ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ದ್ರಾಕ್ಷಿಯಿಂದ ಆರೋಗ್ಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದ್ರಾಕ್ಷಿಯಿಂದ ಆರೋಗ್ಯ

ದ್ರಾಕ್ಷಿಯಿಂದ ಆರೋಗ್ಯಕ್ಕೆ ಶ್ರೀರಕ್ಷೆ!

ದ್ರಾಕ್ಷಿಗೂ ಮೊಣಕಾಲು ನೋವಿಗೂ ಏನಪ್ಪ ಸಂಬಂಧ ಎಂದುಕೊಂಡರೆ ತಪ್ಪಾದೀತು. ಏಕೆಂದರೆ ಇಂದಿನ ಬಹುಪಾಲು ಮಧ್ಯವಯಸ್ಕರನ್ನು ಕಾಡುತ್ತಿರುವ ಮೊಣಕಾಲು ನೋವಿನ ಸಮಸ್ಯೆಗೆ ದ್ರಾಕ್ಷಿ ಸೇವನೆ ಪರಿಣಾಮಕಾರಿ ಪರಿಹಾರವೆನ್ನಿಸಿದೆ. ಮೂಳೆಗಳ ಸವೆತದಿಂದ ಉಂಟಾಗುವ ಮೊಣಕಾಲು ನೋವು ಇಂದು ಯಾರನ್ನೂ ಬಿಟ್ಟಿಲ್ಲ. ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮ ಎಲ್ಲಕ್ಕೂ ಕಾರಣವೆನ್ನಿಸಿದೆ. ಬೇಸಿಗೆಯ ಸಮಯದಲ್ಲಿ ಹೇರಳ ವಾಗಿ ದೊರಕುವ ದ್ರಾಕ್ಷಿ ಹಲವು ಕಾರಣಗಳಿಂದ ಸಂಜೀವಿನಿ ಎನ್ನಿಸಿದೆ. ಇದರಲ್ಲಿರುವ ಪಾಲಿಫೆನಾಲ್ಸ್ ಎಂಬ ಆ್ಯಂಟಿ ಆಕ್ಸಿಡೆಂಟ್ ಅಂಶವು ಕ್ಯಾನ್ಸರ್‌ನಂಥ ಮಾರಕ ರೋಗಗಳ ವಿರುದ್ಧವೂ ಹೋರಾಡುವ ಸಾಮರ್ಥ್ಯ ಪಡೆದಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ದ್ರಾಕ್ಷಿ ಸೇವನೆಯಿಂದ ಸಂಧಿವಾತದ ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ. ಇದು ಮೂಳೆಗಳು ಬಲಯುತವಾಗಲು ಸಹಕಾರಿಯಾಗಿದೆ.

ನಿಯಮಿತವಾಗಿ ದ್ರಾಕ್ಷಿ ಸೇವಿಸುವುದರಿಂದ ಹೃದಯ ಸಂಬಂಧಿಕಾಯಿಲೆಗಳು ನಿವಾರಣೆಯಾಗುತ್ತವೆ ಎಂಬುದು ಸಹ ಇತ್ತೀಚಿನ ಸಂಶೋಧನೆಯಿಂದ ದೃಢವಾಗಿದೆ.ಇದು ರಕ್ತದೊತ್ತಡವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ನರ ಸಂಬಂಧಿಕಾಯಿಲೆಗಳನ್ನು ನಿವಾರಿಸುವುದಲ್ಲದೆ, ಮೆದುಳಿಗೆ ಸಂಬಂಧಿಸಿದ ಅಲಮೈರ್‌ನಂಥ ಸಮಸ್ಯೆಗಳನ್ನೂ ವಾಸಿಮಾಡಲು ನೆರವಾಗುತ್ತದೆ.

ಅಲರ್ಜಿ ನಿವಾರಣೆಗೂ ದ್ರಾಕ್ಷಿ ಸಹಾಯಕವಾಗಿದೆ. ಪ್ರತಿದಿನ ಒಂದು ಲೋಟದಷ್ಟು ದ್ರಾಕ್ಷಾರಸ ಸೇವಿಸುವುದರಿಂದ ಎಲ್ಲ ರೀತಿಯ ರೋಗಗಳಿಂದಲೂ ದೂರವಿರಬಹದು ಎಂದು ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ.

ವಿಟಾಮಿನ್ ಸಿ ದ್ರಾಕ್ಷಿಯಲ್ಲಿ ಹೇರಳವಾಗಿದೆ. ಸಿ ಜೀವಸತ್ವದ ಕೊರತೆ ಇರುವವರು ದ್ರಾಕ್ಷಿಯನ್ನು ಸೇವಿಸಬಹುದು. ಮೈಗ್ರೇನ್ ಸಮಸ್ಯೆ ಇರುವವರು ದ್ರಾಕ್ಷಿ ಸೇವಿಸುವುದು ಒಳ್ಳೆಯದು. ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣ ಇದಕ್ಕಿದೆ. ಸ್ತನ ಕ್ಯಾನ್ಸರ್ ನಿವಾರಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸಿದೆ. ದೃಷ್ಟಿಶಕ್ತಿಯನ್ನು ವೃದ್ಧಿಸುತ್ತದೆ. ಕೊಬ್ಬಿನಂಶವನ್ನು ಕಡಿಮೆ ಮಾಡಲು ಸಹಕಾರಿ.

ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನೂ ಇದು ನಿವಾರಿಸುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರೂ ದ್ರಾಕ್ಷಿಯನ್ನು ಸೇವಿಸಿದರೆ ಪರಿಹಾರ ಸಿಗಬಹುದು. ಚಮ‍್ದ ಕಾಂತಿಯನ್ನು ಹೆಚ್ಚುಸುವುದಲ್ಲದೆ, ಸೂರ್ಯಕಿರಣಗಳಿಂದ ಕಳೆದುಹೋಗಬಹುದಾದ ಚಮ‍್ದ ಹೊಳಪನ್ನು ಉಳಿಸಲು ಸಹಕಾರಿಯಾಗಿದೆ.

ಕೂದಲಿನ ಬೆಳವಣಿಗೆಯಲ್ಲೂ ಉತ್ತಮ ಪಾತ್ರ ವಹಿಸಿರುವುದಲ್ಲದೆ, ತೆಲೆಹೊಟ್ಟು ನಿವಾರಣೆಗೂ ಇದು ಉಪಯುಕ್ತ. ಕೂದಲು ಉದುರುವ ಸಮಸ್ಯೆಯನ್ನೂ ಇದರಿಂದ ನಿವಾರಿಸಬಹುದಾಗಿದೆ.

ಮೂಲ: ವಿಕ್ರಮ

2.96551724138
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top