ಕಾಫಿ ಹಾಗೂ ಲಿಂಬೆಯ ಜೋಡಿ ಮಾಡಲಿದೆ ಕಮಾಲಿನ ಮೋಡಿ!
ಸ್ಥೂಲಕಾಯಕ್ಕೆ ನಮ್ಮ ಶರೀರದಲ್ಲಿ ಶೇಖರವಾಗಿರುವ ಕೊಬ್ಬು ಮುಖ್ಯ ಕಾರಣ. ಈ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ದೇಹ ಕರಗಿದ ಕೊಬ್ಬನ್ನು ಮತ್ತೆ ಸಂಗ್ರಹಗೊಳಿಸುವತ್ತ ನಮ್ಮ ಮನಸ್ಸನ್ನು ತಿರುಗಿಸುವುದರಿಂದ ಕಳೆದುಕೊಂಡ ಕೊಬ್ಬಿಗಿಂತಲೂ ಹೆಚ್ಚು ಕೊಬ್ಬು ಶೇಖರವಾಗುವಷ್ಟು ಹೆಚ್ಚು ಹೆಚ್ಚು ಕ್ಯಾಲೋರಿಗಳನ್ನು ತಿನ್ನುತ್ತಾ ಹೋಗುತ್ತೇವೆ. ಇದರಿಂದಾಗಿ ಕೊಬ್ಬು ಕರಗುವುದಿರಲಿ, ಬದಲಿಗೆ ಇದ್ದ ಕೊಬ್ಬಿನ ಮೇಲೆ ಇನ್ನಷ್ಟು ಕೊಬ್ಬು ಹೆಚ್ಚುತ್ತಾ ಸೊಂಟದ ಸುತ್ತಳತೆ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೊಂದು ಸುಲಭ ಉಪಾಯವಿದೆ. ವ್ಯಾಯಾಮದ ಮೂಲಕ ಕಳೆದುಕೊಂಡ ಕೊಬ್ಬು ಮತ್ತೆ ಸಂಗ್ರಹವಾಗದಿರಲು ದೇಹದಲ್ಲಿ ಇತ್ತೀಚೆಗೆ ಸೇವಿಸಿದ ಆಹಾರದ ಮೂಲಕ ಸಂಗ್ರಹವಾಗುತ್ತಿರುವ ಕೊಬ್ಬನ್ನು ಶೀಘ್ರವಾಗಿ ಬಳಸುವುದು. ಈ ಕೆಲಸವನ್ನು ಸಕ್ಕರೆ ಹಾಕದ ಕಾಫಿ ಮತ್ತು ಲಿಂಬೆಯ ರಸದ ಮಿಶ್ರಣ ಚೆನ್ನಾಗಿ ಮಾಡುತ್ತವೆ. ಹೇಗೆಂದು ತಿಳಿಯಬೇಕೇ? ಮುಂದೆ ಓದಿ.
ಕೊಬ್ಬು ಕರಗಿಸಲು ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ. ಜೊತೆಗೇ ಇದರಲ್ಲಿರುವ ಕೆಫೀನ್, ಥಿಯೋಬ್ರೋಮಿನ್, ಥಿಯೋಫೈಲಿನ್ ಮತ್ತು ಕ್ಲೋರೋಜೆನಿಕ್ ಆಮ್ಲಗಳು ಜಠರದಲ್ಲಿ ಕರಗಲು ಹೆಚ್ಚು ಕೊಬ್ಬನ್ನು ಬೇಡುವುದರಿಂದ ಕೊಬ್ಬು ಶೀಘ್ರವಾಗಿ ಕರಗುತ್ತದೆ. ಕಾಫಿ ಸೇವನೆಯ ಮೂಲಕ ಬಿಡುಗಡೆಗೊಳ್ಳುವ ಹಾರ್ಮೋನುಗಳು ಕಾಫಿ ಕುಡಿದ ಬಳಿಕ ಉಲ್ಲಾಸದಿಂದಿರಲು ಕಾಫಿ ನಮ್ಮ ನರವ್ಯವಸ್ಥೆಗೆ ಮಾಡುವ ಪ್ರಚೋದನೆ ಕಾರಣವಾಗಿದೆ. ಈ ಪ್ರಚೋದನೆ ಕೊಬ್ಬಿನ ಕಣಗಳನ್ನು ಇನ್ನಷ್ಟು ಚಿಕ್ಕದಾಗಿಸಲು, ತನ್ಮೂಲಕ ಸುಲಭವಾಗಿ ಬಳಕೆಯಾಗಲು ನೆರವಾಗುತ್ತದೆ. ಜೊತೆಗೇ ಈ ಪ್ರಚೋದನೆಯಿಂದ ಎಪಿನೆಫ್ರಿನ್ ಮತ್ತು ಅಡ್ರಿನಲಿನ್ ಎಂಬ ಹಾರ್ಮೋನುಗಳೂ ಸ್ರವಿತಗೊಳ್ಳುತ್ತವೆ. (ಅತ್ಯಂತ ಭಯವಾದಾಗ ಮೈ ನಡುಕ ಹುಟ್ಟಲು ಅಡ್ರಿನಲಿನ್ ಕಾರಣ) ಈ ಹಾರ್ಮೋನುಗಳು ಕೊಬ್ಬಿನ ಕಣಗಳನ್ನು ಅಂಟಿಕೊಂಡಿದ್ದಲ್ಲಿಂದ ಬೇರ್ಪಡಿಸಿ ಮುಕ್ತವಾಗಿ ಲಭ್ಯವಾಗುವಂತೆ ಮಾಡುತ್ತವೆ. ಈ ಮುಕ್ತ ಕಣಗಳಿಗೆ free fatty acids ಎಂದು ಕರೆಯಲಾಗುತ್ತದೆ. ಈ ಮುಕ್ತಕಣಗಳನ್ನು ಹಸಿದಿರುವ ಜೀವಕೋಶಗಳು ಬಳಸಿ ಶಕ್ತಿ ಉತ್ಪಾದಿಸುತ್ತವೆ. (ದೈಹಿಕ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿ).
ಲಿಂಬೆ ಮತ್ತು ಕಾಫಿಯ ಕರಾಮತ್ತು ಕಾಫಿಯ ಈ ಗುಣಗಳು ಸರಿಸುಮಾರು ನಿಧಾನವಾಗಿ ಆಗುತ್ತವೆ. ಆದರೆ ಇದರೊಂದಿಗೆ ಲಿಂಬೆರಸ ಸೇರಿದಾಗ ಉತ್ತತ್ತಿಯಾಗುವ ಕ್ಲೋರೋಜೆನಿಕ್ ಆಮ್ಲ (chlorogenic acid) ಪ್ರಬಲವಾಗಿದ್ದು ಬೆಂಕಿಯ ಮೇಲೆ ಸೀಮೆಯೆಣ್ಣೆ ಸುರಿದಂತೆ ಈ ಶಕ್ತಿ ಹೆಚ್ಚುತ್ತದೆ. ಈ ಆಮ್ಲ ದೇಹದಲ್ಲಿ ಬಿಡುಗಡೆಯಾಗಿದ್ದ ಮುಕ್ತ ಕಣಗಳನ್ನು ಕಬಳಿಸುತ್ತಾ ಹೋಗುತ್ತದೆ ಮತ್ತು ಇದೇ ಕಾರಣದಿಂದ ಕಾರ್ಬೋಹೈಡ್ರೇಟುಗಳು ಕಡಿಮೆ ಖರ್ಚಾಗುತ್ತವೆ. (ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಸಾಧ್ಯವಾಗುವುದು ಇದಕ್ಕೇ). ಜೊತೆಗೇ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳೂ ವಿಸರ್ಜನೆಗೊಳ್ಳುತ್ತವೆ. ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ ಮತ್ತು ಜಠರದಲ್ಲಿ ಪೂರ್ಣವಾಗಿ ಜೀರ್ಣವಾಗದೇ ಉಳಿದುಕೊಂಡಿದ್ದ ತ್ಯಾಜ್ಯಗಳೂ ಹೊರದಬ್ಬಲ್ಪಡುತ್ತವೆ. ಇದರಿಂದ ಹೊಟ್ಟೆಯ ಸುತ್ತ ಸಂಗ್ರಹವಾಗಿದ್ದ ಕೊಬ್ಬು ನಿಧಾನವಾಗಿ ಕರಗತೊಡಗಿ ಸಿಂಹಕಟಿಯ ಕನಸು ನನಸಾಗುವ ಲಕ್ಷಣಗಳು ತೋರತೊಡಗುತ್ತವೆ.
ಉಪಯೋಗಿಸುವ ವಿಧಾನ ಇಂದು ಕಾಫಿ ಫಿಲ್ಟರ್ ಮಾಡುವ ಅಗತ್ಯವಿಲ್ಲ, ಮಾರುಕಟ್ಟೆಯಲ್ಲಿಯೇ ಇನ್ಸ್ಟಂಟ್ ಕಾಫಿ ದೊರಕುತ್ತದೆ. ಇಲ್ಲದಿದ್ದರೆ ಮನೆಯಲ್ಲಿಯೇ ಫಿಲ್ಟರ್ ಮೂಲಕ ಸಾಂಪ್ರಾದಾಯಿಕ ವಿಧಾನದಲ್ಲಿ ಡಿಕಾಕ್ಷನ್ ತಯಾರಿಸಿಟ್ಟುಕೊಳ್ಳಿ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಿಮಗೆ ಅಗತ್ಯವಿದ್ದಷ್ಟು ಗಾಢವಾದ ಪ್ರಮಾಣದಲ್ಲಿ (ಸರಿಸುಮಾರು ಒಂದು ಲೋಟಕ್ಕೆ ಎರಡು ದೊಡ್ಡಚಮಚ) ಮತ್ತು ಒಂದು ಚಮಚ ಲಿಂಬೆರಸ ಹಿಂಡಿ. ಸಕ್ಕರೆ ಸಹಿತ ಬೇರೇನನ್ನೂ ಸೇರಿಸಬೇಡಿ. ಕಾಫಿಯ ಕಹಿ ಮತ್ತು ಲಿಂಬೆಯ ಹುಳಿ ಸೇರಿ ಒಂದು ವಿಭಿನ್ನವಾದ ರುಚಿ ದೊರಕುತ್ತದೆ. ಬಳಿಕ ನಿಮ್ಮ ನಿತ್ಯದ ವ್ಯಾಯಾಮಗಳನ್ನು ಅನುಸರಿಸಿ. ಬೆಳಿಗ್ಗೆ ಸಾಧ್ಯವಿಲ್ಲದಿದ್ದಲಿ ನಿಮ್ಮ ನಿತ್ಯದ ವ್ಯಾಯಾಮದ ಸಮಯಕ್ಕೂ ಮುಂಚಿತವಾಗಿ ಒಂದು ಲೋಟ ಕುಡಿಯಿರಿ. ಇದರಿಂದ ನಿಮ್ಮ ವ್ಯಾಮಾಯದ ಕ್ಷಮತೆ ಹೆಚ್ಚುವುದು ಮಾತ್ರವಲ್ಲ, ಕೊಬ್ಬು ಸಹಾ ಶೀಘ್ರವಾಗಿ ಕರಗುತ್ತದೆ. ಅಂದಹಾಗೆ ಕಾಫಿ ಕುಡಿದ ಕೆಲವೇ ಕ್ಷಣಗಳಲ್ಲಿ ಮೂತ್ರಕ್ಕೆ ಅವಸರವಾಗುವುದರಿಂದ ವ್ಯಾಯಾಮಕ್ಕೂ ಮುನ್ನ ಈ ಅಗತ್ಯಗಳನ್ನು ಪೂರೈಸಿಕೊಂಡು ವ್ಯಾಯಾಮಕ್ಕೆ ತೊಡಗಿ.
ಕೊನೆಯ ಮಾರ್ಪಾಟು : 6/4/2020
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...
ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯದ ಬಗ...
ವಿವಿಧ ಸಾಮಾನ್ಯ ರೋಗಗಳು ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ತಿ...
ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣನ್ನಿವರು ಕೊಳೆಯಬಿಡುವುದಿಲ...