ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಾಸಿನ ಕಣಗಿಲೆ

ಕಾಸಿನ ಕಣಗಿಲೆ (ನಿತ್ಯಪುಷ್ಪಿ)

ಗುಲಾಬಿ, ನೀಲಿ ಬಣ್ಣದ ಮತ್ತು ಬಿಳಿ ಬಣ್ಣದ ಹೂವುಗಳಿಂದ ಅಂಗಳಕ್ಕೆ ಶೋಭೆ ತರುವ ಕಾಸಿನ ಕಣಗಿಲೆ ಗಿಡವು  ವಿಧವಿಧವಾದ ಔಷಧಿಯನ್ನು ತಯಾರಿಸಲು ಉಪಯೋಗವಾಗಿತ್ತಿದ್ದು, ಔಷಧಿಶಾಸ್ತ್ರದ ಸಂಜೀವಿನಿಯಾಗಿದೆ. ವರ್ಷದ  ಎಲ್ಲ ಋತುಗಳಲ್ಲಿಯೂ ಹೂವು ಬಿಡುವುದರಿಂದ ನಿತ್ಯ ಪುಷ್ಪಿ ಎನಿಸಿಕೊಂಡಿದೆ. ಈ ಗಿಡದಲ್ಲಿ ವಿಧವಿಧವಾದ 66 ಕ್ಷಾರ ಪದಾರ್ಧಗಳು ಇರುವುದು ಕಂಡುಬಂದಿದೆ. ಈ ಕ್ಷಾರ ಪದಾರ್ಥಗಳನ್ನು ವಿಶ್ವದಾದ್ಯಂತ ನಾನಾ ರೋಗನಿವಾರಕ ಔಷಧಿಗಳಲ್ಲಿ ಬಳಸಲಾಗುವುದು. ಇವುಗಳಲ್ಲಿ ಮುಖ್ಯವಾದವುಗಳು ಕ್ಯಾನ್ಸ್ ರ್ ರೋಗ, ರಕ್ತದ ಒತ್ತಡ, ಅತಿ ಹೆಚ್ಚಿನ  ರಕ್ತದ ಶ್ವೇತ ಕಣಗಳು, ಮಧುಮೂತ್ರ ವ್ಯಾಧಿ, ಅತೀವ ರಜಸ್ರಾವ ಮುಂತಾದ ರೋಗಗಳನ್ನು ಗುಣಪಡಿಸುವ ಔಷಧಿಗಳು.

ಹೂವು ಮತ್ತು ಬೀಜಗಳನ್ನು ಬಿಟ್ಟರೆ, ಈ ಸಸ್ಯದ ಉಳಿದೆಲ್ಲ ಭಾಗಗಳಲ್ಲಿಯೂ ಉಪಯುಕ್ತ ರಾಸಾಯನಿಕ ವಸ್ತುಗಳು ಇರುವುದು ಕಂಡುಬಂದಿದೆ. ಎಲೆಗಳಲ್ಲಿ ಸಿಗುವ ‘ಎನ್ ಕ್ರಿಸ್ಟಿನ್’ ಮತ್ತು ‘ಎನ್ ಬ್ಲಾಸ್ಟಿನ್’ ರಕ್ತದ ಕ್ಯಾನ್ಸ್ ರ್ ರೋಗದ ನಿವಾರಣೆಗೆ ಉಪಯುಕ್ತವಾಗಿವೆ. ಈ ಎರಡೂ ಔಷಧಿಗಳು ಕ್ರಮವಾಗಿ ಅಂಕೋವಿನ್ ಮತ್ತು ವೆಲ್ ಬಾನ್ ಎಂಬ ಹೆಸರಿನಲ್ಲಿ ದೊರೆಯುತ್ತವೆ. ಬೇರುಗಳಲ್ಲಿರುವ ರಿಸರ್ ಪೈನ, ಸರ್ಪೆಂಟೈನ, ಯೋಹಿಂಬೈನ್, ಅಜ್ಮಾಲ್ ಸಿನ್ ಮುಂತಾದವು ರಕ್ತದ ಒತ್ತಡವನ್ನು ಕಡಿಮೆಗೊಳಿಸಬಲ್ಲವು.

ಮೂಲ: ವಿಕ್ರಮ

2.90425531915
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top