ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಚರ್ಮದ ಆರೈಕೆ / ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು

ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು

ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು

ಸ್ತನ್ಯಪಾನ ಮತ್ತು ಆಹಾರಗಳು

ಹುಟ್ಟಿದ ಒಂದು ಗಂಟೆಯೊಳಗೆ, ತಾಯಿಯ ದಪ್ಪ, ಮೊದಲ ಹಾಲನ್ನು (ಪ್ರಥಮಸ್ತನ್ಯ) ಮಗುವಿನ ನೀಡಬೇಕು.ಇದು ಅತ್ಯಗತ್ಯ.ತಾಯಿಯ ಮೊದಲ ಹಾಲು ಅತ್ಯುತ್ತಮ, ಅದನ್ನು ಎಸೆಯಬೇಡಿ ಮತ್ತು ಮಗುವಿಗೆ ಅದು ಸಿಗುತ್ತದೆಂದು ಖಚಿತಪಡಿಸಿಕೊಳ್ಳಿ.ಪ್ರಥಮಸ್ತನ್ಯವು ಮಗುವಿನ ಜೀರ್ಣಾಂಗಗಳನ್ನು ಅದು ಮುಂದಿನ ಕೆಲವು ದಿನಗಳಲ್ಲಿ ಸ್ವೀಕರಿಸಲಿರುವ ಪ್ರೌಢ ಹಾಲಿಗೆ ಸಿದ್ಧಗೊಳಿಸುವುದರಿಂದ ಅದು ಅಗತ್ಯವಾಗಿದೆ.ಪ್ರಥಮಸ್ತನ್ಯವು ಸತು, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳಂಥ ಪೋಷಕಾಂಶಗಳಿಂದ ಸಮೃದ್ಧವಾಗಿದೆ.ಜನನದ ನಂತರ ಮೊದಲ ಆರು ತಿಂಗಳುಗಳಲ್ಲಿ ಮಗುವಿಗೆ ತಾಯಿಯ ಹಾಲನ್ನು ಮಾತ್ರ ಕುಡಿಸಬೇಕು ಹಾಗೂ ನೀರೂ ಒಳಗೊಂಡಂತೆ ಬೇರೆ ಏನೂ ಕುಡಿಸಬಾರದು.ಮೊದಲ 6 ತಿಂಗಳಲ್ಲಿ ಕೇವಲ ಎದೆಹಾಲು ಮಾತ್ರ ಕುಡಿಸುವುದು ಅತಿಸಾರ ಅಥವಾ ನ್ಯುಮೋನಿಯಾದಂತ ಸಾಮಾನ್ಯ ಬಾಲ್ಯದ ಕಾಯಿಲೆಗಳಿಂದ ರಕ್ಷಣೆ ನೀಡುವುದರಿಂದ ಅದು ಶಿಶು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಮತ್ತು ಅನಾರೋಗ್ಯವುಂಟಾದಲ್ಲಿ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.ಳನೇ ತಿಂಗಳಿಂದ, ಎದೆ ಹಾಲು ಮಗುವಿನ ಪೌಷ್ಠಿಕ ಅಗತ್ಯಗಳಿಗೆ ಸಾಕಷ್ಟಾಗಿರುವುದಿಲ್ಲ.ತಾಯಿಯ ಹಾಲಿನ ಜೊತೆಗೆ ಸಮತೋಲನಕ್ಕಾಗಿ ಪೌಷ್ಟಿಕ ವೈವಿಧ್ಯಮಯ ಆಹಾರವನ್ನು ನೀಡಬೇಕು.ಸಕಾಲಿಕವಾದ, ಸಾಕಷ್ಟು ಪ್ರಮಾಣದ, ಹಾಗೂ ಸೂಕ್ತವಾದ ಪೂರಕ ಆಹಾರವನ್ನು ಪ್ರಾರಂಭಿಸಬೇಕು.ಆರನೇ ತಿಂಗಳ ನಂತರ, ನೀವು ಮಗುವಿಗೆ ದಿನಕ್ಕೆ ಕನಿಷ್ಠ 3-4 ಬಾರಿ ಆಹಾರ ನೀಡಬೇಕು.
ಹಾಗೂ ಸ್ತನ್ಯಪಾನವನ್ನೂ ಮುಂದುವರಿಸಲು ಮರೆಯಬೇಡಿ.

ಉದ್ದೇಶ

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.
ಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.

ಮೂಲ : ಹೆಲ್ತ್ ಫೋನ್

2.80303030303
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top