ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಕೂದಲ ಆರೈಕೆ / ಕೂದಲ ರೋಗ ಪತ್ತೆ ಸರಳ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೂದಲ ರೋಗ ಪತ್ತೆ ಸರಳ

ಕೂದಲ ರೋಗ ಪತ್ತೆ ಸರಳ

ನನ್ನ ಕೂದಲು ಉದುರಲು ಕಾರಣವೇನು' ಎಂದು ಅನೇಕ ರೋಗಿಗಳು ನನ್ನಲ್ಲಿ ಕೇಳುತ್ತಾರೆ. ಹೆಲ್ಮಟ್ ಧರಿಸುವುದು ಇದಕ್ಕೆ ಕಾರಣವೇ ಅಥವಾ ಕೂದಲಿಗೆ ಸಾಕಷ್ಟು ಎಣ್ಣೆ ಹಚ್ಚದಿರುವುದು ಅಥವಾ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದು ಅಥವಾ ಚೆನ್ನಾಗಿ ತಿನ್ನದಿರುವುದು ಅಥವಾ ಸಾಕಷ್ಟು ನಿದ್ರೆ ಮಾಡದಿರುವುದು ಇದಕ್ಕೆ ಕಾರಣವೇ ಎಂದು ಕೇಳುತ್ತಾರೆ. ವಾಸ್ತವದಲ್ಲಿ ಏನೇ ಇರಲಿ, ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ.

ಎ. ಕೂದಲು ಉದುರುವ ಮಾದರಿ
ಸಾಮಾನ್ಯವಾಗಿ ನೆತ್ತಿಯ ಮೇಲೆ ಮತ್ತು ನಡು ಭಾಗದಲ್ಲಿ ಕೂದಲು ಉದುರುವಿಕೆ ಕಾಣಬಹುದು. ಆದರೆ ತಲೆ ಹಿಂಭಾಗದಲ್ಲಿ ಕೂದಲು ಸ್ವಲ್ಪಮಟ್ಟಿಗೆ ಹಾಗೆಯೇ ಉಳಿದಿರುತ್ತದೆ. ಈ ಮಾದರಿಯ ಕೂದಲು ಉದುರುವಿಕೆಗೆ ಅನುವಂಶಿಕತೆ ಅಥವಾ ಹಾರ್ಮೋನ್ ಏರಿಳಿತಗಳು ಕಾರಣವಾಗಿರುತ್ತವೆ. ಪಾಲಿಸಿಸ್ಟಿಕ್ ಅಂಡಾಶಯದ ರೋಗ ಮತ್ತು ಥೈರಾಯ್ಡ್ ಕಾಯಿಲೆ ಇದ್ದ ಮಹಿಳೆಯರಲ್ಲಿ ಕೂದಲುದುರುವಿಕೆಯಲ್ಲಿ ಹಾರ್ಮೋನುಗಳ ಪಾತ್ರ ಹೆಚ್ಚು ಕಂಡು ಬರುತ್ತದೆ.

ಬಿ. ನೆತ್ತಿಯ ಸೋಂಕು
ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾವು ನೆತ್ತಿಯ ಸಾಮಾನ್ಯ ಸೋಂಕುಗಳ ವಿಧಗಳು. ಇಂತಹ ಪ್ರಕರಣಗಳಲ್ಲಿ ವಿಶೇಷವಾಗಿ ಕೂದಲು ಉದುರುವಿಕೆ ಜತೆಗೆ ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಸಿ. ತೆಲೊಗನ್ ಎಫ್ಲವಿಯಮ್
ಈ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಅದಕ್ಕೆ ನೀರಿನ ಬದಲಾವಣೆ, ಒತ್ತಡ, ಥೈರಾಯ್ಡ್ ಮೊದಲಾದ ಅನಾರೋಗ್ಯ, ಕಾಮಾಲೆ ಮೊದಲಾದವುಗಳು ಕಾರಣ. ಸಾಮಾನ್ಯವಾಗಿ ಇದು ತಾತ್ಕಾಲಿಕವಾಗಿರುತ್ತದೆ, ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಉದುರುವಿಕೆ ಉಲ್ಭಣಾವಸ್ಥೆಗೆ ತಲುಪದಂತೆ ನಿಯಂತ್ರಿಸಬಹುದು.

ಅನೇಕ ಜನರಿಗೆ ಕೂದಲು ಉದುರುವಿಕೆಗೆ ಈ ಮೇಲಿನ ಮೂರು ಅಂಶದಲ್ಲಿ ಒಂದಾಗಿರುತ್ತದೆ. ಕೆಲವು ರೋಗಿಗಳಲ್ಲಿ ಎರಡು ವಿಧದ ಕೂದಲು ಉದುರುವಿಕೆ ಒಟ್ಟಿಗೇ ಉಂಟಾಗಬಹುದು. ಉದಾಹರಣೆಗೆ ವಂಶಪಾರಂಪರ್ಯ ಮತ್ತು ನೆತ್ತಿಯ ಸೋಂಕು ಒಟ್ಟಿಗೇ ಕಾಣಿಸಿಕೊಳ್ಳಬಹುದು. ಇದು ವೇಗವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ರೀತಿ ಉಂಟಾದರೆ ಸಮಸ್ಯೆ ಸ್ವಲ್ಪ ಜಟಿಲವಾಗುತ್ತದೆ.
ಕೃಪೆ:ವಿಜಯಕರ್ನಾಟಕ

ಮೂಲ : ವಿಜಯ ಕರ್ನಾಟಕ

2.91836734694
BASAVARAJ Feb 29, 2016 02:29 PM

ನನಗೆ ಬಿಳಿ ಕೂದಲು ಅಗತೈದೆ ಅದನ್ನು ಕಡಿಮೆ ಮಾಡೋದಿಕ್ಕೆ ಯವದದ್ರು ಆಯುರ್ವೇದಿಕ್ ಟಿಪ್ಸ್ ಇದ್ದರೆ ಕೊಡಿ

raja Sep 19, 2015 09:59 PM

ಹೌದೆ? ಸಂದೇಶ ಚನ್ನಾಗಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top