ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಕಾಫಿ ಪ್ರಿಯರೇ… ಹುಷಾರು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಾಫಿ ಪ್ರಿಯರೇ… ಹುಷಾರು

ಕಾಫಿ ಪ್ರಿಯರೇ… ಹುಷಾರು

ನೀವು ಕಾಫಿ ಪ್ರಿಯರಾ? ಹಾಗೇನಾದರೂ ಆಗಿದ್ದರೆ ನೀವು ಕುಡಿಯುವ ಕಾಫಿಯಲ್ಲಿ ಕೆಫಿನ್ ಅಂಶ ಎಷ್ಟಿದೆ ಎಂಬುದನ್ನು ಮೊದಲು ಪತ್ತೆ ಮಾಡಿಕೊಳ್ಳಿ. ಏಕೆಂದರೆ ಅತಿಯಾದ ಕೆಫಿನ್ ಅಂಶದಿಂದ ದೇಹ ಮಾರಣಾಂತಿಕ ಸಮಸ್ಯೆಗಳಿಗೆ ತುತ್ತಾಗಬಹುದು ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ.
ಕಾಫಿಯಲ್ಲಿರುವ ಕೆಫಿನ್ ಅಂಶ ಒಂದರ್ಥದಲ್ಲಿ ಮಾದಕ ದ್ರವ್ಯದ ಹಾಗೆಯೇ. ಅದು ಕ್ರಮೇಣ ವ್ಯಕ್ತಿ ಅದಕ್ಕೆ ಒಗ್ಗಿಹೋಗುವಂತೆ ಮಾಡುತ್ತದೆ. ಡ್ರಗ್ಸ್ ಸೇವಿಸುವ ವ್ಯಕ್ತಿಗೆ ಅದನ್ನು ಬಿಟ್ಟಿರುವುದು ಹೇಗೆ ಕಷ್ಟವಾಗುತ್ತದೆಯೋ ಹಾಗೆಯೇ ಕಾಫಿಯೂ ಒಂದು ರೀತಿಯ ಚಟವಾಗಿ ಪರಿಣಮಿಸುತ್ತದೆ.
ಗರ್ಭಿಣಿಯರು ಹೆಚ್ಚಾಗಿ ಕಾಫಿ ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ದಿನಕ್ಕೊಮ್ಮೆಯೋ, ಎರಡು ಬಾರಿಯೋ ಕಾಫಿ ಸೇವಿಸಿದರೆ ಅದು ಚೈತನ್ಯ ನೀಡುವುದಲ್ಲದೆ, ಚಟುವಟಿಕೆಯಿಂದ ಇರಲು ಸಹಕರಿಸುತ್ತದೆ. ಆದರೆ ಇದೇ ಅಭ್ಯಾಸ ಅತಿಯಾಗಿ, ದಿನಕ್ಕೆ ಐದಾರು ಬಾರಿ ಅಥವಾ ಇನ್ನೂ ಹೆಚ್ಚು ಬಾರಿ ಕಾಫಿ ಸೇವಿಸುತ್ತಲೇ ಇರುವುದರಿಂದ ಶರೀರದ ಆರೋಗ್ಯ ಸಂಪೂರ್ಣ ಹದಗೆಡುವುದು ಖಂಡಿತ.
ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದೂ ಸಹ ಇತ್ತೀಚೆಗೆ ದೃಢಪಟ್ಟಿದೆ. ಅತಿಯಾಗಿ ಕಾಫಿ ಸೇವಿಸುವ ವ್ಯಕ್ತಿ ಮಾದಕ ದ್ರವ್ಯ ವ್ಯಸನಿಯಂತೆ ಸದಾ ಯಾವುದೋ ಒಂದು ಥರದ ಭ್ರಮಾಲೋಕದಲ್ಲೇ ಇರುತ್ತಾನೆ. ಕಾಫಿ ಸೇವಿಸುವ ವ್ಯಕ್ತಿಯ ರಕ್ತದೊತ್ತಡ ಸಾಮಾನ್ಯನಿಗಿಂತ ಹೆಚ್ಚಿರುವುದಲ್ಲದೆ, ಆತ ಹಲವು ದೈಹಿಕ ಸಮಸ್ಯೆಗಳನ್ನು ಹೊಂದಿರುತ್ತಾನೆ.
ನಾಲಿಗೆಗೆ ರುಚಿ ಅನ್ನಿಸಿದರೂ, ಅತಿಯಾದರೆ ಕಾಫಿ ಆರೋಗ್ಯಕ್ಕೆ ಹಾನಿಯೇ. ಆಗಾಗ ಏನಾದರೂ ಬಿಸಿ ಪಾನೀಯವನ್ನು ಸೇವಿಸಲೇಬೇಕು ಎಂದೆನ್ನಿಸಿದರೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹ ಸೇವಿಸಿ, ಅಥವಾ ನಿಂಬೆ ಹಣ್ಣಿನ ಚಹ ಸೇವಿಸಿ. ಇದು ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ, ವ್ಯಕ್ತಿ ಚಟುವಟಿಕೆಯಿಂದಿರುವಂತೆ ಮಾಡುತ್ತದೆ.

ಮೂಲ: ವಿಕ್ರಮ

2.89772727273
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top