ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಆಹಾರ ಔಷಧವಾಗಿರಲಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರ ಔಷಧವಾಗಿರಲಿ

ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿಯಿಂದ ಜೀರ್ಣವಾಗಿ, ಆಹಾರ ರಸವಾಗುತ್ತದೆ, ಅದು ನಮ್ಮ ದೇಹದ ಧಾತುಗಳನ್ನು ಕ್ರಮವಾಗಿ ರಕ್ತ, ಮಾಂಸ, ಮೇಧಸ್, ಅಸ್ಥಿ, ಮಜ್ಜ, ಶುಕ್ರವನ್ನು ಪೋಷಿಸುತ್ತಾ ಬರುತ್ತದೆ.

ಆಹಾರ ಎಂದರೇನು?
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿಯಿಂದ ಜೀರ್ಣವಾಗಿ, ಆಹಾರ ರಸವಾಗುತ್ತದೆ, ಅದು ನಮ್ಮ ದೇಹದ ಧಾತುಗಳನ್ನು ಕ್ರಮವಾಗಿ ರಕ್ತ, ಮಾಂಸ, ಮೇಧಸ್, ಅಸ್ಥಿ, ಮಜ್ಜ, ಶುಕ್ರವನ್ನು ಪೋಷಿಸುತ್ತಾ ಬರುತ್ತದೆ. ಉಳಿದಿರುವುದು ಮಲವಾಗಿ ಹೊರಹಾಕುತ್ತದೆ.

ಆಹಾರ ಕ್ರಮವೆಂದರೇನು?
ನಾವು ತಿನ್ನುವ ಆಹಾರದಲ್ಲಿ ರಸ ಪೋಷಕಾಂಶವಿದ್ದು, ಕಬ್ಬಿಣಾಂಶವಿದ್ದು, ಹೆಚ್ಚಿನ ಪ್ರೋಟೀನ್ ಇದ್ದು, ಸ್ವಲ್ಪ ಜಿಡ್ಡಿದ್ದು, ಕ್ಯಾಲ್ಷಿಯಂ ಇದ್ದು, ಸ್ವಲ್ಪ ಕೊಬ್ಬಿರತಕ್ಕದ್ದು. ಇದು ಸರಿಯಾಗಿ ಜೀರ್ಣವಾದಲ್ಲಿ ನಮ್ಮ ಧಾತುಗಳನ್ನು ಸರಿಯಾಗಿ ಪುಷ್ಟಿಗೊಳಿಸುತ್ತದೆ. ನಾವು ಯಾವ ಅಂಶದ ಆಹಾರ ತೆಗೆದುಕೊಳ್ಳುತ್ತೇವೋ ಆ ಧಾತು ವೃದ್ದಿಸುತ್ತಾ ಹೋಗುತ್ತದೆ. ಆದ್ದರಿಂದ ಯಾವ ವಸ್ತುವಿನಲ್ಲಿ ಯಾವ ಅಂಶವಿದೆಯೆಂದು ತಿಳಿದರೆ ನಮ್ಮ ದೇಹದ ಆರೋಗ್ಯ ನಾವೇ ಕಾಪಾಡಿಕೊಳ್ಳುತ್ತಾ ಹೋಗಬಹುದು.

ರಸ ಎಂದರೇನು? ಯಾವ ಆಹಾರದಲ್ಲಿ ನಮಗೆ ಇದು ಸಿಗುತ್ತದೆ?
ನಮ್ಮ ದೇಹ ೬೦-–೬೫% ನೀರಿನಾಂಶದಿಂದ ಕೂಡಿದೆ. ಯಾವ ದ್ರವ ನಮಗೆ ತಕ್ಷಣ ಶಕ್ತಿ ಕೊಡುತ್ತದೆಯೋ ಅದಕ್ಕೆ ರಸವೆಂದು ಹೇಳುತ್ತಾರೆ.
ಆಹಾರ: -ಹಣ್ಣಿನ ರಸ, ಹಾಲು ಸಕ್ಕರೆ, ಪಾನಕ, ನೀರು+ಬೆಲ್ಲ ಇತ್ಯಾದಿ.
ಚಿಕಿತ್ಸೆ-: ಡ್ರಿಪ್ಸ್‌ ಮೂಲಕ ಗ್ಲುಕೋಸ್‌, ಫ್ಲುಡ್ಸ್‌ ಇತ್ಯಾದಿ.
ಚಿಕಿತ್ಸೆಯ ದುಷ್ಪರರಿಣಾಮ-: ಚುಚ್ಚುವ ನೋವು, ಸೋಂಕು, ಅತಿಯಾಗಿ ಹಾಕಿದರೆ ಉಸಿರಾಟದ ತೊಂದರೆ.

ರಕ್ತ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ಬೇಡದ ಅಂಶವನ್ನು, ಇಂಗಾಲ ಡೈ ಆಕ್ಸೈಡ್ ಅನ್ನು ಪುಪ್ಪುಸದ ಮೂಲಕ ಹಾಗೂ ಇತರೇ ಖನಿಜ ಹಾಗೂ ಸಕ್ಕರೆ ಅಂಶವನ್ನು ಮೂತ್ರದ ಮೂಲಕ ಹೊರ ಹಾಕುವುದೇ ರಕ್ತ.
ಆಹಾರ: ಹಸಿ ತರಕಾರಿ, ನುಗ್ಗೆ, ಕರಿಬೇವು, ಹಸಿರು ಸೊಪ್ಪು ಇತ್ಯಾದಿ.
ಚಿಕಿತ್ಸೆ-: ಕಬ್ಬಿಣ ಅಂಶವಿರುವ ಮಾತ್ರೆಗಳು, ರಕ್ತ.
ಚಿಕಿತ್ಸೆಯ ಅಡ್ಡಪರಿಣಾಮ: -ಅತಿಯಾದ ಲೋ ಬಿಪಿ, ಅಲ್ಸರ್‌, ಗ್ಯಾಸ್ಟ್ರಿಕ್‌, ಮೈ ಉರಿ, ತುರಿಕೆ, ಸುಸ್ತು, ಹೃದಯಾಘಾತ, ಮರಣ.

ಮಾಂಸ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ನಮ್ಮ ದೇಹಕ್ಕೆ ಬಲ, ಆಕಾರ ಕೊಡುವುದೇ ಮಾಂಸ.
ಆಹಾರ- ಎಲ್ಲಾ ದ್ವಿದಳ ಧಾನ್ಯ ಮುಖ್ಯವಾಗಿ ಉದ್ದು, ವ್ಯಾಯಾಮ
ಚಿಕಿತ್ಸೆ-: ಸ್ಟಿರಾಯ್ಡ್
ಚಿಕಿತ್ಸೆಯ ದುಷ್ಪರಿಣಾಮ: -ರೋಗನಿರೋಧಕ ಶಕ್ತಿ ಕುಂದಿಸುತ್ತದೆ.

ಮೇಧಸ್ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ಇದು ಶಕ್ತಿಯನ್ನು ಸಂಗ್ರಹಿಸಿಡುವ ಒಂದು ವ್ಯವಸ್ಥೆ.
ಆಹಾರ: ತುಪ್ಪ, ಹಾಲು, ಬೆಣ್ಣೆ, ಕೆನೆ, ಮೊಸರು, ಎಣ್ಣೆ ಇತ್ಯಾದಿ.
ಚಿಕಿತ್ಸೆ : ಸ್ಟಿರಾಯ್ಡ್
ಅಡ್ಡಪರಿಣಾಮಗಳು: -ರೋಗನಿರೋಧಕ ಶಕ್ತಿ ಕುಂದಿಸುತ್ತದೆ.

ಅಸ್ಥಿ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ನಮ್ಮ ದೇಹದ ಧಾರಣಾ ಕಂಭಗಳು ಇವು.
ಆಹಾರ-: ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪು ತರಕಾರಿಗಳು, ಶೇಂಗಾ ಮತ್ತು ಇತರೆ ದ್ವಿದಳ ಧಾನ್ಯಗಳು.
ಚಿಕಿತ್ಸೆ-: ಕ್ಯಾಲ್ಸಿಯಂ ಸಪ್ಲಿಮೆಂಟ್ಸ್‌.
ಚಿಕಿತ್ಸೆಯ ದುಷ್ಪರಿಣಾಮ: -ಮಲಬದ್ಧತೆ, ಜೀರ್ಣ ತೊಂದರೆಗಳು.

ಮಜ್ಜ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ಇದು ಮೂಳೆಯ ಒಳಗಿರುವ ಸಾರ, ರಕ್ತವನ್ನು ಉತ್ಪಾದಿಸಲು ಸಹಾಯಮಾಡುತ್ತದೆ.
ಆಹಾರ-: ತಪ್ಪ, ಹಾಲು, ಬೆಣ್ಣೆ, ಕೆನೆ, ಮೊಸರು, ಎಣ್ಣೆ ಇತ್ಯಾದಿ.
ಚಿಕಿತ್ಸೆ: ಸ್ಟಿರಾಯ್ಡ್
ಚಿಕಿತ್ಸೆಯ ದುಷ್ಪರಿಣಾಮ: -ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.

ಶುಕ್ರ ಎಂದರೇನು? ಯಾವ ಆಹಾರದಲ್ಲಿ ಇದು ಸಿಗುತ್ತದೆ?
ಸಂತಾನೋತ್ಪತ್ತಿಗೆ ಕಾರಣವಾದುದ್ದೇ ಶುಕ್ರ.
ಆಹಾರ-: ಗಂಡಸರಿಗೆ- ಹಾಲು ಮತ್ತು ತುಪ್ಪ, ಹೆಂಗಸರಿಗೆ- ಉದ್ದು, ಎಳ್ಳೆಣ್ಣೆ.
ಚಿಕಿತ್ಸೆ-: ಸ್ಟಿರಾಯ್ಡ್
ಚಿಕಿತ್ಸೆಯ ದುಷ್ಪರಿಣಾಮ: -ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.‘

ಆಯುರ್ವೇದ ಚಿಕಿತ್ಸಾ ಕ್ರಮ:

ಆಯುರ್ವೇದದಲ್ಲಿ ಮೊದಲು ನಿಮ್ಮು ಜೀರ್ಣ ಕ್ರಿಯೆಯನ್ನು ಸರಿಮಾಡಲಾಗುತ್ತದೆ. ನಂತರ ಯಾವ ಧಾತುಗೆ ಬೇಕೊ ಆ ಧಾತುವಿನ ಅಗತ್ಯಕ್ಕೆ ಅನುಗುಣವಾಗಿ ಔಷಧಿ ಕೊಟ್ಟು, ಪಥ್ಯ ಹೇಳಲಾಗುತ್ತದೆ. ಈ ಪದ್ಧತಿಯು ನಮ್ಮ ಇಡೀ ದೇಹದ ಪ್ರಕ್ರಿಯೆಯನ್ನು ಸರಿಮಾಡುತ್ತದೆ. ಆದ್ದರಿಂದ ಇದರ ಪರಿಣಾಮ ತಕ್ಷಣಕ್ಕೆ ಗೋಚರವಾಗದೇ ಶಾಶ್ವತ ಪರಿಹಾರ ನೀಡುತ್ತದೆ.

ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಜೀರ್ಣ ಕ್ರಿಯೆಯನ್ನು ಸರಿಯಾಗಿ ಇಟ್ಟುಕೊಂಡು, ಆಹಾರವನ್ನು ಸರಿಯಾದ ಕ್ರಮದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ೮೦% ಕಾಯಿಲೆಯನ್ನು ದೂರವಿಡಬಹುದು.

ಆರೋಗ್ಯವಾಗಿರಲು ಕೆಲವು ನಿಯಮಗಳು:

  • ಬೆಳಿಗ್ಗೆ ಬೇಗ ಏಳುವುದನ್ನು ರೂಡಿಮಾಡಿಕೊಳ್ಳಿ.
  • ಹಗಲು ನಿದ್ದೆ (ಮದ್ಯಾಹ್ನ ನಿದ್ದೆ) ಮಾಡ ಬೇಡಿ
  • ರಾತ್ರಿ ಬೇಗ ಮಲಗಿ (ರಾತ್ರಿ ನಿದ್ದೆ ಕೆಡಬೇಡಿ)
  • ದಿನದಲ್ಲಿ ಒಂದರಿಂದ ಒಂದೂವರೆ ಗಂಟೆ ವ್ಯಾಯಾಮ ಮಾಡಿ
  • ದೈಹಿಕ ಪರಿಶ್ರಮವಿರುವ ಕೆಲಸವನ್ನು ಹೆಚ್ಚು ಮಾಡಿ
  • ದಿನದಲ್ಲಿ ೨ ಹೊತ್ತ ಮಾತ್ರ ಊಟಮಾಡಿ

ಆಹಾರದಲ್ಲಿ ಹಣ್ಣು, ಹಸಿ ತರಕಾರಿ, ದ್ವಿದಳ ಧನ್ಯ,  ಸ್ವಲ್ಪ ತುಪ್ಪ, ಹಾಲು, ಹಾಲಿನ ಉತ್ಪನ್ನಗಳು ಇರಬೇಕು. ಕರೆದ ಪದಾರ್ಥ, ಮೈದಾದಿಂದ ಮಾಡಿದ ವಸ್ತುಗಳು (ಬ್ರೆಡ್‌, ಬರ್ಗರ್‌, ಕೇಕ್‌) ಕಡಿಮೆ ಮಾಡಬೇಕು. ಜೀರ್ಣಕ್ರಿಯೆ ಸರಿಯಾಗಿರಲು ನೀರು ಮಜ್ಜಿಗೆ, ಬಿಸಿ ನೀರು ಉತ್ತಮ. ವಾರದಲ್ಲಿ ಒಮ್ಮೆಯಾದರೂ ಉಪವಾಸ ಮಾಡಬೇಕು,

ಮೂಲ :ಪ್ರಜಾವಾಣಿ

2.96703296703
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top