অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಜ್ರಾಸನ

ವಜ್ರಾಸನ

ವಜ್ರಾಸನ ಒಂದು ಧ್ಯಾನಾಸನ. ಇದರಲ್ಲಿ ಏಕಾಕಿನ್ ವಜ್ರಾಸನ, ಗುಲ್ಫ ವಜ್ರಾಸನ, ಪೂರ್ಣ ವಜ್ರಾಸನ, ಸುಪ್ತ ವಜ್ರಾಸನ ಮತ್ತು ಸುಪ್ತ ಪೂರ್ಣ ವಜ್ರಾಸನಗಳೆಂಬ ಪ್ರಭೇದಗಳೂ ಇವೆ.

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು.

2)   ಅನಂತರ ಎರಡೂ ಕಾಲುಗಳನ್ನು ಮಂಡಿಯ ಬಳ್ಳಿ ಬಗ್ಗಿಸಿ, ಚಿತ್ರದಲ್ಲಿ ತೋರಿಸುವಂತೆ ಕುಳಿತುಕೊಳ‍್ಳಬೇಕು. ಅಂದರೆ ಈ ಸ್ಥಿತಿಯಲ್ಲಿ ಮಂಡಿಗಳು ಪರಸ್ಪರ ತಗಲಿರಬೇಕು, ಎರಡೂ ಹಿಮ್ಮಡಿಗಳೂ ಪರಸ್ಪರ ತಗಲಿರುವುದರೊಂದಿಗೆ ಇಡೀ ಶರೀರದ ಭಾರವನ್ನು ಎರಡು  ಹಿಮ್ಮಡಿಗಳ ಮೇಲೆ ಹೆಚ್ಚು ಹೊರಿಸಿರಬೇಕು. ಅನಂತರ ಎದೆ ಎತ್ತಿ, ನೇರವಾಗಿ ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಕುಳಿತುಕೊಳ‍್ಳುವುದು ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಆರೋಗ್ಯಕ್ಕೆ ಹೆಚ್ಚು  ಉಪಯೋಗ. ವಜ್ರಾಸನವನ್ನು ಹೆಚ್ಚು ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ  ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ. ಊಟ ಮಾಡಿದ ನಂತರವೂ ವಜ್ರಾಸನವೊಂದನ್ನು ಮಾತ್ರ ಅಭ್ಯಾಸ ಮಾಡಬಹುದಾಗಿದೆ.

ಲಾಭಗಳು:

ವಜ್ರಾಸನದ ಅಭ್ಯಾಸದಿಂದ ಕೀಲುನೋವು ಮತ್ತು ಕಾಲು ನೋವು ಗುಣವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಆಹಾರ ಸುಲಭವಾಗಿ  ಜೀರ್ಣವಾಗುತ್ತದೆ. ಹಿಮ್ಮಡಿ ನೋವು ಸಹ ದೂರವಾಗುತ್ತದೆ. ಹೆಚ್ಚು ಹೊತ್ತು ನಿಂತಿರಬೇಕಾದವರಿಗೆ ಮತ್ತು ಕ್ರೀಡಾಪಟುಗಳಿಗೆ ಈ ಆಸನ ಉಪಕಾರಿ.

 

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 12/10/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate