অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!

ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!

ನಮ್ಮ ಚರ್ಮ, ಕಣ್ಣಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಟಾಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಮಹತ್ವ ಪಡೆದಿದೆ. ವಿಟಾಮಿನ್ ಇ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಜೀವಸತ್ವವೂ ಹೌದು. ಅಕಸ್ಮಾತ್ ನಮ್ಮ ದೇಹದಲ್ಲಿ ಈ ಜೀವಸತ್ವದ ಕೊರತೆ ಉಂಟಾದದ್ದೇ ಆದಲ್ಲಿ ಅಲ್ಜಮೈರ್‌ನಂಥ ಅಪಾಯಕಾರಿ ಕಾಯುಲೆಗಳು ಉಂಟಾಗಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. 
ಹೆಚ್ಚು ಹೆಚ್ಚು ವಿಟಾಮಿನ್ ಇ ಅಂಶವಿರುವ ಪದಾರ್ಥವನ್ನು ತಿನ್ನುವುದರಿಂದ ಈ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಬಹುದು ಎಂದು ತಜ್ಞರು ಹೇಳುತ್ತಾರೆ. 
ಪ್ರತಿದಿನ ಬಾದಾಮಿ ಬೀಜವನ್ನು ಸೇವಿಸುವುದು ಉತ್ತಮ. ಇದರಲ್ಲಿ ಹೇರಳವಾಗಿರುವ ವಿಟಾಮಿನ್ ಇ ಅಂಶ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮೂಳೆಗಳನ್ನೂ ಬಲಗೊಳಿಸುತ್ತದೆ. ಅಲ್ಜಮೈರ್ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ.
ಸೌತೆಕಾಯಿ ಅಥವಾ ಕುಂಬಳಕಾಯಿಯ ಬೀಜಗಳಲ್ಲಿ ವಿಟಾಮಿನ್ ಇ ಹೇರಳವಾಗಿರುತ್ತದೆ. ಸಲಾಡ್ ಅಥವಾ ಸೂಪ್‌ನಲ್ಲಿ ಇದನ್ನು ಉಪಯೋಗಿಸುವುದು ಒಳ್ಳೆಯದು.
ದಂಟಿನ ಸೊಪ್ಪು:ದಂಟಿನ ಸೊಪ್ಪು ಸಹ ವಿಟಾಮಿನ್ ಇ ಯ ಆಗರ. ಆಗಾಗ ಇದರ ಪದಾರ್ಥವನ್ನು ಸೇವಿಸುವುದರಿಂದ ಇ ವಿಟಾಮಿನ್ ದೇಹವನ್ನು ಸೇರುವಂತೆ ನೋಡಿಕೊಳ್ಳಬಹುದು.
ಸಾಸಿವೆ ಎಲೆ: ಸಾಸಿವೆ ಎಲೆಗಳು ಸಹ ಇ ವಿಟಾಮಿನ್‌ಅನ್ನು ಹೇರಳವಾಗಿ ಹೊಂದಿದೆ. 
ಬಸಳೆ ಸೊಪ್ಪು:ಬಸಳೆ ಹಲವು ಜೀವಸತ್ವಗಳ ಆಗರ. ವಿಟಾಮಿನ್ ಇ ಕೊರತೆ ಇರುವವರಿಗಂತೂ ಹೆಚ್ಚು ಹೆಚ್ಚು ಬಸಳೆಯನ್ನು ಸೇವಿಸಲು ಹೇಳಲಾಗುತ್ತದೆ.
ಎಣ್ಣೆ:ಕೊಬ್ಬರಿ ಎಣ್ಣೆ, ಹತ್ತಿಬೀಜದ ಎಣ್ಣೆ ಮುಂತಾದವುಗಳಲ್ಲಿಯೂ ವಿಟಾಮಿನ್ ಇ ಯಥೇಚ್ಛವಾಗಿರುತ್ತದೆ.
ಪಪ್ಪಾಯ: ಪಪ್ಪಾಯ ಹಣ್ಣು ವಿಟಾಮಿನ್ ಸಿ ಗೆ ಹೆಸರುವಾಸಿಯಾಗಿದ್ದರೂ ವಿಟಾಮಿನ್ ಇ ಅಂಶ ಸಹ ಇದರಲ್ಲಿ ಸಾಕಷ್ಟು ಇರುತ್ತದೆ. ಆದ್ದರಿಂದ ಆಗಾಗ ಪಪ್ಪಾಯ ಸೇವಿಸುತ್ತಿರುವುದು ಒಳ್ಳೆಯದು.
ವಿಟಾಮಿನ್ ಇ ದೇಹದಲ್ಲಿನ ಜೀವಕೋಶಗಳು ಸದೃಢವಾಗಿರುವಂತೆ ನೋಡಿಕೊಂಡು ದೇಹವು ಹೊರಗಿನ ರೋಗಾಣುಗಳ ದಾಳಿಗೆ ಪ್ರತ್ಯುತ್ತರ ನೀಡುವಂತೆ ಸನ್ನದ್ಧಗೊಳಿಸುತ್ತದೆ. 
ದೇಹದಲ್ಲಿನ ನರಕೋಶಗಳು ಚಟುವಟಿಕೆಯಿಂದಲೂ, ಸದೃಢವಾಗಿಯೂ ಇರುವಂತೆ ನೋಡಿಕೊಂಡು ಮೆದುಳಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಬಾರದಂತೆ ನೋಡಿಕೊಳ್ಳುವಲ್ಲಿ ವಿಟಾಮಿನ್ ಇ ಪಾತ್ರ ಅಪಾರವಾದುದು.

- ಶಶಿ

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate