ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ನವಣೆ ಬೀನ್ ಬರ್ಗರ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನವಣೆ ಬೀನ್ ಬರ್ಗರ್

ನವಣೆ ಬೀನ್ ಬರ್ಗರ್ ಮಾಡುವ ವಿಧಾನ

ತಯಾರಿಯ ಅವಧಿ :

ಮುಕ್ಕಾಲು ಗಂಟೆಗಿಂತ ಹೆಚ್ಚು ಸಮಯ ಹಿಡಿಯಲಿದೆ. ಇಬ್ಬರಿಗೆ ಸಾಕಾಗಬಹುದು.

ಬೇಕಾಗುವ ಸಾಮಗ್ರಿ :

ನವಣೆ ಅಕ್ಕಿ-1ಕಪ್, ಅಕ್ಕಿ ಹಿಟ್ಟು-1/2ಕಪ್, ಮೊಳಕೆಯೊಡೆದ ಕಡ್ಲೆಕಾಳು, ಹೆಸರುಕಾಳು -1/2ಕಪ್, ಟೊಮೇಟೋ-1 ಕ್ಯಾರೇಟ್-1, ಹುರುಳಿಕಾಯಿ-100ಗ್ರಾಂ, ಗರಂ ಮಸಾಲ-1ಚಮಚ, ಚಿಲ್ಲಿ ಪೌಡರ್-ಸ್ವಲ್ಪ ಟೊಮೇಟೋ ಪ್ಯೂರಿ-1ಚಮಚ, ಕರಿಮೆಣಸು ಪುಡಿ-1ಚಮಚ, ಎಣ್ಣೆ ಅಥವಾ ಬೆಣ್ಣೆ-1ಚಮಚ, ಉಪ್ಪು- ರುಚಿಗೆ, ಬರ್ಗರ್‌ಬನ್-2 .

ವಿಧಾನ :

ಮೊದಲು ನವಣೆ ಕತ್ತರಿಸಿದ ತರಕಾರಿಯನ್ನು ಮೊಳಕೆ ಕಾಳುಗಳೊಂದಿಗೆ ಸ್ವಲ್ಪ ರುಚಿಗೆ ಉಪ್ಪು ಸೇರಿಸಿ ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಮಿಶ್ರ ಮಾಡಿ, ಗರಂ ಮಸಾಲ ಚಿಲ್ಲಿಪೌಡರ್ ಸ್ವಲ್ಪ ಹಾಕಿ ಚೆನ್ನಾಗಿ ಕಲೆಸಿ ಪುಡಿ ಮಾಡಿ. ಟೊಮೇಟೋ ಪ್ಯೂರಿ ಸೇರಿಸಿ ಕಟ್ಲೆಟ್ ಹಿಟ್ಟಿನ ಹದಕ್ಕೆ ಕಲೆಸಿ ಸಣ್ಣ ಉಂಡೆಗಳಾಗಿ ಮಾಡಿ ಕಟ್ಲೆಟ್‌ಗಳಾಗಿ ತಟ್ಟಿ . ಕಾದ ತವಾದ ಮೇಲೆ ಬೆಣ್ಣೆ ಹರಡಿ ಕಟ್ಲೆಟನ್ನು ಎರಡೂ ಕಡೆ ಬೇಯಿಸಿಕೊಳ್ಳಿ. ನಂತರ ಬರ್ಗರ್ ಬನ್ನಿನ ಮಧ್ಯದಲ್ಲಿ ಕಟ್ಲೇಟನ್ನು ಇಟ್ಟು ಟೊಮೇಟೋ ಸ್ಲೈಸ್ ನಿಂದ ಅಲಂಕರಿಸಿ ಸವಿಯಿರಿ.

ಟಿಪ್ಸ್‌:

ನವಣೆ ಪೌಷ್ಟಿಕಾಂಶವುಳ್ಳದ್ದು. ಇದನ್ನು ಸ್ನಾಕ್ಸ್ ಸಮಯಕ್ಕೆ ತಯಾರಿಸಿ ಮಕ್ಕಳೊಂದಿಗೆ ಸವಿಯಬಹುದು.

ಮೂಲ: ಬಿ.ಎಸ್.ಪಾರಿಜಾತ

2.97142857143
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top