ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಆರೋಗ್ಯದಲ್ಲಿ ಏರುಪೇರು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯದಲ್ಲಿ ಏರುಪೇರು

ಮದುವೆ ಮನೆಯ ಸಂಭ್ರಮ ಮತ್ತು ಆರೋಗ್ಯದಲ್ಲಿ ಏರುಪೇರು!

ಬೇಸಿಗೆ ಶುರುವಾಯ್ತು ಅಂದ್ರೆ ಮದುವೆ ಮನೆಯ ಸಂಭ್ರಮ ಶುರುವಾಗುತ್ತದೆ. ಮಕ್ಕಳಿಗೆ ಶಾಲೆಗೆ ರಜಾ, ಅಪ್ಪ-ಅಮ್ಮಂದಿರಿಗೆ ಮದುವೆ ಮನೆಯ ಮಜ… ಆದರೆ ಮದುವೆ ಮನೆಗೆ ಹೋಗಿ ಮನೆಗೆ ಹಿಂತಿರುಗುವ ಹೊತ್ತಿಗೆ ಆರೋಗ್ಯ ಸಂಬಂಧೀ ಸಮಸ್ಯೆಗಳು ಒಂದೊಂದೇ ಶುರುವಾಗುತ್ತವೆ. ಆದ್ದರಿಂದ ಮದುವೆ ಮನೆಗೆ ತೆರಳುವ ಮೊದಲು ಮತ್ತು ನಂತರ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ.

 • ಮುಖ್ಯವಾಗಿ ರೋಗ ಹರಡುವುದು ಕಲುಷಿತ ನೀರಿನಿಂದ. ಆದ್ದರಿಂದ ಎಲ್ಲೇ ಪ್ರಯಾಣಿಸುವಾಗಲೂ ನಿಮ್ಮಂದಿಗೆ ನೀರಿನ ಬಾಟಲ್‌ಅನ್ನು ಮರೆಯಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್, ರೈಲು ನಿಲ್ದಾಣಗಳಲ್ಲಿರುವ ನೀರು ಸೇವಿಸುವಾಗ ಎಚ್ಚರಿಕೆ ವಹಿಸಿ. ಕುದಿಸಿದ ನೀರನ್ನೇ ಸೇವಿಸುತ್ತಿರಿ.
 • ಮದುವೆ ಮನೆಯಲ್ಲಿ ನಿಮಗೆ ಬೇಕಾದ ಸಮಯಕ್ಕೆ ಊಟ ಮಾಡು ವುದಕ್ಕಾಗದಿರಬಹುದು. ಅತಿಯಾಗಿ ಹಸಿದಿರುವುದರಿಂದ ನಿಮಗೆ ಆ್ಯಸಿಡಿಟಿ ಸಮಸ್ಯೆಯೂ ಕಾಡಬಹುದು. ಆದ್ದರಿಂದ ನಿಮ್ಮ ಕೈಚೀಲದಲ್ಲಿ ಬಾದಾಮಿ, ಗೋಡಂಬಿಯಂಥ ಒಣಹಣ್ಣುಗಳನ್ನೋ, ಬಿಸ್ಕೆಟ್, ಹಣ್ಣು ಏನಾದರೂ ತಿನಿಸುಗಳನ್ನೋ ಇಟ್ಟುಕೊಂಡಿರಿ.
 • ನಿಮ್ಮ ಪ್ರತಿದಿನದ ಊಟಕ್ಕೂ ಸಮಾರಂಭಗಳ ಊಟಕ್ಕೂ ಬಹಳವೇ ಭಿನ್ನತೆ ಇರುತ್ತದೆ. ಆದ್ದರಿಂದ ಸಮಾರಂಭಗಳಲ್ಲಿ ಊಟ ಮಾಡುವಾಗ ಒಂದು ಮಿತಿಯನ್ನು ದಾಟಬೇಡಿ. ಇನ್ನೊಂದು ಐದಾರು ತುತ್ತು ಬೇಕು ಅನ್ನಿಸುವ ಹೊತ್ತಿಗೇ ಊಟ ಮುಗಿಸಿಬಿಡಿ.
 • ಮದುವೆ ಮನೆಯಲ್ಲಿ ಸಿಹಿ ತಿನಿಸುಗಳು ಬೇಕಷ್ಟು ಸಿಕ್ಕುತ್ತವೆ. ಹಾಗಂತ ಮನಸೋಇಚ್ಛೆ ತಿಂದುಬಿಡಬೇಡಿ. ಸಿಹಿ ತಿಂದಷ್ಟೂ ಶುದ್ಧ ನೀರನ್ನು ಹೆಚ್ಚು ಕುಡಿಯುತ್ತಿರಿ.
 • ಊಟದ ನಂತರ ಸ್ವಲ್ಪ ಹೊತ್ತು ಆಚೀಚೆ ಓಡಾಡಿ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕರಿದ ತಿಂಡಿ ಸೇವನೆಯನ್ನು ಆದಷ್ಟು ಕಡಿಮೆಮಾಡಿ.
 • ಊಟದ ನಂತರ ಮತ್ತು ಮಲಗುವ ಮೊದಲು ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ.
 • ಮದುವೆ ಮನೆಯ ಗಲಾಟೆ ಮತ್ತು ಊಟದ ಸಮಯದಲ್ಲಿ ವ್ಯತ್ಯಯ ಮುಂತಾದವುಗಳು ನಿಮ್ಮಲ್ಲಿ ತಲೆನೋವನ್ನು ತರಬಹುದು. ಹಾಗಂತ ಪದೇ ಪದೇ ಮಾತ್ರೆ ಸೇವಿಸಬೇಡಿ. ಅತಿಯಾದ ಬಿಸಿಲಿನಿಂದಾಗಿ ನಿಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಬೇರೆ ಸ್ಥಳಗಳಿಗೆ ಹೋದಾಗ ಬಾಯಾರಿಕೆ ತಡೆಯಲಾರದೆ ಸಿಕ್ಕ ಸಿಕ್ಕ ನೀರನ್ನೆಲ್ಲ ಕುಡಿಯಬೇಡಿ.

ಮದುವೆ ಮನೆಯ ಸಂಭ್ರಮವಿರಲಿ. ಆದರೆ ಅದರೊಂದಿಗೆ ನಿಮ್ಮ ಆರೋಗ್ಯದ ಕಾಳಜಿ ನಿಮಗೇ ಬಿಟ್ಟಿದ್ದು ಎಂಬುದೂ ನೆನಪಿರಲಿ…

ಬೇಸಿಗೆ ಶುರುವಾಯ್ತು ಅಂದ್ರೆ ಮದುವೆ ಮನೆಯ ಸಂಭ್ರಮ ಶುರುವಾಗುತ್ತದೆ. ಮಕ್ಕಳಿಗೆ ಶಾಲೆಗೆ ರಜಾ, ಅಪ್ಪ-ಅಮ್ಮಂದಿರಿಗೆ ಮದುವೆ ಮನೆಯ ಮಜ… ಆದರೆ ಮದುವೆ ಮನೆಗೆ ಹೋಗಿ ಮನೆಗೆ ಹಿಂತಿರುಗುವ ಹೊತ್ತಿಗೆ ಆರೋಗ್ಯ ಸಂಬಂಧೀ ಸಮಸ್ಯೆಗಳು ಒಂದೊಂದೇ ಶುರುವಾಗುತ್ತವೆ. ಆದ್ದರಿಂದ ಮದುವೆ ಮನೆಗೆ ತೆರಳುವ ಮೊದಲು ಮತ್ತು ನಂತರ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ.

 • ಮುಖ್ಯವಾಗಿ ರೋಗ ಹರಡುವುದು ಕಲುಷಿತ ನೀರಿನಿಂದ. ಆದ್ದರಿಂದ ಎಲ್ಲೇ ಪ್ರಯಾಣಿಸುವಾಗಲೂ ನಿಮ್ಮಂದಿಗೆ ನೀರಿನ ಬಾಟಲ್‌ಅನ್ನು ಮರೆಯಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್, ರೈಲು ನಿಲ್ದಾಣಗಳಲ್ಲಿರುವ ನೀರು ಸೇವಿಸುವಾಗ ಎಚ್ಚರಿಕೆ ವಹಿಸಿ. ಕುದಿಸಿದ ನೀರನ್ನೇ ಸೇವಿಸುತ್ತಿರಿ.
 • ಮದುವೆ ಮನೆಯಲ್ಲಿ ನಿಮಗೆ ಬೇಕಾದ ಸಮಯಕ್ಕೆ ಊಟ ಮಾಡುವುದಕ್ಕಾಗ ದಿರಬಹುದು. ಅತಿಯಾಗಿ ಹಸಿದಿರುವುದರಿಂದ ನಿಮಗೆ ಆ್ಯಸಿಡಿಟಿ ಸಮಸ್ಯೆಯೂ ಕಾಡಬಹುದು. ಆದ್ದರಿಂದ ನಿಮ್ಮ ಕೈಚೀಲದಲ್ಲಿ ಬಾದಾಮಿ, ಗೋಡಂಬಿಯಂಥ ಒಣಹಣ್ಣುಗಳನ್ನೋ, ಬಿಸ್ಕೆಟ್, ಹಣ್ಣು ಏನಾದರೂ ತಿನಿಸುಗಳನ್ನೋ ಇಟ್ಟುಕೊಂಡಿರಿ.
 • ನಿಮ್ಮ ಪ್ರತಿದಿನದ ಊಟಕ್ಕೂ ಸಮಾರಂಭಗಳ ಊಟಕ್ಕೂ ಬಹಳವೇ ಭಿನ್ನತೆ ಇರುತ್ತದೆ. ಆದ್ದರಿಂದ ಸಮಾರಂಭಗಳಲ್ಲಿ ಊಟ ಮಾಡುವಾಗ ಒಂದು ಮಿತಿಯನ್ನು ದಾಟಬೇಡಿ. ಇನ್ನೊಂದು ಐದಾರು ತುತ್ತು ಬೇಕು ಅನ್ನಿಸುವ ಹೊತ್ತಿಗೇ ಊಟ ಮುಗಿಸಿಬಿಡಿ.
 • ಮದುವೆ ಮನೆಯಲ್ಲಿ ಸಿಹಿ ತಿನಿಸುಗಳು ಬೇಕಷ್ಟು ಸಿಕ್ಕುತ್ತವೆ. ಹಾಗಂತ ಮನಸೋಇಚ್ಛೆ ತಿಂದುಬಿಡಬೇಡಿ. ಸಿಹಿ ತಿಂದಷ್ಟೂ ಶುದ್ಧ ನೀರನ್ನು ಹೆಚ್ಚು ಕುಡಿಯುತ್ತಿರಿ.

 • ಊಟದ ನಂತರ ಸ್ವಲ್ಪ ಹೊತ್ತು ಆಚೀಚೆ ಓಡಾಡಿ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕರಿದ ತಿಂಡಿ ಸೇವನೆಯನ್ನು ಆದಷ್ಟು ಕಡಿಮೆಮಾಡಿ.
 • ಊಟದ ನಂತರ ಮತ್ತು ಮಲಗುವ ಮೊದಲು ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ.

 • ಮದುವೆ ಮನೆಯ ಗಲಾಟೆ ಮತ್ತು ಊಟದ ಸಮಯದಲ್ಲಿ ವ್ಯತ್ಯಯ ಮುಂತಾದವುಗಳು ನಿಮ್ಮಲ್ಲಿ ತಲೆನೋವನ್ನು ತರಬಹುದು. ಹಾಗಂತ ಪದೇ ಪದೇ ಮಾತ್ರೆ ಸೇವಿಸಬೇಡಿ. ಅತಿಯಾದ ಬಿಸಿಲಿನಿಂದಾಗಿ ನಿಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಬೇರೆ ಸ್ಥಳಗಳಿಗೆ ಹೋದಾಗ ಬಾಯಾರಿಕೆ ತಡೆಯಲಾರದೆ ಸಿಕ್ಕ ಸಿಕ್ಕ ನೀರನ್ನೆಲ್ಲ ಕುಡಿಯಬೇಡಿ.

ಮದುವೆ ಮನೆಯ ಸಂಭ್ರಮವಿರಲಿ. ಆದರೆ ಅದರೊಂದಿಗೆ ನಿಮ್ಮ ಆರೋಗ್ಯದ ಕಾಳಜಿ ನಿಮಗೇ ಬಿಟ್ಟಿದ್ದು ಎಂಬುದೂ ನೆನಪಿರಲಿ…

ಮೂಲ: ವಿಕ್ರಮ

2.97058823529
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top