ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಆರೋಗ್ಯವರ್ಧಕ ರಾಗಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯವರ್ಧಕ ರಾಗಿ

ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್‍ ಡಿ ಇದ್ದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಹೊಂದಿದೆ.

ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್‍ ಡಿ ಇದ್ದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಹೊಂದಿದೆ. 
ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗ ವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿಮುದ್ದೆ ಕಡಿಮೆ ಗೊಳಿಸುತ್ತದೆ.

ರಾಗಿಯಲ್ಲಿರುವ ಅಮಿನೋ ಏಸಿಡ್ ಲೆಸಿತಿನ್ ಹಾಗೂ ಮೆಥೋನಿನ್ ಜೀರ್ಣಾಂಗ ವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಯಾಗುವಂತೆ ಸುಧಾರಿಸುತ್ತದೆ.

ನೀವು ಅನಿಮೀಯದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್ ನ ಮೂಲ ರಾಗಿ. ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆಯ ಸಮಯದಲ್ಲಿ ಕಂಡು ಬರುವ ಹಲವಾರು ರೋಗಗಳಿಗೆ ರಾಗಿಯಲ್ಲಿರುವ ಅಮಿನೋ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆಗೊಳಿಸುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿ. ಇದರಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಗಳು ದೈಹಿಕವಾಗಿ ಆರೋಗ್ಯವಾಗಿಡುತ್ತದೆ. ರಾಗಿಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ ನಿಂದ ಬಳಲುತ್ತಿರುವವರಿಗೆ ಇದು ಉತ್ತಮ. ರಾಗಿಯನ್ನು ಮುದ್ದೆಯ ರೂಪದಲ್ಲಿ ಸೇವಿಸಲು ಸಾಧ್ಯವಿಲ್ಲದವರು ಅಂಬಲಿಯಾಗಿ ಸೇವಿಸಬಹುದು.

ರಾಗಿ ಅಂಬಲಿಯನ್ನು ತಯಾರಿಸುವ ವಿಧಾನ ನೋಡಿ
ಸಾಮಗ್ರಿ : ರಾಗಿ ಹಿಟ್ಟು ಒಂದು ಬಟ್ಟಲು. ನೀರು 4 ಬಟ್ಟಲು. ಉಪ್ಪು 1 ಟೀ ಸ್ಪೂನ್. ಮಜ್ಜಿಗೆ 2 ಬಟ್ಟಲು. ಈರುಳ್ಳಿ 2 ಸಣ್ಣಗೆ ಹೆಚ್ಚಿದ್ದು.

ವಿಧಾನ : ರಾಗಿ ಹಿಟ್ಟನ್ನು ಒಂದು ಬಟ್ಟಲು ನೀರಿನಲ್ಲಿ ನೆನೆಸುವುದು. ಎಂಟು ಗಂಟೆಗಳ ನಂತರ 3 ಬಟ್ಟಲು ನೀರು ಉಪ್ಪು ಸೇರಿಸಿ ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸುವುದು. ತಣ್ಣಗಾದ ನಂತರ ಮಣ್ಣಿನ ಮಡಕೆಯಲ್ಲಿಯೂ ಇಡಬಹುದು. ಬೆಳಿಗ್ಗೆ ಹೆಚ್ಚಿದ ಈರುಳ್ಳಿ ಹಾಗೂ ಮಜ್ಜಿಗೆ ಸೇರಿಸಿ ಚೆನ್ನಾಗಿ ಕಲೆಸುವುದು. ತುಂಬಾ ಗಟ್ಟಿ ಆದರೆ ಇನ್ನೂ ಸ್ವಲ್ಪ ಮಜ್ಜಿಗೆಯನ್ನು ಸೇರಿಸಬಹುದು.

ಕಿವಿಮಾತು: ರಾಗಿ ಅಂಬಲಿಯನ್ನು ಪ್ರತಿದಿನ ಬೆಳಿಗ್ಗೆ ಒಂದು ಲೋಟ ಕುಡಿದರೆ ಆರೋಗ್ಯಕ್ಕೆ ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು.

ಮೂಲ: ವಿಕ್ರಮ

3.05940594059
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top