অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭುಜಂಗಾಸನ

ಭುಜಂಗಾಸನ

ಹೆಡೆಯೆತ್ತಿದ ಸರ್ಪವನ್ನು ಈ ಆಸನವು ನೆನಪಿಗೆ ತರುವುದರಿಂದ ಭುಜಂಗಾಸನವೆಂಬ ಹೆಸರು ಇದಕ್ಕೆ ಅನ್ವರ್ಥವಾಗಿದೆ.

ಮಾಡುವ ಕ್ರಮ:

1)  ಮೊದಲು ಯೋಗಾಭ್ಯಾಸಿಯು ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಶಲಭಾಸನದ ಪ್ರಾರಂಭದಂತೆ ಮಲಗಬೇಕು.

2)  ಅನಂತರ ಎರಡೂ ಅಂಗೈಗಳನ್ನ ಎದೆಯ ಪಕ್ಕದಲ್ಲಿ ಇಡಬೇಕು.

3)  ಅಂಗೈಗಳ ಮೇಲೆ ಹೊಕ್ಕಳಿನ ಮೇಲಿನ ಭಾಗದ ಶರೀರದ ಭಾರ ಹಾಕಿ, ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಚಿತ್ರದಲ್ಲಿ ತೋರಿಸಿರುವಂತೆ ಶರೀರವನ್ನು ನೆಲದಿಂದ ಮೇಲಕ್ಕೆ ಎತ್ತಬೇಕು.

4)  ಈ ಸ್ಥಿತಿಯಲ್ಲಿ ಸೊಂಟದ ಕೆಳಗಿನ ಭಾಗವು ನೆಲದ ಮೇಲೆ ನೇರವಾಗಿ ಚಾಚಿರಬೇಕು. ಚಿತ್ರದಲ್ಲಿರುವಂತೆ ತಲೆಯನ್ನು ಭೂಮಿಯಿಂದ ಮೇಲಕ್ಕೆತ್ತಿ ಸಮತೋತಲನ ಪಡೆದ ನಂತರ ಕತ್ತನ್ನು ಹಿಂದಕ್ಕೆ ಬಗ್ಗಿಸಲೂಬಹುದು. ಆಗ ಬೆನ್ನಿನ ಎಲ್ಲ ಭಾಗಗಳಿಗೂ ವಿಶೇಷ ಶಕ್ತಿ ಒದಗಿಸಿದಂತಾಗುವುದು.

ಲಾಭಗಳು: ಭುಜಂಗಾಸನದ ಅಭ್ಯಾಸದಿಂದ  ಮೇರುದಂಡ ಹೆಚ್ಚು ಬಲಿಷ್ಠವಾಗುವುದು. ಸೊಂಟ ಮತ್ತು ತೊಡೆಗಳ ದುರ್ಬಲತೆ ದೂರವಾಗುವುದು. ಉದರದ ಅನೇಕ ದೋಷಗಳೂ ನಿವಾರಣೆಯಾಗುವುವು ಅಲ್ಲದೆ ಶ್ವಾಸಕೋಶಗಳು ಹೆಚ್ಚು ಬಲಶಾಲಿಯಾಗುವುವು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate