অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅರೋಗ್ಯ ಮತ್ತು ಯೋಗ

ಅರೋಗ್ಯ ಮತ್ತು ಯೋಗ

“ಸ್ವಾಸ್ಥ್ಯ” ಎಂಬ ಸಂಸ್ಕೃತ ಪದವು ಶಾಂತಿ, ಸಂತೃಪ್ತಿ, ಆರೋಗ್ಯ ಮುಂತಾದ ಅರ್ಥಗಳನ್ನು ಕೊಡುತ್ತದೆ.

ಆಯುರ್ವೇದದ ಒಂದು ಶ್ಲೋಕ ಈ ಬಗ್ಗೆ ಹೀಗೆ ಹೇಳುತ್ತದೆ:-

ಸಮದೋಷ ಸಮಾಗ್ನಿಶ್ಚ

ಸಮಧಾತು ಮಲಕ್ರಿಯಾಃ |

ಪ್ರಸನ್ನಾತ್ನೇಂದ್ರಿಯ ಮನಃ

ಸ್ವಸ್ಥ ಇತ್ಯಭಿಧೀಯತೇ||

ಮನುಷ್ಯನೋರ್ವ ಪೂರ್ಣ ಸ್ವಸ್ಥನೆಂದರೆ ಅವನಲ್ಲಿ ದೋಷಗಳು(ತ್ರಿದೋಷ), ಧಾತುಗಳು (ಸಪ್ತಧಾತುಗಳು), ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಪ್ರಸನ್ನವಾಗಿ ಅಂದರೆ ಸಂತೃಪ್ತವಾಗಿದ್ದರೆ ಆತನನ್ನು ಸ್ವಸ್ಥ ಎನ್ನಬಹುದಾಗಿದೆ.

ಅಂದರೆ ಮನುಷ್ಯನ ಆರೋಗ್ಯ ಎಂದರೆ ಕೇವಲ ದೇಹದ ಆರೋಗ್ಯವಲ್ಲದೆ, ಅದು ಮನಸ್ಸು ಇ‍ತ್ಯಾದಿಗಳನ್ನು ಒಳಗೊಂಡ ಒಂದು ಸ್ಥಿತಿಯಾಗಿದೆ. ಇದನ್ನೇ ವಿಶ‍್ವ ಆರೋಗ್ಯ ಸಂಸ್ಥೆ ತನ್ನ ಆರೋಗ್ಯದ ವ್ಯಾಖ್ಯಾನದಲ್ಲಿ ಹೀಗೆ ಹೇಳಿದೆ :-

“ಆರೋಗ್ಯ ಎಂದರೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಕವಾಗಿ ಸಂಪೂರ್ಣವಾಗಿ ಚೆನ್ನಾಗಿರುವುದೇ ಆಗಿದೆ. ಕೇವಲ ದೈಹಿಕ ರೋಗಗಳಿಂದ ಮುಕ್ತವಾಗಿರುವುದಲ್ಲ”.

ಯೋಗದ ದೃಷ್ಟಿಯಲ್ಲಿ ದೇಹವು ಐದು ಕೋಶಗಳನ್ನು ಒಳಗೊಂಡಿದೆ.

ಈ ಐದು ಕೋಶಗಳ ಬಗ್ಗೆ ಉಪನಿಷತ್ತಿನಲ್ಲಿ ಉಲ್ಲೇಖವಿದೆ.

ಇವುಗಳನ್ನು ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳೆಂದು ಹೆಸರಿಸಿದ್ದಾರೆ.

ಪಂಚಕೋಶಗಳ ಬಗ್ಗೆ ತೈತ್ತಿರೀಯ ಉಪನಿಷತ್ ವಿವರವಾಗಿ ತಿಳಿಸುತ್ತದೆ.

ಗುರು ವರುಣ ತನ್ನ ಪುತ್ರ ಭೃಗುವಿಗೆ ಸತ್ಯವನ್ನು ಅರಿಯುವಲ್ಲಿ ನೆರವಾಗುತ್ತಾನೆ. ಭೃಗುವು ತಂದೆಯನ್ನು ಕೇಳುತ್ತಾನೆ, ತನಗೆ ಬ್ರಹ್ಮವನ್ನು ತಿಳಿಸು, ಯಾವುದರಿಂದ ಈ ಜಗತ್ತೆಲ್ಲವೂ ಸೃಷ್ಟಿಸಲ್ಪಟಿದೆಯೋ? ಯಾವುದರಿಂದ ಇವೆಲ್ಲವೂ ಸ್ಥಿತಿಯಲ್ಲಿವೆಯೋ ಮತ್ತು ಯಾವುದರಲ್ಲಿ ಎಲ್ಲವೂ ಲಯವಾಗುತ್ತದೆಯೋ ಅಂಥಹುದನ್ನು ತಿಳಿಸು ಎಂದು.

ತಂದೆಯ ಉಪದೇಶದಂತೆ ಭೃಗುವು ಸತ್ಯದ ಅರಿವಿಗಾಗಿ ತಪಸ್ಸನ್ನಾಚರಿಸುತ್ತಾನೆ. ಸ್ವಲ್ಪ ಕಾಲದ ನಂತರ ಉತ್ತರ ಒಂದನ್ನು ಕಂಡುಕೊಂಡು ಬಂದು ತಂದೆಗೆ ಹೇಳುತ್ತಾನೆ. ಅನ್ನವೇ ಬ್ರಹ್ಮ, ಅನ್ನದಿಂದಲೇ ಸರ್ವವೂ ಮಾಡಲ್ಪಟಿದೆ, ಜೀವಿಸುತ್ತಿದೆ ಮತ್ತು ಅನ್ನದಲ್ಲೇ ಎಲ್ಲವೂ ಲಯವಾಗುತ್ತದೆ.

ತಂದೆಗೆ ಮಗನ ಉತ್ತರದಿಂದ ಭೌತಿಕ ಜ್ಞಾನವನ್ನು ತಿಳಿದುದಕ್ಕಾಗಿ ಸಂತೋಷವಾಗುತ್ತದೆ.

ಈ ಅಂಶವು ನಮ್ಮ ಭೌತಿಕ ವಿವರವನ್ನು ಹೇಳುತ್ತದೆ. ಪೃಥ್ವಿ, ವಾಯು, ಆಕಾರ, ಅಗ್ನಿ, ಜಲ ಎಂಬ ಪಂಚಭೂತಗಳಿಂದ ಮಾಡಲ್ಪಟಿದೆ. ಅನ್ನ ಎಂದರೆ ಅದೇ ಪಂಚಭೂತಾತ್ಮಕವಾದ ಆಹಾರದಿಂದ ಪೋಷಿಸಲ್ಪಡುತ್ತದೆ. ಆದ್ದರಿಂದ ಇದು ಅನ್ನಮಯ ಶೋಕ.

ಆಧುನಿಕ ವಿಜ್ಞಾನವು ಅನ್ನಮಯವನ್ನು ಅತ್ಯಂತ ಚೆನ್ನಾಗಿ ಬಿಡಿ ಬಿಡಿಯಾಗಿ ಅರ್ಥೈಸಿ ಹೇಳುತ್ತದೆ. (cell,element, atom, etc)

ಪ್ರಾಣಮಯ ಕೋಶ:-

ತಂದೆ ಮತ್ತೆ ತಪೋನಿರತನಾಗಲು ಮಗನಿಗೆ ಆದೇಶಿಸುತ್ತಾನೆ.

ಭೃಗುವು ಪುನಃ ತಪಸ್ಸನ್ನಾಚರಿಸಿ “ಈ ಜಗತ್ತೆಲ್ಲ ಶಕ್ತಿಯಿಂದ (energy) ಮಡಲ್ಪಟಟ್ಟಿದೆ. ಅದೇ ಪರ್ವವೂ ಆಗಿದೆ”. ಎಂದು ಹೇಳುತ್ತಾನೆ. ದೇಹದ ಒಳಗೂ ಹೊರಗೂ ಪ್ರಾಣವೇ ಸಂಚರಿಸುತ್ತಿದೆ. ಅದರ ಇರುವೆಕೆಯಿಂದಲೇ ಇತರ ಎಲ್ಲ ಕಾರ್ಯಗಳು ನಡೆಯುತ್ತಿವೆ.

ದೇಹದ ಒಳಗೆ ಒಂದೇ ಪ್ರಾಣವೇ ಐದು ಭಾಗಗಳಾಗಿ ಎಲ್ಲಾ 72,000 ನಾಡಿಗಳಲ್ಲಿ ಸಂಚರಿಸುತ್ತದೆ. (ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ) ದೇಹದ ಎಲ್ಲಾ ಪ್ರಕ್ರಿಯೆಗಳು ನಾಡಿಯಲ್ಲಿನ ಪ್ರಾಣಸಂಚಾರವನ್ನು ಅವಲಂಬಿಸಿರುತ್ತದೆ. ಇದೇ ಪ್ರಾಣಮಯ ಕೋಶ.

ಮನೋಮಯ ಕೋಶ:

ಮತ್ತೆ ತಪಸ್ಸನ್ನು ಮಾಡಲು ತಂದೆಯಿಂದ ಆಜ್ಞಪ್ತನಾದ ಭೃಗುವು ಈ ಬಾರಿ ತಪಸ್ಸಿನಿಂದ ಎಲ್ಲ ಜೀವರಾಶಿಗಳಿಗೆ  ಹಾಗೂ ಜಗತ್ತಿಗೆ ಮನಸ್ಸೇ ಕಾರಣ ಎಂದು ಕಂಡು ಕೊಂಡ.  “ಮನಸ್ಸು” ಎಂಬುದರ ಅಸ್ಥಿತ್ವವೇ ಎಲ್ಲ ಕ್ರಿಯೆಗಳಿಗೂ ಆಧಾರ. ಮನಸ್ಸು ಇದ್ದರೆ ಉಳಿದೆಲ್ಲ ಇದೆ. ಮನಸ್ಸು ಇಲ್ಲವಾದಲ್ಲಿ ಬೇರೇನೂ ಇಲ್ಲ.

ಮನಸ್ಸು ಎಲ್ಲವನ್ನೂ ಗ್ರಹಿಸಿ ಇದು ಸುಖ ಇದು ದುಃಖ ಎಂದು ಭಾವಿಸುತ್ತಸೆ.

ಮನಸ್ಸಿನಲ್ಲಿ ಆಸೆ ಉದ್ಭವಿಸುತ್ತದೆ. ಆಸೆಯಿಂದ ಜಗತ್ತಿನ ಎಲ್ಲ ಕೆಲಸಗಳೂ ತಾನಗಿಯೇ ನಡೆಯುತ್ತದೆ. ಎಲ್ಲ ಸಂಕಲ್ಪ ವಿಕಲ್ಪಗಳಿಗೆ ಮನಸ್ಸೇ ಆಧಾರ. ಹೀಗೆ ಮನೋಮಯ ಕೋಶ.

ವಿಜ್ಞಾನಮಯ ಕೋಶ:

ವಿಜ್ಞಾನವೇ ಸರ್ವವೆಂದು ಅದರಿಂದಲೇ ಜಗತ್ತು ಸೃಷ್ಠಿ ಸ್ಥಿತಿ ಲಯಗಳನ್ನು ಕಾಣುತ್ತಿದೆ ಎಂದು ಭೃಗುವು ತಪಸ್ಸಿನಿಂದ ಅರಿತ.

ಮನಸ್ಸು ಇದು ಸುಖವೋ? ಅದು ಸುಖವೋ ಎಂಬ ಸಂಕಲ್ಪ ವಿಕಲ್ಪಗಳಲ್ಲಿ ತೊಡಗಿರುವಾಗ ನಿಶ್ಚಯಾತ್ಮಕವಾದ ಬುದ್ಧಿ ನಿರ್ಣಯಿಸುತ್ತದೆ.  ಈ ಒಳಗಿನ ಅಂತಃಪ್ರಜ್ಞೆಯ ಮನಸ್ಸನ್ನು ನಿಯಂತ್ರಿಸುತ್ತದೆ. ಮನವು ಪ್ರಾಣವನ್ನು, ಪ್ರಾಣವು ದೇಹವನ್ನು ನಿಯಂತ್ರಿಸುತ್ತದೆ.

ಹೀಗಾಗಿ ಸರ್ವಕ್ಕೂ ಆಧಾರವಾದದ್ದು ವಿಜ್ಞಾನವಾದ್ದರಿಂದ ವಿಜ್ಞಾನಮಯ ಕೋಶವೇ ಬ್ರಹ್ಮ.

ಆನಂದಮಯ ಕೋಶ:

ಈ ಬಾರಿ ತಪಸ್ಸು ಮಾಡಲು ಮರಳಿ ನಿರ್ದೇಶಿಸಲ್ಪಟ್ಟ ಭೃಗುವು ತಪಸ್ಸಿಗೆ ಹೋದವನು ಹಿಂತಿರುಗಿ ಬರುವುದಿಲ್ಲ. ಆದರೆ ಗುರುವೇ ಶಿಷ್ಯನನ್ನು ಹುಡುಕುತ್ತಾ ಹೋಗಿ, ತನ್ನ ಶಿಷ್ಯನು ಆನಂದದಲ್ಲಿ ಲೀನ ಆಗಿರುವುದನ್ನು ನೋಡಿ ಸಂತೋಷಿಸುತ್ತಾನೆ. ಶಿಷ್ಯನು ಆನಂದದ ಸ್ಥಿತಿಯಲ್ಲಿ “ನಾನು” ಎಂಬ ವಿಚ್ಛಿನ್ನ ಅಸ್ತಿತ್ವವನ್ನೇ ಕಳೆದು ಕೊಂಡಿದ್ದನು. ಜಗತ್ತೆಲ್ಲವೂ ಅಖಂಡ ಆನಂದದಿಂದ ತುಂಬಿತ್ತು.  ಇಲ್ಲಿಗೆ ಭೃಗುವು ಸತ್ಯವನ್ನು ಅರಿತಿದ್ದ. ಎಲ್ಲ ವಸ್ತುಗಳ ಸೂಕ್ಷಾತಿ ಸೂಕ್ಷ್ಮವಾಗಿ ಆನಂದವು ಸ್ಥಿತವಾಗಿದೆ.

ಈ ಆನಂದ ಜಗತ್ತಿನ ಮೂಲ ಮತ್ತು ಎಲ್ಲವನ್ನು ಇದು ಒಳಗೊಂಡಿದೆ.

ಆಧುನಿಕ ವಿಜ್ಞಾನವು ಈಚೆಗೆ ದೇಹತೀತವಾದ ಕೆಲವು ಅಸ್ತಿತ್ವಗಳನ್ನು ಈಗೀಗ ಒಪಲಾರಂಭಿಸಿದೆ. ದೇಹದ ಪ್ರಭಾವಳಿಯ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಮಾಡಲಾಗುತ್ತಿದೆ.

ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಸ್ ಪ್ರಭಾವಳಿಗಳನ್ನು ವಿಂಗಡಿಸುತ್ತಾರೆ.

1)    Physical Aura

2)    Psychological Aura

3)    Psychical Aura

4)   The projected Aura etc.

 

ಅನಾರೋಗ್ಯದ ಸಿದ್ಧಾಂತಗಳು:

ಅನ್ನಮು ಕೋಶವು ಮನುಷ್ಯನಲ್ಲಿ ಆರೋಗ್ಯಕರವಾಗಿರುತ್ತದೆ. ಅದರ ಎಲ್ಲ ಅಂಗಗಳು ಸಮರ್ಪಕ ಕಾರ್ಯಗಳಿಂದ ಕೂಡಿರುತ್ತದೆ. ವಿಜ್ಞಾನಮಯ ಕೋಶದಲ್ಲಿ ಕೆಲವು ಚಟುವಟಿಕೆಗಳು ನಡೆಯುತ್ತಿರುತ್ತವೆಯಾದರೂ ಅವು ಸರಿಯಾದ ಕ್ರಮದಲ್ಲಿರುತ್ತದೆ.

ಮನೋಮಯ ಕೋಶದ ಹಂತದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆ.

ಇಚ್ಛೆ – ಅನಿಚ್ಛಗಳು ಮನಸ್ಸಿನಲ್ಲಿ ತಮ್ಮ ಆಟಗಳನ್ನು ಆರಂಭಿಸುತ್ತವೆ. ಇವುಗಳು ನಮ್ಮ ಕಾರ್ಯಗಳನ್ನು ನಿಯಂತ್ರಿಸಲಾರಂಭಿಸುತ್ತದೆ. ಕೆಲವೊಮ್ಮೆ ಕಾರ್ಯಗಳನ್ನು ತಪ್ಪು ದಾರಿಯಲ್ಲಿ ಎಳೆಯಲೂ ಬಹುದು. ಉದಾ:_ ಗುಲಾಬ್ ಜಾಮೂನಿನ ಇಚ್ಛೆಯು ಮಧುಮೇಹ ರೋಗಿಯನ್ನು ವೈದ್ಯರ ಅಪೇಕ್ಷೆಯ ವಿರುದ್ಧವಾಗಿ ತಿನ್ನುವಂತೆ ಮಾಡುತ್ತದೆ. ಸರಿಯಾದ ಮಾರ್ಗಕ್ಕೆ  ವಿರುದ್ಧವಾಗಿ ವರ್ತಿಸುವುದೇ ಅಸಮತೋಲನಕ್ಕೆ ಕಾರಣ.

ಅಸಮತೋಲನಗಳ ಫಲವಾಗಿ ಮಾನಸಿಕ ಹಂತದಲ್ಲಿ ರೋಗಗಳು ಆರಂಭವಾಗುತ್ತದೆ. ‘ಆಧಿ’ ಎಂಬುದು ಈ ಹಂತಕ್ಕೆ  ಇರುವ ಹೆಸರು. ಈ ಹಂತದಲ್ಲಿ  ದೈಹಿಕವಾಗಿ ರೋಗದ ಯಾವುದೇ ಲಕ್ಷಣಗಳು ಇರುವುದಿಲ್ಲ. ಕ್ರಮೇಣ ಮಾನಸಿಕ ಹಂತದಲ್ಲಿರುವ ರೋಗಗಳು ಗಟ್ಟಿಯಾಗುತ್ತಾ ಭೌತಿಕ ಸ್ವರೂಪ ಪಡೆಯುತ್ತದೆ.

ಅಜ್ಞಾನದ ಪರಿಣಾಮವಾಗಿ ವ್ಯಕ್ತಿಯು ತಪ್ಪು ಕಾರ್ಯಗಳನ್ನು ಮಾಡುತ್ತಾನೆ. ಅರ್ಥಾತ್ ತಿನ್ನಲು ಯೋಗ್ಯವಲ್ಲದ ಆಹಾರ ಸೇವನೆ, ಅನಾರೋಗ್ಯಕರ ವಾತಾರಣದಲ್ಲಿ ವಾಸ, ಅಕಾಲದಲ್ಲಿ ಕಾರ್ಯಗಳನ್ನು ಮಾಡುವುದು, ಕೆಟ್ಟಯೋಚನೆ ಇತ್ಯಾದಿ. ಇವೆಲ್ಲ ದೈಹಿಕ ರೂಪದ ರೋಗಕ್ಕೆ ನೇರ ಕಾರಣವಾಗುತ್ತವೆ. ಅವನ್ನೇ ವ್ಯಾಧಿ ಎನ್ನಲಾಗಿದೆ.

ಆಧಿಯು ಎರಡು ವಿಧವಾಗಿದೆ.

“ಸಾರ ಮತ್ತು ಸಾಮಾನ್ಯ”

“ಸಾಮಾನ್ಯ” ಎಂದರೆ ಜಗತ್ತಿನ ಸಂಪರ್ಕದಿಂದ ಸುಪ್ತ ಮನಸ್ಸಿನಲ್ಲಿ ಉಂಟಾಗುವ ರೋಗಗಳು. ಇವೇ ಮುಂದೆ ದೇಹದಲ್ಲಿ ಪ್ರಕಟ ರೂಪಕ್ಕೆ ಬರುತ್ತವೆ. ಇವನ್ನು ಸರಿಯಾದ ಚಿಕಿತ್ಸಾ ತಂತ್ರಗಳಿಂದ ಮತ್ತು ಉತ್ತಮ ವಾತಾವರಣದಿಂದ ಗುಣಪಡಿಸಬಹುದು. ಈ ವ್ಯಾಧಿಗಳನ್ನು ಆಧಿಜ ವ್ಯಾಧಿ ಎನ್ನುವರು.

‘ಸಾರ’ ಎಂಬುದು ನಮ್ಮ ಪೂರ್ವ ಕರ್ಮಗಳಿಂದ ಬಂದದ್ದು ಮತ್ತು ಈ ಜನ್ಮಕ್ಕೆ ಕಾರಣವಾದದ್ದು. ಇದು ಕೇವಲ ಮುಕ್ತಿಯಿಂದ ನಿವಾರಣೆ ಆಗುತ್ತದೆ.

ಇನ್ನೊಂದು ಪ್ರಕಾರದ ವ್ಯಾಧಿಗಳಿವೆ. ಅವೇ ಅನಾಧಿಜ ವ್ಯಾಧಿಗಳು. ಅಂದರೆ ಮನಸ್ಸಿನಿಂದ ಉತ್ಪತ್ತಿ ಹೊಂದದ ಆರೋಗ್ಯದ ಸಮಸ್ಯೆಗಳು. ಇದು infection, physical injury ಇತ್ಯಾದಿ.

ಅನಾಧಿಜ ವ್ಯಾಧಿಗಳನ್ನು ಕೂಡ ಸೂಕ್ತ ಚೌಷಧ, ಮಂತ್ರ ಮತ್ತು ಉತ್ತಮ ಕಾರ್ಯಗಳಿಂದ ಗುಣಪಡಿಸಬಹುದು. ಗುಣಪಡಿಸುವ ತಂತ್ರಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ. ಮನಸ್ಸಿನ ಶುದ್ಧತೆ, ಪ್ರಾಣದ ತಡೆರಹಿತ ನಿರಂತರ ಹರಿವು, ಆಹಾರವನ್ನು ಉತ್ತಮ ರೀತಿಯಲ್ಲಿ ಜೀರ್ಣಿಸುವುದು ಮತ್ತು ಉತ್ತಮ ರೀತಿಯ ವಿಸರ್ಜನೆ ಕ್ರಿಯೆ.

Psychosomatic ರೋಗಗಳು:

ಎರಡು ರೀತಿಯ ಆಧಿಗಳಲ್ಲಿ “ಸಾಮಾನ್ಯ”ವು ಆಧುನಿಕ ವಿಜ್ಞಾನದ ಸೈಕೋ ಸೊಮ್ಯಾಟಿಕ್ ರೋಗಗಳಿಗೆ ಸಾಮ್ಯವಾಗಿದೆ. ಯಾವಾಗ ಮನಸ್ಸು ಜಗತ್ತಿನೊಂದಿಗೆ ಸಂಪರ್ಕಿಸುವಾಗ ಉದ್ರೇಕಗೊಳ್ಳುತ್ತವೋ ಆಗ ದೇಹ ಕೂಡ ಮನಸ್ಸಿಗೆ ತಕ್ಕಂತೆ ಸ್ಪಂದಿಸುತ್ತದೆ. ಪ್ರಾಣವು ನಿಯಮಿತ ಪ್ರವಾಹವನ್ನು ಕಳೆದುಕೊಳ್ಳುತ್ತವೆ. ದಿಕ್ಕು ತಪ್ಪಿ ಪ್ರವಹಿಸಲಾರಂಭಿಸುತ್ತದೆ. ನಾಡಿಗಳು ಈ ರೀತಿಯ ಸ್ಥಿರವಲ್ಲದ ಅನಿಯಮಿತವಾದ ಪ್ರಾಣ ಪ್ರವಾಹವನ್ನು ಹೆಚ್ಚು ಕಾಲ ತಡೆದುಕೊಳ್ಳಲು ಅಶಕ್ತವಾಗಿರುತ್ತದೆ.

ಈ ರೀತಿಯ ಕ್ಷೋಭೆಗೊಂಡ   ಮತ್ತು ಅಸ್ಥಿರವಾದ ಪ್ರಾಣ ಪ್ರವಾಹದಿಂದ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಗುವುದಿಲ್ಲ. ಈ ಸ್ಥಿತಿಯನ್ನು ಅಜೀರ್ಣತ್ವ, ಕುಜೀರ್ಣತ್ವ ಮತ್ತು ಅಜೀರ್ಣತ್ವ ಎಂದು ಹೆಸರಿಸಬಹುದು.

ಯಾವಾಗ ಹೀಗೆ ಜೀರ್ಣಗೊಂಡ ಆಹಾರವು ದೇಹಕ್ಕೆ ಸೇರುತ್ತದಯೋ ಆಗ ಪರಿಣಾಮವಾಗಿ Psychosomatic  ವಿಧದ ರೋಗಗಳು  ಉದ್ಭವಿಸುತ್ತವೆ.

Cancer, Diabetes, BP, Thyroid problems, Asthama, neurological disorders, Psychological disorders, Arthritis ಮುಂತಾದ ಎಲ್ಲಾ ರೋಗಗಳು Psychosomatic ರೋಗಗಳು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate