ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪೌಷ್ಟಿಕಾಂಶ

ಹಸಿರು ಎಲೆಗಳ ತರಕಾರಿಗಳು ಎಲ್ಲಾ ಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯಾವಶಕ.

 • ಹಸಿರು ಎಲೆಗಳ ತರಕಾರಿಗಳು ಎಲ್ಲಾ ಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯಾವಶಕ.
 • ಭಾರತದಲ್ಲಿ, ವ್ಯಾಪಕ ಪ್ರಮಾಣದಲ್ಲಿ ಹಸಿರು ಎಲೆ-ತರಕಾರಿಗಳನ್ನು ತಿನ್ನಲಾಗುತ್ತದೆ. ಅದರಲ್ಲಿ ಜನಪ್ರಿಯವಾದವೆಂದರೆ ಪಾಲಕ್‌ ಸೊಪ್ಪು, ದಂಟಿನ ಸೊಪ್ಪು, ಪುಂಡಿಪಲ್ಯ , ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನ ಸೊಪ್ಪು, ಇತ್ಯಾದಿ.
 • ಎಲೆಯುಳ್ಳ ತರಕಾರಿಗಳು ಮುಖ್ಯವಾಗಿ ಅಜೈವಿಕ ಪೌಷ್ಟಿಕತೆ ಮತ್ತು ಕಬ್ಬಿಣಾಂಶ ಭರಿತವಾಗಿರುತ್ತವೆ. ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆಯುಂಟಾಗುತ್ತದೆ. ಇದು ಗರ್ಭಿಣಿಯರಲ್ಲಿ ಮತ್ತು ಹಾಲುಣಿಸುವ ತಾಯಂದಿರಲ್ಲಿ ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆ.
 • ನಮ್ಮ ಪ್ರತಿನಿತ್ಯದ ಆಹಾರಕ್ರಮದಲ್ಲಿ ಹಸಿರು ಎಲೆ-ತರಕಾರಿಗಳ ಸೇರಿದ್ದರೆ ರಕ್ತಹೀನತೆಯನ್ನು ತಡೆಗಟ್ಟುವು ದಲ್ಲದೆ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.
 • ಹಸಿರು ಎಲೆಗಳ ತರಕಾರಿಗಳು ಕ್ಯಾಲ್ಸಿಯಂ, ಬೀಟ ಕೆರೊಟೀನ್ ಮತ್ತು ಸಿ ಅನ್ನಾಂಗದ ಸಮೃದ್ಧ ಅಮೂಲ್ಯ ಮೂಲಗಳು.
 • ಭಾರತದಲ್ಲಿ, ಐದು ವರ್ಷ ವಯಸ್ಸಿಗಿಂತ ಕಡಿಮೆ ಇರುವ ಸುಮಾರು 30,000 ಮಕ್ಕಳು ಪ್ರತಿ ವರ್ಷ ಕುರುಡರಾಗುತ್ತಾರೆ. ಇದಕ್ಕೆ ಕಾರಣ ಎ ಅನ್ನಾಂಗದ ಕೊರತೆ. ಹಸಿರು ಎಲೆ-ತರಕಾರಿಗಳಲ್ಲಿನ ಕೆರೊಟೀನ್ ನಮ್ಮ ದೇಹದಲ್ಲಿ ಎ ಅನ್ನಾಂಗವಾಗಿ ಪರಿವರ್ತನೆಯಾಗಿ ಕುರುಡುತನವನ್ನು ತಡೆಯುತ್ತದೆ.
 • ಸಿ ಅನ್ನಾಂಗವನ್ನು ಹಸಿರು ಎಲೆ-ತರಕಾರಿಗಳಲ್ಲಿ ಉಳಿಸುವುದಕ್ಕಾಗಿ ಅವನ್ನು ಹೆಚ್ಚು ಬೇಯಿಸಬಾರದು.. ಏಕೆಂದರೆ ನಮ್ಮ ಒಸಡುಗಳನ್ನು ಉತ್ತಮ ಸ್ಥಿತಿಯಲ್ಲಿಡುವ ಈ ಪೌಷ್ಟಿಕತೆಯು ಹೆಚ್ಚಾಗಿ ಬೇಯಿಸಿದರೆ, ಕಳೆದು ಹೋಗುವುದಲ್ಲದೆ ಹಾಳಾಗುತ್ತದೆ.
 • ಹಸಿರು ಎಲೆ-ತರಕಾರಿಗಳು ಕೆಲವೊಂದು ಬಿ-ಕಾಂಪ್ಲಕ್ಸ್ ಅನ್ನಾಂಗಗಳನ್ನು ಕೂಡ ಹೊಂದಿರುತ್ತವೆ.

ಒಬ್ಬ ವಯಸ್ಕ ಮಹಿಳೆಗಾಗಿ ಹಸಿರು ಎಲೆ-ತರಕಾರಿಗಳ ಆಹಾರಕ್ರಮ 100 ಗ್ರಾಂ / ದಿನ,>ವಯಸ್ಕ ಪುರುಷನಿಗೆ 40 ಗ್ರಾಂ / ದಿನ, ಶಾಲಾ ವಯಸ್ಸಿನ ಮುನ್ನದ ಮಕ್ಕಳಿಗೆ (4-6 ವರ್ಷ) ಮತ್ತು 10 ವರ್ಷ ಮೀರಿದ ವಯಸ್ಸಿನ ಗಂಡು ಹಾಗೂ ಹೆಣ್ಣು ಮಕ್ಕಳಿಗೆ 50 ಗ್ರಾಂ / ದಿನ . ಪ್ರತಿ ದಿನದ ಬಳಸಲು ಶಿಫಾರಸ್ಸು ಮಾಡಲಾಗಿದೆ.

ಸಾಮಾನ್ಯವಾಗಿ ಸೇವಿಸುವ ಕೆಲವೊಂದು ಹಸಿರು ಎಲೆ-ತರಕಾರಿಗಳ ಪೌಷ್ಟಿಕತೆಯ ಮೌಲ್ಯ

(ಖಾದ್ಯ ಭಾಗದ 100 ಗ್ರಾಂ)

 • ಹಸಿರು ಎಲೆ-ತರಕಾರಿಗಳಿಂದ ಮಕ್ಕಳಲ್ಲಿ ಬೇಧಿಯಾಗುತ್ತದೆ ಎಂದು ಸಾಮಾನ್ಯ ನಂಬಿಕೆ. ಆದ್ದರಿಂದ ತಾಯಿಯಂದಿರು ಇಂತಹ ಪೌಷ್ಟಿಕ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದಿಲ್ಲ . ಹಲವಾರು ಬ್ಯಾಕ್ಟೀರಿಯ / ಸೂಕ್ಷ್ಮ ಜೀವಾಣುಗಳು / ನೊಣಗಳು ಮತ್ತು ಹೊರಗಿನ ಪದಾರ್ಥಗಳು ಹಸಿರು ಎಲೆ-ತರಕಾರಗಳನ್ನು ನೀರಿನ ಮತ್ತು ಮಣ್ಣಿನ ಮೂಲಕ ಕಲುಷಿತಗೊಳಿಸುತ್ತವೆ. ಮತ್ತು ಸರಿಯಾಗಿ ತೊಳೆಯದಿದ್ದರೆ, ತಂದ ನಂತರ ಅವುಗಳು ಬೇಧಿಗೆ ಕಾರಣವಾಗುತ್ತವೆ. ಹಾಗಾಗಿ ಎಲ್ಲಾ ಹಸಿರು ಎಲೆ-ತರಕಾರಿಗಳನ್ನು ಸರಿಯಾಗಿ ಸುರಿಯುವ / ಹರಿಯುವ ನೀರಿನಲ್ಲಿ ತೊಳೆಯಬೇಕು. ಇದರಿಂದ ಇಂತಹ ಕಲ್ಮಷಗಳನ್ನು ಹೋಗಲಾಡಿಸಿ ಬೇಧಿಯನ್ನು ತಡೆಗಟ್ಟಬಹುದು.
 • ಹಸುಳೆಗಳಿಗೆ ಹಸಿರು ಎಲೆ-ತರಕಾರಿಗಳನ್ನು ಬೇಯಿಸಿದ ನಂತರವೇ ಕೊಡಬೇಕು. ಮತ್ತು ಇವುಗಳನ್ನು ಸರಿಯಾಗಿ ಬಿಡಿಸಿ ಸಿ, ಬೆರೆಸಿ, ನಾರನ್ನು ತೆಗೆದ ನಂತರವೇ ಕೊಡಬೇಕು. ಹಸಿರು ಎಲೆ-ತರಕಾರಿಗಳ ಪೌಷ್ಟಿಕಾಂಶವನ್ನು ಕಾಪಾಡುಕೊಳ್ಳಲು ಅತಿ ಹೆಚ್ಚಾಗಿ ಬೇಯಿಸುವುದನ್ನು ತೊರೆಯಬೇಕು. ಮತ್ತು ಇವುಗಳನ್ನು ಬೇಯಿಸಿದಾಗ ಸಿಗುವ ನೀರನ್ನು ಎಸೆಯಬಾರದು. ಹಸಿರು ಎಲೆ-ತರಕಾರಿಗಳನ್ನು ಬೇಯಿಸುವ ತಪ್ಪಲೆಯನ್ನು ಸದಾ ಮುಚ್ಚಳದಿಂದ ಮುಚ್ಚಿಡಿರಿ. ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಡಿ. ಇದರಿಂದ ಅದರಲ್ಲಿನ ಕ್ಯರೊಟೀನ್ ಅಂಶ ಕಳೆದುಹೋಗುತ್ತದೆ. ಹಸಿರು ಎಲೆ-ತರಕಾರಿಗಳನ್ನು ಹುರಿಯದಿರಿ.
 • ಹಸಿರು ಎಲೆ-ತರಕಾರಿಗಳ ಪೌಷ್ಟಿಕ ಮೌಲ್ಯವನ್ನು ಅವುಗಳ ಬೆಲೆಗಳ ಆಧಾರದ ಮೇಲೆ ಅಳೆಯಬಾರದು. ಇದು ಸಮಾರು ಜನ ತಪ್ಪಾಗಿ ತಿಳಿದು , ಇವುಗಳು ಕಳಪೆ ಆಹಾರ ಪದಾರ್ಥಗಳೆಂದು ನಿರಾಕರಿಸುತ್ತಾರೆ. ಹಸಿರು ಎಲೆ-ತರಕಾರಿಗಳು ಸೋವಿಯಾಗಿ ಸಿಗುವುದಾದರೂ ಎಲ್ಲರಿಗೂ ಬೇಕಾಗುವ ಪೌಷ್ಟಿಕಾಂಶಗಳು ಅದರಲ್ಲಿವೆ..
 • ಹಸಿರು ಎಲೆಯುಳ್ಳ ತರಕಾರಿಯ ಬೆಳೆಯನ್ನು ಪ್ರೋತ್ಸಾಹಿಸಬೇಕು. ಇದರಿಂದ ವರ್ಷದಲ್ಲಿನ ಎಲ್ಲಾ ದಿನಗಳಲ್ಲಿ ಇವುಗಳು ಸಿಗುವಂತಾಗಬೇಕು. ಹಿತ್ತಲ ತೋಟಗಳು, ಮಾಳಿಗೆ ತೋಟಗಳು ತೋಟಗಳು, ಶಾಲಾ ತೋಟಗಳು, ಕೈ ತೋಟಗಳು, ಇತ್ಯಾದಿಗಳು ಇಂತಹ ಹಸಿರು ಎಲೆ-ತರಕಾರಿಗಳನ್ನು ಬೆಳೆಯಲು ಸೂಕ್ತ ಜಾಗ. ನುಗ್ಗೆ, ಅಗಾಥಿ, ಇತ್ಯಾದಿಗಳಂತಹ ಮರಗಳಿಂದ ಹಸಿರು ಎಲೆಗಳ ಪ್ರತಿನಿತ್ಯದ ಉಪಯೋಗ ಸುಲಭ. ಏಕೆಂದರೆ ಇವುಗಳು ಒಮ್ಮೆ ನೆಟ್ಟರೆ, ಹಿತ್ತಲಲ್ಲಿ ಸದಾ ಇರುತ್ತದೆ.

ರಕ್ತದಲ್ಲಿನ ಸಕ್ಕರೆ (ಮಧುಮೇಹ) ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಮೆಂತ್ಯೆ ಕಾಳುಗಳ ಬಳಕೆ

 1. ಸಕ್ಕರೆ ಖಾಯಿಲೆ / ಮಧುಮೇಹ ಮತ್ತು ಹೃದಯ ರೋಗಗಳು ಸಾಮಾನ್ಯವಾಗಿ ನಮ್ಮ ಜನಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆಗಳು. ಇವುಗಳಿಂದಾಗುವ ಪರಿಣಾಮಗಳಿಂದ ರಕ್ತದಲ್ಲಿ ಸಕ್ಕರೆಯ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಹೆಚ್ಚಳವಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈದರಾಬಾದಿನ ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆಯು ನಡೆಸಿದಸಂಶೋಧನೆಯಿಂದ ಮೆಂತ್ಯೆಕಾಳುಗಳಿಂದ ಈ ಖಾಯಿಲೆಗಳನ್ನು ತಡೆಯುವ ಉತ್ತಮ ಅಂಶಗಳಿರುವುದನ್ನು ಕಂಡುಕೊಂಡಿದೆ.. ಮೆಂತ್ಯೆ ಕಾಳುಗಳ ಸೇವನೆ ಇಂತಹ ಸ್ಥಿತಿಗಳಿಗೆ ಬೆಂಬಲ ನೀಡುವುದರ ಜೊತೆಗೆ ಸಾಮಾನ್ಯವಾಗಿ ಈ ಖಾಯಿಲೆಗಳಿಗೆ ಚಿಕಿತ್ಸೆಯಾಗಿ ಸಲಹೆ ನೀಡಲಾಗುತ್ತದೆ. ಮೆಂತ್ಯೆಕಾಳುಗಳ ಸೇವನೆಯ ಪ್ರಮಾಣ, ಯಾವ ರೀತಿ ಸೇವಿಸಬೇಕು ಮತ್ತು ಇದನ್ನು ಸೇವಿಸುವ ಸಮಯದಲ್ಲಿ ತೆಗೆದುಕೊಳ್ಳಬೇಕಾಗುವ ಕ್ರಮಗಳು ಇಂತಿವೆ –
 2. ಮೆಂತ್ಯೆ ಕಾಳು ಸಾಮಾನ್ಯವಾಗಿ ಭಾರತೀಯ ಅಡುಗೆಗೆ ಬಳಸುವ ಒಂದು ಮಸಾಲೆಯಾಗಿದ್ದು, ಎಲ್ಲಾ ದಿನಸಿ ಅಂಗಡಿಗಳಲ್ಲಿ ಲಭ್ಯವಾಗುತ್ತದೆ.
 3. ಮೆಂತ್ಯೆಕಾಳುಗಳಲ್ಲಿ ಹೆಚ್ಚಿನ ನಾರಿನಾಂಶವಿದೆ. (50%), ಮಧುಮೇಹ (ಸಕ್ಕರೆ ಖಾಯಿಲೆ), ರಕ್ತದಲ್ಲಿನ ಮತ್ತು ಮೂತ್ರದಲ್ಲಿ ಗ್ಲೂಕೋಸ್ ನಲ್ಲಿ ಕಡಿತಗೊಳಿಸುವುದಕ್ಕೆ ಮತ್ತು ಹೆಚ್ಚಿನ ಸಿರಮ್ (ರಕ್ತಸಾರ) ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವ ರೋಗಿಗಳಿಗೆ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಗೊಳಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಹಸಿ ಮತ್ತು ಬೇಯಿಸಿದ ಮೆಂತ್ಯೆಕಾಳುಗಳಲ್ಲಿ ಈ ಅಂಶಗಳಿರುತ್ತವೆ.
 4. ಮೆಂತ್ಯ ಸೊಪ್ಪು (ಮೆಂತ್ಯೆ ಸಾಗು ಮಾಡಲು ಸಾಮಾನ್ಯವಾಗಿ ಬಳಸಲಾಗುವುದು) ಇಂತಹ ಪರಿಣಾಮ ತೋರುವುದಿಲ್ಲ.
 5. ಮೆಂತ್ಯೆಕಾಳುಗಳ ಸೇವನೆಯ ಪ್ರಮಾಣ ಮಧುಮೇಹ (ಸಕ್ಕರೆ ಖಾಯಿಲೆ) ದ ತೀವ್ರತೆ ಮತ್ತು ಸೀರಮ್ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಅವಲಂಬಿತವಾಗಿದ್ದು, 25 ಗ್ರಾಂ ನಿಂದ 50 ಗ್ರಾಂ ವರೆಗೂ ತೆಗೆದುಕೊಳ್ಳಬಹುದು.
 6. ಆರಂಭದಲ್ಲಿ, 25 ಗ್ರಾಂ ಮೆಂತ್ಯೆ ಕಾಳುಗಳು ಎರಡು ಸಮಾನ ಅಳತೆಯಲ್ಲಿ 12.5 ಗ್ರಾಂ (ಸುಮಾರು ಎರಡು ಚಮಚ) ಮಧ್ಯಾಹ್ನ ಮತ್ತು ರಾತ್ರಿ ಊಟದೊಂದಿಗೆ ತೆಗೆದುಕೊಳ್ಳಬಹುದಾಗಿದೆ.
 7. ಈ ಕಾಳುಗಳನ್ನು ರಾತ್ರಿಪೂರ ನೀರಿನಲ್ಲಿ ನೆನೆಸಿದ ನಂತರ ಅಥವ ಪುಡಿಮಾಡಿ ಒಂದು ಗ್ಲಾಸ್ ನೀರು ಅಥವ ಮಜ್ಜಿಗೆಯೊಂದಿಗೆ ಊಟಕ್ಕೆ 15 ನಿಮಿಷ ಮಂಚಿತವಾಗಿ ತೆಗೆದುಕೊಳ್ಳಬಹುದು.
 8. ಡೆಬಿಟರೈಜೇಶನ್ ಕೆಲವೊಂದು ಪ್ರಕ್ರಿಯೆಗಳನ್ನೊಳಗೊಂಡಿದೆ. ಪ್ರಸ್ತುತ ಮಾರುಕಟ್ಟಯಲ್ಲಿ ಡೆಬಿಟರೈಜ್ಡ್ ಮೆಂತ್ಯೆಕಾಳುಗಳು ಲಭ್ಯವಿಲ್ಲ.
 9. ಕಾಳಿನ ತಿರುಳು (ರಾತ್ರಿ ಪೂರ ನೀರಿನಲ್ಲಿ ನೆನೆಸಿದ ನಂತರ) ಅಥವ ಪುಡಿಯನ್ನು ಚಪಾತಿ, ಮೊಸರು, ದೋಸೆ, ಅಡೈ ಇಡ್ಲಿ, ಪೊಂಗಲ್, ಉಪ್ಪಿಟು, ದಲಿಯ, ಢೋಕ್ಲ, ದಾಲ್ ಗಳು ಮತ್ತು ತರಕಾರಿ ಸಾಂಬಾರಿನಲ್ಲಿ ಸೇರಿಸಬಹುದು. ಕಾಳುಗಳ ಕಹಿ ಇಂತಹ ಅಡುಗೆ ಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ವೈಯಕ್ತಿಕ ರುಚಿಗೆತಕ್ಕಂತೆ ಈ ಅಡುಗೆಗನ್ನು ಳು ಉಪ್ಪು ಅಥವ ಹುಳಿ ಸೇರಿಸಿ ಮಾಡಬಹುದು.
 10. ರಕ್ತದಲ್ಲಿ ಮತ್ತು ಮೂತ್ರದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಿರುವವರಗೆ ಮೆಂತ್ಯೆ ಕಾಳುಗಳ ಸೇವನೆ ಮುಂದುವರೆಸಬೇಕು.
 11. ಮೆಂತ್ಯಕಾಳುಗಳ ಬಳಕೆ ಜೊತೆಗೆ, ನಿತ್ಯ ವ್ಯಾಯಾಮವಾದ ನಡೆಯುವುದು ( ವಾಕಿಂಗ್ ) ಉತ್ತಮ. ದೇಹದ ತೂಕ ಕಡಿತಗೊಳಿಸಿದರೆ, ಇನ್ಸುಲಿನ್ ಕಾರ್ಯ ಉತ್ತಮಗೊಳ್ಳುತ್ತದೆ. ಆಹಾರಕ್ರಮದ ಕ್ಯಾಲರಿಗಳಾದ ಗಾಢ ಮೇದಸ್ಸು ಮತ್ತು ಸಾಮಾನ್ಯ ಸಕ್ಕರೆಯ ಸೇವನೆ ಕಡಿಮೆಗೊಳಿಸಬೇಕು.
 12. ಮೆಂತ್ಯಕಾಳುಗಳ ಸೇವನೆಯಿಂದ ಕೆಲ ರೋಗಿಗಳಿಗೆ ಮೊದಮೊದಲಿಗೆ ಬೇಧಿ ಅಥವ ಹೆಚ್ಚಿನ ವಾಯು ಶೇಖರಣೆಯಾಗುತ್ತದೆ.
 13. ಮೆಂತ್ಯೆಕಾಳುಗಳು ಕೇವಲ ಆಹಾರಕ್ರಮದ ಬೆಂಬಲಿತ ಚಿಕಿತ್ಸೆಯಾಗಿವೆ ಮತ್ತು ಸಾಮಾನ್ಯ ಮಧುಮೇಹ ನಿರೋಧಿ ಚಿಕಿತ್ಸೆ ಮುಂದುವರೆಸಬೇಕು. ಆದರೆ ಮೆಂತ್ಯೆ ಕಾಳುಗಳ ಸೇವನೆಯಿಂದ ಮಧುಮೇಹ ನಿರೋಧಿ ಔಷಧಿಗಳ ಸೇವನೆ ಪ್ರಮಾಣ ಕಡಿಮೆಗೊಳಿಸಬಹುದು. ವೈಯಕ್ತಿಕವಾಗಿ ಮಧುಮೇಹ ನಿ ರೋಧಿ ಔಷಧಿಗಳ ಸೇವನೆಯ ವೇಳಾಪಟ್ಟಿ ಕೊಡಬಾರದು. ನಿಮ್ಮ ವೈದ್ಯ ಮಾತ್ರ ಇದನ್ನು ಮಾಡಬಹುದು. ಹೆಚ್ಚಿನ ಸಕ್ಕರೆ ಖಾಯಿಲೆ ಸಮಯದಲ್ಲಿ ವೈದ್ಯಕೀಯ ನೆರವು ಪಡೆಯುವುದು ಉತ್ತಮ.

ಮೂಲ : ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ ಹೈದರಾಬಾದ್ , ಹೈದರಾಬಾದ್ -೫೦೦  ೦೦೭ : ಇಂಡಿಯಾ

ಪೌಷ್ಟಿಕಾಂಶಗಳು

ಪುದೀನ ಸೊಪ್ಪು

ದಂಟಿನ ಸೊಪ್ಪು

ಪಾಲಕ್ ಸೊಪ್ಪು

ನುಗ್ಗೆ ಸೊಪ್ಪು

ಕೊತ್ತಂಬರಿ ಸೊಪ್ಪು

ಪುಂಡಿ ಸೊಪ್ಪು

ಕ್ಯಾಲರೀ

48

45

26

92

44

56

ಪ್ರೋಟೀನ್ (ಗ್ರಾಂ)

4.8

4.0

2.0

6.7

3.3

1.7

ಕ್ಯಾಲ್ಸಿಯಂ (ಮಿಲಿಗ್ರಾಂ)

200

397

73

440

184

1720

ಕಬ್ಬಿಣಾಂಶ (ಮಿಲಿಗ್ರಾಂ)

15.6

25.5

10.9

7.0

18.5

2.28

ಕ್ಯರೊಟೀನ್ (ಮೈಕ್ರೊಗ್ರಾಂ)

1620

5520

5580

6780

6918

2898

ಥಿಯಾಮೈನ್ (ಮಿಲಿಗ್ರಾಂ)

0.05

0.03

0.03

0.06

0.05

0.07

ರೈಬೊಫ್ಲವಿನ್ (ಮಿಲಿಗ್ರಾಂ)

0.26

0.30

0.26

0.06

0.06

0.39

ಸಿ ಅನ್ನಾಂಗ (ಮಿಲಿಗ್ರಾಂ)

27.0

99

28

220

135

20.2

2.96261682243
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top