ಉತ್ಕಟಾಸನಕ್ಕೆ ಗರುಡಾಸನವೆಂಬ ಇನ್ನೊಂದು ಹೆಸರು ಇದೆ. ಇದು ನೋಡಲು ಸುಲಭವಾಗಿ ಕಂಡು ಬಂದರೂ ಹೆಸರೇ ಸೂಚಿಸುವಂತೆ ಈ ಆಸನವು ಅತಿಕ್ಲಿಷ್ಟವಾದುದು.
ಮಾಡುವಕ್ರಮ
1) ಮೊದಲು ಭೂಮಿಗೆ ನೇರವಾಗಿ ಎರಡು ಪಾದಗಳನ್ನು ಜೋಡಿಸಿ ನಿಂತುಕೊಳ್ಳಬೇಕು.
2) ಅನಂತರ ಕೈಗಳನ್ನು ಸೊಂಟದ ಮೇಲಿಟ್ಟು ಅಥವಾ ಮೇಲಕ್ಕೆ ನೇರವಾಗಿ ಎತ್ತಿ, ಉಸಿರನ್ನು ನಿಧಾನವಾಗಿ ಹೊರಗೆ ದೂಡಿ, ಮಂಡಿಯ ಮೇಲ್ಭಾಗದ ಶರೀರವನ್ನು ಮಾತ್ರ ಕೆಳಕ್ಕೆ ತರಲು ಪ್ರಯತ್ನಿಸಬೇಕು. ಈ ರೀತಿ ಮಾಡುವಾಗ ಮಂಡಿಯ ಕೆಳಗಿನ ಭಾಗಗಳೂ ಸ್ವಲ್ಪ ಓರೆಯಾಗುವವು. ಸೊಂಟದ ಮೇಲ್ಭಾಗದ ಎದೆ, ತಲೆ, ಕತ್ತು ಮತ್ತು ಕಾಲಿನ ಮಂಡಿಯ ಕೆಳಭಾಗಗಳು ಭೂಮಿಗೆ ಲಂಬವಾಗಿರಬೇಕು ಹಾಗೂ ತೊಡೆಗಳನ್ನು ಭೂಮಿಗೆ ಸಮಾನಾಂತರವಾಗಿರಿಸುತ್ತ ಹೆಚ್ಚು ಗಮನ ವಹಿಸಬೇಕು. ಪ್ರಾರಂಭದಲ್ಲಿ ಉತ್ಕಟಾಸನವನ್ನು ಗೋಡೆಯ ಬಳಿ ಅಭ್ಯಾಸ ಮಾಡಬಹುದು. ಜಾಗರೂಕತೆಯಿಂದ ಈ ಆಸನವನ್ನು ಅಭ್ಯಾಸ ಮಾಡುವುದು ಉತ್ತಮ.
ಲಾಭಗಳು
ಕಾಲುಗಳಲ್ಲಿನ ಅನೇಕ ದೋಷಗಳು ದೂರವಾಗುವುವು. ಸೊಂಟಕ್ಕೆ ಈ ಆಸನದ ಅಭ್ಯಾಸದಿಂದ ಹೆಚ್ಚು ವ್ಯಾಯಾಮ ದೊರೆತಂತಾಗುವುದು.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 6/9/2020