1. ಮೊಸರು ಹೊಟ್ಟು ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ 15 ದಿನಕ್ಕೊಮ್ಮೆ ತಲೆಗೆ ಮೊಸರನ್ನು ಹಚ್ಚಿ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಇದರಿಂದ ಹೊಟ್ಟು ನಿವಾರಣೆಯಾಗುವುದಷ್ಟೇ ಅಲ್ಲ, ಕೂದಲೂ ಕಾಂತಿಯುತವಾಗುತ್ತದೆ. 2. 2 ಚಮಚ ವಿನೆಗರ್‌ಅನ್ನು 6 ಚಮಚ ನೀರಿಗೆ ಹಾಕಿ. ಆ ಮಿಶ್ರಣವನ್ನು ರಾತ್ರಿ ತಲೆಗೆ ಹಚ್ಚಿಕೊಂಡು ಬೆಳಗ್ಗೆ ತಲೆಸ್ನಾನ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಮೂರು ತಿಂಗಳ ಕಾಲ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.
3. ಲೋಳೆಸರ (ಅಲೋವೆರಾ)ದ ರಸವನ್ನು ತಲೆಗೆ ಲೇಪಿಸಿಕೊಳ್ಳುವುದರಿಂದಲೂ ತಲೆಹೊಟ್ಟು ಹತೋಟಿಗೆ ಬರುತ್ತದೆ.

4. ಮೆಂತ್ಯವನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗೆ ಅದನ್ನು ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಕಾಲ ಬಿಟ್ಟು ನಂತರ ಸ್ನಾನ ಮಾಡಿ. ಇದು ಹೊಟ್ಟು ನಿವಾರಣೆಗೆ ಉತ್ತಮ ಪರಿಹಾರ.
5. ನಿಂಬೆರಸ ಸಹ ಹೊಟ್ಟು ನಿವಾರಣೆಗೆ ಸಹಕಾರಿಯಾಗಿದೆ. ಎರಡು ಚಮಚ ನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ತಲೆಸ್ನಾನ ಮಾಡಿ.
6. ಕೂದಲಿನ ಸೌಂದರ್ಯ ವರ್ಧನೆಗೆಂದು ಕೃತಕ ಬಣ್ಣಗಳನ್ನು ಬಳಸುವುದು, ರಾಸಾಯನಿಕ ಮಿಶ್ರಿತ ಶಾಂಪೂ ಬಳಸುವುದು ಸಹ ಹೊಟ್ಟಿಗೆ ಕಾರಣವಾಗಬಹುದು. ಇವುಗಳಿಂದ ಆದಷ್ಟು ದೂರವಿರಿ.
7. ಆದಷ್ಟು ಹಸಿರು ತರಕಾರಿ, ತಾಜಾ ಹಣ್ಣುಗಳನ್ನು ಸೇವಿಸಿ.
8. ಮನಸ್ಸು ಒತ್ತಡದಿಂದಿರದಂತೆ ನೋಡಿಕೊಳ್ಳಿ. ದಿನವೂ ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಮಾಡುವುದು ಒಳ್ಳೆಯದು.
9. ನೀರನ್ನು ಹೆಚ್ಚಾಗಿ ಕುಡಿಯಿರಿ.
10. ಬೇಸಿಗೆಯಲ್ಲಿ ವಾರಕ್ಕೆ ಕನಿಷ್ಠ ಎರಡು ದಿನವಾದರೂ ತಲೆಸ್ನಾನ ಮಾಡಿ. ಕೂದಲು ಸ್ವಚ್ಛವಾಗಿಲ್ಲದಿರುವುದೂ ಹೊಟ್ಟಿಗೆ ಒಂದು ಕಾರಣ.