ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಿಂಬೆ ಹಣ್ಣು

ನಿಂಬೆ ಹಣ್ಣು ಬಹೋಪಯೋಗಿ. ಬಿಸಿಲಲ್ಲಿ ದಣಿದು ಬಂದವರಿಗೆ ಶರಬತ್ತಾಗಿ, ದಾಹ ನೀಗಿಸುವ ನಿಂಬೆ ಹಣ್ಣು ಅನೇಕ ರೀತಿಯ ಔಷಧೀಯ ಉಪಯೋಗಗಳನ್ನೂ ಹೊಂದಿದೆ.

ನಿಂಬೆ ಹಣ್ಣು ಬಹೋಪಯೋಗಿ. ಬಿಸಿಲಲ್ಲಿ ದಣಿದು ಬಂದವರಿಗೆ ಶರಬತ್ತಾಗಿ, ದಾಹ ನೀಗಿಸುವ ನಿಂಬೆ ಹಣ್ಣು ಅನೇಕ ರೀತಿಯ ಔಷಧೀಯ ಉಪಯೋಗಗಳನ್ನೂ ಹೊಂದಿದೆ. ಅವುಗಳಲ್ಲಿ ಮಹತ್ವವವಾಗಿದ್ದು…

 • ನಿಂಬೆ ಹಣ್ಣು, ಹಾಲಿನ ಕೆನೆ, ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚಿಸುತ್ತದೆ.
 • ಪ್ರತಿ ದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ನಿಂಬೆ ರಸ ಸೇರಿಸಿ ಸೇವಿಸಿದರೆ ನಿಶ್ಶಕ್ತಿ ಕಡಿಮೆಯಾಗುತ್ತದೆ.
 • ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಇದರ ಸೇವನೆ ಒಳ್ಳೆಯದು.
 • ಸಿ ಜೀವಸತ್ವದ ಸಮಸ್ಯೆ ಇರುವವರು ನಿಂಬೆ ಹಣ್ಣನ್ನು ಹೆಚ್ಚಾಗಿ ಉಪಯೋಗಿಸುವುದು ಒಳ್ಳೆಯದು.
 • ಗರ್ಭಿಣಿಯರು ನಿಂಬೆ ಹಣ್ಣಿನ ಪಾನಕವನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರಯಾಸವಿಲ್ಲದೆ ಹೆರಿಗೆಯಾಗುತ್ತದೆ.
 • ನಿಂಬೆ ಹಣ್ಣನ್ನು ಪ್ರತಿ ದಿನ ಅಹಾರದಲ್ಲಿ ಬಳಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ.
 • ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇವಿಸುತ್ತಿದ್ದರೆ ಉರಿಮೂತ್ರಸಮಸ್ಯೆ ನಿವಾರಣೆಯಾಗುತ್ತದೆ. ನಿಂಬೆರಸಕ್ಕೆ ಏಲಕ್ಕಿ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ ಬಿಸಿನೀರಿನಲ್ಲಿ ಮಿಶ್ರಮಾಡಿ ಸೇವಿಸುವುದರಿಂದ ಪಿತ್ಥವಾಂತಿ ಶಮನವಾಗುತ್ತದೆ.
 • ನೀರಿನೊಂದಿಗೆ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ಆಮಶಂಕೆಯಿಂದ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ ಒಂದು ಟೀ ಚಮಚ ನಿಂಬೆ ರಸಕ್ಕೆ, ಈರುಳ್ಳಿ ರಸ ಸೇರಿಸಿ ಸೇವಿಸುವುದರಿಂದ ಮಲೇರಿಯಾ, ಚಳಿ ಜ್ವರ ನಿವಾರಣೆಯಾಗುತ್ತದೆ.
 • ನಿಂಬೆರಸವನ್ನು ತಲೆಗೂದಲಿಗೆ ಹಚ್ಚಿ ತಲೆ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
 • ಎಳನೀರಿನೊಂದಿಗೆ ನಿಂಬೆರಸವನ್ನು ಸೇರಿಸಿ ಸೇವಿಸುವುದರಿಂದ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.
 • ಕಿವಿ ನೋವಿನ ಸಮಸ್ಯೆಯಿದ್ದರೆ ಸ್ವಲ್ಪ ನಿಂಬೆರಸವನ್ನು ಕಿವಿಗೆ ಬಿಡುತ್ತಿರಿ.
 • ನಿಂಬೆರಸದೊಂದಿಗೆ ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಿ ಹಲ್ಲುಜ್ಜುವುದರಿಂದ ದಂತ ಸಮಸ್ಯೆ ನಿಯಂತ್ರಣವಾಗುತ್ತದೆ. ಈ ನೀರಿನಲ್ಲಿ ಬಾಯಿಮುಕ್ಕಳಿಸುವುದರಿಂದ ವಸಡುಗಳು ಶಕ್ತಿಯುತವಾಗುತ್ತವೆ.
 • ನಿಂಬೆರಸದೊಂದಿಗೆ ಜೆೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ನಿಂಬೆ ರಸದೊಂದಿಗೆ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
 • ನಿಂಬೆ ರಸದೊಂದಿಗೆ ಸೀಗೆ ಪುಡಿಯನ್ನು ಸೇರಿಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.
 • ಲೆಮನ್ ಟೀ ಸೇವಿಸುವುದರಿಂದ ನೆಗಡಿ ಶಮನವಾಗುತ್ತದೆ.
 • ಬಾಳೆ ಹಣ್ಣಿನೊಂದಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಸೇವಿಸುವುದರಿಂದ ಅರಿಶಿಣ ಕಾಮಾಲೆ ಪರಿಹಾರವಾಗುತ್ತದೆ.
 • ನಿಂಬೆರಸವನ್ನು ಹರಳೆಣ್ಣೆಯೊಂದಿಗೆ ಸೇರಿಸಿ ನೋವಿರುವ ಜಾಗಕ್ಕೆ ಹಚ್ಚುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.

ಮೂಲ: ವಿಕ್ರಮ

2.97115384615
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top