ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಅಧಿಕ ರಕ್ತಸ್ರಾವ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಧಿಕ ರಕ್ತಸ್ರಾವ

ಅಧಿಕ ರಕ್ತಸ್ರಾವ

ಹಿನ್ನಲೆ

ಇಂದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ ಮುಟ್ಟಿನ ಸಮಸ್ಯೆ. ಪಿಸಿಒಡಿ, ಅಧಿಕ ರಕ್ತಸ್ರಾವ, ಅನಿಯಮಿತ ಋತುಚಕ್ರ ಇವು ಸಾಮಾನ್ಯವಾಗಿದೆ. ಅದರಲ್ಲಿ ಅಧಿಕ ರಕ್ತಸ್ರಾವ ಉಂಟಾಗುತ್ತಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ.

ಅಧಿಕ ರಕ್ತಸ್ರಾವ ಉಂಟಾಗುತ್ತಿದ್ದಲ್ಲಿ, ಅದನ್ನು ನಿಯಂತ್ರಿಸಲು ಆಹಾರ ಹಾಗೂ ವ್ಯಾಯಾಮ ಮತ್ತು ಪ್ರಕೃತಿ ಚಿಕಿತ್ಸೆಗಳು, ಇವು ಮೂರೂ ಅತೀ ಅವಶ್ಯಕ ಹಾಗೂ ಉಪಯುಕ್ತ. ಸರಿಯಾದ ವಿಧಾನಗಳಿಂದ ಈ ಮೂರನ್ನೂ ಅಳವಡಿಸಿಕೊಂಡಲ್ಲಿ ಈ ತೊಂದರೆಯಿಂದ ಪಾರಾಗಬಹುದು

ಸುವ್ಯವಸ್ಥಿತ ಆಹಾರ ಪದ್ಧತಿಯು ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನೂ ಒದಗಿಸುತ್ತದೆ. ಸಮಯೋಚಿತ ವ್ಯಾಯಾಮವು ಎಲ್ಲ ಅಂಗಗಳಿಗೆ ಸರಿಯಾಗಿ ರಕ್ತಸಂಚಾರ ಆಗುವಂತೆ ಮಾಡಿ ಅವುಗಳನ್ನು ಚೈತನ್ಯಗೊಳಿಸುತ್ತದೆ. ಪ್ರಕೃತಿ ಚಿಕಿತ್ಸೆಗಳು ಈ ಆಹಾರ ಹಾಗೂ ವ್ಯಾಯಾಮದ ಸಹಾಯದೊಂದಿಗೆ ಅತ್ಯಂತ ಪರಿಣಾಮಕಾರಿ ಆರೈಕೆಯನ್ನು ಚಿಕಿತ್ಸೆಗಳನ್ನು ನೀಡುತ್ತದೆ. ಅದರಿಂದಾಗಿ ಪರಿಪೂರ್ಣ ಆರೋಗ್ಯ ನಮ್ಮದಾಗುತ್ತದೆ. ಅಧಿಕ ರಕ್ತಸ್ರಾವವೂ ಸಹ ಇದರಿಂದ ಕಡಿಮೆಯಾಗುತ್ತದೆ.

ವ್ಯಾಯಾಮ ಸಹಿತ ತಂಪುಕಟಿಸ್ನಾನ ಪ್ರಕೃತಿ ಚಿಕಿತ್ಸೆಯು ಅಧಿಕ ರಕ್ತಸ್ರಾವದ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ. ವ್ಯಾಯಾಮದ ವಿಭಾಗ ಹಾಗೂ ಪ್ರಕೃತಿ ಚಿಕಿತ್ಸೆಯ ವಿಭಾಗ  ಎರಡನ್ನೂ ಹೊಂದಿರುವ ಕಾರಣ ಇದು ಅಧಿಕ ರಕ್ತಸ್ರಾವ ತಡೆಗೆ ಬಹಳ ಅನುಕೂಲಕಾರಿ. ರಕ್ತಸ್ರಾವ ಇರುವಾಗ ಈ ಚಿಕಿತ್ಸೆ ಪಡೆಯಬಾರದು. ಉಳಿದ ದಿನಗಳಲ್ಲಿ ಪ್ರತಿನಿತ್ಯ ತಂಪು ಕಟಿಸ್ನಾನ ಮಾಡಿ.

ಮಣ್ಣಿನ ಚಿಕಿತ್ಸೆಯೂ ಸಹ ಅಧಿಕ ರಕ್ತಸ್ರಾವದ ನಿಯಂತ್ರಣಕ್ಕೆ ಬಹಳ ಸಹಕಾರಿಯಾಗಿದ್ದು, ಹುತ್ತದ ಮಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟುಕೊಂಡು ಮರುದಿನ ಹೊಟ್ಟೆಗೆ ಹಚ್ಚಿಕೊಳ್ಳುವ ಚಿಕಿತ್ಸೆ ಇದಾಗಿದೆ.

ಅಲ್ಲದೇ  ಐಸ್ ಮಸಾಜ್ ಸಹ ಅಧಿಕ ರಕ್ತಸ್ರಾವ ತಡೆಗೆ ಪರಿಣಾಮಕಾರಿ. ಆದರೆ ಈ ಮೇಲಿನ ಮೂರು ಚಿಕಿತ್ಸೆಗಳನ್ನು ತಜ್ಞ ವೈದ್ಯರ ಸಲಹೆ ಪಡೆದು, ಸರಿಯಾಗಿ ಕಲಿತು ಮನೆಯಲ್ಲೇ ಮಾಡಿಕೊಳ್ಳಬೇಕು.

ಆಹಾರ ವ್ಯವಸ್ಥೆಯನ್ನು ಪರಿಗಣಿಸಿದಾಗ, ನಾವು ತೆಗೆದುಕೊಳ್ಳುವ ಆಹಾರವು ಎಲ್ಲ ರೀತಿಯ ಉತ್ತಮ ಅಗತ್ಯ ಪೋಷಕಾಂಶಗಳಿಂದ ಕೂಡಿರಬೇಕು. ಗ್ರೀನ್ ಟೀ ಯ ಸೇವನೆ ಒಳ್ಳೆಯದು. ಪ್ರತಿದಿನ ಬೆಳಿಗ್ಗೆ ಶುಂಠಿಯ ಕಷಾಯ ಮಾಡಿ ಕುಡಿಯುವುದು ಅಥವಾ ಚಕ್ಕೆಯ ಕಷಾಯ ಮಾಡಿ ಕುಡಿಯುವುದು ಸಹಾಯಕಾರಿ. ಬಾಳೆಹೂವಿನ ಪಲ್ಯ ಮಾಡಿ ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತಸ್ರಾವ ಕಡಿಮೆಯಾಗುತ್ತದೆ.

ಇನ್ನೊಂದು ಅತ್ಯುತ್ತಮ ಚಿಕಿತ್ಸೆ ಎಂದರೆ ಗ್ರೀನ್ ಜ್ಯೂಸ್ ಥೆರಪಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದಾದರೊಂದು ರೀತಿಯ ಒಂದು ಹಿಡಿ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಕಪ್ಪು ಎಳ್ಳು ಹಾಗೂ ಒಂದು ಚಮಚ ಅಗಸೆಬೀಜದ ಪುಡಿಯನ್ನು ಜ್ಯೂಸ್ ಮಾಡಿ ಕುಡಿಯಬೇಕು. ಇದು ಅಧಿಕ ರಕ್ತಸ್ರಾವ ಸಮಸ್ಯೆಯನ್ನು ನಿವಾರಿಸುತ್ತದೆ.

ವ್ಯಾಯಾಮ ಹಾಗೂ ಯೋಗಾಭ್ಯಾಸ

ವ್ಯಾಯಾಮ ಹಾಗೂ ಯೋಗಾಭ್ಯಾಸವೂ ಸಹ ಅಧಿಕರಕ್ತಸ್ರಾವವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದ್ದು, ಉತ್ಥಿತ ಪಾದಾಸನ ಅತ್ಯಂತ ಸಹಕಾರಿ.

ಹೀಗೆ ಪ್ರಕೃತಿ ಚಿಕಿತ್ಸೆ, ಆಹಾರ ಚಿಕಿತ್ಸೆ ಹಾಗೂ ವ್ಯಾಯಾಮಗಳ ಮೂಲಕ ಅಧಿಕ ರಕ್ತಸ್ರಾವ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು. ಆ ಮೂಲಕ ನಮ್ಮ ಸಮಸ್ಯೆಯನ್ನು ಸುಲಭವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಕಡಿಮೆ ಮಾಡಿಕೊಳ್ಳುವ ವಿಧಾನವನ್ನನುಸರಿಸಿ ಸಾಧಕರಾಗೋಣ.

ಅಧಿಕ ರಕ್ತಸ್ರಾವ ಮನೆಮದ್ದುಗಳಿಂದ ವ್ಯಾಯಾಮಗಳಿಂದ ಹತೋಟಿಗೆ ಬರದಿದ್ದಲ್ಲಿ ಇದಕ್ಕೆ ಮೂಲ ಕಾರಣವನ್ನು ಹುಡುಕಿ ಚಿಕಿತ್ಸೆಯನ್ನು ಪಡೆಯಲು ಅಲ್ಟ್ರಾಸೌಂಡ್ ಸ್ಕಾನ್ ಬೇಕಾಗಬಹುದು. ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಕಾರಣ ಹುಡುಕಿ ಅದಕ್ಕೆ ಚಿಕಿತ್ಸೆ ಪಡೆಯಬಹುದು.

ಅಧಿಕ ರಕ್ತಸ್ರಾವಇಂದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ ಮುಟ್ಟಿನ ಸಮಸ್ಯೆ. ಪಿಸಿಒಡಿ, ಅಧಿಕ ರಕ್ತಸ್ರಾವ, ಅನಿಯಮಿತ ಋತುಚಕ್ರ ಇವು ಸಾಮಾನ್ಯವಾಗಿದೆ. ಅದರಲ್ಲಿ ಅಧಿಕ ರಕ್ತಸ್ರಾವ ಉಂಟಾಗುತ್ತಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ.ಅಧಿಕ ರಕ್ತಸ್ರಾವ ಉಂಟಾಗುತ್ತಿದ್ದಲ್ಲಿ, ಅದನ್ನು ನಿಯಂತ್ರಿಸಲು ಆಹಾರ ಹಾಗೂ ವ್ಯಾಯಾಮ ಮತ್ತು ಪ್ರಕೃತಿ ಚಿಕಿತ್ಸೆಗಳು, ಇವು ಮೂರೂ ಅತೀ ಅವಶ್ಯಕ ಹಾಗೂ ಉಪಯುಕ್ತ. ಸರಿಯಾದ ವಿಧಾನಗಳಿಂದ ಈ ಮೂರನ್ನೂ ಅಳವಡಿಸಿಕೊಂಡಲ್ಲಿ ಈ ತೊಂದರೆಯಿಂದ ಪಾರಾಗಬಹುದು.ಸುವ್ಯವಸ್ಥಿತ ಆಹಾರ ಪದ್ಧತಿಯು ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನೂ ಒದಗಿಸುತ್ತದೆ.

ಸಮಯೋಚಿತ ವ್ಯಾಯಾಮವು ಎಲ್ಲ ಅಂಗಗಳಿಗೆ ಸರಿಯಾಗಿ ರಕ್ತಸಂಚಾರ ಆಗುವಂತೆ ಮಾಡಿ ಅವುಗಳನ್ನು ಚೈತನ್ಯಗೊಳಿಸುತ್ತದೆ. ಪ್ರಕೃತಿ ಚಿಕಿತ್ಸೆಗಳು ಈ ಆಹಾರ ಹಾಗೂ ವ್ಯಾಯಾಮದ ಸಹಾಯದೊಂದಿಗೆ ಅತ್ಯಂತ ಪರಿಣಾಮಕಾರಿ ಆರೈಕೆಯನ್ನು ಚಿಕಿತ್ಸೆಗಳನ್ನು ನೀಡುತ್ತದೆ. ಅದರಿಂದಾಗಿ ಪರಿಪೂರ್ಣ ಆರೋಗ್ಯ ನಮ್ಮದಾಗುತ್ತದೆ. ಅಧಿಕ ರಕ್ತಸ್ರಾವವೂ ಸಹ ಇದರಿಂದ ಕಡಿಮೆಯಾಗುತ್ತದೆ.ವ್ಯಾಯಾಮ ಸಹಿತ ತಂಪುಕಟಿಸ್ನಾನ ಪ್ರಕೃತಿ ಚಿಕಿತ್ಸೆಯು ಅಧಿಕ ರಕ್ತಸ್ರಾವದ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ. ವ್ಯಾಯಾಮದ ವಿಭಾಗ ಹಾಗೂ ಪ್ರಕೃತಿ ಚಿಕಿತ್ಸೆಯ ವಿಭಾಗ  ಎರಡನ್ನೂ ಹೊಂದಿರುವ ಕಾರಣ ಇದು ಅಧಿಕ ರಕ್ತಸ್ರಾವ ತಡೆಗೆ ಬಹಳ ಅನುಕೂಲಕಾರಿ.

ರಕ್ತಸ್ರಾವ ಇರುವಾಗ ಈ ಚಿಕಿತ್ಸೆ ಪಡೆಯಬಾರದು. ಉಳಿದ ದಿನಗಳಲ್ಲಿ ಪ್ರತಿನಿತ್ಯ ತಂಪು ಕಟಿಸ್ನಾನ ಮಾಡಿ.ಮಣ್ಣಿನ ಚಿಕಿತ್ಸೆಯೂ ಸಹ ಅಧಿಕ ರಕ್ತಸ್ರಾವದ ನಿಯಂತ್ರಣಕ್ಕೆ ಬಹಳ ಸಹಕಾರಿಯಾಗಿದ್ದು, ಹುತ್ತದ ಮಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟುಕೊಂಡು ಮರುದಿನ ಹೊಟ್ಟೆಗೆ ಹಚ್ಚಿಕೊಳ್ಳುವ ಚಿಕಿತ್ಸೆ ಇದಾಗಿದೆ.ಅಲ್ಲದೇ  ಐಸ್ ಮಸಾಜ್ ಸಹ ಅಧಿಕ ರಕ್ತಸ್ರಾವ ತಡೆಗೆ ಪರಿಣಾಮಕಾರಿ. ಆದರೆ ಈ ಮೇಲಿನ ಮೂರು ಚಿಕಿತ್ಸೆಗಳನ್ನು ತಜ್ಞ ವೈದ್ಯರ ಸಲಹೆ ಪಡೆದು, ಸರಿಯಾಗಿ ಕಲಿತು ಮನೆಯಲ್ಲೇ ಮಾಡಿಕೊಳ್ಳಬೇಕು.ಆಹಾರ ವ್ಯವಸ್ಥೆಯನ್ನು ಪರಿಗಣಿಸಿದಾಗ, ನಾವು ತೆಗೆದುಕೊಳ್ಳುವ ಆಹಾರವು ಎಲ್ಲ ರೀತಿಯ ಉತ್ತಮ ಅಗತ್ಯ ಪೋಷಕಾಂಶಗಳಿಂದ ಕೂಡಿರಬೇಕು. ಗ್ರೀನ್ ಟೀ ಯ ಸೇವನೆ ಒಳ್ಳೆಯದು.

ಪ್ರತಿದಿನ ಬೆಳಿಗ್ಗೆ ಶುಂಠಿಯ ಕಷಾಯ ಮಾಡಿ ಕುಡಿಯುವುದು ಅಥವಾ ಚಕ್ಕೆಯ ಕಷಾಯ ಮಾಡಿ ಕುಡಿಯುವುದು ಸಹಾಯಕಾರಿ. ಬಾಳೆಹೂವಿನ ಪಲ್ಯ ಮಾಡಿ ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತಸ್ರಾವ ಕಡಿಮೆಯಾಗುತ್ತದೆ.ಇನ್ನೊಂದು ಅತ್ಯುತ್ತಮ ಚಿಕಿತ್ಸೆ ಎಂದರೆ ಗ್ರೀನ್ ಜ್ಯೂಸ್ ಥೆರಪಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದಾದರೊಂದು ರೀತಿಯ ಒಂದು ಹಿಡಿ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಕಪ್ಪು ಎಳ್ಳು ಹಾಗೂ ಒಂದು ಚಮಚ ಅಗಸೆಬೀಜದ ಪುಡಿಯನ್ನು ಜ್ಯೂಸ್ ಮಾಡಿ ಕುಡಿಯಬೇಕು.

ಇದು ಅಧಿಕ ರಕ್ತಸ್ರಾವ ಸಮಸ್ಯೆಯನ್ನು ನಿವಾರಿಸುತ್ತದೆ.ವ್ಯಾಯಾಮ ಹಾಗೂ ಯೋಗಾಭ್ಯಾಸವೂ ಸಹ ಅಧಿಕರಕ್ತಸ್ರಾವವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದ್ದು, ಉತ್ಥಿತ ಪಾದಾಸನ ಅತ್ಯಂತ ಸಹಕಾರಿ.ಹೀಗೆ ಪ್ರಕೃತಿ ಚಿಕಿತ್ಸೆ, ಆಹಾರ ಚಿಕಿತ್ಸೆ ಹಾಗೂ ವ್ಯಾಯಾಮಗಳ ಮೂಲಕ ಅಧಿಕ ರಕ್ತಸ್ರಾವ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು. ಆ ಮೂಲಕ ನಮ್ಮ ಸಮಸ್ಯೆಯನ್ನು ಸುಲಭವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಕಡಿಮೆ ಮಾಡಿಕೊಳ್ಳುವ ವಿಧಾನವನ್ನನುಸರಿಸಿ ಸಾಧಕರಾಗೋಣ.ಅಧಿಕ ರಕ್ತಸ್ರಾವ ಮನೆಮದ್ದುಗಳಿಂದ ವ್ಯಾಯಾಮಗಳಿಂದ ಹತೋಟಿಗೆ ಬರದಿದ್ದಲ್ಲಿ ಇದಕ್ಕೆ ಮೂಲ ಕಾರಣವನ್ನು ಹುಡುಕಿ ಚಿಕಿತ್ಸೆಯನ್ನು ಪಡೆಯಲು ಅಲ್ಟ್ರಾಸೌಂಡ್ ಸ್ಕಾನ್ ಬೇಕಾಗಬಹುದು. ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಕಾರಣ ಹುಡುಕಿ ಅದಕ್ಕೆ ಚಿಕಿತ್ಸೆ ಪಡೆಯಬಹುದು.

ಮೂಲ: ಡಾ|| ವೆಂಕಟ್ರಮಣ ಹೆಗಡೆ

2.97101449275
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top