ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರಕ್ರಮ

ಲ್ಲ ಏಕದಳ ಧಾನ್ಯಗಳಲ್ಲಿ ಸಾಮಾನ್ಯವಾಗಿ ಒಂದೇ ಪ್ರಮಾಣದ ಕ್ಯಾಲರಿ ಅಂಶಗಳಿರುತ್ತವೆ. ನಾರಿನ ಅಂಶ, ಪಿಷ್ಟಗಳ ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು ಅಷ್ಟೆ

ಡಯಟಿಂಗ್ ಕುರಿತ ಕೆಲ ಕಲ್ಪನೆಗಳು
ಅನ್ನದಲ್ಲಿ ಕೊಬ್ಬಿನಂಶ ಹೆಚ್ಚು: ಎಲ್ಲ ಏಕದಳ ಧಾನ್ಯಗಳಲ್ಲಿ ಸಾಮಾನ್ಯವಾಗಿ ಒಂದೇ ಪ್ರಮಾಣದ ಕ್ಯಾಲರಿ ಅಂಶಗಳಿರುತ್ತವೆ. ನಾರಿನ ಅಂಶ, ಪಿಷ್ಟಗಳ ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು ಅಷ್ಟೆ. ಯಾವುದನ್ನೇ ಆಗಲಿ ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಕೊಬ್ಬಿನಂಶ ಜಾಸ್ತಿಯಾಗುವುದಿಲ್ಲ. ಕೆಲವು ಆರೋಗ್ಯಕಾರಿ ತರಕಾರಿಗಳೊಂದಿಗೆ ಅನ್ನವನ್ನು ಊಟ ಮಾಡುವುದು ಸಮಸ್ಥಿತಿಯ ಆಹಾರಕ್ರಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆನ್ನಕ್ಕಿಂತ ಚಪಾತಿಯನ್ನು ಸೇವಿಸುವುದು ಉತ್ತಮವಾದ ಆಯ್ಕೆ ಎನ್ನುವುದು ಕೂಡ ಒಂದು ಮಿಥ್ಯ ಕಲ್ಪನೆ. ಎಣ್ಣೆ ಮತ್ತು ತುಪ್ಪಗಳಿಂದ ಮಾಡಲಾಗುವ ಚಪಾತಿಯು ಕೂಡ ಅದರಷ್ಟೇ ಕೊಬ್ಬಿನಂಶವನ್ನು ಹೊಂದಿರುತ್ತದೆ.

ಊಟ ಬಿಟ್ಟು, ತೂಕಕ್ಕೆ ಕಡಿತ ಹಾಕುವುದು: ಊಟವನ್ನು ಬಿಟ್ಟಾಕ್ಷಣ, ತನ್ನೊಳಗೆ ಸರಬರಾಜಾಗುವ ಆಹಾರದ ಕೊರತೆ ಎಂದೇ ಭಾವಿಸುವ ದೇಹವು ಕೊಬ್ಬನ್ನು ಸಂಗ್ರಹಿಸಿಟ್ಟುಕೊಳ್ಳತೊಡಗುತ್ತದೆ. ಅದು ವ್ಯಕ್ತಿಯೊಬ್ಬನ ಹಸಿವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಆತನು ಇನ್ನೂ ಹೆಚ್ಚಿನ ತೂಕವನ್ನು ಗಳಿಸಿಕೊಳ್ಳುವಂತಾಗುತ್ತದೆ. ಅಂತವರು ಹಸಿವಿನ ಬಾಧೆಯಿಂದಾಗಿ ಆರೋಗ್ಯಕರವಲ್ಲದ ಅಥವಾ ಜಂಕ್ ಆಹಾರಗಳನ್ನು ಸೇವಿಸ ತೊಡಗಬಹುದು. ಇದು ಆಸಿಡಿಟಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಸಂಶೋಧನೆಗಳಿಂದ ದೃಢಪಟ್ಟಿರುವ ಇನ್ನೊಂದು ಅಂಶವೆಂದರೆ, ವ್ಯಕ್ತಿಯ ಗ್ರಹಣ ಸಾಮರ್ಥ್ಯದ ಇಳಿಕೆಗೂ ಇದು ಕಾರಣವಾಗಬಲ್ಲದು.

ಹೇರಳವಾದ ಆಲಿವ್‌ ಎಣ್ಣೆ ಬಳಕೆ: ಆಲಿವ್ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಾದರೂ, ಅದರಲ್ಲಿರುವ ಕ್ಯಾಲೊರಿಯ ಪ್ರಮಾಣವು ಇತರ ಸಸ್ಯಜನ್ಯ ಎಣ್ಣೆಯ ಪ್ರಮಾಣದಷ್ಟೇ ಇರುತ್ತದೆ. ಆಲಿವ್ ಎಣ್ಣೆಯಲ್ಲಿರುವ ಘಟಕಾಂಶಗಳ ಮಿಶ್ರಣವು ಆರೋಗ್ಯಕ್ಕೆ ಒಳ್ಳೆಯದಾದರೂ ಅದರ ಯಥೇಚ್ಛ ಸೇವನೆಯಿಂದ ದೇಹದ ತೂಕವು ವರ್ಧಿಸುತ್ತದೆ.

ಗರ್ಭಾವಸ್ಥೆಯಲ್ಲಿ ಊಟದ ಪ್ರಮಾಣ ಹೆಚ್ಚಿಸಬೇಕು: ಗರ್ಭಾವಸ್ಥೆಯ ಮೊದಲ ಮೂರು ತಿಂಗಳುಗಳಲ್ಲಿ ಪೋಷಕಾಂಶಗಳು ಮತ್ತು ಶಕ್ತಿಯ ಅವಶ್ಯಕತೆ  ೧೦೦ ಕಿಲೊ ಕ್ಯಾಲೊರಿಯಷ್ಟು ಹೆಚ್ಚುತ್ತದೆ. ಎರಡನೆಯ ತ್ರೈಮಾಸಿಕದಲ್ಲಿ ಇದು ೩೦೦ ಕಿಲೊ ಕ್ಯಾಲೊರಿಯಷ್ಟಾಗಿರುತ್ತದೆ. ಇದು ಅಷ್ಟೊಂದು ಭಾರೀ ಪ್ರಮಾಣದ್ದಲ್ಲ. ಇದನ್ನ ಒಬ್ಬ ಇಡೀ ವ್ಯಕ್ತಿಗೆ ಬೇಕಾಗುವಷ್ಟು ಆಹಾರ ಎಂದು ಪರಿಗಣಿಸಬೇಕಾಗಿಲ್ಲ. ಗರ್ಭಾವಸ್ಥೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಆಹಾರಸೇವನೆ ಸೂಕ್ತವಾದದ್ದು. ಉದಾಹರಣೆಗೆ ಎರಡು ಚಪಾತಿಗಳನ್ನು ತಿನ್ನುವ ಬದಲು, ಮೂರನ್ನು ತಿನ್ನುವುದು ಒಳ್ಳೆಯದು.

ಮಕ್ಕಳು ಹೆಚ್ಚು ತಿಂದರೂ ತೂಕ ಹೆಚ್ಚುವುದಿಲ್ಲ: ಸಾಮಾನ್ಯವಾಗಿ, ಮಕ್ಕಳು ಹೆಚ್ಚಿನ ರೀತಿಯಲ್ಲಿ ಕ್ರಿಯಾಶೀಲರಾಗಿದ್ದಲ್ಲಿ, ಅವರು ತೆಗೆದುಕೊಳ್ಳುವ ಆಹಾರವು ಅವಧಿಗೂ ಮುನ್ನವೇ ಜೀರ್ಣವಾಗಿಬಿಡುತ್ತದೆ. ಆದರೆ, ಮಕ್ಕಳು ಮನೆಯೊಳಗಿನ ಚಟುವಟಿಕೆಗಳಿಗೆ ಮಾತ್ರ ಸಿಮಿತಗೊಳಿಸಲ್ಪಟ್ಟು ಜಡವಾದ ಜೀವನಶೈಲಿಗೆ ಸೀಮಿತವಾದಲ್ಲಿ ಹೆಚ್ಚಿನ ತೂಕವನ್ನು ಗಳಿಸಿಕೊಳ್ಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಜಂಕ್ ಆಹಾರಗಳನ್ನು ಸೇವಿಸುತ್ತಿದ್ದ ಪಕ್ಷದಲ್ಲಿ, ಅದನ್ನು ಸೀಮಿತಗೊಳಿಸಿ ಉತ್ತಮ ಪೋಷಕಾಂಶಗಳಿರುವ ಆಹಾರವನ್ನು ಒದಗಿಸುವತ್ತ ಗಮನಹರಿಸಿ ಮಕ್ಕಳಲ್ಲಿ ಆರೋಗ್ಯವಂತ ಬೆಳವಣಿಗೆ ಉಂಟಾಗುವಂತೆ ಆಸ್ಥೆ ವಹಿಸಬೇಕು.ಚಿಕ್ಕ ವಯಸ್ಸಿನವರಿರುವಾಗಲೇ ಆರೋಗ್ಯಕರ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದರಿಂದ ಸ್ಥೂಲಕಾಯಕ್ಕೆ ಸಂಬಂಧಿಸಿದ ಅಥವಾ ಅಂತಹ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಹೊರತಾಗಿರುವುದು ಸಾಧ್ಯವಾಗುತ್ತದೆ.

ಹಾಲು ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ.
ಪ್ರೊಟೀನು, ಕ್ಯಾಲೊರಿ ಹಾಗೂ ಕ್ಯಾಲ್ಶಿಯಂ ಘಟಕಗಳ ಮೂಲ ಹಾಲು. ಹಾಲನ್ನು ಕುಡಿಸದೇ ಇರುವುದು ದೇಹಕ್ಕೆ ಬೇಕಾದ ಇತರ ಪ್ರಮುಖ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ಯಾರು ತಮ್ಮ ತೂಕವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರುತ್ತಾರೆಯೋ ಅಂಥವರು, ಕೆನೆಯನ್ನು ತೆಗೆದು ಹಾಲನ್ನು ಸೇವಿಸಬಹುದಾಗಿದೆ. ಕೆನೆತಹಿತ ಹಾಲಿನಿಂದ ತಯಾರಿಸಲಾದ ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಬೇಕಾದ ಕ್ಯಾಲ್ಶಿಯಂ ಪ್ರಮಾಣವು ದೊರಕುತ್ತದೆ ಮತ್ತು ಹೆಚ್ಚಿನ ಕೊಬ್ಬಿನಂಶ ಕೆನೆರಹಿತ ಹಾಲಿನಲ್ಲಿ ಇರುವುದಿಲ್ಲ.
ಹಾಲನ್ನೂಡುವ ತಾಯಂದಿರು ಮಗುವಿಗೆ ನೆಗಡಿಯಾಗಬಹುದೆಂಬ ಕಲ್ಪನೆಯಿಂದ ಸಾಮಾನ್ಯವಾಗಿ ಹಸಿರು ಸೊಪ್ಪು,

ನೀರು ಮತ್ತು ತರಕಾರಿಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ.

ಮಗುವಿಗೆ ಎದೆಹಾಲು ನೀಡುವ ಸಂದರ್ಭವು ಅತ್ಯಂತ ಪ್ರಮುಖವಾದ ಹಂತಗಳಲ್ಲಿ ಒಂದು. ಈ ಸಂದರ್ಭದಲ್ಲಿ ಮಗು ತಾಯಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತ­ವಾಗಿರುತ್ತದೆ. ಆದ್ದರಿಂದ ತಾಯಿಯು ಆರೋಗ್ಯವಂತಳಾಗಿ ಇರಬೇಕಾದುದು ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಸಂಗತಿಯಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಹಸಿರು ತರಕಾರಿಗಳನ್ನು ಮತ್ತು ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ತಾಯಿಯ ಆರೋಗ್ಯದ ಮೇಲೆ ಅಹಿತಕರ ಪರಿಣಾಮವುಂಟಾಗುತ್ತದೆ. ಯಾವುದೇ ಪದಾರ್ಥಗಳ ಅಲರ್ಜಿ ಇಲ್ಲದ ಸಂದರ್ಭದಲ್ಲಿ ಎದೆಹಾಲು ಊಡುವ ತಾಯಿಯು ಆರೋಗ್ಯಕಾರಿಯಾದ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನೂ ಸೇವಿಸಬಹುದಾಗಿದೆ.

2.84536082474
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top