ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಇಂಗು

ಆರೋಗ್ಯ ವೃದ್ಧಿಗೆ ಇಂಗು

ಯಾವುದೇ ಮಸಾಲ ಪದಾರ್ಥವನ್ನು ಮುಚ್ಚಿಟ್ಟು ಮರೆಯಬಹುದು. ಆದರೆ ಇಂಗನ್ನು ಮರೆಯುವಂತಿಲ್ಲ. ಕಾರಣ ನಿಜವಾದ ಇಂಗನ್ನು ಎಲ್ಲಿಟ್ಟರೂ ನಾಲ್ಕಾರು ಮಾರು ದೂರ ವಾಸನೆಯನ್ನು ಹರಡದೇ ಬಿಡುವುದಿಲ್ಲ. ಒಗ್ಗರಣೆ ಘಮ ಘಮಿಸಬೇಕಾದರೆ ಅದಕ್ಕೆ ಇಂಗು ಹಾಕಲೇಬೇಕು. ಇದನ್ನು ಉಪಯೋಗಿಸುವ ಮುನ್ನ ತುಪ್ಪದಲ್ಲಿ ಹುರಿಯಲೇಬೇಕು. ಆಗ ಮಾತ್ರ ಅದರ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗುತ್ತದೆ. ಇದು ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತ.

1ಚಿಟಿಕೆ ಇಂಗನ್ನು 1/2 ಲೋಟ ಬಿಸಿ ನೀರಿನೊಡನೆ ಸೇವಿಸಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ. 1 ಚಮಚ ವೀಳ್ಯದೆಲೆ ರಸದ ಜತೆ 1/4 ಚಮಚ ಬಿಳಿ ಈರುಳ್ಳಿ ರಸ, 2 ಚಮಚ ಜೇನುತುಪ್ಪ ಹಾಗೂ ಸ್ವಲ್ಪ ಇಂಗು ಬೆರೆಸಿ ತೇದು ಮಕ್ಕಳಿಗೆ ನೆಕ್ಕಿಸಿದರೆ ಕಫ, ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ.
ಹೊಟ್ಟೆ ಹಸಿವನ್ನು ಹೆಚ್ಚಿಸಬೇಕಾದರೆ ಇಂಗು, ಶುಂಠಿ, ಏಲಕ್ಕಿ, ಸೈಂದವ ಉಪ್ಪನ್ನು ಸೇರಿಸಿ ಬಿಸಿನೀರಿನ ಜತೆ ಸೇವಿಸಬೇಕು.

ಮುಟ್ಟಿನ ಸಮಯದ ಹೊಟ್ಟೆನೋವನ್ನು ಹೋಗಲಾಡಿಸಲು ಮುಟ್ಟಾಗುವ ಹಿಂದಿನ ದಿನವೇ 1 ಚೂರು ಇಂಗನ್ನು 1 ಬಾಳೆಹಣ್ಣಿನ ಜತೆ ಸೇವಿಸಬೇಕು.
1ಚೂರು ಶುಂಠಿ, 2 ಎಸಳು ಬೆಳ್ಳುಳ್ಳಿ ಹಾಗೂ 1/2 ಚಿಟಿಕೆ ಇಂಗನ್ನು ಸೇರಿಸಿ ಜಜ್ಜಿ 150 ಮಿಲಿ ಎಳ್ಳೆಣ್ಣೆಯಲ್ಲಿ ಸೇರಿಸಿ ಚೆನ್ನಾಗಿ ಕಾಯಿಸಿ ಸೋಸಿ ಶೇಖರಣೆ ಮಾಡಿ. ಕೀಲುನೋವಿಗೆ ಈ ಎಣ್ಣೆಯನ್ನು ಹಚ್ಚಿದರೆ ನೋವು ಬೇಗ ಕಡಿಮೆಯಾಗುತ್ತದೆ. ಇಂಗು ಸ್ವಲ್ಪ, ಮೆಣಸು 4 ಕಾಳು, 1/4ಚಮಚ ಬೆಳ್ಳುಳ್ಳಿ ರಸ, 1/4 ಚಮಚ ಶುಂಠಿ ರಸ, 2 ಹನಿ ಹರಳೆಣ್ಣೆ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ದಮ್ಮು ಇರುವ ಸಮಯದಲ್ಲಿ ನಾಲಿಗೆಗೆ ತಿಕ್ಕಿದರೆ 10 ನಿಮಿಷಗಳಲ್ಲಿ ದಮ್ಮು ಕಡಿಮೆಯಾಗಿ ಕಫ ಹೊರಬರುತ್ತದೆ.

ಮೂಲ: ವಿಕ್ರಮ

2.92307692308
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top