ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯ

ಆರೋಗ್ಯ ಸಂಬಂದಿಸಿದ ಮಾಹಿತಿಗಳು ಇಲ್ಲಿ ಲಭ್ಯವಿದೆ.

ಕರಿಬೇವಿನ ಉಪಯೋಗದಿಂದ ಬೊಜ್ಜು ಕರಗಿಸ ಬಹುದೇ

ದೊಡ್ಡವರಿಂದ, ಸಣ್ಣವರು ಆದಿಯಾಗಿ ಒಗ್ಗರಣೆಯಲ್ಲಿ ಬಳಸಿದ  ಕರಿಬೇವುನ್ನು ಎತ್ತಿ ಬಿಸಾಡುತ್ತೇವೆ ನೆಪಕ್ಕೆ ಮಾತ್ರ ಎಂಬುದು ಎಲ್ಲರ ನಂಬಿಕೆ ಅದು ತಪ್ಪು ಕಲ್ಪನೆ. ಹಿರಿಯರ ಕಾಲದಿಂದ ಅಡುಗೆಯಲ್ಲಿ ಕರಿಬೇವಿನ ಪಾತ್ರ ಬಹಳ ಮಹತ್ವ ನೀಡಿದ್ದಾರೆ. ಕರಿಬೇವಿನ ಚಟ್ನಿ ಮಾಡುವುದು ಬಹಳ ಸಲುಭ. ಕರಿಬೇವಿನ ಎಲೆಗಳನ್ನು ಸ್ವಲ್ಪ ಬೆಚ್ಚಗೆ ಮಾಡಿ ಅದಕ್ಕೆ ಬೆಳ್ಳುಳ್ಳಿ ಸ್ವಲ್ಪ ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ದರೆ ಚೆಟ್ನಿ ತಯಾರಾಗುತ್ತದೆ. ಅದನ್ನು ಚಪಾತಿಗೆ ಆದರೂ ತಿನ್ನಿ ಏಕೆ ಅಂದರೆ ಕಣ್ಣಿಗೆ ಬಹಳ ಒಳ್ಳೆಯದು. ಯಾವುದೇ ಚೆಟ್ನಿ ತಯಾರು ಮಾಡುವಾಗ ಕರಿಬೇವಿನ ಎಲೆಗಳನ್ನು ಸೇರಿಸಿ ರುಬ್ಬಿ ಆಗ ದೊಡ್ಡವರಿಂದಾಗಿ ಚಿಕ್ಕವರು ತಿನ್ನುತ್ತಾರೆ. ಈ ಕರಿಬೇವಿನಿಂದ ಆಗುವ ಕೆಲವು ಉಪಯೋಗಗಳು.

ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದರೆ

ನಿಮ್ಮ ರಕ್ತ ಶುದ್ಧಿ ಆಗ ಬೇಕಾದರೆ ದಿನಾ ರಾತ್ರಿ ಊಟದಲ್ಲಿ ಒಂದೆಳಸು ಜವಾರಿ ಬೆಳ್ಳುಳ್ಳಿ ತಿಂದಾರೆ ರಕ್ತ ಶುದ್ದಿ ಆಗುತ್ತದೆ. ಹಾಗೂ ಸ್ವಲ್ಪ ಮಟ್ಟಿಗಾದರೂ ಸಕ್ಕರೆ ಖಾಯಿಲೆ ನಿಯಂತ್ರಣ ಕ್ಕೆ ಬರುವುದರ ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹಿರಿಯರು ಬಾಣಂತಿಗೆ ಎದೆ ಹಾಲು ವೃದ್ಧಿ ಆಗಬೇಕೆಂದು ಬಿಸಿ ಅನ್ನವನ್ನು ಬಗೆದು ಅದರಲ್ಲಿ ನಾಲ್ಕೈದು ಎಸಳು ಬೆಳ್ಳುಳ್ಳಿ ನ್ನು ಹಾಕಿ ಮುಚ್ಚಿ, ಬಾಣಂತಿ ಊಟಕ್ಕೆ ಬೆಂದ ಬೆಳ್ಳುಳ್ಳಿಯನ್ನು ನೀಡುತ್ತಿದ್ದರು ಇದರಿಂದ ಎದೆ ಹಾಲು ವೃದ್ಧಿ ಆಗುತ್ತಿತ್ತು. ಬೇಕಾದರೆ ನಿಮ್ಮಗೆ ಗೊತ್ತಿರುವ ಹಿರಿಯರನ್ನು ಕೇಳಿ. -ಸಂಗ್ರಹ

ನಮ್ಮ ಚರ್ಮ ರಕ್ಷಣೆಗೆ ಹಲವು ಸೂತ್ರಗಳು

ಮುಖದಲ್ಲಿನ ಕಲೆ ಹೋಗಿಲ್ಲ. ಮೊಣಕಾಲು ಕೆಳಗೆ ಕಪ್ಪು ಕಲೆಗಳು ಇವೆ ಅದಕ್ಕಾಗಿ ಚರ್ಮರೋಗ ತಜ್ಞರ ಬಳಿಗೆ ಹೋಗುತ್ತವೇ. ಚರ್ಮರೋಗ ಬರುವುದಕ್ಕೂ ಮುನ್ನಾ ಕೇರ್ ತೆಗೆದುಕೊಳ್ಳಬೇಕು ಚಿಲುಮೆ ನೀರು ಅಥವಾ ಸಮುದ್ರದ ನೀರಿನಿಂದ ಸ್ನಾನಮಾಡಬೇಕು. ಬಿಸಿನೀರಿಗೆ ಬೇವಿನ ಸೊಪ್ಪು ಹಾಕಿ ಅರ್ಧಗಂಟೆ ನೆನಸಿದ ನಂತರ ಸ್ನಾನ ಮಾಡಿದರೆ ದೇಹದಲ್ಲಿನ ಕೆಲ ಚರ್ಮರೋಗಗಳು ಗುಣವಾಗುತ್ತವೆ. ನಿತ್ಯ ಅರ್ಧಗಂಟೆ ಕಾಳ ಎಳೆ ಸೂರ್ಯನ ರೇಷ್ಮಿಗಳು ಬೀಳುವಂತೆ ಮೈ ಒಡ್ಡಬೇಕು ಯಾವಾಗಲು ತಾಜ ಹಣ್ಣು ಹಾಗೂ ತರಕಾರಿಗಳನ್ನು ಉಪಯೋಗಿಸಬೇಕು ಸಂಗ್ರಹ

ಮೊಳಕೆ ಕಾಳುಗಳು ತಿಂದರೆ

ದ್ವಿಧಳ ಧಾನ್ಯದ ಕಾಳುಗಳನ್ನು ಮೊಳಕೆ ಕಟ್ಟಿ ತಿಂದಾಗ ನಮ್ಮ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ದೇಹವನ್ನ ಸಮತೋಲ ಕಾಯುತ್ತದೆ. ಹಸಿಯಾದ ಮೊಳಕೆಕಾಳುಗಳನ್ನು ಸ್ವಲ್ಪ ಹಬೆಯಲ್ಲಿ ಬೇಯಿಸಿ ಅದಕ್ಕೆ ಸ್ವಲ್ಪ ಕ್ಯಾರೆಟ್ ತುರಿಯನ್ನು ಮಿಶ್ರಣಮಾಡಿ ಅದಕ್ಕೆ ತಕ್ಕ ಸ್ವಲ್ಪ ಉಪ್ಪು ನಿಂಬೆ ರಸ ಬೆರಸಿ ತಿಂದರೆ, ದೇಹದ ಶಕ್ತಿ ವೃದ್ಧಿಯಾಗುತ್ತದೆ. ಇದು ಸಕ್ಕರೆ ಖಾಯಿಲೆ ಇದ್ದವರು ತಿಂದರೆ ಒಳ್ಳಯದು. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹಲ್ಲುಗಳು ಶುಭ್ರವಾಗಿತ್ತದೆ. ಸಂಗ್ರಹ

ಊಟದಲ್ಲಿ ಪಾಲಕ್ ಸೊಪ್ಪು ಬಳಸಿದರೆ ಏನಾಗುತ್ತೆ

ಪಾಲಕ್ ಸೊಪ್ಪು ಯಾರಿಗೆತಾನೇ, ಗೊತ್ತಿಲ್ಲ ಹೇಳಿ. ರಸ್ತೆ ಬದಿಯಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರುತ್ತಾರೆ. ಆದರೆ ಆ ಪಾಲಕ್ ಸೊಪ್ಪಿನಲ್ಲಿ ಏನೆಲ್ಲ ಅಂಶಗಳು ಒಳಗೊಂಡಿವೆ ಎಂಬುದನ್ನು ಈ ವರದಿ ಬಗ್ಗೆ ಕಣ್ ಹಾಯಿಸಿ. ನಿಮ್ಮ ಅಂದವಾದ ಸೆಲ್ಫಿಯನ್ನು ಮುಖದ ಮೇಲಿನ ಮೊಡವೆ ಕೆಡಿಸುತ್ತಿದೆಯೇ? ಮುಖದ ಒಂದು ಕಡೆಗೆ ಒಂದು ಸೋಪು ಇನ್ನೊಂದು ಕಡೆಗೆ ಇನ್ನೊಂದು ಸೋಪು ಹಾಕೋದು ಬಿಡಿ, ಪಾಲಾಕ್ ತಗೊಳಿ. ಮುಖದಲ್ಲಿ ನೆರಿಗೆ ಬರೋದು, ಸುಕ್ಕಾಗೋದು ಎಲ್ಲಾ ತಡೆಯುತ್ತೆ ನಮ್ ಪಾಲಕ್ಕು. ಪಾಲಾಕ್ ಸೊಪ್ಪಲ್ಲಿ “ಪ್ರೋಲೇಟ್” ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ…, ಪಾಲಾಕ್ ಸೊಪ್ಪಲ್ಲಿರೋ “ಕ್ಯಾರೋಟಿನೈಡ್” ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕೊಲೆ ಮಾಡುತ್ತೆ

ಸೌತೇಕಾಯಿ ಜೀರ್ಣ ಶಕ್ತಿಗೆ ರಾಮ ಬಾಣ

ನಿತ್ಯ ಊಟದ ಜೊತೆ ಸೌತೇಕಾಯಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಅವಶ್ಯಕವಾದ ಶಕ್ತಿಯನ್ನು ತುಂಬುತ್ತದೆ. ಕಾಳು ಮೆಣಸಿನ ಪುಡಿ ಜೊತೆ ಉಪ್ಪು ಹಾಕಿಕೊಂಡು ತಿನ್ನುವುದರಿಂದ ಜೀರ್ಣ ಶಕ್ತಿ ವೃದ್ಧಿಸುತ್ತದೆ. ಸೌತೇಕಾಯಿ ಸಿಪ್ಪೆತೆಗೆದು ನಿಂಬೆಹಣ್ಣಿನ ಸಿಪ್ಪೆಯನ್ನು ಅರೆದು ಚರ್ಮದಮೇಲೆ ತಿಕ್ಕುವುದರಿಂದ ಚರ್ಮ ಕಾಂತಿಯುಕ್ತವಾಗಿ ಚರ್ಮ ಮೃದವಾಗುತ್ತದೆ. ಹಾಗೂ ಕಪ್ಪು ಕಲೆಗಳು ನಿವಾರಣೇ ಆಗುತ್ತದೆ. ಉರಿಮೂತ್ರ ಮೂಲವ್ಯಾಧಿ ನಿವಾರಣೆ ಆಗುತ್ತದೆ. ಸಂಗ್ರಹ

ಒಗ್ಗರೆಣೆಗೆ ಬಳಸುವ ಸಾಸುವೆಯಿಂದ ಎಷ್ಟೇಲ್ಲಾ ಉಪಯೋಗ

ಸಾಸುವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಎರಡು ಗಂಟೆಯವರೆಗೆ ಎಳೆ ಬಿಸಿಲಿನಲಿದ್ದು ನಂತರ ಸ್ನಾನ ಮಾಡಿದರೆ ರಿಕೆಟ್ಸ್ ರೂಗದಿಂದ ಗುಣಮುಕ್ತರಾಗುವಿರಿ. ವಿಷ ಪೂರಿತ ಆಹಾರವನ್ನು ಸೇವಿಸಿದ್ದರೆ ತಕ್ಷಣ ಸಾಸುವೆ ಪುಡಿಯನ್ನು ನೀರಿಗೆ ಹಾಕಿ ಕುಡಿಸಿದರೆ, ವಾಂತಿಯಾಗಿ  ವಿಷ ಆಹಾರ ಹೊರ ಬರುತ್ತದೆ. ಹಲ್ಲು ನೋವು ಕಾಣಿಸಿಕೊಂಡಾಗ ಸಾಸುವೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗೆದು ಉಗಿಯುವುದರಿಂದಲೂ ಹಲ್ಲಿನ ನೋವು ಉಪಶಮನವಾಗುತ್ತದೆ. -ಸಂಗ್ರಹ

ಪಾಲಾಕು-ಬಸಳೆ ಸೊಪ್ಪು ತಿಂದರೆ

ನಿಮ್ಮ ಊಟದಲ್ಲಿ ಸೊಪ್ಪು ಇದ್ದರೆ ಆರೋಗ್ಯಕ್ಕೆ ವೃದ್ಧಿ ಆಗುತ್ತದೆ. ಅದರಂತೆ ಈ ಪಾಲಾಕು ಸೊಪ್ಪಿನ ಉಪಯೋಗದಿಂದ ಮಲಬದ್ಧತೆ ನಿವಾರಣೆಗೆ ರಾಮಬಾಣ. ಬಸಳೆ ಸೊಪ್ಪು ಬಳಸಿದರೆ ರಕ್ತ ಶುದ್ಧವಾಗುತ್ತದೆ. ರೋಗ ನಿರೋಧಗ ಶಕ್ತಿ ಹೆಚ್ಚಸಿತ್ತದೆ. ಮೂತ್ರ ಪಿಂಡಗಳ ಕೆಲಸಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಸಂಗ್ರಹ

ನಿತ್ಯ ಹಾಲು ಕುಡಿದರೆ

ಮಕ್ಕಳು ಹಾಲು ಕುಡಿಯಲು ಹಿಂದೇಟು ಹಾಕುತ್ತಾರೆ. ದೊಡ್ಡವರು ಹೇಗೆ ಆದರೆ ನಿತ್ಯ ಹಾಲು ಕುಡಿದರೆ ಆಗವ ಪ್ರಯೋಜನಾ ಬಹಳ ಇದೆ. ಆಗತಾನೆ ಕರೆದ ನೊರೆ ಹಾಲನ್ನು ಕಾಯಿಸದೆ ಐದು ದಿನಗಳವರೆಗೂ ಕುಡಿದರೆ ಬಾಯಿಹಣ್ಣು ನಿವಾರಣೆ ಆಗುತ್ತದೆ. ಮೇಕೆಹಾಲಿನ ಜೊತೆ ಜೇನುತುಪ್ಪ ಬೆರೆಸಿ ಕುಡಿದರೆ ನರಗಳ ದೌರ್ಬಲ್ಯ, ಮೂವ್ಯಾಧಿ, ಮಲಬದ್ಧತೆ ನಿವಾರಣೇ ಆಗುತ್ತದೆ. ನೆಗಡಿ ಬಂದಾಗ ಬಿಸಿ ಹಾಲಿಗೆ ಕಾಳು ಮೆಣಸಿನಪುಡಿ ಮತ್ತು ಕಲ್ಲುಸಕ್ಕರೆ ಬೆರಸಿಕುಡಿದರೆ ನೆಗಡಿ ಶಮನವಾಗುವುದು. -ಸಂಗ್ರಹ

ಮಾವಿನ ಹಣ್ಣಿನಿಂದ ಏನೆಲ್ಲಾ ಪ್ರಯೋಜನ

ಪ್ರಕೃತಿ ಆಯಾ ಕಾಲಕ್ಕೆ ತಕ್ಕಂತೆ  ಹಣ್ಣುಗಳನ್ನು ನೀಡುತ್ತದೆ. ಆಯಾ ಕಾಲದಲ್ಲಿ ಬರುವ ಹಣ್ಣು ತಿಂದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಹಾಗಾಗಿ ಇದು ಮಾವಿನ ಹಣ್ಣಿ ಕಾಲ. ಈ ಮಾವಿನ ಹಣ್ಣುತಿಂದರೆ, ಕಣ್ಣುಗಳ ತೊಂದರೆ ನಿವಾರಣೆ. ಶರೀರದ ನಿಶಕ್ತಿ ದೂರವಾಗಿ ನವ ಚೈತನ್ಯ ಉಂಟಾಗುತ್ತದೆ. ಲೈಂಗಿಕ ಶಕ್ತಿ. ಜ್ಞಾನಪಕ ಶಕ್ತಿ ವೃದ್ಧಿ ಆಗುತ್ತದೆ. ಮಲಬದ್ಧತೆ ನಿವಾರಣೆಗಾಗಿ ಹಣ್ಣು ತಿನ್ನಿ. ಮಾವಿನ ಕಾಯಿ ತಿನ್ನುವುದರಿಂದ ಕಾಲರ, ಆಮಶಂಕೆ ರೋಗಗಳನ್ನು ನಿರೋಧಿಸಬಲ್ಲ ಶಕ್ತಿ ಈ ಹಣ್ಣಿಗಿದೆ. -ಸಂಗ್ರಹ

ಕಬ್ಬಿನ ರಸ ಕುಡಿದರೆ

ನಿತ್ಯವೂ ಕಬ್ಬಿನ ರಸ ಕುಡಿದರೆ ಕ್ರಿಯಾ ಶಕ್ತಿ ಅಭಿವೃದ್ಧಿಯಾಗುತ್ತದೆ. ಜೊತೆಗೆ ಸಂಭೋಗಶಕ್ತಿಯು ವೃದ್ಧಿಯಾಗುತ್ತದೆ. ಕಬ್ಬಿನ ರಸದ ಜೊತೆಗೆ ನಿಂಬೆರಸ, ಹಸಿ ಶುಂಠಿ, ಸೇರಿಸಿ ಕುಡಿದರೆ ಜಠರದ ಹುಣ್ಣು ಉರಿಮೂತ್ರ ನಿವಾರಣೆ ಆಗುತ್ತದೆ. ಕಬ್ಬನ್ನು ಹಲ್ಲುಗಳಿಂದ ಸಿಗಿದು ತಿಂದರೆ ವಸಡುಗಳು ಗಟ್ಟಿ ಆಗುತ್ತವೆ. ಹಲ್ಲುಗಳು ಹೊಳೆಯುತ್ತವೆ ಆರೋಗ್ಯವೂ ವೃದ್ಧಿಆಗುತ್ತದೆ. -ಸಂಗ್ರಹ

ಅನಾನಸ್ ಹಣ್ಣು ಬಹು ಉಪಯೋಗಿ

ಅನಾನಸ್ ಹಣ್ಣಿನಲ್ಲಿ ಔಷಧಿಗುಣಗಳು ಇವ. ಉರಿ ಮೂತ್ರದ ಸಮಸ್ಯೆ ಇದ್ದರೆ ಹಣ್ಣಿನ ರಸ ಕುಡಿದರೆ ಉಪಶಮನವಾಗುತ್ತದೆ. ಅರಿಶಿನ ಕಾಮಾಲೆ ಇದ್ದವರು ಅನಾನಸ್ ಹಣ್ಣಿನ ಹೋಳುಗಳನ್ನು ಜೇನು ತುಪ್ಪದಲ್ಲಿ ನೆನೆಹಾಕಿ ಐದನೇ ದಿನದಿಂದ ದಿನಕ್ಕೆ ಎರಡು ಸಲ ತಿಂದರೆ ಕೆಲವೇ ದಿನಗಳಲ್ಲಿ ಖಾಯಿಲೆ ವಾಸಿಯಾಗುತ್ತದೆ. ಹೊಟ್ಟೆ ತೊಳೆಸುವುದು, ಮೂಲವ್ಯಾಧಿ ಹಾಗೂ ತಲೆಸುತ್ತುವುದು ಇದ್ದರೆ, ಹಣ್ಣಿನ ರಸದ ಜೊತೆ ಕಾಳು ಮೆಣಸಿನ ಪುಡಿ, ಅಡಿಗೆ ಉಪ್ಪು ಬೆರಸಿಕೊಂಡು ಕುಡಿದರೆ ಗುಣವಾಗುವುದು. -ಸಂಗ್ರಹ

2.92857142857
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top