অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಿಸಿಲ ಬೇನೆ

ಸೂರ‌್ಯ ನೆತ್ತಿಗೇರಿದ್ದಾನೆ. ಬಿಸಿಲ ಝಳ ಹೆಚ್ಚಿದೆ. ಮನಸು ಹಾಗೂ ದೇಹಕ್ಕೆ ನಿತ್ರಾಣದ ಅನುಭವ.

ಬೇಸಿಗೆ ಅಂದರೆ ಬ್ಯಾಕ್ಟೀರಿಯಾಗಳಿಗೆ ಹಬ್ಬ. ಮಣ್ಣು, ಗಾಳಿ, ನೀರು ಅಷ್ಟೆ ಅಲ್ಲ, ಮಾನವ ಹಾಗೂ ಪ್ರಾಣಿಗಳ ದೇಹದಲ್ಲಿ ಕೂಡ ಕ್ರಿಯಾಶೀಲವಾಗಿರುತ್ತವೆ. ಅದ್ರಲ್ಲೂ ಆಹಾರದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಂತೂ ಬಹುಬೇಗ ಬೆಳೆಯುತ್ತವೆ. ಹೆಚ್ಚು ಹೊತ್ತು ತಯಾರಿಸಿಟ್ಟ ಆಹಾರ, ತೆರೆದಿಟ್ಟ ಹಣ್ಣು, ಕಲುಷಿತ ನೀರಿನಲ್ಲಿ ಬ್ಯಾಕ್ಟೀರಿಯಾಗಳು ನಿಮ್ಮ ಆರೋಗ್ಯದ ಮೇಲೆ ದಾಳಿ ಮಾಡಲು ಸಿದ್ಧವಾಗಿರುತ್ತವೆ.


ಬೇಸಿಗೆ ಕಾಯಿಲೆ


ಈ ಸಮಯದಲ್ಲಿ ರೋಗಾಣುಗಳು ಕ್ರಿಯಾಶೀಲವಾಗಿರುತ್ತವೆ. ಅತಿಯಾದ ಬೆವರು, ಧೂಳು, ನೀರಿನ ಮೂಲಕ ಬ್ಯಾಕ್ಟೀರಿಯಾ ತನ್ನ ಜಾಲ ವಿಸ್ತರಿಸಲು ಸಹಕರಿಸುವುದರಿಂದ ನಾನಾ ರೋಗಗಳು ಕಾಡುವುದುಂಟು. ಬೇಸಿಗೆ ಅಂದರೆ ನೀರಿಗೆ ಹಾಹಾಕಾರ. ಇದ್ದರೂ ಕಲುಷಿತಗೊಳ್ಳುವುದು ಹೆಚ್ಚು. ಈ ಸಂದರ್ಭದಲ್ಲಿ ನೀರಿನ ಮೂಲದಿಂದ ಬರುವ ಕಾಯಿಲೆಗಳೇ ಹೆಚ್ಚು. ಉರಿಮೂತ್ರ, ರಕ್ತಸ್ರಾವ, ತಲೆನೋವು, ಟೈಫೈಡ್, ಗಂಟಲುಬೇನೆ, ಕಾಮಾಲೆ, ಕಾಲಾರ, ಮಲೇರಿಯಾ ಹೆಚ್ಚಾಗಿ ಕಾಣಿಸುತ್ತದೆ.


ಮುನ್ನೆಚ್ಚರಿಕೆ


ಬೇಸಿಗೆಯಲ್ಲಿ ಹೊರಗಡೆ ಪದೇಪದೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ಆಹಾರ ವಿಷವಾಗಿ ಪರಿಣಮಿಸುವುದು ಹೆಚ್ಚು. ಮದುವೆ ಸಮಾರಂಭ, ಜಾತ್ರೆ, ಪಿಕ್‌ನಿಕ್ ಅಂತ ಹೊರಗಡೆ ತಿರುಗಾಟ ಕೂಡ ಇದೇ ಬೇಸಿಗೆಯಲ್ಲಿ ಜಾಸ್ತಿ. ಕಂಡಕಂಡಲ್ಲಿ ವೈವಿಧ್ಯ ಆಹಾರ ಸೇವನೆ ಅನಿವಾರ‌್ಯವೋ ಅಥವಾ ಅಭಿಲಾಷೆಯೋ ಗೊತ್ತಿಲ್ಲ. ಆದ್ರೆ ಹೊರಗಡೆ ತಿನ್ನುವ ಆಹಾರ ಅನಾರೋಗ್ಯದ ಮೂಲ. ಬೇಸಿಗೆಯಲ್ಲಿ ನೀರಿನ ಅಭಾವ, ಧೂಳು, ಬೆವರು ಇತರೇ ಕಾರಣಗಳು ಆಹಾರ ತಯಾರಿಕೆ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಹಾಗಂತ ಬೇಸಿಗೆಯಲ್ಲಿ ಮನೆ ಬಿಟ್ಟು ಹೊರಗೆಲ್ಲೂ ತಿನ್ನಬಾರದು ಅಂತೇನೂ ಅಲ್ಲ, ಜಾಗೃತಿ ಜತೆಗಿರಲಿ ಅಷ್ಟೆ.

ಮನೆಯಲ್ಲಿ ತಯಾರಿಸಿದ ಆಹಾರದ ಬಗ್ಗೆಯೂ ಕಾಳಜಿ ಇರಲಿ. ಊಟ ಅಥವಾ ಉಪಹಾರಕ್ಕೆ ಎರಡು ತಾಸಿಗಿಂತ ಮೊದಲು ತಯಾರಿಸಿದ ಆಹಾರ ಪದಾರ್ಥ ಒಳ್ಳೆಯದಲ್ಲ. ಅನಿವಾರ‌್ಯವಾದರೆ ಪ್ರಿಜ್‌ನಲ್ಲಿ ಅಥವಾ ನೀರು ತುಂಬಿದ ಪಾತ್ರೆಯಲ್ಲಿ ಆಹಾರದ ಪಾತ್ರವನ್ನಿಡಿ. ಪ್ರಿಜ್‌ನಲ್ಲಿಟ್ಟಿದ್ದರೆ ತಿನ್ನುವ ಪೂರ್ವದಲ್ಲಿ ಬಿಸಿ ಮಾಡುವುದನ್ನು ಮರೆಯಬೇಡಿ.


ಬೇಸಿಗೆಯಲ್ಲಿ ನೀರಿನ ಮೂಲದಿಂದ ಬರುವ ಕಾಯಿಲೆಗಳು ಹೆಚ್ಚು. ವಾತಾವರಣದಲ್ಲಿ ಹೆಚ್ಚು ಉಷ್ಣತೆ ಇರುವುದರಿಂದ ಈ ಬೇಸಿಗೆಯಲ್ಲಿ ಸರಿಹೊಂದುವ ಸಾಂಪ್ರಾದಾುಕ ವೈಧ್ಯಮಯ ಪಿಠೋಪಕರಣಗಳ ಜೊತೆಗೆ ಅತ್ಯಾಧುನಿಕ ಪಿಠೋಪಕರಣಗಳನ್ನು ಗಾಢ ಬಣ್ಣಗಳ ಗೋಡೆಗಳಿಗೆ ಸರಿಹೊಂದುವ ರೀತಿ ಜೋಡಿಸಿ. ಈ ಮೂಲಕ ನಿಮ್ಮ ಮನೆಯ ಅಲಂಕಾರ ಹೆಚ್ಚಿಸಿ.

ಚಿತ್ರಪಟ : ಟೈಲ್ಡ್ ಮೊಸಾಯಿಕ್ ಚಿತ್ರಪಟಗಳನ್ನು ಗೋಡೆಯ ಮೇಲೆ ಹಾಕಬಹುದು. ಸಾಂಪ್ರದಾಯಿಕ ಚಿತ್ರಗಳ ಬದಲು ಅಸಂಪ್ರದಾಯಿಕವಾದ ರೇಖಾಕೃತಿಗಳ ಪ್ರಿಂಟ್ ಇರುವ ಚಿತ್ರಗಳು ಸೌಂದರ್ಯ ಹೆಚ್ಚಿಸುತ್ತವೆ. ಇದರಜೊತೆಗೆ ನಿಮ್ಮ ಗೋಡೆಗಳನ್ನ್ನು ಲೋಹದ ಬಣ್ಣಗಳಿಂದ ಅಲಂಕರಿಸಿ ರೂಮ್ ಅಂದವನ್ನು ಇಮ್ಮಡಿಗೊಳಿಸಿ.

ಕನ್ನಡಿ ಹಾಗೂ ಗೋಡೆಯ ಮೇಲಿನ ಪರಿಕರಗಳು: ಲೀಂಗ್ ರೂಂನಲ್ಲಿ ಅತ್ಯಾಧುನಿಕವಾದ ಬಣ್ಣ ಬಣ್ಣದ ಕನ್ನಡಿಗಳನ್ನ ಹಾಕಿ. ಗೋಡೆಯ ಗುಣಲಕ್ಷಣಗಳನ್ನು ಎತ್ತಿ ತೋರಿಸೋ ಹಲವಾರು ವೈಧ್ಯಮಯ ಕನ್ನಡಿಗಳನ್ನ ನೇತುಹಾಕಿ. ದೊಡ್ಡ ಗಾತ್ರದ ಕನ್ನಡಿಗಳ ಮೂಲಕ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ. ಜೊತೆಗೆ ಹೆಚ್ಚು ಬ್ರೈಟ್ ಆಗುವಂತೆ ಮಾಡಿ.

ಪದರಗಳು: ಹಲವು ಪದರಗಳಲ್ಲಿ ಅಲಂಕರಿಸೋದು ಈಗ ಕಂಡು ಬರುತ್ತಿರುವ ಹೊಸ ಟ್ರೆಂಡ್. ಸೋಫಾ, ಹಾಸಿಗೆ ಹೀಗೆ ಯಾವುದೇ ವಸ್ತುಗಳೇ ಆಗಿರಲಿ, ಮೆರುಗಿನ ಹೊದಿಕೆ, ವೆಲ್ವೆಟ್ ದಿಂಬು ಕೋಣೆಯ ಅಂದವನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ.

ದೀಪಗಳ ಅಲಂಕಾರ : ಮನೆಗೆ ವಿಂಟೇಜ್ ಲುಕ್ ಅಥವಾ ಆಧುನಿಕತೆಯ ಸ್ಪರ್ಶ ನೀಡಲು ತಾಮ್ರ ಇಲ್ಲವೇ ಲೋಹದ ಆಧುನಿಕ ಶೈಲಿಯ ದೀಪಗಳನ್ನು ಹಾಕಿದರೆ ಹೊಸ ಲುಕ್ ಬರುತ್ತದೆ.

ಕಲಾತ್ಮಕ ಪರಿಣಾಮ: ನಿಮ್ಮನ್ನು ಉತ್ತೇಜಿಸುತ್ತಾ ಬಂದಿರುವಂತ ಜೀವಕಳೆ ಇರೋ ಚಿತ್ರಪಟಗಳು ಇಲ್ಲವೇ ನಿಮ್ಮ ಕುಟುಂಬ ಸದಸ್ಯರಿರುವ ಭಾವಚಿತ್ರಗಳನ್ನು ಗೋಡೆಗಳ ಮೇಲೆ ಅಳವಡಿಸಿ. ಇದನ್ನು ಗೋಡೆಗಳ ಮೇಲೆ ಅಥವಾ ಅಲಂಕರಿಸೋದು ಉತ್ತಮವೇ, ಮನೆಯ ಇತರ ವಸ್ತುಗಳ ಮೇಲೆ ಅಳವಡಿಸೋದು ಉತ್ತಮವೇ ಎಂಬುದನ್ನು ನೀವೇ ನಿರ್ಧರಿಸಬೇಕು.ಸನ್‌ಸ್ಟ್ರೋಕ್ ಸಾಧ್ಯತೆ ಇರಬಹುದು. ಕಾಯಿಲೆಗಳು ಬಂದ ನಂತರ ಪರದಾಡುವ ಬದಲು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಮೂಲ: ಶುಭಾ ವಿಕಾಸ್

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate