অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೋಲಾಸನ

ಲೋಲಾಸನ

ಲೋಲಾಸನಕ್ಕೆ ತೋಲಾಸನವೆಂಬ ಹೆಸರೂ ಇದೆ. ‘ತೋಲ’ ಎಂದರೆ ತೂಕಮಾಡುವುದು ಎಂದರ್ಥ.

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಮೊದಲು ಕಾಲನ್ನು ಮುಂದಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಬೇಕು.

2)   ಅನಂತರ ಎರಡೂ ಕಾಲುಗಳನ್ನು ಮಡಿಸಿ, ಅವುಗಳನ್ನು ದೇಹದ ಪಕ್ಕದಲ್ಲಿ ನಿಲ್ಲಿಸಬೇಕು. (ಅಂದರೆ ಈ ಸ್ಥಿತಿಯಲ್ಲಿ ಯೋಗಾಭ್ಯಾಸಿಯೂ ಕುಕ್ಕರಗಾಲಿನಲ್ಲಿ ಕುಳಿತಿರುತ್ತಾನೆ ಮತ್ತು ತನ್ನ ಶರೀರದ ಭಾರವನ್ನು ಪೃಷ್ಠ ಹಾಗೂ ಪಾದಗಳ ಮೇಲೆ ಹೊರಿಸಿರುತ್ತಾನೆ).

3)  ಎರಡೂ ಕೈಗಳನ್ನು ಶರೀರದ ಮುಂದುಗಡೆ 10- 12 ಅಂಗುಲಗಳ ಅಂತರದಲ್ಲಿ ನೆಲದಲ್ಲಿ ಊರಿ, ಇಡೀ ಶರೀರವನ್ನು ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಬೇಕು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದ ನಂತರ, ಅದೇ ಸ್ಥಿತಿಯಲ್ಲಿ ಹೆಚ್ಚು ಹೊತ್ತು ಇರಲು ಪ್ರಯತ್ನಿಸಬೇಕು.

ಲಾಭಗಳು:

ಲೋಲಾಸನದ ಅಭ್ಯಾಸದಿಂದ ಹರ್ನಿಯಾ, ಅಪೆಂಡಿಸೈಟಿಸ್ ಮುಂತಾದ ರೋಗಗಳು ದೂರವಾಗುವುವು. ಕಿಬ್ಬೊಟ್ಟೆಯು ದೋಷರಹಿತವಾಗುವುದು. ಅಂಗೈ, ಮುಂಗೈ, ಹಾಗೂ ತೋಳುಗಳು ಈ ಆಸನದಿಂದ ಅಪರಿಮಿತ ಬಲ ಬರುವುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 12/10/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate