ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಚಳಿಗಾಲದ ಪಂಚಾಮೃತಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚಳಿಗಾಲದ ಪಂಚಾಮೃತಗಳು

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ತಣ್ಣನೆಯ ಗಾಳಿಗೆ ಚರ್ಮವಂತೂ ಸುಕ್ಕು ಸುಕ್ಕಾಗುತ್ತದೆ. ಹಾಗೆಯೇ ದೇಹದ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಅಗತ್ಯ.

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ತಣ್ಣನೆಯ ಗಾಳಿಗೆ ಚರ್ಮವಂತೂ ಸುಕ್ಕು ಸುಕ್ಕಾಗುತ್ತದೆ. ಹಾಗೆಯೇ ದೇಹದ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಅಗತ್ಯ. ದೇಹದ ಉಷ್ಣತೆಯನ್ನು ಸಮಸ್ಥಿತಿಯಲ್ಲಿಡುವಂಥ ಆಹಾರ ಪದಾರ್ಥ ಸೇವನೆ ಅಗತ್ಯ. ಅಲ್ಲದೆ ಬಿಸಿ ಇರುವ ಪದಾರ್ಥವನ್ನೇ ಹೆಚ್ಚು ಸೇವಿಸಿ. ಈ ಸಮಯದಲ್ಲಿ ತಣ್ಣನೆಯ ಆಹಾರ ಪದಾರ್ಥ ಸೇವನೆ ಒಳ್ಳೆಯದಲ್ಲ. ಅದರಲ್ಲೂ ಫ್ರಿಜ್ಜಿನಲ್ಲಿರುವ ಆಹಾರವನ್ನು ತ್ಯಜಿಸಿ. ಅಲ್ಲದೆ ಫೈಬರ್, ವಿಟಾಮಿನ್, ಖನಿಜಾಂಶಗಳು ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಹಾಗೆಯೇ ಪ್ರೊಟೀನ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ದೇಹಕ್ಕೆ ಹೆಚ್ಚು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಚಳಿಗಾಲದ ಸಮಯದಲ್ಲಿ ದೇಹವನ್ನು ರೋಗಾಣುಗಳಿಂದ ರಕ್ಷಿಸುವುದಕ್ಕಾಗಿ ಪ್ರೊಟೀನ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ.
ಚಳಿಗಾಲದಲ್ಲಿ ದೇಹಾರೋಗ್ಯವನ್ನು ಕಾಪಾಡುವ ಐದು ಪ್ರಮುಖ ಪದಾರ್ಥಗಳು ಇಲ್ಲಿವೆ. ಇವುಗಳ ನಿಯಮಿತ ಸೇವನೆ ನಿಮ್ಮನ್ನು ಸ್ವಾಸ್ಥ್ಯವಾಗಿಡುವುದಂತೂ ಸತ್ಯ.
1. ಗಡ್ಡೆಗಳು: ಕ್ಯಾರೆಟ್ ಮತ್ತು ಬೀಟ್‌ರೂಟ್‌ನಂಥ ತರಕಾರಿಗಳ ಸೇವನೆ ಒಳ್ಳೆಯದು. ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಎ ಜೀವಸತ್ವಗಳು ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕೆಡಿಸಬಲ್ಲ ರೋಗಾಣುಗಳ ವಿರುದ್ಧ ಹೋರಾಡಿ ನಿಮ್ಮನ್ನು ಕಾಪಾಡುತ್ತವೆ. 
2. ಗ್ರೀನ್ ಟಿ: ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಗ್ರೀನ್ ಟೀಯಲ್ಲಿರುವುದರಿಂದ ನಿಯಮಿತವಾಗಿ ಗ್ರೀನ್ ಟೀ ಸೇವಿಸುವುದು ಉತ್ತಮ. ಇದು ಸಹ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
3. ಹಸಿರು ಸೊಪ್ಪುಗಳು: ಗಾಢ ಹಸಿರು ಬಣ್ಣದ ಸೊಪ್ಪುಗಳಲ್ಲಿ ವಿಟಾಮಿನ್ ಎ, ಸಿ ಮತ್ತು ಕೆ ಗಳು ಹೇರಳವಾಗಿರುವುದರಿಂದ ಅವುಗಳ ಸೇವನೆ ಉತ್ತಮವಾದುದು. ಕೋಸು, ಬಸಳೆ, ಮೂಲಂಗಿ ಸೊಪ್ಪುಗಳ ಸೇವನೆ ಹೆಚ್ಚಿರಲಿ.
4. ಬೆಳ್ಳುಳ್ಳಿ: ಬೆಳ್ಳುಳ್ಳಿಯಂತೂ ರೋಗಾಣುಗಳ ವಿರುದ್ಧ ಹೋರಡುವ ಪ್ರವೃತ್ತಿಯಿಗೆ ಹೆಸರಾಗಿದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡುವುದಕ್ಕೆ ನಮ್ಮ ದೇಹವನ್ನು ಸನ್ನದ್ಧಗೊಳಿಸುತ್ತದೆ. ಬೆಳ್ಳುಳ್ಳಿಯ ಪರಿಮಳಕ್ಕೆ ಕಾರಣವಾದ ಅಸಿಲಿನ್ ಎಂಬ ಅಂಶವೇ ಅದು ದೇಹಕ್ಕೆ ಹಲವು ರೀತಿಯಲ್ಲಿ ಉಪಕಾರಿಯಾಗಲು ಕಾರಣವಾಗಿದೆ.
5. ಜೇನುತುಪ್ಪ: ಜೇನುತುಪ್ಪ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ. ಅಲ್ಲದೆ ಇದು ಜ್ವರ ಮುಂತಾದ ಸೋಂಕು ದೇಹಕ್ಕೆ ತಗುಲದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ದಿನವೂ ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು. ಅಲ್ಲದೆ ಇದು ಬೊಜ್ಜನ್ನು ಕರಗಿಸುವಲ್ಲಿಯೂ ಸಹಕಾರಿಯಾಗಿದೆ.

- ಶಶಿ

ಮೂಲ: ವಿಕ್ರಮ

2.97674418605
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top