ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೃದಯ

ಹುಟ್ಟಿನಿಂದಲೇ ಇರುವ ಹೃದಯ ದೋಷಗಳು,ರುಮ್ಯಾಟಿಕ್ ಹೃದಯದ ಕಾಯಿಲೆ , ಹೃದಯಾಘಾತ ,ಹೃದಯ ವೈಫಲ್ಯ, ಪೆರಿಕಾರ್ಡಿಯಲ್ ಎಫ್ಯೂಷನ್ , ಉತ್ತಮ ಕೊಲೆಸ್ಟ್ರಾಲ್ ಇರುವ ಆಹಾರಗಳ ಮಾಹಿತಿಯನ್ನುಇಲ್ಲಿ ಕೊಡಲಾಗಿದೆ.

ದೋಷಗಳು
ಹುಟ್ಟಿನಿಂದಲೇ ಇರುವ ಹೃದಯದ ರಚನೆಯ ನ್ಯೂನತೆಗಳನ್ನು ಕಾಂಜೆನಿಟಲ್ ಹೃದಯದ ದೋಷಗಳು ಎನ್ನುತ್ತಾರೆ.
ರುಮ್ಯಾಟಿಕ್ ಹೃದಯದ ಕಾಯಿಲೆ
ಹೃದಯದ ಕವಾಟಗಳು (ರಕ್ತವನ್ನು ಹಿಮ್ಮುಖವಾಗಿ ಚಲಿಸುವುದನ್ನು ತಡೆಯುವ ರಚನೆಗಳು) ಸಾಮಾನ್ಯವಾಗಿ ಸ್ಟ್ರೆಪ್ಟೋಕೋಕಲ್ ಬ್ಯಾಕ್ಟೀರಿಯಾದ ಮೂಲಕ ಕಾಣಿಸಿಕೊಳ್ಳುವ ಗಂಟಲು ಬೇನೆಯ ಪ್ರಕ್ರಿಯೆಯಿಂದ, ಹಾನಿಗೊಳ್ಳುವ ಸ್ಥಿತಿಯನ್ನೇ ರುಮ್ಯಾಟಿಕ್ ಹೃದಯದ ಕಾಯಿಲೆ ಎನ್ನುತ್ತಾರೆ. ಈ ಗಂಟಲು ಬೇನೆಗೆ ತುರ್ತಾಗಿ ಚಿಕಿತ್ಸೆ ನೀಡದಿದ್ದರೆ, ರುಮ್ಯಾಟಿಕ್ ಜ್ವರ ಪದೇ ಪದೇ ಕಾಣಿಸಿಕೊಂಡು, ರೋಗ ಉಲ್ಪಣಿಸಿ, ರುಮ್ಯಾಟಿಕ್ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.ದೇಹದ ಸಂಪರ್ಕ ಸಾಧಿಸುವ ಅಂಗಾಂಶಗಳ ಮೇಲೆ ವಿಶೇಷವಾಗಿ ಹೃದಯ, ಕೀಲುಗಳು, ಮೆದುಳು ಅಥವಾ ಚರ್ಮಗಳ ಪರಿಣಾಮ ಬೀರುವ ಉಲ್ಬಣಕಾರಿ ರೋಗವೇ ರುಮ್ಯಾಟಿಕ್ ಜ್ವರ.
ಹೃದಯಾಘಾತ
ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ.
ಹೃದಯ ವೈಫಲ್ಯ
ಹೃದಯ ತನ್ನ ಸಾಮರ್ಥ್ಯಕ್ಕನ್ನುಗುಣವಾಗಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡದಿರುವ ಪ್ರಕ್ರಿಯೆಯನ್ನೇ “ಹೃದಯ ವೈಫಲ್ಯ” ಎಂದು ಸರಳವಾಗಿ ಹೇಳಲಾಗುತ್ತದೆ.
ಪೆರಿಕಾರ್ಡಿಯಲ್ ಎಫ್ಯೂಷನ್
ಹೃದಯವನ್ನು ಆವರಿಸಿರುವ ಪೊರೆಯಂತಿರುವ ಚೀಲದಲ್ಲಿ (ಪೆರಿಕಾರ್ಡಿಯಂ) ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವಜೀವ ದ್ರವ ಇರುವುದನ್ನು ಪೆರಿಕಾರ್ಡಿಯಲ್ ಎಫ್ಯೂಷನ್ ಎಂದು ಹೇಳಲಾಗುತ್ತದೆ.
ಉತ್ತಮ ಕೊಲೆಸ್ಟ್ರಾಲ್ ಇರುವ ಆಹಾರಗಳು
ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಉತ್ಪತ್ತಿಯಾಗುವಂಥ ಮೇಣದಂಥ ವಸ್ತು, ಕೆಲವು ಆಹಾರಗಳಲ್ಲಿಯೂ ಕಂಡು ಬರುತ್ತದೆ. ವಿಟಮಿನ್ ಡಿ ಮತ್ತು ಕೆಲ ಹಾರ್ಮೋನುಗಳು, ಜೀವಕೋಶಗಳ ಭಿತ್ತಿಗಳ ನಿರ್ಮಾಣ, ಕೊಬ್ಬಿನಂಶವನ್ನು ಕರಗಿಸುವ ಬೈಲ್ ಸಾಲ್ಟ್ (ಯಕೃತ್ ಲವಣ)ಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನಿಮ್ಮ ಪುಟ್ಟ ಹೃದಯ ಜೋಪಾನ
ಗೊತ್ತೇನ್ರಿ ಪಲ್ಮನರಿ ಧಮನಿಬಂಧ
ಒಂದು ದಿನ 26 ವರ್ಷದ ಶ್ರೀಮತಿ ಹಂಸಾ (ಹೆಸರು ಬದಲಾಯಿಸಿದೆ) ಅವರಿಗೆ ಹಠಾತ್ತಾಗಿ ಉಸಿರು ನಿಂತಂತಾಗಿ ಸುಮಾರು ಎರಡು ಸಲ ಉಸಿರು ಹೊರಬಿದ್ದಿತು.
ಮೆನೋಪಾಸ್ ತಲ್ಲಣ
ಹೃದಯದ ಕಾಯಿಲೆಗಳು ಮಹಿಳೆಯರನ್ನೇ ಹೆಚ್ಚು ಕಾಡುತ್ತದೆ. ಇದಕ್ಕೆ ಅಧಿಕ ಕೊಲೆಸ್ಟ್ರಾಲ್ ಮುಖ್ಯ ಕಾರಣ. ಅದರಲ್ಲೂ ಮುಟ್ಟು ನಿಲ್ಲುವ ಹಂತವೆಂದರೆ ಮಹಿಳೆಯರ ಮೈಮನ ಬದಲಾವಣೆಗೆ ಒಳಗಾಗುವ ಸಮಯ.
ರೋಗಮುಂಜಾಗ್ರತೆ
ವಿಪರೀತ ಮಾನಸಿಕ ಒತ್ತಡ, ಶೀಘ್ರಕೋಪ, ಆತಂಕ, ಉದ್ವೇಗ ಹಾಗೂ ಖಿನ್ನತೆ ಹೃದಯದ ತೊಂದರೆಗೆ ಕಾರಣವಾಗುತ್ತದೆ. ಊಟದಲ್ಲಿ ಜಡ ಆಹಾರ, ಅತಿಯಾದ ಜಿಡ್ಡು ಪದಾರ್ಥಗಳು, ಕರಿದ ಪದಾರ್ಥಗಳು, ಮಾಂಸ, ಬೇಕರಿ ತಿನಿಸು, ತಂಪುಪಾನೀಯ, ತಂಗಳು ಆಹಾರವು ಕಾರಣವಾಗುತ್ತವೆ.
ನೇವಿಗೇಶನ್‌
Back to top