ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಕೂದಲ ಆರೈಕೆ / ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ

ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ

ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ

ಗರ್ಭಧಾರಣೆಯ ಸಮಯದಲ್ಲಿ

ಗರ್ಭಧಾರಣೆಯ ಸಮಯದಲ್ಲಿ, ತಮ್ಮ ಮತ್ತು ತಮ್ಮ ಮಗುವಿನ ಆರೈಕೆ ಮಾಡಿಕೊಳ್ಳಲು ಮಹಿಳೆಯರಿಗೆ ಸಲಹೆಗಳು ಹಾಗೂ ಗರ್ಭಧಾರಣೆಯ ಮೊದಲು, ಗರ್ಭಧಾರಣೆಯ ಸಂದರ್ಭದಲ್ಲಿ ಹಾಗೂ ನಂತರ ಉತ್ತಮ ಆರೈಕೆಯನ್ನು ಪಡೆಯುವ ಪ್ರಾಮುಖ್ಯತೆ.ಗರ್ಭಾವಸ್ಥೆಯಲ್ಲಿ ಪ್ರಸವಪೂರ್ವ ಆರೈಕೆಯು ಭಾವೀ ತಾಯಿಯ ಮತ್ತು ಅಜಾತ ಶಿಶುವಿನ ಯೋಗಕ್ಷೇಮಗಳಿಗೆ ನೇರವಾಗಿ ಸಂಬಂಧಿಸಿದೆ.ಗರ್ಭಧಾರಣೆಯ ಬಗ್ಗೆ ತಿಳಿದ ತಕ್ಷಣ ಭಾವೀ ತಂದೆತಾಯಿಯರು ತಕ್ಷಣ ಅಂಗನವಾಡಿಗೆ ಭೇಟಿ ನೀಡಬೇಕು ಮತ್ತು ತಾಯಿ ಮತ್ತು ಮಗುವಿನ ರಕ್ಷಣೆಯ ಕಾರ್ಡ್ ಅನ್ನು ಪಡೆಯಬೇಕು; ಇದು ಮಗುವಿನ ಪೋಷಣೆ ಮತ್ತು ಬೆಳವಣಿಗೆಯ ಮೇಲ್ವಿಚಾರಣೆ ಮಾಡಲು ಅವರಿಗೆ ಸಹಾಯ ಮಾಡುವ ಸರಳ ಹಾಗೂ ಶಕ್ತಿಶಾಲಿ ಕಾರ್ಡ್ ಆಗಿದೆ.ಭಾರತದಲ್ಲಿ 75% ಹೊಸ ತಾಯಂದಿರು ರಕ್ತಹೀನತೆಯನ್ನು ಹೊಂದಿರುತ್ತಾರೆ ಹಾಗೂ ಬಹಳಷ್ಟು ಜನರು ಗರ್ಭಾವಸ್ಥೆಯಲ್ಲಿ ಅವರು ಹೊಂದಬೇಕಾಗಿರುವುದಕ್ಕಿಂತ ಕಡಿಮೆ ತೂಕ ಹೊಂದುತ್ತಾರೆ.ಈ ಶಿಶುಗಳಲ್ಲಿ ಅನಾರೋಗ್ಯಕರ ಭ್ರೂಣದ ಬೆಳವಣಿಗೆ, ಕಡಿಮೆ ಜನನದ ತೂಕ ಮತ್ತು ಆನುವಂಶಿಕವಲ್ಲದ ಜನ್ಮಜಾತ ಅಸಹಜತೆಗಳಿಗೆ ಕಾರಣವಾಗುತ್ತದೆ.
ಗರ್ಭಾವಸ್ಥೆಯಲ್ಲಿ, ಭಾವೀ ತಾಯಿ ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಪಡೆಯುತ್ತಾರೆಂದು ಖಚಿತಪಡಿಸಿಕೊಳ್ಳಿ.ಅವರು ಸಾಮಾನ್ಯಕ್ಕಿಂತ ಕಾಲು ಭಾಗ ಹೆಚ್ಚು ಆಹಾರ ಸೇವಿಸಬೇಕು.ಭಾವೀ ತಾಯಿ ಹಗಲಿನಲ್ಲಿ ಕನಿಷ್ಠ ಎರಡು ಗಂಟೆಗಳ ವಿಶ್ರಾಂತಿ ಪಡೆಯಬೇಕು.ಮತ್ತು ರಾತ್ರಿ, ಅವಳು ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.ಅಲ್ಲದೆ, ಮನೆಯಲ್ಲಿ ಸಂತೋಷದ ವಾತಾವರಣವಿರಬೇಕು.

ಉದ್ದೇಶ

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.

ಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.

ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.

ಮೂಲ : ಹೆಲ್ತ್ ಫೋನ್

3.07462686567
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top