ನಮ್ಮ ದೇಶದಲ್ಲಿ ಶಿಶುವಿಗೆ ಪೂರಕ ಆಹಾರವನ್ನು ಹಲವಾರು ರೀತಿಯಲ್ಲಿ ನೀಡಲಾಗುತ್ತಿದೆ. ಹಲವು ಬಾರಿ ಕುಟುಂಬದ ಇತರೆ ಸದಸ್ಯರಿಗೆ ತಯಾರಿಸಲಾಗುವ ಆಹಾರವನ್ನೆ ಶಿಶುವಿಗೆ ನೀಡಲಾಗುತ್ತದೆ. ಆದರೆ ನಮ್ಮ ದೇಶದ ಸಾಮಾನ್ಯ ಕೌಟುಂಬಿಕ ಆಹಾರಕ್ರಮ ಶಿಶುವಿನ ಸೂಕ್ತ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕತೆ ಹೊಂದಿರುವುದಿಲ್ಲ. ಹಾಗಿದ್ದಲ್ಲಿ ಶಿಶುವಿನ ಪೌಷ್ಟಿಕತೆ ನಾವು ಹೇಗೆ ಕಾಪಾಡಬಹುದು? ಶಿಶುವಿನ ಪೌಷ್ಟಿಕತೆಯ ಅಗತ್ಯವನ್ನು ಪೂರೈಸಲು ರಚಿಸಲಾಗಿರುವ ಆಹಾರಕ್ರಮವನ್ನು ಬಳಸುವುದು ಮಾತ್ರ , ಇದಕ್ಕೆ ತಕ್ಕ ಉತ್ತರ. ಆದರೆ ಇದು ಕಷ್ಟಕರವಾಗಿದ್ದು, ಕುಟುಂಬದಲ್ಲೆ ತಯಾರಿಸಲಾಗಿರುವ ಆಹಾರವನ್ನು ಮಕ್ಕಳಿಗೆ ಹೇಗೆ ಕೊಡಬಹುದೆಂದು ನೋಡಬೇಕು. ಇದನ್ನು ಹಲವಾರು ರೀತಿಗಳಲ್ಲಿ ಮಾಡಬಹುದು.
ಅ. ಸಾಂಪ್ರದಾಯಿಕ ಶಿಶುವಿಗೆ ತಿನ್ನಿಸುವ ವಿಧಾನಗಳನ್ನು ಪಾಲಿಸುವುದು, ಆದರೆ ಮನೆಯಲ್ಲಿ ತಯಾರಿಸಿದ ಇಂತಹ ಆಹಾರಗಳಿಗೆ ಹೆಚ್ಚಿನ ಪೌಷ್ಟಿಕ ಪೂರಕಗಳನ್ನು ಕೂಡಿಸಬೇಕು
ಅಥವ
ಬ. ಇಡೀ ಕುಟುಂಬಕ್ಕೆ ತಯಾರಿಸಿದ ಆಹಾರದಲ್ಲಿ ಮಗುವಿಗೆ ತಿನ್ನಿಸುವ ಪ್ರಮಾಣವನ್ನು ವಿವೇಚನೆಯಿಂದ ಆರಿಸ
ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡಿನ ಶಿಶು ಆಹಾರಗಳು ಲಭ್ಯವಿದೆ. ಇವುಗಳಲ್ಲಿ ಬಹುತೇಕ ಹಾಲಿನ ಪುಡಿಯನ್ನಾಧರಿಸಿವೆ . ಹಾಲಿನ ದರ ಹೆಚ್ಚಿರುವುದರಿಂದ , ಕೆಲವು ತಾಯಂದಿರು ಇವುಗಳನ್ನು ಖರೀದಿಸಬಹುದು. ಅದಲ್ಲದೆ ಕೇವಲ ಹಾಲಿನ ಪದಾರ್ಥಗಳಿಂದ ತಯಾರಿಸಲಾಗಿರುವ ಆಹಾರ ಮಗುವಿನ ಬೆಳವಣಿಗೆಗೆ ಸಾಕಾಗುವುದಿಲ್ಲದಿರಬಹುದು. ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆಯಲ್ಲಿ ನಡೆಸಿದ ಪ್ರಯೋಗದಂತೆ ಸುಮಾರು 75% ಹಾಲಿನಿಂದ ಸಿಗುವ ಪ್ರೋಟೀನ್ ತರಕಾರಿಯ ಪ್ರೋಟೀನ್ ನಿಂದ, ಅದರ ಪೌಷ್ಟಿಕ ಮೌಲ್ಯ ಕಳೆದುಕೊಳ್ಳದಂತೆ, ಪೂರೈಸಿಕೊಳ್ಳ ಬಹುದು. ಅದಲ್ಲದೆ ಬ್ರಾಂಡಿನ ತಯಾರಿಕೆಗಳು ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದು ನಿರಂತರವಾಗಿ ಲಭ್ಯವಿರುವುದಿಲ್ಲ. ಇಂತಹ ತೊಂದರೆಗಳ ಕಾರಣದಿಂದ , ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳಿಂದ ಶಿಶು ಆಹಾರ ತಯಾರಿಸುವುದು ಮುಖ್ಯ. ಕಡಿಮೆ ಪ್ರಮಾಣದಲ್ಲಿ ಹಾಲಿನ ಪುಡಿಯನ್ನು ಉಪಯೋಗಿಸಿ, ಈ ಆಹಾರಗಳನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಇವುಗಳು ಹೆಚ್ಚನ ಪ್ರಮಾಣದಲ್ಲಿ ಮನೆಯಲ್ಲಿ ಅಥವ ಸಮುದಾಯ ಮಟ್ಟದಲ್ಲಿ ಲಘು ಉದ್ಯಮವಾಗಿ ತಯಾರಿಸಲು ಸಾಧ್ಯವಾಗಬೇಕು. ಇಂತಹ ತಯಾರಿಕೆಗಳು ವಾಣಿಜ್ಯಕ್ಕಾಗಿ ಕೂಡ ಬಳಸಬಹುದಾಗಿದೆ. ಇವುಗಳು ಕೆಲಸ ನಿರತ ಮಗುವಿಗೆ ಆಹಾರ ತಯಾರಿಸಲು ಸಮಯದ ಅಭಾವವಿರುವ ಮಹಿಳೆಯರಿಗೂ ಉಪಯುಕ್ತ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/7/2020