗಿ ಮಾಲ್ಟಿಂಗ್‌ನಿಂದ ಅದರಲ್ಲಿನ ಜಿಗಟು ಕಡಿಮೆಯಾಗುವುದು. ಅವುಗಳನ್ನು ಮೊಳಕೆ ಒಡೆಯುವಂತೆ ಮಾಡಿ, ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದರೆ ಅನಗತ್ಯ ಎನ್‌ಜೈಮ್‌ಗಳು ನಾಶವಾಗುತ್ತವೆ.. ಈ ಮಿಶ್ರಣದಲ್ಲಿನ ಅಮೆಲೈಸರುಗಳು ಮತ್ತು ಜಿಗುಟು ಮಾಲ್ಟ ಮಾಡಿದ ಮೇಲೆ ಬಹಳಷ್ಟು ಕಡಿಮೆಯಾಗುವವು. ಈ ರೀತಿಯಾಗಿ ಮಾಲ್ಟ ಮಾಡಿದ ಒರಟುಧಾನ್ಯದ ಮಿಶ್ರಣವು ಶಿಶುಆಹಾರ ಮತ್ತು ಶಕ್ತಿ ಪೂರಕ ಪಾನೀಯ ತಯಾರಿಕೆಯಲ್ಲಿ ಬಹಳ ಉಪಯುಕ್ತ.

ಒರಟು ಧಾನ್ಯಗಳ ಪೌಷ್ಟಿಕತೆ( ಪ್ರತಿ 100 ಗ್ರಾಂ ಸೇವಿಸುವ ಭಾಗಕ್ಕೆ)

ಆಹಾರದ ಹೆಸರು

ಪೌಷ್ಟಿಕ ಅಂಶ kcal

ಕ್ಯಾಲ್ಸಿಯಂ ಅಂಶ m.g.

ಕಬ್ಬಿಣದ ಅಂಶ m.g.

ಸಜ್ಜೆ

361

42

8.0

ಜೋಳ

349

25

4.1

ಮೆಕ್ಕೆ ಜೋಳ

342

10

2.3

ರಾಗಿ

328

344

3.9

ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ವಸ್ತುಗಳ (100ಗ್ರಾಂ ಸೇವನೆಯಲ್ಲಿ)

ಮೂಲ: ಡಾ.ಟಿ.ವಿಜಯ ಪುಷ್ಪಮ್‌ ಮತ್ತು ಶ್ರೀಮತಿಅಮೂಲ್ಯರಾವ್‌. ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆ. ಹೈದ್ರಾಬಾದ್‌

ಆಹಾರ ವಸ್ತುಗಳು

Mg

ರಾಗಿ

344.

ಅಗಸೆ

1130

ಕರಿಬೇವು

830

ನುಗ್ಗೆ ಸೊಪ್ಪು

440

ಹೊನಗೊನೆ

510

1450

ಎಮ್ಮೆ ಹಾಲು

210

ಹಸುವಿನ ಹಾಲು

120

ಚೀಸ್‌

790

ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate