ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ತಂಗಳು ಪೆಟ್ಟಿಗೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂಗಳು ಪೆಟ್ಟಿಗೆ

ತಂಗಳು ಪೆಟ್ಟಿಗೆಯ ಅವಾಂತರ

ನಗರಗಳಲ್ಲಿ ಹೋಗಲಿ, ಇತ್ತೀಚೆಗೆ ಹಳ್ಳಿಯಲ್ಲಿಯೂ ಪ್ರತಿ ಮನೆಯಲ್ಲೂ ಫ್ರಿಡ್ಜ್‌ಗಳು ಸಾಮಾನ್ಯ ಎನ್ನಿಸಿವೆ. ಅಳತೆ-ಅಂದಾಜಿಲ್ಲದೆ ಎಷ್ಟೋ ತಿಂಡಿ ತಯಾರಿಸಿ ಆನಂತರ ಅದನ್ನೇ ಫ್ರಿಡ್ಜಿನಲ್ಲಿಟ್ಟು ಎರಡು ದಿನದ ನಂತರವೂ ತಿನ್ನುತ್ತಿರುವುದು ಇತ್ತೀಚೆಗೆ ಮಾಮೂಲೆನ್ನಿಸಿದೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಕುಡಿಯುವುದಕ್ಕೂ ಫ್ರೀಡ್ಜ್‌ನಲ್ಲಿರುವ ನೀರೇ ಆಗಬೇಕು. ಎಷ್ಟೋ ಜನ ಫ್ರಿಡ್ಜಿನಲ್ಲಿರುವ ಆಹಾರವನ್ನು ಬಿಸಿ ಮಾಡದೆ ಹಾಗೆಯೇ ತಿನ್ನುವುದನ್ನೂ ಕಾಣಬಹುದು. ಆದರೆ ವಾಸ್ತವವೆಂದರೆ ಹೀಗೆ ಫ್ರಿಡ್ಜಿನಲ್ಲಿರುವ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ಫ್ರಿಡ್ಜಿನಲ್ಲಿಟ್ಟ ಆಹಾರದಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆ ನಾವು ತಿನ್ನುವ ಆಹಾರವನ್ನು ವಿಷಪೂರಿತವಾಗುವಂತೆ ಮಾಡಬಹುದು. ಅಥವಾ ಅದು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಫ್ರಿಡ್ಜಿನಲ್ಲಿಟ್ಟ ಆಹಾರವನ್ನು ಸೇವಿಸಬೇಡಿ ಎಂದು ವೈದ್ಯರೂ ಸಲಹೆ ನೀಡುತ್ತಾರೆ.
ಫ್ರಿಡ್ಜನ್ನು ಕೆಲವರು ತಂಗಳು ಪೆಟ್ಟಿಗೆ ಎಂದು ಮೂದಲಿಸುವುದು ಸಹ ಅದಕ್ಕೇ. ಯಾವುದೇ ಆಹಾರವೇ ಆಗಲಿ, ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ತಿನ್ನುವುದಕ್ಕೆ ಯೋಗ್ಯವಾಗಿರುತ್ತದೆ. ಆ ಅವಧಿ ಮುಗಿದ ಮೇಲೂ ಅದು ಹಾಳಾಗದಂತೆ ಅದನ್ನು ಬಲವಂತವಾಗಿ ಸಂರಕ್ಷಿಸಲು ಪ್ರಯತ್ನಿಸುವುದು ಉತ್ತಮವಲ್ಲ. ಸೆಕೆ ಹೆಚ್ಚುತ್ತಿದ್ದಂತೆಯೇ ಪದೇ ಪದೇ ಫ್ರಿಡ್ಜ್ ನೀರನ್ನು ಕುಡಿಯುತ್ತೇವೆ. ಅದು ಸಹ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಕೇವಲ ರೆಫ್ರಿಜಿರೇಟರ್ ಮಾತ್ರವಲ್ಲ, ಮೈಕ್ರೋವೋವನ್‌ಗಳ ಕತೆಯೂ ಅಷ್ಟೇ. ಅರೆಕ್ಷಣದಲ್ಲಿ ಆಹಾರವನ್ನು ಬಿಸಿ ಮಾಡುವ ಈ ಯಂತ್ರ ಸಹಜವಾಗಿಯೇ ಸಾಕಷ್ಟು ವಿಕಿರಣಗಳನ್ನು ಹೊರಸೂಸುತ್ತದೆ. ಇದರಿಂದ ಆಹಾರ ತನ್ನ ನೈಜ ಸ್ವರೂಪವನ್ನು ಕಳೆದುಕೊಂಡು ವಿಷಪೂರಿತವಾಗುತ್ತದೆ. ಒಂದೇ ದಿನದಲ್ಲಿ ಮನುಷ್ಯನನ್ನು ಸಾಯಿಸದಿದ್ದರೂ ಕ್ರಮೇಣ ಮನುಷ್ಯನ ಇಡೀ ದೇಹವೂ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಇಂದು ನಾವು ಆಹಾರ ತಯಾರಿಕೆಯಲ್ಲಿ, ಸಂರಕ್ಷಣೆಯಲ್ಲಿ ಬಳಸುತ್ತಿರುವ ಹಲವು ಯಂತ್ರಗಳ ಕತೆ ಇದೇ. ಅನುಕೂಲಕ್ಕಾಗಿ ಮಾಡಿಕೊಂಡ ಇಂಥ ಹಲವು ವ್ಯವಸ್ಥೆಗಳು ನಮ್ಮ ಆರೋಗ್ಯವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬೇಸಿಗೆ ಬಂತೆಂದು ಅತಿಯಾಗಿ ರೆಫ್ರಿಜಿರೇಟರ್‌ನಲ್ಲಿಟ್ಟ ತಿಂಡಿಗಳನ್ನು ಸೇವಿಸುವುದನ್ನು ಕಡಿಮೆ ಮಾಡದಿದ್ದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ನಾಂದಿಹಾಡಿದಂತಾಗುವುದು ಖಂಡಿತ. ತಂಗಳು ಪೆಟ್ಟಿಗೆಯನ್ನು ಎಷ್ಟು ಮಿತವಾಗಿ ಬಳಸಬಹುದೋ ಅಷ್ಟೇ ಬಳಸುವುದನ್ನು ಮರೆಯದಿರಿ.

 

ಮೂಲ: ವಿಕ್ರಮ

2.90909090909
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top