অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಶ್ಚಿಮೋತ್ತಾನಾಸನ

ಪಶ್ಚಿಮೋತ್ತಾನಾಸನ

ಪಶ್ಚಿಮೋತ್ತಾನಾಸನವನ್ನು ಬ್ರಹ್ಮಚರ್ಯಾಸನ ಎಂದೂ ಕರೆಯುವರು. ತ್ರ್ಯಂಗಮುಖೈಕ ಪಶ್ಚಿಮೋತ್ತಾನಾಸನ ಮತ್ತು ಅರ್ಧಬದ್ಧ ಪಶ್ಚಿಮೋತ್ತಾನಾಸನಗಳೆಂಬ ಪ್ರಭೇದಗಳೂ ಇದರಲ್ಲಿವೆ.

ಮಾಡುವ ಕ್ರಮ

1)    ಮೊದಲು ನೆಲದ ಮೇಲೆ ಕುಳಿತು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಾಬೇಕು.

2)    ಅನಂತರ ಎರಡೂ ಕೈಗಳನ್ನು ಮೇಲಕ್ಕೆತ್ತಿ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬೇಕು.

3)    ಉಸಿರನ್ನು ನಿಧಾನವಾಗಿ  ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮಟ್ಟಿಗೆ ಮುಂದಕ್ಕೆ ಬಗ್ಗುವಾಗ ಮಂಡಿಯು ಮೇಲಕ್ಕೆ ಎಳೆದಿರುವ ಕಡೆ ಗಮನಿಸುವುದು ಅಗತ್ಯ.

4)    ಅಲ್ಲದೆ ಮುಂದಕ್ಕೆ ಬಗ್ಗುವಾಗ ಚಿತ್ರದಲ್ಲಿರುವಂತೆ ಕಾಲುಗಳನ್ನು ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಮೊಣಕೈಗಳನ್ನು ನೆಲಕ್ಕೆ ಮುಟ್ಟಿಸುತ್ತಾ ಹಣೆಯನ್ನು  ಅಥವಾ ಎದೆಯನ್ನು ಮಂಡಿಗೆ ಮುಟ್ಟಿಸುವಾಗಲೂ ಬೆನ್ನು ಗೂನಾಗದಿರುವತ್ತ ಗಮನ ನೀಡುವುದು ಉತ್ತಮ. ಪಶ್ಚಿಮೋತ್ತಾನಾಸನವನ್ನು ಮೂರರಿಂದ ಐದು ನಿಮಿಷಗಳವರೆಗೆ ಮಾಡುವುದೂ ಉತ್ತಮ.

ಲಾಭಗಳು

ಪಶ್ಚಿಮೋತ್ತಾನಾಸನದ ಅಭ್ಯಾಸದಿಂದ ಜೀರ್ಣಶಕ್ತಿ ಹೆಚ್ಚುವುದು, ಮಲಬದ್ಧತೆ ನಿವಾರಣೆಯಾಗುವುದು, ಬೊಜ್ಜು ಕರಗುವುದು. ಹೊಟ್ಟೆ ಹಾಗೂ ಸೊಂಟದ ಎಲ್ಲ ಅವಯವಗಳೂ ಸುದೃಢವಾಗುವವು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate