ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ವಾಟೆಯೇ ಇಲ್ಲದ ಮಾವಿನಹಣ್ಣು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಾಟೆಯೇ ಇಲ್ಲದ ಮಾವಿನಹಣ್ಣು

"ವಾಟೆಯೇ ಇಲ್ಲದ ಮಾವಿನಹಣ್ಣು" ಬೆಳೆದಿದ್ದಾರೆ ಭಾರತೀಯ ಕೃಷಿ ವಿಜ್ಞಾನಿಗಳು

ಮಾವಿನ ಹಣ್ಣಿಗಿಂತ ಒಳಗಿನ ನಾರುನಾರಾದ ವಾಟೆಯನ್ನೇ ಇದನ್ನು ಚೀಪುತ್ತಾ - ಸವಿಯುವವರಿಗೇ ಗೊತ್ತು ಅದರ ಗಮ್ಮತ್ತು. ಇವರು "ವಾಟೆಯಿಲ್ಲದ ಮಾವಿನಹಣ್ಣನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ?" ಆದರೆ ಕೃಷಿವಿಜ್ಞಾನಿಗಳು ಸುಮ್ಮನೆ ಕೂರಬೇಕಲ್ಲ. ಸೀಡ್ ಲೆಸ್ ದ್ರಾಕ್ಷಿ ಕಂಡುಹಿಡಿದಿದವರು ಇಂದಿಲ್ಲ. ಇದೀಗ ಬಿಹಾರ ರಾಜ್ಯದ ಕೃಷಿವಿಜ್ಞಾನಿಗಳು "ವಾಟೆಯೇ ಇಲ್ಲದ ಮಾವಿನಹಣ್ಣು" ಸೃಷ್ಠಿಸಿದ್ದಾರೆ ಎಂದರೆ ನಂಬುವಿರಾ ? ಬಿಹಾರ ರಾಜ್ಯದ ಭಾಗಲ್ಪುರದ ಸಾಬೌರ್ ಎಂಬಲ್ಲಿ ಇರುವ ಕೃಷಿ ವಿಶ್ವವಿದ್ಯಾನಿಲಯದ ತೋಟಗಾರಿಕಾ ವಿಭಾಗದ ಮುಖ್ಯಸ್ಥರಾದ ಶ್ರೀಯುತ ವಿ.ಬಿ. ಪಟೇಲ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ "ನಾವು ರತ್ನ ಮತ್ತು ಅಲ್ಫಾನ್ಸೋ ಹೈಬ್ರಿಡ್ ತಳಿಗಳ ಮಿಶ್ರತಳಿಯ ವಾಟೆ ರಹಿತ ಮಾವಿನಹಣ್ಣನ್ನು ಸೃಷ್ಠಿಸಿದ್ದೇವೆ" ಎಂದು ವಿವರಿಸಿದರು.

ಬೇರೆಬೇರೆ ವಿಧಗಳ "ವಾಟೆ ರಹಿತ ಮಾವಿನಹಣ್ಣು" ಸಸ್ಯಗಳನ್ನು ದೇಶದ ವಿವಿಧ ಪ್ರದೇಶಗಳಲ್ಲಿಯೂ ನೆಡಲಾಗಿದ್ದು, ಭಾಗಲ್ಪುರದಲ್ಲಿ ನೆಡಲ್ಪಟ್ಟಿರುವ "ಸಿಂಧೂ" ಎಂದು ಹೆಸರಿಟ್ಟಿರುವ ಮಿಶ್ರತಳಿಯು ಒಳ್ಳೆಯ ಫಲಿತಾಂಶ ನೀಡಿದ್ದು ಇದು ಇತರ ಮಾವಿನಹಣ್ಣುಗಳಿಗಿಂತ ಕಡಿಮೆ ನಾರಿನಂಶ ಮತ್ತು ಹಳದಿ ಬಣ್ಣದ ರಸಭರಿತ ತಿರುಳು ಹೊಂದಿದ್ದು ಪ್ರತಿ ಹಣ್ಣು ಸುಮಾರು 200 ಗ್ರಾಂ ತೂಗುತ್ತದೆ ಎಂದು ವಿವರಿಸಿದರು. ಮೂಲತಃ ಮಹಾರಾಷ್ಟ್ರ ರಾಜ್ಯದ ದಾಪೋಲಿಯಲ್ಲಿ ಇರುವ ಕೊಂಕಣ್ ಕೃಷಿ ವಿದ್ಯಾಪೀಠದಲ್ಲಿ ಈ "ಸಿಂಧೂ" ವೆರೈಟಿಯ ವಾಟೆ ರಹಿತ ಮಾವಿನ ಹಣ್ಣನ್ನು ಅಭಿವೃದ್ಧಿಪಡಿಸಿದ್ದು. ಮೂರು ವರ್ಷ ವಯಸ್ಸಿನ "ಸಿಂಧೂ" ಮಾವಿನ ಗಿಡಗಳು ಈ ವರ್ಷ ಗೊಂಚಲುಗೊಂಚಲಾಗಿ ಮಾವಿನ ಕಾಯಿಗಳನ್ನು ಹೊಂದಿದ್ದು ಇವು ಜುಲೈ ಮಧ್ಯಭಾಗದಲ್ಲಿ ಪಕ್ವವಾಗಲಿವೆ ಎಂದರು.

ಬಿಹಾರ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಶ್ರೀಯುತ ಎಂ.ಎಲ್. ಚೌಧರಿಯವರು ಮಾತನಾಡುತ್ತಾ "ನಾವು ಈ ವಿಶೇಷ "ಸಿಂಧೂ" ತಳಿಯ ವಾಟೆರಹಿತ ಮಾವಿನ ಸಸ್ಯಗಳನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿ ಮುಂದಿನ ಸೀಸನ್ ನಲ್ಲಿ ಬಿಹಾರದಾದ್ಯಂತ ಮಾವು ಬೆಳೆಗಾರರಿಗೆ ವಿತರಿಸಬೇಕೆಂಬ ಆಲೋಚನೆಯಲ್ಲಿ ಇದ್ದೇವೆ" ಎಂದರು. "ಈ ತಳಿಯು ರಫ್ತು ಉದ್ದೇಶಕ್ಕೆ ಅತ್ಯುಪಯುಕ್ತ ಆಗಿದ್ದು ಉತ್ತಮ ಸಸ್ಯಗಳನ್ನು ಅಭಿವೃಸ್ಶಿಪಡಿಸಿ ಮುಂದಿನ ವರ್ಷ 2015ರಲ್ಲಿ ಬಿಹಾರದಾದ್ಯಂತ ಮಾವು ಬೆಳೆಗಾರರಿಗೆ ರಫ್ತು ಉದ್ದೇಶಕ್ಕಾಗಿಯೇ ಬೆಳೆಸಲು ಉತ್ತೇಜನ ನೀಡಲಿದ್ದೇವೆ" ಎಂದೂ ಶ್ರೀಯುತ ಚೌಧರಿಯವರು ವಿವರಿಸಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್ (ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್ - ಎನ್.ಹೆಚ್.ಎಂ.)

ಪ್ರಕಾರ ಬಿಹಾರ ರಾಜ್ಯವು ಮಾವಿನಹಣ್ಣು ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿಯೇ 3ನೇ ಸ್ಥಾನದಲ್ಲಿದ್ದು, ಬಿಹಾರ ರಾಜ್ಯದ ಒಟ್ಟು ಹಣ್ಣು ಬೆಳೆಗಳ ಪ್ರಮಾಣದ ಅರ್ಧದಷ್ಟು ಪ್ರಮಾಣ ಅಂದರೆ ಸುಮಾರು 38,000 ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ. ಕಳೆದ ವರ್ಷ ಬಿಹಾರ ರಾಜ್ಯವು ಒಂದೂವರೆ ದಶಲಕ್ಷ ಟನ್ ಗಳಷ್ಟು ಮಾವಿನಹಣ್ಣು ಉತ್ಪಾದಿಸಿದೆ. ಇವುಗಳಲ್ಲಿ ಮಾಲ್ಡಾ, ಮಲ್ಲಿಕಾ, ಜರ್ದಾಲೂ, ಗುಲಾಬ್ ಖಾಸ್, ಬಂಬೈ, ದಾಸೇರಿ, ಚೌಸಾ ಎಂಬ ಉತ್ಕೃಷ್ಟ ತಳಿಗಳು ಸೇರಿವೆ.

ಮೂಲ : ಒಲವೆ   ಕನ್ನಡ

2.94565217391
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top