ಹೆಚ್ಚಿನ ತೂಕ ಮತ್ತು ಬೊಜ್ಜು ಮೈ ತಡೆಯಲು ಹೆಚ್ಚಾಗಿ ತಿನ್ನುವುದು ಬೇಡ. ದೇಹದ ತೂಕವನ್ನು ನಿಭಾಯಿಸಲು ಸೂಕ್ತ ದೈಹಿಕ ಚಟುವಟಿಕೆ ಆವಶ್ಯಕ
ಬೊಜ್ಜುಮೈ ಎಂದರೆ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇದಸ್ಸು ಶೇಖರಣೆ.
ಬೊಜ್ಜುಮೈಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತದೆ. ಮತ್ತು ಅಕಾಲಿಕ ಮೃತ್ಯುವಿಗೂ ಕಾರಣವಾಗುತ್ತದೆ.
ಅದು ಅತಿಯಾದ ರಕ್ತದ ಒತ್ತಡ, ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲೈಸೆರೈಡ್ಸ್, ಹೃದಯ ರೋಗ, ಮಧುಮೇಹ, ಪಿತ್ತಜನಾಂಗದ ಕಲ್ಲು ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯ ವೃದ್ಧಿಸುತ್ತದೆ.
ಬೊಜ್ಜುಮೈ ಕೇವಲ ಹೆಚ್ಚಾಗಿ ತಿನ್ನುವುದರ ಸರಳ ಪರಿಣಾಮವಲ್ಲ.ಅದು ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳು ಕೂಡ ಅದಕ್ಕೆ ಕಾರಣವಾಗುತ್ತವೆ.
ನಿಧಾನವಾಗಿ ಮತ್ತು ಸತತವಾಗಿ ದೇಹದ ತೂಕವನ್ನು ಕಡಿಮೆಗೊಳಿಸಲು ಸಲಹೆ ನೀಡಲಾಗಿದೆ.
ತೀವ್ರಉಪವಾಸ ಮಾಡುವುದರಿಂದ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ.
ನಿಮ್ಮ ದೈಹಿಕ ಚಟುವಟಿಕೆಗನುಗುಣವಾಗಿ ಆಹಾರಗಳ ವೈವಿಧ್ಯತೆಯನ್ನು ಅನುಭವಿಸಿರಿ.
ಸಣ್ಣ ಪ್ರಮಾಣದ ಆಹಾರವನ್ನು ಆಗಾಗ್ಗೆ ಸೇವಿಸುತ್ತಿರಿ.
ಸಕ್ಕರೆ, ಕೊಬ್ಬುರಹಿತ ಆಹಾರಗಳು ಮತ್ತು ಮದ್ಯದ ಸೇವನೆಯಲ್ಲಿ ಕಡಿತಗೊಳಿಸಿರಿ.